Homeಮುಖಪುಟನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್ ಯಾರು? ಅದರಿಂದ ಆತನಿಗೇನು ಲಾಭ?

ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್ ಯಾರು? ಅದರಿಂದ ಆತನಿಗೇನು ಲಾಭ?

ಯುಪಿಯಲ್ಲಿ 7 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ನಕಲಿ ರಾಯಭಾರ ಕಚೇರಿ ಪತ್ತೆಯಾಗಿದೆ!

- Advertisement -
- Advertisement -

ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್‌) ವ್ಯಾಪ್ತಿಗೆ ಬರುವ ಗಾಝಿಯಾಬಾದ್‌ನ ಕವಿ ನಗರದಲ್ಲಿ ಯಾರಿಗೂ ಅನುಮಾನ ಬರದಂತೆ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದ ಹರ್ಷವರ್ಧನ್ ಜೈನ್ ಎಂಬಾತನನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಮಂಗಳವಾರ ಬಂಧಿಸಿದೆ.

ಐಷಾರಾಮಿ ಬಂಗಲೆಯಲ್ಲಿ ನಕಲಿ ರಾಯಭಾರ ಕಚೇರಿ ತೆರೆದಿದ್ದ ಹರ್ಷವರ್ಧನ್ ಜೈನ್, ಅದರ ಹೊರಗೆ ಆಡಿ, ಮರ್ಸಿಡೀಸ್ ಬೆನ್ಝ್ ಸೇರಿದಂತೆ ಲಕ್ಷಾಂತರ ಮೌಲ್ಯದ ಕಾರುಗಳನ್ನು ನಿಲ್ಲಿಸಿದ್ದ. ಅವುಗಳಿಗೆ ಸೂಕ್ತವಾದ ನಕಲಿ ನಂಬರ್ ಪ್ಲೇಟ್‌ಗಳನ್ನೂ ಅಳವಡಿಸಿದ್ದ. ಕಚೇರಿಯ ಹೊರಗೆ ಸಾರ್ವಭೌಮ ರಾಷ್ಟ್ರಗಳೆಂದು ಗುರುತಿಸದ ದೇಶಗಳ ಹೆಸರಿನಲ್ಲಿ ನಕಲಿ ಧ್ವಜ ನೆಟ್ಟಿದ್ದ. ಈ ರೀತಿ ಸುಮಾರು 7 ವರ್ಷಗಳಿಂದ ಜನರು, ಕಂಪನಿಗಳು ಮತ್ತು ಅಧಿಕಾರಿಗಳನ್ನು ಯಾಮಾರಿಸಿದ್ದ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಹೇಳಿದೆ.

ಪಶ್ಚಿಮ ಆರ್ಕ್ಟಿಕಾ, ಸಬೋರ್ಗಾ, ಪೌಲ್ವಿಯಾ ಮತ್ತು ಲೊಡೋನಿಯಾದ ದೇಶಗಳ ಹೆಸರಿನಲ್ಲಿ ಹರ್ಷವರ್ಧನ್ ಜೈನ್ ರಾಯಭಾರ ಕಚೇರಿ ನಡೆಸುತ್ತಿದ್ದ.

