Homeಚಳವಳಿಜನಸಮುದಾಯವನ್ನು ಸಂಘಟಿಸಲು ಗಾಂಧಿಯ ಚಿಂತನೆಗಳು ಇಂದು ನಮಗೆ ಪ್ರಸ್ತುತ...

ಜನಸಮುದಾಯವನ್ನು ಸಂಘಟಿಸಲು ಗಾಂಧಿಯ ಚಿಂತನೆಗಳು ಇಂದು ನಮಗೆ ಪ್ರಸ್ತುತ…

- Advertisement -
- Advertisement -

ಮೂಲ : ಗೋಪಾಲ ಗುರು

ಅನುವಾದ: ಟಿ.ಎಸ್ ವೇಣುಗೋಪಾಲ್, ಶೈಲಜ ಮೈಸೂರು.

ಗಾಂಧಿಯ ಬಗ್ಗೆ ಬರೆದಷ್ಟು ಬಹುಶಃ ಮತ್ಯಾರ ಬಗ್ಗೆಯೂ ಬರೆದಿಲ್ಲ. ಅಷ್ಟೇ ಅಲ್ಲ ಗಾಂಧಿಯನ್ನು ದ್ವೇಷಿಸುವಷ್ಟು ಇನ್ಯಾರನ್ನೂ ದ್ವೇಷಿಸುವುದಿಲ್ಲ ಅನ್ನುವುದೂ ಕೂಡ ಅಷ್ಟೇ ನಿಜ. ಕೆಲವರ ದೃಷ್ಟಿಯಲ್ಲಿ ಗಾಂಧಿ ಮಹಾನ್ ಜನನಾಯಕ. ಉಳಿದವರ ದೃಷ್ಟಿಯಲ್ಲಿ ಆತ ಏನೂ ಅಲ್ಲ. ಬ್ರಿಟಿಷರ ವಿರುದ್ಧದ ರಾಷ್ಟ್ರೀಯ ಹೋರಾಟ ಗಟ್ಟಿಗೊಳ್ಳುತ್ತಿದ್ದ ಸಂದರ್ಭದಲ್ಲಿ ಗಾಂಧಿ ತೆಗೆದುಕೊಂಡ ನಿಲುವುಗಳು ಮತ್ತು ಆಗಿನ ಅವರ ಚಿಂತನೆಗಳನ್ನು ಇವತ್ತಿಗೂ ಕೆಲವರು ಕಟುವಾಗಿ ಟೀಕಿಸುತ್ತಾರೆ.

ಗಾಂಧಿಯನ್ನು ದ್ವೇಷಿಸುವವರಿಗೆ, ಹಾಗೆ ದ್ವೇಷಿಸುವುದಕ್ಕೆ ಕಾರಣವೇ ಬೇಕಿಲ್ಲ. ಅದು ಹಾಗೇನೆ. ಕ್ರೂರ ದ್ವೇಷಕ್ಕೆ ಯಾವ ಕಾರಣವೂ ಬೇಕಿಲ್ಲ. ದ್ವೇಷಿಸಲು ಕೊಡುವ ಕಾರಣಗಳಿಗೆ ಒಂದು ಸಮರ್ಥನೆಯೂ ಇರುವುದಿಲ್ಲ. ದ್ವೇಷ ಮತ್ತು ಅಸೂಯೆ ಎರಡೂ ವಿಚ್ಛಿಧ್ರಕಾರಿ ಅಂಶಗಳು. ಮತ್ತು ಅವೆರಡಕ್ಕೂ ಒಂದು ಸೂಕ್ಷ್ಮವಾದ ತಾರ್ಕಿಕ ಸಮರ್ಥನೆ ಇರುವುದಿಲ್ಲ. ಚಾರಿತ್ರಿಕವಾಗಿ ಸೇರಿಕೊಂಡು ಬಂದಿರುವ ಪೂರ್ವಗ್ರಹಗಳೇ ಅವಕ್ಕೆ ಬೇಕಾದಷ್ಟು. ಬಹುಶಃ ಅವರು ಗಾಂಧಿಯೊಂದಿಗಾಗಲಿ, ಅಥವಾ ಗಾಂಧಿಯನ್ನು ಓದಿಕೊಂಡ ವಿದ್ವಾಂಸರು, ವ್ಯಾಖ್ಯಾನಕಾರರು ಅಥವಾ ವಿಶ್ಲೇಷಿಸಿದವರ ಜೊತೆಗಾಗಲೀ ಎಂದೂ ಗಂಭೀರವಾದ ಚರ್ಚೆಯನ್ನೂ ಮಾಡಿಲ್ಲವೆನಿಸುತ್ತದೆ. ಅವರಿಗೆ ಬೇಕಾಗಿರುವುದು ಗಾಂಧಿಯನ್ನು ಸಮರ್ಥಿಸಿಕೊಂಡು ಕೆಲವರು ನೀಡುವ ತೆಳುವಾದ ತಕ್ಷಣದ ಪ್ರತಿಕ್ರಿಯೆ. ಅದರಲ್ಲೇ ಅವರಿಗೆ ನೆಮ್ಮದಿ.

