Homeಮುಖಪುಟವಿದೇಶದಲ್ಲಿ ಸಿಕ್ಕಿಕೊಂಡಿರುವ ಭಾರತೀಯರನ್ನು ಸ್ಥಳಾಂತರಿಸಲು ಯೋಜನೆ

ವಿದೇಶದಲ್ಲಿ ಸಿಕ್ಕಿಕೊಂಡಿರುವ ಭಾರತೀಯರನ್ನು ಸ್ಥಳಾಂತರಿಸಲು ಯೋಜನೆ

- Advertisement -
- Advertisement -

ಕೊರೊನಾ ಕಾರಣಕ್ಕೆ ವಿದೇಶದಲ್ಲಿ ಸಿಕ್ಕಿಕೊಂಡಿರುವ ಭಾರತೀಯರನ್ನು ಸ್ಥಳಾಂತರಿಸುವ ಯೋಜನೆಗಳು ಲಾಕ್ ಡೌನ್ ತೆರವುಗೊಳಿಸಿದ ನಂತರ ಪ್ರಾರಂಭವಾಗಲಿದೆ. ವಿದೇಶಾಂಗ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ, ಏರ್ ಇಂಡಿಯಾ, ರಾಜ್ಯ ಸರ್ಕಾರಗಳು ಮತ್ತು ವಿದೇಶದಲ್ಲಿರುವ ಭಾರತೀಯ ನಿಯೋಗಗಳ ಸಹಯೋಗದೊಂದಿಗೆ ಈ ಕೆಲಸ ರೂಪೊಗೊಳ್ಳುತ್ತಿದೆ ಎಂದು ಎನ್ಡಿಡಿವಿ ವರದಿ ಮಾಡಿದೆ.

ಲಾಕ್ ಡೌನ್ ತೆರವಾದ ನಂತರ ವಿಶೇಷ ವಿಮಾನಗಳು ಅಥವಾ ನಿಯಮಿತ ವಿಮಾನಗಳ ಮೂಲಕ ಸ್ಥಳಾಂತರಿಸಲಾಗುವುದು ಹಾಗೂ ಇದು ಲಾಕ್‌ಡೌನ್ ಪರಿಸ್ಥಿತಿಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಸ್ಥಳಾಂತರಿಸುವಿಕೆಯನ್ನು ಪಾವತಿಯ ಮೇರೆಗೆ ಮಾಡಲಾಗುವುದು ಹಾಗೂ ನಾಗರಿಕರು ವಿಮಾನ ಟಿಕೆಟ್ ಗೆ ಹಣ ನೀಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ವಿದೇಶದಲ್ಲಿ, ವಿಶೇಷವಾಗಿ ಗಲ್ಪ್ ಗಳಲ್ಲಿ ಸಾವಿರಾರು ಭಾರತೀಯರು ಸಿಕ್ಕಿಬಿದ್ದಿದ್ದು, ಭಾರತೀಯ ಪ್ರಜೆಗಳನ್ನು ಬೇಗ ಹಿಂದಕ್ಕೆ ಕರೆದೊಯ್ಯಲು ಒತ್ತಡ ಹಾಕುತ್ತಿವೆ.

ಈ ಪ್ರದೇಶದಲ್ಲಿ ಕೆಲಸ ಮಾಡುವವರ ಸ್ಥಳಾಂತರಿಸುವ ಬಗ್ಗೆ ವಿಶೇಷವಾಗಿ ಕೇರಳದಿಂದ ರಾಜಕೀಯ ಬೇಡಿಕೆಗಳು ಬಂದಿವೆ. ಭಾರತಕ್ಕೆ ಮರಳಲು ಬಯಸುವ ಭಾರತೀಯ ನಾಗರಿಕರನ್ನು ನೋಂದಾಯಿಸಲು ರಾಜ್ಯ ಸರ್ಕಾರಗಳು ಹಾಗೂ ವಿದೇಶಾಂಗ ಸಚಿವಾಲಯವು ವಿದೇಶದಲ್ಲಿರುವ, ವಿದೇಶಿ ಭಾರತೀಯ ನಿಯೋಗಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಸ್ಥಳಾಂತರಿಸುವಿಕೆಯು ವಿವಿಧ ದೇಶಗಳಿಂದ ನಡೆಯುತ್ತದೆ ಆದರೆ ನಾಗರಿಕರು ವಿಮಾನದ ಟಿಕೆಟ್‌ ಹಣವನ್ನು ಪಾವತಿಸಬೇಕಾಗುತ್ತದೆ.

ಲಾಕ್ ಡೌನ್ ನಿಂದಾಗಿ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳು ಸ್ಥಗಿತಗೊಂಡಿವೆ. ಆದರೆ ಲಾಕ್ ಡೌನ್ ಗಿಂತಲೂ ಮುಂಚಿತವಾಗಿ ಭಾರತವು ಅಂತರಾಷ್ಟ್ರೀಯ ಯಾನವನ್ನು ಸ್ಥಗಿತಗೊಳಿಸಿದ್ದರಿಂದ ಹಲವಾರು ನಾಗರಿಕರು ವಿದೇಶದಲ್ಲಿ ಸಿಲುಕಿದ್ದಾರೆ.

ಕೊರೊನಾ ಹರಡುವುದನ್ನು ತಡೆಯಲು ಭಾರತದಲ್ಲಿ ಒಂದು ತಿಂಗಳಿನಿಂದ ಲಾಕ್‌ಡೌನ್ ಘೋಷಿಸಲಾಗಿದೆ. ಸಾಂಕ್ರಾಮಿಕ ರೋಗವೂ ಹೆಚ್ಚುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸಿದ್ದರು.

ದೇಶದಲ್ಲಿ ಇದುವರೆಗೆ 26,000 ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ; 824 ಮಂದಿ ಮೃತಪಟ್ಟಿದ್ದಾರೆ.


ಇದನ್ನೂ ಓದಿ: ಮಹಾವಲಸೆ – ಬಡಜನತೆಯ ನಡು ಮುರಿದ ಮೋದಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...