Homeಮುಖಪುಟನನ್ನ ಮೇಲೆ ಗುಂಪು ಹಲ್ಲೆಯಾದಾಗ ನೀವೇಕೆ ಮಾತಾಡಲಿಲ್ಲ?: ಸ್ವಾಮಿ ಅಗ್ನಿವೇಶ್ ಪ್ರಶ್ನೆ

ನನ್ನ ಮೇಲೆ ಗುಂಪು ಹಲ್ಲೆಯಾದಾಗ ನೀವೇಕೆ ಮಾತಾಡಲಿಲ್ಲ?: ಸ್ವಾಮಿ ಅಗ್ನಿವೇಶ್ ಪ್ರಶ್ನೆ

- Advertisement -

ಪಾಲ್ಘರ್ ನಲ್ಲಿ ಇಬ್ಬರು ಸಾಧುಗಳು ಸೇರಿದಂತೆ ಮೂವರನ್ನು ಗುಂಪು ಹಲ್ಲೆ ನಡೆಸಿದಾಗ ಬೊಬ್ಬೆ ಹೊಡೆದ ಬಿಜೆಪಿಗರು ಹಾಗೂ ಟಿವಿ ಆಂಕರುಗಳು ನನ್ನ ಮೆಲೆ ಹಲ್ಲೆಯಾದಾಗ ಯಾಕೆ ಕೂಗು ಹಾಕಲಿಲ್ಲ ಎಂದು ಸ್ವಾಮಿ ಅಗ್ನಿವೇಶ್ ಪ್ರಶ್ನೆ ಮಾಡಿದ್ದಾರೆ. ಸ್ವಾಮಿ ಅಗ್ನಿವೇಶ್ ಅವರನ್ನು ಜುಲೈ 2018 ರಲ್ಲಿ ಜಾರ್ಖಂಡ್‌ನ ಪಕೂರ್‌ ಎಂಬಲ್ಲಿ ಜನಸಮೂಹವೊಂದು ಗುಂಪು ಹಲ್ಲೆ ನಡೆಸಿದ್ದವು. ಇದರ ನಂತರ ಪೊಲೀಸರು ದಾಳಿಕೋರರನ್ನು ಬಿಜೆಪಿಯೊಂದಿಗೆ ಸಂಬಂಧವಿರುವವರು ಎಂದು ಗುರುತಿಸಿದ್ದರು.

ಪಾಲ್ಘರ್ ನಲ್ಲಿ ಗುಂಪುಹತ್ಯೆಯ ಘಟನೆಯು ಟಿವಿ ಚಾನೆಲ್‌ಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೋಶಕ್ಕೆ ವ್ಯಕ್ತವಾಗಿತ್ತು, ವಿಶೇಷವಾಗಿ ಭಾರತೀಯ ಜನತಾ ಪಕ್ಷದ ಮುಖಂಡರು, ಸಂಘಪರಿವಾರದ ಕಾರ್ಯಕರ್ತರು ಮತ್ತು ಬಲ-ಪಂಥೀಯ ಸಿದ್ಧಾಂತದ ಒಲವುಳ್ಳ ಜನರು ‌ಆರೋಪವನ್ನು ಮುಸ್ಲಿಮರು ಮಾಡಿದ್ದಾರೆ ಎಂದು ಸಾಬೀತು ಮಾಡಲು ಹೆಣಗಾಡಿದ್ದರು. ನಂತರ ಮಹಾರಾಷ್ಟ್ರ ಸರ್ಕಾರವೇ ಇದು ಕೋಮು ಆಧಾರಿತವಲ್ಲ ಎಂದು ಸ್ಪಷ್ಟೀಕರಣ ನೀಡಿತ್ತು. ಸಂಘ ಪರಿವಾರದ ಪ್ರತಿಕ್ರಿಯೆಯು ಮೂಲಭೂತವಾಗಿ ಕೊಲ್ಲಲ್ಪಟ್ಟ ಮೂವರಲ್ಲಿ ಇಬ್ಬರು ವಾರಣಾಸಿಯ ಅಖಾರಾದ ಸಾಧುಗಳು ಎಂಬ ಅಂಶದ ಸುತ್ತ ಸುತ್ತುತ್ತದೆ. ಪೊಲೀಸರು ಬಂಧಿಸಲ್ಪಟ್ಟವರಲ್ಲಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮದ ಒಬ್ಬ ಕೂಡ ಇರಲಿಲ್ಲ.