ಗಾಂಧಿಯವರ ಚಿಂತನೆಗಳನ್ನು ಕುರಿತಂತೆ ಒಂದು ಅಧಿಕೃತವಾದ ಹಾಗೂ ನಿಖರವಾದ ವಿವರಣೆಯನ್ನು ನೀಡುವುದಕ್ಕೆ ವಿದ್ವಾಂಸರಿಗೆ, ಭಾಷ್ಯಕಾರರಿಗೆ, ವಿಶ್ಲೇಷಕರಿಗೆ ಗಾಂಧಿ ಬಹುಶಃ ಅವಕಾಶವನ್ನೇ ಕೊಟ್ಟಂತಿಲ್ಲ. ಅಂದರೆ ಗಾಂಧಿಯವರ ಚಿಂತನೆಗಳನ್ನು ಕುರಿತಂತೆ ಒಂದು ಸಂಪೂರ್ಣವಾದ ಹಾಗೂ ಅಂತಿಮ ಎನ್ನಬಹುದಾದ ವಿವರಣೆಯನ್ನು ಕೊಡುವುದಕ್ಕೆ ಅವರಿಗೆ ಕಷ್ಟವಾಗಿದೆ. ಈ ಮಾತು ಗಾಂಧಿಯವರ ವಿದ್ವತ್ತಿನ ವಿಷಯದಲ್ಲಷ್ಟೇ ಅಲ್ಲ, ಅವರು ಅನುಸರಿಸುವ ವಿಧಾನದ ಮಟ್ಟಿಗೂ ಸತ್ಯ.

ಗಾಂಧಿಯವರ ಬರಹಗಳ ಒಂದು ಲಕ್ಷಣವೆಂದರೆ, ಅವುಗಳ ತೆರೆದಿರುವಿಕೆ (ಮುಕ್ತತೆ). ಅಂದರೆ ಯಾವುದೇ ವಿಚಾರದಲ್ಲೂ ಅವರು ಇದು ಇಲ್ಲಿಗೆ ಮುಗಿಯಿತು ಎಂದು ಒಂದು ತೆರೆ ಎಳೆದು ಬಿಡುವುದಿಲ್ಲ. ಅದು ಮುಕ್ತವಾಗಿಯೇ ಇರುತ್ತದೆೆ. ಇದರಿಂದಾಗಿಯೇ ವಿದ್ವಾಂಸರಿಗೆ ಗಾಂಧಿಯನ್ನು ವಿಭಿನ್ನ “ಅವತಾರ”ಗಳಲ್ಲಿ ಪ್ರದರ್ಶಿಸುವ ಸಾಹಸ ಮಾಡುವುದಕ್ಕೆ ಸಾಧ್ಯವಾಗಿದೆ. ಹಾಗಾಗಿಯೇ ಗಾಂಧಿ ವಸಾಹತುಪೂರ್ವ ರಾಷ್ಟ್ರೀಯವಾದಿಯಾಗಿ, ಅಂತರರಾಷ್ಟ್ರೀಯವಾದಿಯಾಗಿ, ಆಧುನಿಕತೆಗೆ ಪರ್ಯಾಯವಾಗಿ, ಆಧುನಿಕೋತ್ತರವಾದಿಯಾಗಿ, ಭಾವನಾವಾದಿಯಾಗಿ, ವ್ಯಾವಹಾರಿಕನಾಗಿ, ಮಹಿಳಾವಾದಿಯಾಗಿ, ತಳಸಮುದಾಯದ ಚಿಂತಕನಾಗಿ ಮತ್ತು ಕೊನೆಗೆ ಉದಾರವಾದಿಯಾಗಿ ಹಾಗೆಯೇ ಕೂಡೊಡೆತನದ ಪ್ರತಿಪಾದಕನಾಗಿ ಹೀಗೆ ವಿಭಿನ್ನ ರೂಪಗಳಲ್ಲಿ ನಮಗೆ ಕಾಣಿಸಿಕೊಳ್ಳುತ್ತಾನೆ. ಗಾಂಧಿಯ ಚಿಂತನೆಯಲ್ಲಿರುವ ಈ ಮುಕ್ತತೆ ಅಥವಾ ಚಿಂತನೆಯ ಮುಕ್ತತೆಯೇ ಗಾಂಧಿಯನ್ನು ಟೀಕಿಸುವವರನ್ನು ನೈತಿಕ ಶಿಷ್ಟತೆ ಜಾಗೂ ಸೌಜನ್ಯವೇ ಇಲ್ಲದ ಗಲೀಜು ಜನರನ್ನಾಗಿ ಅಥವಾ ರಾಜಕೀಯವಾಗಿ ಆಷಾಡಭೂತಿಗಳನ್ನಾಗಿ, ಬೌದ್ಧಿಕವಾಗಿ ನಿಸ್ಸಾಹಯಕರಾಗಿ, ಹತಾಶರನ್ನಾಗಿ ಅಥವಾ ಅಧೀರರನ್ನಾಗಿ ಮಾಡಿದೆ.

