Homeಮುಖಪುಟಸಾಮಾಜಿಕ ಅಂತರ ಮರೆತ ಮಧ್ಯಪ್ರದೇಶ ಆರೋಗ್ಯ ಸಚಿವ; ತೀವ್ರ ಟೀಕೆ

ಸಾಮಾಜಿಕ ಅಂತರ ಮರೆತ ಮಧ್ಯಪ್ರದೇಶ ಆರೋಗ್ಯ ಸಚಿವ; ತೀವ್ರ ಟೀಕೆ

- Advertisement -
- Advertisement -

ಮಧ್ಯಪ್ರದೇಶದ ಆರೋಗ್ಯ ಸಚಿವರಾಗಿ ನರೋತ್ತಮ್ ಮಿಶ್ರಾ ಅವರು ನೇಮಕವಾದ ನಂತರ ಮೊದಲ ಬಾರಿಗೆ ತಮ್ಮ ಸ್ವಗ್ರಾಮಕ್ಕೆ ಭೇಟಿ ನೀಡಿದಾಗ ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಿರುವ ಅವರೇ, ತಮ್ಮ ಮನೆಗೆ ಪ್ರವೇಶಿಸುವಾಗ ಬೆಂಬಲಿಗರೊಡನೆ ಮುತ್ತಿಕೊಂಡು, ಮಾಸ್ಕ್‌ ಕೂಡ ಧರಿಸದೇ ಪೂಜೆಗಳನ್ನು ಮಾಡಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಈ ವರ್ಷದ ಆರಂಭದಲ್ಲಿ ಕಾಂಗ್ರೆಸ್‌ ಪಕ್ಷದ ಕಮಲ್ ನಾಥ್ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಶನಿವಾರ ತಮ್ಮ ಊರಾದ ಡಾಟಿಯಾಕ್ಕೆ ತೆರಳಿದ್ದರು. ಅವರು ತಮ್ಮ ಬೆಂಬಲಿಗರೊಂದಿಗೆ ಅವರ ಮನೆಯ ಸಮೀಪಿಸುತ್ತಿದ್ದಂತೆ, ಅವರ ಕುಟುಂಬ ಸದಸ್ಯರು ಆರತಿ ಎತ್ತಿ, ಹಣೆಯ ಮೇಲೆ ತಿಲಕ ಹಚ್ಚಿ ಸಿಹಿತಿಂಡಿಗಳನ್ನು ತಿನ್ನಿಸಿದರು. ಮಧ್ಯಪ್ರದೇಶದಲ್ಲಿಯೂ ಅತಿಹೆಚ್ಚಿನ ಕೊರೊನಾ ಪ್ರಕರಣಗಳು ಮತ್ತು ಸಾವುಗಳು ಸಂಭವಿಸಿದ್ದರೂ ಸಹ ಈ ಸಂದರ್ಭದಲ್ಲಿ ಮಿಶ್ರಾ ಅಥವಾ ಅವರ ಕುಟುಂಬ ಸದಸ್ಯರು ಮಾಸ್ಕ್‌ಗಳನ್ನು ಧರಿಸಿರಲಿಲ್ಲ ಮತ್ತು ಅಂತರ ಕಾಯ್ದುಕೊಂಡಿಲ್ಲ.

ಈ ಸಂದರ್ಭದಲ್ಲಿ ಅವರ ಹತ್ತಾರು ಬೆಂಬಲಿಗರು ಒಟ್ಟಿಗೆ ಇದ್ದು, ಅವರು ಕೂಡ ಮಾಸ್ಕ್‌ ಧರಿಸಿಲ್ಲ. ತದನಂತರ ಸಚಿವರು ಮಾಸ್ಕ್‌ ಧರಿಸದೇ ತಮ್ಮ ಕಚೇರಿಗೆ ಹೊರಟು ಎಂದು ಆರೋಪಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 145 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು 2,090 ತಲುಪಿದೆ. ಭಾನುವಾರ ನಾಲ್ಕು ಸೇರ್ಪಡೆಗಳೊಂದಿಗೆ, ಸಾವಿನ ಸಂಖ್ಯೆ 100 ರ ಗಡಿ ದಾಟಿದೆ.

ಈ ತಿಂಗಳ ಆರಂಭದಲ್ಲಿ ರಾಜ್ಯ ಸರ್ಕಾರ ಮಾಸ್ಕ್‌ ಹಾಕಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಆದೇಶ ಹೊರಡಿಸಿತ್ತು. ಮಾಸ್ಕ್‌ ಧರಿಸದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿತ್ತು. ಈಗ ಅವರದೇ ಆರೋಗ್ಯ ಸಚಿವರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಾವೇ ಮಾಸ್ಕ್‌ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಮನೆಗೆ ಪ್ರವೇಶಿಸುವ ಕಾರ್ಯಕ್ರಮ ಮಾಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ಸರ್ಕಾರ ಪೇಚಿಗೆ ಸಿಲುಕಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾಸ್ಕ್‌ ಧರಿಸಿ ಸಾಮಾಜಿಕವಾಗಿ ದೂರವಿರುವ ನಿಯಮವನ್ನು ಪಾಲಿಸಬೇಕೆಂದು ಜನಸಾಮಾನ್ಯರಿಗೆ ಮನವಿ ಮಾಡುತ್ತಿದ್ದಾರೆ. ಅವರೇ ಎಲ್ಲಾ ವಿಡಿಯೋ ಕಾನ್ಫರೆನ್ಸ್‌ಗಳಲ್ಲಿ ಮಾಸ್ಕ್ ಧರಿಸಿರುತ್ತಾರೆ. ಅಲ್ಲದೇ ನಿನ್ನೆಯ ಮನ್‌ ಕಿ ಬಾತ್‌ ನಲ್ಲಿ ಪ್ರಧಾನಿಯವರು “ಇಂದಿನ ದಿನಗಳಲ್ಲಿ ಮಾಸ್ಕ್‌ ಎಂಬುದು ನಾಗರೀಕತೆಯ ಸಂಕೇತವಾಗಿದೆ” ಎಂದು ನರೇಂದ್ರ ಮೋದಿಯವರು ಹೇಳಿದ್ದರು. ಆದರೆ ಅವರದೇ ಪಕ್ಷದ ಆರೋಗ್ಯ ಸಚಿವರು ಮಾತ್ರ ಅದನ್ನು ಪಾಲಿಸುತ್ತಿಲ್ಲ. ಆರೋಗ್ಯ ಸಚಿವರೆ ನಿಯಮಗಳನ್ನು ಉಲ್ಲಂಘಿಸಿದರೆ ಜನಸಾಮಾನ್ಯರ ಕಥೆಯೇನು ಎಂಬು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಎದ್ದಿವೆ. ಸಚಿವರ ವಿಡಿಯೋ ಸಹ ವೈರಲ್‌ ಆಗಿದೆ.


ಇದನ್ನೂ ಓದಿ: ನನ್ನ ಮೇಲೆ ಗುಂಪು ಹಲ್ಲೆಯಾದಾಗ ನೀವೇಕೆ ಮಾತಾಡಲಿಲ್ಲ?: ಸ್ವಾಮಿ ಅಗ್ನಿವೇಶ್ ಪ್ರಶ್ನೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...