ಪಾಲ್ಘರಿನಲ್ಲಿ ಹತ್ಯೆಯಾದ ಸಾಧುಗಳಲ್ಲಿ ಇಬ್ಬರ ಹೆಸರಲ್ಲೂ ‘ಗಿರಿ’ ಎಂದು ಇದ್ದುದರಿಂದ ಆರಂಭದಲ್ಲಿ ಗೋಸವಿ ಅಲೆಮಾರಿ ಬುಡಕಟ್ಟು ಮುಖಂಡರು ಎಂದು ತಿಳಿದುಕೊಂಡಿದ್ದರು. ಆದರೆ ದೈನಿಕ್ ಭಾಸ್ಕರ್ ಎಂಬ ಪತ್ರಿಕೆ ಅವರು ಉತ್ತರ ಪ್ರದೇಶದ ಭಾದೋಹಿಯಿ ಹಿರಿಯ ಸಾಧು ಚಿಂತಾಮಣಿ ತಿವಾರಿ ಎಂಬ ಬ್ರಾಹ್ಮಣನ ಮಗ ಎಂದು ವರದಿ ಮಾಡಿದೆ.

ಜುಲೈ 2018 ರಲ್ಲಿ, ಗೋಸವಿ ಬುಡಕಟ್ಟು ಜನಾಂಗದವರ ಭೀಕರ ಹತ್ಯಾಕಾಂಡ ಮಹಾರಾಷ್ಟ್ರದ ಧುಲೇನಲ್ಲಿ ನಡೆಯಿತು. ಆದರೆ ಆ ಸಮಯ ಮಹಾರಾಷ್ಟ್ರಾದಲ್ಲಿ ಬಿಜೆಪಿ ಪಕ್ಷದ ಮುಖ್ಯಮಂತ್ರಿಯೊಬ್ಬರು ಆಳುತ್ತಿದ್ದ ಕಾರಣ, ಸಂಘಪರಿವಾರದ ಲಾಬಿ ಅದನ್ನು ದೊಡ್ಡ ವಿಷಯವನ್ನಾಗಿ ಮಾಡಲಿಲ್ಲ. ಆದರೆ ಈಗ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಒಕ್ಕೂಟವು ರಾಜ್ಯವನ್ನು ಆಳುತ್ತಿದೆ, ಪಾಲ್ಘರ್ ಘಟನೆಗೆ ಕೇವಲ ರಾಜಕೀಯ ಬಣ್ಣವನ್ನು ಮಾತ್ರವಲ್ಲದೆ ಕೋಮುವಾದಿ ಉಚ್ಚಾರಣೆಗಳನ್ನೂ ನೀಡಲಾಗಿದೆ.