ಗಾಂಧಿಯನ್ನು ಎದುರಿಸಲು ಅವರಲ್ಲಿ ಯಾವುದೇ ವಾದವೂ ಇಲ್ಲ ಅಥವಾ ಅವರಿಗೆ ಆಸಕ್ತಿಯೂ ಇಲ್ಲ. ಹಾಗಾಗಿಯೇ ಅವರು ಅಸಹ್ಯ ಹುಟ್ಟಿಸುತ್ತಾರೆ. ಗಾಂಧಿಯನ್ನು ಬೌದ್ಧಿಕವಾಗಿ ಹೇಗೆ ಎದುರಿಸಬೇಕೆಂದು ತಿಳಿಯದೇ ಅವರಲ್ಲಿ ಕೆಲವರು ಹತಾಶರಾಗುತ್ತಾರೆ. ಗಾಂಧಿವಾದದ ಇಡೀ ಪರಂಪರೆಯನ್ನೇ ನಿರ್ನಾಮ ಮಾಡಬೇಕು ಎಂದುಕೊಂಡವರಿಗೆ ತಮ್ಮ ಉದ್ದೇಶವನ್ನು ಹೇಗೆ ಸಾಧಿಸಿಕೊಳ್ಳಬೇಕು ಎನ್ನುವುದು ತಿಳಿದಿಲ್ಲ. ಹಾಗಾಗಿ ಕನಿಷ್ಠ ಮೇಲ್ನೋಟಕ್ಕಾದರೂ ಅವರು ಗಾಂಧಿಯೊಂದಿಗೆ ಗುರುತಿಸಿಕೊಳ್ಳಬೇಕಾಗಿದೆ. ಅವರ ಒಳಗಿನ ನಿಜವಾದ ಉದ್ದೇಶ ಹಾಗೂ ಅವರು ಹೊರಗೆ ತೋರಿಸಿಕೊಳ್ಳುತ್ತಿರುವ ರೀತಿಗೂ ನಡುವೆ ಘರ್ಷಣೆ ನಡೆಯುತ್ತಿರುತ್ತದೆ. ಆ ಘರ್ಷಣೆಯಲ್ಲಿ ಅವರ ರಾಜಕೀಯ ಅಷಾಡಭೂತಿತನ ಅಥವಾ ಅಸಂತುಷ್ಟ ಪ್ರಜ್ಞೆ ಕಾಣಿಸಿಕೊಳ್ಳುತ್ತದೆ.

