ಕೊರೊನಾ ವೈರಸ್ ಮುನ್ನೆಚ್ಚರಿಕೆಗಳನ್ನು ಉಲ್ಲಂಘಿಸಿ ಮಾಸ್ಕ್ ಧರಿಸದೇ ಸಿಕ್ಕಿಬಿದ್ದ ನಂತರ CRPF ಕಮಾಂಡೋ (ಮಾವೋವಾದಿ ವಿರೋಧಿ ಕೋಬ್ರಾ ಘಟಕದ ಕಮಾಂಡೋ) ಸಚಿನ್ ಸಾವಂತ್‌ರನ್ನು ಬೆಳಗಾವಿ ಜಿಲ್ಲೆಯಲ್ಲಿ ಬಂಧಿಸಿ ಪೊಲೀಸ್ ಠಾಣೆಯಲ್ಲಿ ಕೈಕೋಳ ತೊಡಿಸಿ ಕಟ್ಟಿ ಹಾಕಿದ ಚಿತ್ರ ವೈರಲ್ ಆಗಿದ್ದು ವಿವಾದಕ್ಕೆ ನಾಂದಿಯಾಗಿದೆ.
ಸಾಮಾನ್ಯ ಬಟ್ಟೆ ಧರಿಸಿದ್ದ ಅವರು ರಜೆಯ ಕಾರಣಕ್ಕೆ ಊರಿನಲ್ಲಿದ್ದು ಮಾಸ್ಕ್ ಹಾಕದೇ ಹೊರಬಂದಿದ್ದು. ಅದಕ್ಕಾಗಿ ಅವನನ್ನು ಥಳಿಸಿ, ಕೈಕಂಬ ಹಾಕಿ ನೆಲದ ಮೇಲೆ ಕುಳಿತುಕೊಳ್ಳುವಂತೆ ಮಾಡಿದರೆಂದು ಸಚಿನ್ ಸಾವಂತ್ ಆರೋಪಿಸಿದ್ದಾರೆ.
ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ನ ಕೋಬ್ರಾ ಅಥವಾ ಕಮಾಂಡೋ ಬೆಟಾಲಿಯನ್ ಗೆರಿಲ್ಲಾ ಯುದ್ಧದಲ್ಲಿ ನುರಿತ ಮತ್ತು ಸಾಮಾನ್ಯವಾಗಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಸಚಿನ್ ಸಾವಂತ್ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಿಆರ್ಪಿಎಫ್ ಕರ್ನಾಟಕ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದು, ಏಪ್ರಿಲ್ 23 ರಂದು ಕಮಾಂಡೋ ಸಚಿನ್ ಸಾವಂತ್ ಅವರನ್ನು ಬಂಧಿಸುವ ಮೊದಲು ರಾಜ್ಯ ಪೊಲೀಸರು ಸಿಆರ್ಪಿಎಫ್ ಶ್ರೇಣಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಅಹಿತಕರ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು ಎಂದು ದೂರಿದೆ.
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಉಲ್ಲೇಖಿಸಿದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಸಿಆರ್ಪಿಎಫ್ ಪೊಲೀಸರ ದುಷ್ಕೃತ್ಯದ ವಿರುದ್ಧ ಎಫ್ಐಆರ್ ದಾಖಲಿಸಲು ಯೋಚಿಸುತ್ತಿದೆ ಎನ್ನಲಾಗಿದೆ.
ಕೋವಿಡ್-19 ಲಾಕ್‌ಡೌನ್ ಅನ್ನು ಜಾರಿಗೊಳಿಸುವ ಪೊಲೀಸರು ಕಮಾಂಡೋವನ್ನು “ಕೈಕೋಳ ಹಾಕಿ ಪೊಲೀಸ್ ಠಾಣೆಯಲ್ಲಿ ಬರಿಗಾಲಿನಲ್ಲಿ ಅವರನ್ನು ಸರಪಳಿ ಹಾಕಿ ಬಂಧಿಸಲಾಗಿದೆ” ಎಂದು ಸಿಆರ್‌ಪಿಎಫ್ ತನ್ನ ಪತ್ರದಲ್ಲಿ ತಿಳಿಸಿದೆ.
ಇಬ್ಬರು ಬೀಟ್ ಕಾನ್‌ಸ್ಟೆಬಲ್‌ಗಳು ಅವನನ್ನು ನೋಡಿದಾಗ ಸಚಿನ್ ಸಾವಂತ್ “ಮಾಸ್ಕ್ ಇಲ್ಲದೇ ರಸ್ತೆಯಲ್ಲಿದ್ದರು” ಎಂದು ಪೊಲೀಸರು ಕೋಬ್ರಾ ಘಟಕಕ್ಕೆ ಪತ್ರ ಬರೆದಿದ್ದಾರೆ.