ಜುಲೈ 2018 ರಲ್ಲಿ ಜಾರ್ಖಂಡ್‌ನಲ್ಲಿ ಜನಸಮೂಹವೊಂದರಿಂದ ಕ್ರೂರವಾಗಿ ಹಲ್ಲೆಗೊಳಗಾದ ಸ್ವಾಮಿ ಅಗ್ನಿವೇಶ್ ಪಾಲ್ಘರ್ ಹತ್ಯೆಯನ್ನು ಖಂಡಿಸುವ ವಿಡಿಯೋವನ್ನು ಬುಧವಾರ ಬಿಡುಗಡೆ ಮಾಡಿದರು. ಅಖ್ಲಾಕ್, ಪೆಹ್ಲು ಖಾನ್ ಮತ್ತು ಜುನೈದ್ ಅವರಂತಹ ಮುಸ್ಲಿಮರನ್ನು ಕೊಂದವರಿಗೆ ಶಿಕ್ಷೆ ವಿಧಿಸುವಲ್ಲಿನ ವ್ಯವಸ್ಥೆಯ ವಿಫಲತೆಯ ಬಗ್ಗೆಯೂ ಅವರು ಗಮನ ಸೆಳೆದರು ಮತ್ತು ನಂತರ ಗುಂಪು ಹಲ್ಲೆಯ ತಮ್ಮ ಸ್ವಂತ ಅನುಭವದ ಬಗ್ಗೆ ಮಾತನಾಡಿದರು.

ಜಾರ್ಖಂಡ್‌ನ ಪಕೂರ್‌ನಲ್ಲಿ ನಡೆದ ಗುಂಪು ಹಲ್ಲೆಯಲ್ಲಿ ಅಗ್ನಿವೇಶ್ ಅವರನ್ನು ತೀವ್ರವಾಗಿ ಥಳಿಸಲಾಯಿತು. ಸ್ಥಳೀಯ ಪೊಲೀಸರು ನೋಂದಾಯಿಸಿದ ಎಫ್‌ಐಆರ್‌ನಲ್ಲಿ ಎಂಟು ದಾಳಿಕೋರರನ್ನು ಗುರುತಿಸಿದೆ. ಇವರೆಲ್ಲರೂ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಅಂಗಸಂಸ್ಥೆಯಾಗಿರುವ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ದೊಂದಿಗೆ ಸಂಬಂಧ ಹೊಂದಿದ್ದರು. ದಿ ವೈರ್‌ಗೆ ಸಂದರ್ಶನ ನೀಡಿದ ಅಗ್ನಿವೇಶ್, ದಾಳಿಕೋರರನ್ನು ಗುರುತಿಸಲಾಗಿದ್ದರೂ, ಅಂದಿನ ಜಾರ್ಖಂಡ್ ಸರ್ಕಾರ ಬಿಜೆಪಿಯ ರಘುಬರ್ ದಾಸ್ ನೇತೃತ್ವದಲ್ಲಿ ಯಾವುದೇ ಕ್ರಮವಾಗಿಲ್ಲ ಎಂದಿದ್ದಾರೆ.

ಒಂದು ತಿಂಗಳ ನಂತರ, ಆಗಸ್ಟ್ 2018 ರಲ್ಲಿ, ಅಗ್ನಿವೇಶ್ ಮತ್ತೆ ಬಿಜೆಪಿ ಕಾರ್ಯಕರ್ತರಿಂದ ಸಾರ್ವಜನಿಕವಾಗಿ ಹಲ್ಲೆಗೊಳಗಾಗಿದ್ದಾರೆ. ಈ ಬಾರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯ ಬಳಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಲು ಹೊರಟಿದ್ದರು.

ಸೆಪ್ಟೆಂಬರ್ 2018 ರಲ್ಲಿ, ಅವರು ಎರಡೂ ಹಲ್ಲೆ ಪ್ರಕರಣಗಳನ್ನು ಜೋಡಿಸಲು ಹಾಗೂ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟಿಗೆ ಕೇಳಿಕೊಂಡರು ಆದರೆ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ನೇತೃತ್ವದ ನ್ಯಾಯಪೀಠ ಮಧ್ಯಪ್ರವೇಶಿಸಲು ನಿರಾಕರಿಸಿತು.

81 ವರ್ಷದ ಅಗ್ನಿವೇಶ್ ದಾಳಿಯ ನಂತರ ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ದಾಳಿಯು ಅವರನ್ನು ಜರ್ಜರಿತಗೊಳಿಸಿದೆ ಮತ್ತು ಯಕೃತ್ತಿನ ಕಾಯಿಲೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅವರು ಹೇಳುತ್ತಾರೆ.