ಪಶ್ಚಿಮ ಆರ್ಕ್ಟಿಕಾ ಒಂದು ಮೈಕ್ರೋನೇಷನ್ ಆಗಿದ್ದು, ಯಾವುದೇ ದೇಶಗಳ ಸರ್ಕಾರ ಇದನ್ನು ಸಾರ್ವಭೌಮ ರಾಷ್ಟ್ರವೆಂದು ಅಧಿಕೃತವಾಗಿ ಗುರುತಿಸಿಲ್ಲ. ಹಾಗಾಗಿ, ಇದೊಂದು ಸ್ವಯಂಘೋಷಿತ ದೇಶವಾಗಿದೆ. ಇದು ಅಂಟಾರ್ಕ್ಟಿಕಾದಲ್ಲಿ ಭೂಮಿಯನ್ನು ಹೊಂದಿದೆ ಮತ್ತು ಹವಾಮಾನ ಕ್ರಮಕ್ಕಾಗಿ ಪ್ರತಿಪಾದಿಸುವ ಲಾಭರಹಿತ ಸಂಸ್ಥೆ ಎಂದು ಹೆಸರುವಾಸಿಯಾಗಿದೆ. ಇದನ್ನು ಮಾಜಿ ಯುಎಸ್ ನೌಕಾಪಡೆಯ ಅಧಿಕಾರಿಯೊಬ್ಬರು ಸ್ಥಾಪಿಸಿದ್ದು, ಅಂತಾರಾಷ್ಟ್ರೀಯ ಮನ್ನಣೆ ಹೊಂದಿಲ್ಲ.

ಸಬೋರ್ಗಾ ಒಂದು ಮಾನ್ಯತೆ ಪಡೆದ ದೇಶ ಅಥವಾ ಮೈಕ್ರೋನೇಷನ್ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವರದಿಗಳ ಪ್ರಕಾರ, ಇದು ಹರ್ಷವರ್ಧನ್ ಜೈನ್ ಸೃಷ್ಟಿಸಿದ ನಕಲಿ ದೇಶದ ಹೆಸರಾಗಿದೆ. ಪೌಲ್ವಿಯಾ ಕೂಡ ಸಬೋರ್ಗಾದಂತೆ ಮಾನ್ಯತೆ ಪಡೆದ ದೇಶ ಅಥವಾ ಪ್ರಸಿದ್ದಿ ಹೊಂದಿರುವ ಮೈಕ್ರೋನೇಷನ್ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಇದೂ ಕೂಡ ಹರ್ಷವರ್ಧನ್‌ನ ನಕಲಿ ಸೃಷ್ಟಿಯಾಗಿದೆ.

ಇನ್ನು ಲೊಡೋನಿಯಾ ದಕ್ಷಿಣ ಸ್ವೀಡನ್‌ನಲ್ಲಿರುವ ಒಂದು ಮೈಕ್ರೋನೇಷನ್ ಎಂದು ಕೆಲ ಮಾಹಿತಿ ಮೂಲಗಳು ಹೇಳುತ್ತವೆ. ಆದರೆ ಇದು ಅಧಿಕೃತವಾಗಿ ಗುರುತಿಸಲ್ಪಟ್ಟ ಸಾರ್ವಭೌಮ ರಾಷ್ಟ್ರವಲ್ಲ. ಹಾಗಾಗಿ, ಇದು ಕೂಡ ಹರ್ಷವರ್ಧನ್‌ ಸೃಷ್ಟಿಸಿದ ನಕಲಿ ದೇಶವಾಗಿದೆ.

ಹರ್ಷವರ್ಧನ್ ಜೈನ್ ಯಾರು?

ಹರ್ಷವರ್ಧನ್ ಜೈನ್ ಲಂಡನ್ ಕಾಲೇಜ್ ಆಫ್ ಅಪ್ಲೈಡ್ ಸೈನ್ಸ್‌ ಮತ್ತು ಗಾಝಿಯಾಬಾದ್‌ನ ಐಟಿಎಸ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಎಂಬಿಎ ಪದವೀಧರ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಗಾಝಿಯಾಬಾದ್‌ನ ಉದ್ಯಮಿಯೊಬ್ಬರ ಮಗನಾದ ಈತನ ಕುಟುಂಬವು ರಾಜಸ್ಥಾನದಲ್ಲಿ ಅಮೃತಶಿಲೆಯ ಗಣಿ ಹೊಂದಿತ್ತು. ತಂದೆಯ ನಿಧನದ ನಂತರ ಕುಟುಂಬವು ತೀವ್ರ ಆರ್ಥಿಕ ಸಮಸ್ಯೆಗೆ ಸಿಲುಕಿತ್ತು. ಆಗ ಹರ್ಷವರ್ಧನ್ ಜೈನ್ ವಿವಾದಾತ್ಮಕ ದೇವಮಾನವ ಚಂದ್ರಸ್ವಾಮಿಯನ್ನು ಭೇಟಿಯಾಗಿದ್ದ. ಬಳಿಕ ಆತನ ಸಹಾಯದಿಂದ ಲಂಡನ್‌ಗೆ ತೆರಳಿ ಹಲವು ಕಂಪನಿಗಳನ್ನು ತೆರೆದಿದ್ದ.