“ಇದ್ದಕ್ಕಿದ್ದಂತೆ ಸಚಿನ್ ಬೀಟ್ ಕಾನ್ಸ್‌ಸ್ಟೇಬಲ್‌ಗಳೊಂದಿಗೆ ಹೊಲಸು ಭಾಷೆಯಲ್ಲಿ ವಾದಿಸಿದರು ಮತ್ತು ನಾನು ಸಿಆರ್ಪಿಎಫ್ ಪೊಲೀಸ್ ಆಗಿದ್ದು ನಾನು ಎಂದಿಗೂ ನಿಮ್ಮ ನಿಯಮಗಳನ್ನು ಅನುಸರಿಸುವುದಿಲ್ಲ, ನೀವು ನನ್ನನ್ನು ಕೇಳಬೇಡಿ” ಎಂದು ಪೊಲೀಸರು ತಿಳಿಸಿದ್ದಾರೆ.
ಕಾನ್‌ಸ್ಟೆಬಲ್‌ಗಳು ಕಮಾಂಡೋವನ್ನು ವಿನಂತಿಸಿದ್ದಾರೆ ಆದರೆ ಸಚಿನ್ ಸಾವಂತ್ “ತನ್ನ ಕೈ ಮತ್ತು ಕಾಲುಗಳಿಂದ” ಅವರ ಮೇಲೆ ಹಲ್ಲೆ ಮಾಡಿದರು. ಸರ್ಕಾರಿ ಕರ್ತವ್ಯದಲ್ಲಿದ್ದವರಿಗೆ ಅಡ್ಡಿಪಡಿಸಿದರು ಎಂದು ಪತ್ರದಲ್ಲಿ ಹೇಳಲಾಗಿದೆ. ಆತನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ಪತ್ರದಲ್ಲಿ ತಿಳಿಸಿದ್ದಾರೆ.
ಸಿಆರ್ಪಿಎಫ್ ಹೇಳುವಂತೆ ಸೈನಿಕನು ತನ್ನ ಮನೆಯ ಹೊರಗಡೆ ಇದ್ದುದರಿಂದ ತಾನು ಮಾಸ್ಕ್ ಧರಿಸಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
“ನಾವು ಕರ್ನಾಟಕದ ರಾಜ್ಯ ಪೊಲೀಸ್ ಮುಖ್ಯಸ್ಥರೊಂದಿಗೆ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ. ಅವರ (ಸಾವಂತ್) ಜಾಮೀನು ಅರ್ಜಿಯು ಮಂಗಳವಾರ ನ್ಯಾಯಾಲಯಕ್ಕೆ ಬರುತ್ತಿದೆ ಮತ್ತು ಸಿಆರ್ಪಿಎಫ್ ಕೂಡ ತನ್ನ ಸ್ಥಳೀಯ ಅಧಿಕಾರಿಗಳ ಮೂಲಕ ನ್ಯಾಯಾಲಯದಲ್ಲಿರಬೇಕು. ಪ್ರಕರಣ ತಾರ್ಕಿಕ ತೀರ್ಮಾನಕ್ಕೆ ಬರಲು ತನಿಖೆಯನ್ನು ಅನುಸರಿಸಬೇಕು ಎಂದು ಸಿಆರ್ಪಿಎಫ್ ವಕ್ತಾರ ಮೋಸೆಸ್ ದಿನಕರನ್ ಪಿಟಿಐಗೆ ತಿಳಿಸಿದ್ದಾರೆ.
ಸಿಆರ್ಪಿಎಫ್ ವೀಡಿಯೊದಲ್ಲಿ, “ಪೊಲೀಸ್ ಸಿಬ್ಬಂದಿಗಳ ನಡವಳಿಕೆ ನಾಗರಿಕತೆಯಿಂದ ಕೂಡಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದಿದ್ದಾರೆ. ಸೈನಿಕನಿಗೆ ನ್ಯಾಯ ಒದಗಿಸಲು ನಾವು ಪ್ರಯತ್ನಿಸುತ್ತೇವೆ” ಎಂದು ತಿಳಿಸಿದೆ.
ಇದನ್ನೂ ಓದಿ: ಸಾಮಾಜಿಕ ಅಂತರ ಮರೆತ ಮಧ್ಯಪ್ರದೇಶ ಆರೋಗ್ಯ ಸಚಿವ; ತೀವ್ರ ಟೀಕೆ



ಕೈಕಾಲಿಗೆ ಬೇಡಿ ಹಾಕುವ ಮಟ್ಟದಲ್ಲಿ ಸಿ.ಆರ್. ಪಿ.ಎಫ್. ಯೋದ ತಪ್ಪು ಮಾಡಿದ್ದಾನೆಯೇ? ಲಾಕ್ ಡೌನ್ ನೆಪದಲ್ಲಿ ದೇಶ ಪೊಲೀಸ್ ರಾಜ್ಯವಾಗುತ್ತಿದೆ.