“ಪಾಲ್ಘರ್‌ನಲ್ಲಿ ನಡೆದದ್ದು ಖಂಡನೀಯ. ಆದರೆ ಮುಸ್ಲಿಮರು ಅಥವಾ ಕ್ರಿಶ್ಚಿಯನ್ ಮಿಷನರಿ ಗುಂಪುಗಳು ಇದರಲ್ಲಿ ಆರೋಪಿಗಳಾಗಿದ್ದಾರೆ ಎಂದು ಅದಕ್ಕೆ ಸಂಪೂರ್ಣ ಹೊಸ ತಿರುವನ್ನು ನೀಡಲು ಪ್ರಯತ್ನಿಸಿದ ಕೋಮು ಶಕ್ತಿಗಳನ್ನು ಕೂಡ ಖಂಡಿಸಬೇಕಾಗಿದೆ ”ಎಂದು ಅವರು ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಮುಸ್ಲಿಮರನ್ನು ಮತ್ತು ಕೆಳಜಾತಿಯವರನ್ನು ಹತ್ಯೆಗೈದ ಪ್ರಕರಣಗಳಲ್ಲಿ “ಗೋರಕ್ಷಾ” ಎಂಬ ಹೆಸರಿನಲ್ಲಿ ಹಿಂಸಾತ್ಮಕ ಗುಂಪುಗಳಿಂದ ಆಯೋಜಿಸಲಾಗಿದೆ ಎಂಬ ಬಗ್ಗೆ ಬೆರಳು ತೋರಿಸುತ್ತಾರೆ. “ಬಿಜೆಪಿ ಮತ್ತು ಇತರ ಬಲಪಂಥೀಯ ಕಾರ್ಯಕರ್ತರು ತುಂಬಾ ಬೊಬ್ಬೆ ಹಾಕುತ್ತಿದ್ದಾರೆ, ಆದರೆ ಅಖ್ಲಾಕ್‌ನ ಕೊಲೆಗಾರರಿಗೆ ಏಕೆ ಶಿಕ್ಷೆಯಾಗುತ್ತಿಲ್ಲ ಎಂದು ಅವರು ಉತ್ತರಿಸಬೇಕು? ಜುನೈದ್ ಗುಂಪುಹತ್ಯೆ ಪ್ರಕರಣದಲ್ಲಿ, ಪೆಹ್ಲು ಖಾನ್ ಹಾಗೂ ರಿಜ್ವಾನ್ ಅವರ ಕೊಲೆ ಪ್ರಕರಣದಲ್ಲಿ ಏಕೆ ನ್ಯಾಯ ದೊರಕಿಲ್ಲ? ” ಎಂದು ಅವರು ಕೇಳುತ್ತಾರೆ.

(ಜುಲೈ 2018 ರಲ್ಲಿ ಜಾರ್ಖಂಡ್‌ನ ಪಕೂರ್‌ನಲ್ಲಿ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋ ಸ್ಕ್ರೀನ್‌ಶಾಟ್.)

ಅಗ್ನಿವೇಶ್ ಮೇಲೆ ಹಲ್ಲೆ ಪ್ರಕರಣದಲ್ಲಿ ಆಗಿನ ಜಾರ್ಖಂಡ್ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದರೂ, ತನಿಖೆ ಎಂದಿಗೂ ಮುಂದೆ ಸಾಗಲಿಲ್ಲ. ಪೊಲೀಸರು ಭಾರತೀಯ ಜನತಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೇರಿದಂತೆ ಎಂಟು ಬಿಜೆವೈಎಂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿ, ಘಟನೆಯ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ಘಟನೆಯನ್ನು ಸಂತಲ್ ಪರಗಣ ಡಿಐಜಿ ಮತ್ತು ವಿಭಾಗೀಯ ಆಯುಕ್ತರು ತನಿಖೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಘೋಷಿಸಿದ್ದರು. ಆದರೆ ಈ ಪ್ರಕರಣವು ಕೋಲ್ಡ್ ಸ್ಟೋರೇಜ್‌ನಲ್ಲಿದೆ ಎಂದು ಅಗ್ನಿವೇಶ್ ಹೇಳುತ್ತಾರೆ.