ತನಿಖಾ ಸಂಸ್ಥೆಗಳ ಪ್ರಕಾರ, ಈ ಕಂಪನಿಗಳನ್ನು ಲೆಕ್ಕವಿಲ್ಲದ ಹಣವನ್ನು ಮರೆಮಾಚಲು ಬಳಸಲಾಗುತ್ತಿತ್ತು ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.

ಹರ್ಷವರ್ಧನ್ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಜೊತೆಗೂ ಸಂಪರ್ಕ ಹೊಂದಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ವರದಿ ಹೇಳಿದೆ.

ಚಂದ್ರಸ್ವಾಮಿಯ ಮರಣದ ನಂತರ ಗಾಝಿಯಾಬಾದ್‌ಗೆ ಮರಳಿದ ಜೈನ್, ಜನರನ್ನು ವಂಚಿಸಲು ನಕಲಿ ರಾಯಭಾರ ಕಚೇರಿಯನ್ನು ತೆರೆದಿದ್ದ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಂತಹ ಪ್ರಮುಖ ರಾಜಕೀಯ ವ್ಯಕ್ತಿಗಳೊಂದಿಗೆ ತನ್ನ ಫೋಟೋಗಳನ್ನು ಮಾರ್ಫ್ ಮಾಡಿ ಜನರನ್ನು ಯಾಮಾರಿಸುತ್ತಿದ್ದ.

ಜೈನ್ ವಿರುದ್ದ ಪ್ರಕರಣ ದಾಖಲಾಗಿದ್ದು ಇದೇ ಮೊದಲಲ್ಲ. 2011ರಲ್ಲಿ, ಅಕ್ರಮ ಸ್ಯಾಟಲೈಟ್ ಫೋನ್‌ ಪತ್ತೆಯಾದ ಬಳಿಕ ಗಾಝಿಯಾಬಾದ್‌ನ ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಯುಪಿ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್ ಯಶ್ ತಿಳಿಸಿದ್ದಾರೆ.

ಜೈನ್ ನಕಲಿ ರಾಯಭಾರ ಕಚೇರಿಯನ್ನು ಏಕೆ ನಡೆಸುತ್ತಿದ್ದ?

ಜೈನ್ ನಕಲಿ ರಾಯಭಾರ ಕಚೇರಿ ತೆರೆದು ಉದ್ಯೋಗ ವಂಚನೆ ಮತ್ತು ಹವಾಲಾ ದಂಧೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ನಕಲಿ ರಾಯಭಾರ ಕಚೇರಿಯ ಮೂಲಕ ಜೈನ್‌ ನಡೆಸುತ್ತಿದ್ದ ಪ್ರಮುಖ ಚಟುವಟಿಕೆಗಳಲ್ಲಿ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ವಿದೇಶದಲ್ಲಿ ಕೆಲಸ ಮಾಡಲು ದಲ್ಲಾಳಿ ಒಪ್ಪಂದಗಳು ಮತ್ತು ಶೆಲ್ ಕಂಪನಿಗಳ ಮೂಲಕ ಹವಾಲಾ ದಂಧೆ ನಡೆಸುವುದು ಸೇರಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜನರು ಮತ್ತು ಕಂಪನಿಗಳಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ, ಜೈನ್ ಅವರನ್ನು ವಂಚಿಸುತ್ತಿದ್ದ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ಜನರ ವಿಶ್ವಾಸ ಗಳಿಸಲು ಮತ್ತು ಮೋಸದ ಉದ್ಯೋಗಗಳು ಅಥವಾ ವ್ಯಾಪಾರ ಅವಕಾಶಗಳ ಮೂಲಕ ವಂಚಿಸಲು ಆತ ತನ್ನ ನಕಲಿ ರಾಜತಾಂತ್ರಿಕ ವ್ಯಕ್ತಿತ್ವವನ್ನು ಬಳಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.