ಗಾಂಧಿಯ ಬರಹಗಳು ಸಂವಾದದ ರೂಪದಲ್ಲಿವೆ. ಈ ವಿಧಾನ ಸಾಂಪ್ರದಾಯಿಕ ವಿಚಾರಗಳನ್ನು ಚರ್ಚಿಸುವುದಕ್ಕೆ ಒತ್ತಾಯಿಸುತ್ತದೆ. ಈ ವಿಧಾನಕ್ಕೆ ಬೇಕಾದ ಭೌದ್ಧಿಕ ಆಕರಗಳು ಭಾರತೀಯ ಜ್ಞಾನಪರಂಪರೆಯಲ್ಲಿ ಇವೆ. ಗಾಂಧಿ ಅವನ್ನು ಸೃಜನಶೀಲವಾಗಿ ಬಳಸಿಕೊಂಡಿದ್ದಾರೆ. ಅವರ ಚಿಂತನೆಗಳು ಬಹುಪಾಲು ಒಳಗಿನಿಂದಲೇ ಕೆಲಸಮಾಡುತ್ತಿರುತ್ತವೆ. ಗಾಂಧಿಯ ವಿಚಾರಗಳು ಎಲ್ಲಾ ವಿದ್ವಾಂಸರಲ್ಲೂ ಒಂದೇ ರೀತಿಯ ಚಿಂತನೆಗಳನ್ನು ಮೂಡಿಸುವುದಿಲ್ಲ. ಪಾಶ್ಚಾತ್ಯ ಗ್ರಹಿಕಾಪದ್ಧತಿಗಳಿಗೆ ಭಾರತೀಯರು ದಾಸರಾಗಬಾರದೆಂದು ಗಾಂಧಿ ವಾದಿಸುತ್ತಾರೆ. ಇದನ್ನು ಹಲವು ವಿದ್ವಾಂಸರುಗಳು ಗುರುತಿಸಿದ್ದಾರೆ.

ವಸಾಹತುಶಾಹಿ ಶಕ್ತಿಯ ವಿರುದ್ಧ ಅಥವಾ ಸ್ಥಳೀಯವಾಗಿ ಸಮಾಜವನ್ನು ನಿಯಂತ್ರಿಸುತ್ತಿರುವ ಬ್ರಾಹ್ಮಣಶಾಹಿಯ ವಿರುದ್ಧ ಜನರನ್ನು ಸಂಘಟಿಸುವುದಕ್ಕೆ ಕೆಲವು ವಿಧಾನಗಳು ಸೂಕ್ತವಾಗುವುದಿಲ್ಲ ಎನ್ನುವ ಕಾರಣಕ್ಕೆ ಗಾಂಧಿ ಅವುಗಳನ್ನು ಕೈಬಿಟ್ಟಿದ್ದಾರೆ. ಇವುಗಳನ್ನು ಗಮನಿಸಿದರೆ, ಜ್ಞಾನವನ್ನು ಗ್ರಹಿಸುವುದರಲ್ಲಿ ಗಾಂಧಿಗಿದ್ದ ಅರಿವು ಅರ್ಥವಾಗುತ್ತದೆ. ಇದರಿಂದಾಗಿಯೇ ಅವರು ಬಳಸಿದ ಸಹಿಷ್ಣುತೆ, ಅಹಿಂಸೆ, ಅಸಹಕಾರದ ಭಾಷಾಶೈಲಿ ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ತುಂಬಾ ಪರಿಣಾಮಕಾರಿಯಾಗಿದ್ದವು.