ಲಿಟ್ಟಿಪರಾ ಕ್ರೀಡಾಂಗಣದಲ್ಲಿ ಪಹರಿಯಾ ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅಗ್ನಿವೇಶ್ ಅವರು ಜುಲೈ 17, 2018 ರಂದು ಪಕೂರ್‌ಗೆ ಭೇಟಿ ನೀಡಿದ್ದರು. ಅವರು ತನ್ನ ಹೋಟೆಲ್‌ನಿಂದ ಹೊರಡುವಾಗ ಪ್ರತಿಭಟನಾಕಾರರ ಗುಂಪು ಅವರ ವಿರುದ್ಧ ಘೋಷಣೆಗಳನ್ನು ಕೂಗಿ, ತಕ್ಷಣವೇ ಅಗ್ನಿವೇಶ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ಅವರನ್ನು ನೆಲಕ್ಕೆ ಬೀಳಿಸಿ, ಬಟ್ಟೆಗಳನ್ನು ಸೀಳಿ, ಪೇಟವನ್ನು ಎಳೆಯಲಾಗಿತ್ತು.

ಆ ಘಟನೆಯನ್ನು ಚಿತ್ರೀಕರಿಸಿ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಯಿತು. ಅಗ್ನಿವೇಶ್ ಅವರು ಕೂಡ ಕೇಸರಿ ನಿಲುವಂಗಿಯಲ್ಲಿದ್ದರೂ ಯಾರೂ ಅವರನ್ನು ಬೆಂಬಲಿಸಲಿಲ್ಲ. “ಆ ದಾಳಿಯಲ್ಲಿ ನಾನು ಕೊಲ್ಲಲ್ಪಟ್ಟಿದ್ದೇನೆ … ಪ್ರಧಾನ ಮಂತ್ರಿಯು ಈ ಕೃತ್ಯವನ್ನು ಖಂಡಿಸಲಿಲ್ಲ ಹಾಗೂ ಇಲ್ಲಿಯವರೆಗೆ ಯಾವುದೇ ಪೊಲೀಸರು ಅಥವಾ ರಾಜ್ಯ ಸರ್ಕಾರ ಈ ಬಗ್ಗೆ ತನಿಖೆಯಲ್ಲಿ ತಲೆಕೆಡಿಸಿಕೊಂಡಿಲ್ಲ” ಎಂದು ಅವರು ಹೇಳುತ್ತಾರೆ.

“ನಾನು ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದೆ ಅಥವಾ ಹಸುವನ್ನು ವಧಿಸುವುದರಲ್ಲಿ ಭಾಗಿಯಾಗಿದ್ದೆ ಎಂದು ಯಾರೂ ಆರೋಪಿಸಿಲ್ಲ. ಆದರೂ ನನ್ನ ಮೇಲೆ ಹಲ್ಲೆ ನಡೆಯುತ್ತದೆ, ಅದು ಯಾಕೆ ಸಂಭವಿಸಿತು? ”