ಎಟಿಎಸ್ ದಾಳಿಯಲ್ಲಿ ಪತ್ತೆಯಾಗಿದ್ದು ಏನು?

ಹರ್ಷವರ್ಧನ್ ಜೈನ್ ಬಳಿ ನಕಲಿ ದಾಖಲೆಗಳು, ವಿದೇಶಿ ಕರೆನ್ಸಿ ಮತ್ತು ಹಲವಾರು ಇತರ ಸಾಮಗ್ರಿಗಳು ಪತ್ತೆಯಾಗಿದ್ದು, ಅವುಗಳನ್ನು ಆತ ಹವಾಲಾ ದಂಧೆಗೆ ಬಳಸುತ್ತಿದ್ದ ಎಂದು ಶಂಕಿಸಲಾಗಿದೆ. ಎಸ್‌ಟಿಎಫ್‌ ನೋಯ್ಡಾ ಘಟಕವು ರೂ. 44 ಲಕ್ಷಕ್ಕೂ ಹೆಚ್ಚು ಹಣ ಮತ್ತು ಹಲವಾರು ದೇಶಗಳ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದೆ. ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ನಾಲ್ಕು ವಾಹನಗಳು, 18 ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳು ಮತ್ತು ಮೈಕ್ರೋನೇಷನ್‌ಗಳ 12 ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಭಾರತದ ವಿದೇಶಾಂಗ ಸಚಿವಾಲಯದ ಸೀಲ್ ಇರುವ ನಕಲಿ ದಾಖಲೆಗಳು, ಎರಡು ನಕಲಿ ಪ್ಯಾನ್ ಕಾರ್ಡ್‌ಗಳು, ವಿವಿಧ ದೇಶಗಳು ಮತ್ತು ಕಂಪನಿಗಳ 34 ಸೀಲುಗಳು, ಎರಡು ನಕಲಿ ಪ್ರೆಸ್ ಕಾರ್ಡ್‌ಗಳು ಮತ್ತು ವಿವಿಧ ಕಂಪನಿಗಳ ದಾಖಲೆಗಳು ಕೂಡ ಎಸ್‌ಟಿಎಫ್‌ ದಾಳಿ ವೇಳೆ ಪತ್ತೆಯಾಗಿದೆ.

ಹಣ ಅಕ್ರಮ ವರ್ಗಾವಣೆ ಆರೋಪ: ನ್ಯೂಸ್ ಕ್ಲಿಕ್‌ನ ಪ್ರಬೀರ್ ಪುರ್ಕಾಯಸ್ಥಗೆ ನಿರೀಕ್ಷಣಾ ಜಾಮೀನು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಸ್ಲಾಮಾಬಾದ್‌ನಲ್ಲಿ ಅಮೆರಿಕ–ಇರಾನ್ ಶಾಂತಿ ಮಾತುಕತೆ; ಪಾಕಿಸ್ತಾನ ಮಧ್ಯಸ್ಥಿಕೆ

ಹಲವು ರೀತಿಯ ಪ್ರತಿಷ್ಠೆ ಪ್ರದರ್ಶನ, ಭಿನ್ನಾಭಿಪ್ರಾಯಗಳ ನಡುವೆ ಅಮೆರಿಕ-ಇರಾನ್ ಶಾಂತಿ ಮಾತುಕತೆ ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಪಾಕಿಸ್ತಾನದ ಪಾಲಿಗೆ ಇದು ಅತ್ಯಂತ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ....

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...