ಹಾಗೆಯೇ ಸೇವೆ, ಸಹಾನುಭೂತಿ ಮತ್ತು ಕೂಡೊಡೆತನ ಮುಂತಾದವುಗಳ ವಿವರಣೆ ಮತ್ತು ವ್ಯಾಖ್ಯಾನ ಅಂತಹ ಕ್ಲಿಷ್ಟವಾಗಿಲ್ಲ. ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ. ಜನಸಾಮಾನ್ಯರು ಇವುಗಳಿಗಾಗಿ ತಮ್ಮ ಎದುರಾಳಿಗಳ ವಿಷಯದಲ್ಲಿ ತೀರಾ ಕಠಿಣವಾದ ನಿಲುವನ್ನು ತೆಗೆದುಕೊಳ್ಳಬೇಕಾಗುವ ಅವಶ್ಯಕತೆಯೂ ಇರಲಿಲ್ಲ. ಹಾಗಾಗಿ ಇವುಗಳನ್ನು ಒಪ್ಪಿಕೊಳ್ಳುವುದಕ್ಕೆ ಯಾವ ಕಷ್ಟವೂ ಅಗಲಿಲ್ಲ. ಇಂತಹ ಭಾಷೆಯ ಒಳಗೇ ಇರುವ ಭಾವನಾತ್ಮಕ ಅಂಶವೂ ವೈಚಾರಿಕ ಪ್ರಖರತೆಯನ್ನು ಕಡಿಮೆ ಮಾಡುತ್ತದೆ. ಈ ಭಾವನಾತ್ಮಕ ಅಂಶ ಅವರ ಗ್ರಹಿಕಾ ವಿಧಾನಗಳ ಆಧಾರವಾಗಿ ಕೆಲಸಮಾಡುತ್ತದೆ. “ಹರಿಜನ” ಎನ್ನುವುದು ಕೂಡ ಬೌದ್ಧಿಕ ಚಿಂತನೆಯನ್ನು ಆಧರಿಸದ ಇಂತಹುದೇ ಒಂದು ಸುಲಭಗ್ರಾಹ್ಯ ಪದವಾಗಿತ್ತು. ಈ ಪದದ ಉದ್ದೇಶ ಕೆಳಜಾತಿಗಳಿಗೆ ಸಂಬಂಧಿಸಿದಂತೆ ಸವರ್ಣೀಯರ ಸಾಮಾಜಿಕ ನಿಲುವನ್ನು ತಟಸ್ಥಗೊಳಿಸಿ, ಅಂತಿಮವಾಗಿ ಅವರಿಬ್ಬರ ಸಾಮಾಜಿಕ ಅಂತಸ್ತನ್ನು ಒಂದೇ ಮಾಡುವುದಾಗಿತ್ತು. ಗಾಂಧೀಜಿಯವರ ಅನುಸರಿಸಿದ ಈ ವೈದಾನಿಕ ನಡೆಯಿಂದಾಗಿ, ವಸಾಹಾತುವಿರೋಧಿ ಹೋರಾಟದಲ್ಲಿ ಜನರನ್ನು ಸಂಘಟಿಸುವಲ್ಲಿ ಅವರನ್ನು ತೀರಾ ಯಶಸ್ವಿ ನಾಯಕರನ್ನಾಗಿ ಮಾಡಿತು. ಗಾಂಧೀಜಿಯವರ ಈ ಭಾಷೆ ಎದುರಾಳಿಗಳನ್ನು ರೊಚ್ಚಿಗೆಬ್ಬಿಸುತ್ತಿರಲಿಲ್ಲ. ಹಾಗಾಗಿ ಸಾಮಾನ್ಯ ಜನರಲ್ಲಿ ಇದು ಸುರಕ್ಷತೆ ಮತ್ತು ನೆಮ್ಮದಿಯ ಭಾವವನ್ನು ಮೂಡಿಸುತ್ತಿತ್ತು. ವಿವರಣೆ ಮತ್ತು ವ್ಯಾಖ್ಯಾನವನ್ನು ನೀಡುವುದಕ್ಕೆ ಗಾಂಧಿಯು ಬೌದ್ಧಿಕವಲ್ಲದ ಚಿಂತನಾಕ್ರಮವನ್ನು ಬಳಸಿದ್ದರಿಂದ ಅವರ ಚಿಂತನೆಗಳಿಗೆ ಒಂದು ಮುಕ್ತತೆ ಬಂದಿತು. ಇದರಿಂದಾಗಿ ಭಾರತೀಯ ಜನಸಮುದಾಯದ ಪರಿಣಾಮಕಾರಿಯಾದ ಬೆಂಬಲವನ್ನು ಪಡೆದುಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಯಿತು.

ಗಾಂಧೀಜಿಯವರ ಚಿಂತನೆಗಳು ಅದೆಷ್ಟು ಮುಕ್ತವಾಗಿವೆಯೆಂದರೆ ವಿಷಯಕ್ಕೆ ಸಂಬಂಧಿಸಿದಂತೇ ಆಗಲಿ ಅಥವಾ ಭಾಷೆಗೆ ಸಂಬಂಧಿಸಿದಂತೇ ಆಗಲಿ ಅವು ಯಾವುದೇ ರೀತಿಯ ನಿಗ್ರಹವನ್ನು ಹೇರುವುದಿಲ್ಲ. ಅವರ ಚಿಂತನೆಗಳಿಗೆ ವಿಭಿನ್ನ ಬಗೆಯ ವಿಶ್ಲೇಷಣೆಗಳು ಸಾಧ್ಯ. ಮತ್ತು ಅವುಗಳನ್ನು ನೀವು ಆರೋಗ್ಯಕರ ವಿಮರ್ಶೆಗೂ ಸುಲಭವಾಗಿ ಒಡ್ಡಬಹುದಿತ್ತು. ಸಾಮಾನ್ಯವಾಗಿ ಆಲೋಚನೆಗಳನ್ನು ಮತ್ತು ವಿಚಾರಗಳ ಅಭಿವ್ಯಕ್ತಿಯನ್ನು ಹಲವು ನಿಬಂಧನೆಗಳು ಮತ್ತು ನಿಯಮಾವಳಿಗಳು ನಿಯಂತ್ರಿಸುತ್ತವೆ. ಆದರೆ ಗಾಂಧಿಯ ಚಿಂತನೆಗಳು ಇಂತಹ ಎಲ್ಲಾ ನಿಯಂತ್ರಣಗಳನ್ನೂ ನಿರಾಕರಿಸುತ್ತವೆ. ಅವರ ಚಿಂತನೆಗಳು ಹುಡುಕಾಟ ಮತ್ತು ಅನ್ವೇಷಣೆಗೆ ಮುಕ್ತವಾಗಿ ತೆರೆದುಕೊಂಡಿವೆ. ಅವು ಹೀಗೆ ಮುಕ್ತವಾಗಿವೆ ಎಂದ ಕೂಡಲೇ, ಅವೆಲ್ಲಾ ಮನಸೋ ಇಚ್ಛೆ ರೂಪುಗೊಂಡ ವಿಚಾರಗಳು ಅಂತ ಭಾವಿಸಬಾರದು. ಅವರ ಚಿಂತನೆಗಳಿಗೆ ಮುಖ್ಯವಾಗಿ ಮಾನವೀಯತೆಯನ್ನು ಆಧರಿಸಿದ ಒಂದು ನೈತಿಕ ಸಮುದಾಯವನ್ನು ಕಟ್ಟುವ ಕಾಳಜಿ ಇದೆ. ಗಾಂಧಿಯವರ ಚಿಂತನೆಗಳಿಗೆ ಒಂದು ನೈತಿಕ ಸಮುದಾಯ ಮತ್ತು ಮಾನವೀಯತೆಯನ್ನು ಸೃಷ್ಟಿಸುವ ಉದ್ದೇಶ ಮತ್ತು ಜವಾಬ್ದಾರಿ ಇದೆ.

ಭಾರತ ಇಂದು ಸಾಮಾಜಿಕವಾಗಿ ಸ್ವತಂತ್ರಗೊಳ್ಳಬೇಕಾಗಿದೆ. ಸ್ವತಂತ್ರ ಅಂದರೆ ಕೇವಲ ಭಾರತವನ್ನು ಬಯಲುಶೌಚಮುಕ್ತ ದೇಶವನ್ನಾಗಿ ಮಾಡುವುದಲ್ಲ. ಅದಕ್ಕಿಂತ ಮುಖ್ಯವಾಗಿ ಭಾರತೀಯ ಮನಸ್ಸುಗಳೊಳಗೆ ಆಳವಾಗಿ ಬೇರೂರಿರುವ ಅಸ್ಪೃಶ್ಯತೆಯಿಂದ ಭಾರತವನ್ನು ಮುಕ್ತಗೊಳಿಸಬೇಕಾಗಿದೆ. ಅದಕ್ಕಾಗಿ ಜನಸಮುದಾಯವನ್ನು ಸಂಘಟಿಸಲು ಗಾಂಧಿಯ ಚಿಂತನೆಗಳು ಇಂದು ನಮಗೆ ಪ್ರಸ್ತುತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...