ಅಗ್ನಿವೇಶ್ ಮೇಲಿನ ಹಲ್ಲೆಯನ್ನು ರಿಪಬ್ಲಿಕ್ ಟಿವಿ ವರದಿ ಮಾಡಿದೆ. ಆದರೆ ಇದು ಸ್ವಾಮಿಯನ್ನು ಉಲ್ಲೇಖಿಸುವಾಗ ತನ್ನ ಪರದೆಯ ಮೇಲೆ “ಮಾವೋವಾದಿ ಸಹಾನುಭೂತಿ” ಉಳ್ಳವರು ಎಂಬ ಪದವನ್ನು ಸೇರಿಸಿ ಮತ್ತು ದಾಳಿಕೋರರನ್ನು “ಫ್ರಿಂಜ್ ಗ್ರೂಪ್” ಎಂದು ಕರೆದಿತ್ತು. ಹಲ್ಲೆ ಮಾಡಿದವರೆಲ್ಲರೂ ಬಿಜೆಪಿಗೆ ಸಂಬಂಧ ಹೊಂದಿದ್ದರು. ಅಗ್ನಿವೇಶ್ “ಕ್ರಿಶ್ಚಿಯನ್ ಮಿಷನರಿಗಳೊಂದಿಗೆ” ಭಾಗಿಯಾಗಿದ್ದಾರೆ ಎಂಬ ವದಂತಿಯೂ ದಾಳಿಗೆ ಒಂದು ಕಾರಣವಾಗಿರಬಹುದು ಎಂದು ಅದರ ವರದಿಗಾರ ಹೇಳುತ್ತಾರೆ.

ಚಾನೆಲ್‌ನ ಸಂಪಾದಕ ಅರ್ನಾಬ್ ಗೋಸ್ವಾಮಿ ಅಗ್ನಿವೇಶ್ ಮೇಲಿನ ಈ 2018 ರ ದಾಳಿಯ ಕುರಿತು ಯಾವುದೇ ಪ್ರೈಮ್ ಟೈಮ್ ಪ್ಯಾನಲ್ ಚರ್ಚೆಯನ್ನು ಆಯೋಜಿಸಿದ್ದಾರೆಯೇ ಎಂಬುದು ತಿಳಿದಿಲ್ಲ.

ಏಪ್ರಿಲ್ 16 ರ ಪಾಲ್ಘರ್ ಘಟನೆಯಲ್ಲಿ, ಸ್ಥಳೀಯ ಬುಡಕಟ್ಟು ಸಮುದಾಯವು “ಮಕ್ಕಳ ಅಪಹರಣಕಾರರು” ಮತ್ತು “ಕಳ್ಳರು” ಎಂದು ತಪ್ಪಾಗಿ ಭಾವಿಸಿ ಮೂವರನ್ನು ಗುಂಪು ಹತ್ಯೆ ನಡೆಸಿದ್ದಾರೆ.

ಮೃತ ವ್ಯಕ್ತಿಗಳನ್ನು 70 ವರ್ಷದ ಕಲ್ಪ್ ವೃಶ್ ಗಿರಿ ಮತ್ತು 35 ವರ್ಷದ ಸುಶೀಲ್ ಗಿರಿ ಎಂದು ಗುರುತಿಸಲಾಗಿದೆ, ಇಬ್ಬರೂ ವಾರಣಾಸಿಯಲ್ಲಿರುವ ‘ಶ್ರೀ ಪಂಚ ದಷ್ನಮ್ ಜುನಾ ಅಖಾರಾ’ದವರಾಗಿದ್ದಾರೆ. ಅವರ ಚಾಲಕ ನಿಲೇಶ್ ತೆಲ್ಗಡೆ ಕೂಡ ದಾಳಿಯಲ್ಲಿ ಸಾವನ್ನಪ್ಪಿದ್ದಾನರೆ. ಒಟ್ಟಾರೆಯಾಗಿ, ಒಂಬತ್ತು ಬಾಲಾಪರಾಧಿಗಳು ಸೇರಿದಂತೆ 110 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದು ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರನ್ನು ಒಳಗೊಂಡ ಕೋಮು ದಾಳಿಯಾಗಿದೆ ಎಂದು ಬಿಜೆಪಿ ಹೇಳಿದ್ದರಿಂದ ಅದನ್ನು ಖಂಡಿಸಿ ಎಲ್ಲಾ ಬಂಧಿತರ ಹೆಸರುಗಳನ್ನು ಸಾರ್ವಜನಿಕಗೊಳಿಸಲು ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ನಿರ್ಧರಿಸಿದ್ದಾರೆ.

ಏಪ್ರಿಲ್ 22 ರಂದು, ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ತಮ್ಮ ಕಾರಿನಲ್ಲಿ ಮನೆಗೆ ಚಾಲನೆ ಮಾಡುತ್ತಿದ್ದಾಗ ಇಬ್ಬರು ಮೋಟಾರ್-ಸೈಕಲ್ ಸವಾರರು ಹಲ್ಲೆಗೆ ಯತ್ನಿಸಿದರು. ಆರೋಪಿಗಳನ್ನು ಸಿಯಾನ್-ಕೋಲಿವಾಡಾ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಪ್ರತೀಕ್ ಮಿಶ್ರಾ ಮತ್ತು ಅರುಣ್ ಬೊರಾಡೆ ಎಂದು ಗುರುತಿಸಲಾಗಿದೆ.

ಆ ದಿನದ ಮುಂಚಿನ ಟಿವಿ ಕಾರ್ಯಕ್ರಮವೊಂದರಲ್ಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಜ್ಞೆಯ ಮೇರೆಗೆ ಪಾಲ್ಘರ್ ಹತ್ಯೆಗಳು ನಡೆದಿವೆ ಎಂದು ಗೋಸ್ವಾಮಿ ಹೇಳಿದ್ದಾರೆ, ಅವರನ್ನು “ಇಟಾಲಿಯನ್” ಎಂದು ವಿವರಿಸಿದ ಅವರು “ಹಿಂದೂ ಸಾಧುಗಳು ಕೊಲ್ಲಲ್ಪಟ್ಟಿದ್ದಾರೆ” ಎಂದು ಹೇಳಿದ್ದರು. “… ಆ ಇಟಾಲಿಯನ್ ಸೋನಿಯಾ ಗಾಂಧಿ, ರೋಮ್‌ನಿಂದ ಬಂದಿದ್ದಾರೆ… ಅವರು ಇಂದು ಮೌನವಾಗಿದ್ದಾರೆ, ಅವರಿಗೆ ಈಗ ಸಂತೋಷವಾಗಿರಬೇಕು ಎಂದು ನನಗೆ ತೋರುತ್ತದೆ… ಅವರು ಸರ್ಕಾರವನ್ನು ನಡೆಸುವ ರಾಜ್ಯದಲ್ಲಿ ಈ ಸಾಧುಗಳು ಕೊಲ್ಲಲ್ಪಟ್ಟರು ಎಂದು ಅವರು ಸಂತೋಷಪಡುತ್ತಾರೆ. ಅವರು ವರದಿಯನ್ನು ಇಟಲಿಗೆ ಕಳುಹಿಸಿ, ನಾನು ಸರ್ಕಾರ ರಚಿಸಿದ ರಾಜ್ಯದಲ್ಲಿ ನಾನು ಹಿಂದೂ ಸಾಧುಗಳನ್ನು ಕೊಲ್ಲುತ್ತಿದ್ದೇನೆ ಎನ್ನುತ್ತಾರೆ. ಅದರಿಂದಾಗಿ ಅಲ್ಲಿ ಅವರು ಶ್ಲಾಘಿಸಲ್ಪಡುತ್ತಾರೆ….” ಎಂದು ಅರ್ನಬ್‌ ಹೇಳಿದ್ದರು.

ಕಾಂಗ್ರೆಸ್ ಸಚಿವರು ಸಲ್ಲಿಸಿದ ದ್ವೇಷ ಭಾಷಣದ ದೂರಿನ ಮೇರೆಗೆ ಅರ್ನಬ್ ಹೇಳಿಕೆಗಳನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial