Homeಮುಖಪುಟಚಕ್ರತೀರ್ಥ ಸಮಿತಿ ಸಂಭಾವನೆ ವಿಚಾರದಲ್ಲಿ ಹೀಗೇಕೆ ಸುಳ್ಳು ಹೇಳಿತು ಬಿಜೆಪಿ ಪರಿವಾರ?

ಚಕ್ರತೀರ್ಥ ಸಮಿತಿ ಸಂಭಾವನೆ ವಿಚಾರದಲ್ಲಿ ಹೀಗೇಕೆ ಸುಳ್ಳು ಹೇಳಿತು ಬಿಜೆಪಿ ಪರಿವಾರ?

‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಆಗಿರುವ ವರದಿಗೆ ಸಂಬಂಧಿಸಿದಂತೆ ಬರಗೂರು ರಾಮಚಂದ್ರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

- Advertisement -
- Advertisement -

“ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಹೋಲಿಸಿದರೆ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕಡಿಮೆ ಸಂಭಾವನೆ ಪಡೆದಿದೆ” ಎಂದು ಬಿಂಬಿಸುವ ವರದಿಯಾಗಿದ್ದು, ‘ಬಿಜೆಪಿ ಪರಿವಾರ ಹೀಗೇಕೆ ಸುಳ್ಳು ಹೇಳುತ್ತಿದೆ’ ಎಂಬ ಪ್ರಶ್ನೆ ಮೂಡಿದೆ.

‘ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ‘ಚಕ್ರತೀರ್ಥ ಸಮಿತಿ ಸಂಭಾವನೆ 5 ಸಾವಿರ’ ಎಂಬ ಹೆಡ್‌ಲೈನ್‌ನಲ್ಲಿ ವರದಿ ಪ್ರಕಟವಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಚಕ್ರತೀರ್ಥ ಸಮಿತಿ ಕಡಿಮೆ ಸಂಭಾವನೆ ಪಡೆದಿದೆ ಎಂದು ಹೇಳುವ ವರದಿಯು ಏಕಪಕ್ಷೀಯವಾಗಿದೆ ಎಂಬ ಟೀಕೆಗಳು ಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ವಿಜಯ ಕರ್ನಾಟಕ’ ವರದಿಯಲ್ಲಿನ ಮುಖ್ಯಾಂಶಗಳು

  • ಚಕ್ರತೀರ್ಥ ಸಮಿತಿ ಪಡೆದ ಸಂಭಾವನೆ ಕೇವಲ 33 ಸಾವಿರ ರೂಪಾಯಿ. ಸರ್ಕಾರ 28,600 ರೂ. ಬಾಕಿ ಉಳಿಸಿಕೊಂಡಿದೆ. ಸಮಿತಿಗೆ ಸಿಕ್ಕಿರುವುದು ಕೇವಲ 5200 ರೂ. ಸಮಿತಿ ಮಾಡಿದ ಒಟ್ಟು ವೆಚ್ಚ 50 ಲಕ್ಷ ರೂ.
  • ಈ ಹಿಂದಿನ ಸಮಿತಿಗಳು ಪಡೆದ ಸಂಭಾವನೆಗಿಂತ ಐದಾರು ಪಟ್ಟು ಕಮ್ಮಿ ಸಂಭಾವನೆಯನ್ನು ಚಕ್ರತೀರ್ಥ ಸಮಿತಿ ಪಡೆದಿದೆ. ಉಳಿದ ಸಮಿತಿಗಳ ಸಂಭಾವನೆ 3.75 ಲಕ್ಷ ರೂ.ಗಳಿಂದ 5.45 ಲಕ್ಷ ರೂ.ಗಳಾಗಿದೆ.

ಮೇಲು ನೋಟಕ್ಕೆ ಚಕ್ರತೀರ್ಥ ಸಮಿತಿಯು ಕಡಿಮೆ ವೆಚ್ಚ ಮಾಡಿದೆ ಎಂದು ಅನಿಸಿದರೂ ಇದು ಅರ್ಧ ಸತ್ಯದಿಂದ ಕೂಡಿದೆ. ಈ ಕುರಿತು ಸ್ವತಃ ಪ್ರೊ.ಬರಗೂರು ರಾಮಚಂದ್ರಪ್ಪ ಅವರೇ ಸ್ಪಷ್ಟನೆ ನೀಡಿದ್ದು, “ಪಠ್ಯಪುಸ್ತಕಗಳ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಮಾಡಿರುವ ವರದಿಯಲ್ಲಿ ಏಕಪಕ್ಷೀಯವಾದ ವಿವರಗಳಿವೆ” ಎಂದು ಬರಗೂರರು ಸ್ಪಷ್ಟಪಡಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ಸ್ಪಷ್ಟನೆಗಳೇನು?

ಸ್ಪಷ್ಟನೆ 1: ಪಠ್ಯಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಗಾಗಿ ಚಕ್ರತೀರ್ಥ ಸಮಿತಿ ರಚನೆಯಾಗಿದೆ ಎಂದು ವರದಿ ಹೇಳುತ್ತದೆ. ವಾಸ್ತವವಾಗಿ ಚಕ್ರತೀರ್ಥ ಸಮಿತಿ ರಚನೆಯಾಗಿದ್ದು ಪಠ್ಯಪುಸ್ತಕಗಳ ರಚನೆ ಹಾಗೂ ಪರಿಷ್ಕರಣೆಗಾಗಿ ಅಲ್ಲ. ಸಂಕೀರ್ಣ ವಿಷಯಗಳ ಪರಿಶೀಲನೆ ಮಾಡಿ ಒಂದು ತಿಂಗಳಲ್ಲಿ ವರದಿಯನ್ನು ಕೊಡಬೇಕೆಂದು ಸಮಿತಿ ರಚನೆಯಾಯಿತು.

ಸ್ಪಷ್ಟನೆ 2: ಚಕ್ರತೀರ್ಥ ಸಮಿತಿಗೆ ಕೇವಲ ಐದು ಸಾವಿರ ರೂಪಾಯಿಗಳ ಸಂಭಾವನೆಯನ್ನು ಕೊಡಲಾಗಿದೆ ಎಂದು ದೊಡ್ಡ ಶೀರ್ಷಿಕೆಯನ್ನು ವರದಿಗೆ ನೀಡಲಾಗಿದೆ. ಆದರೆ ಅದೇ ವರದಿಯಲ್ಲಿ ಸಂಭಾವನೆ 33,800 ರೂಪಾಯಿ ಎಂದಿದೆ. 28,000 ಬಾಕಿ ಉಳಿದಿದೆ ಎಂದು ಬರೆಯಲಾಗಿದೆ. ಬಾಕಿ ಉಳಿಸಿಕೊಂಡು ಆನಂತರ ಹಣ ಜಮಾ ಮಾಡುವ ಪದ್ಧತಿಯು ನಮ್ಮ ಸರ್ಕಾರದಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ನಮ್ಮ ಸಮಿತಿಯಲ್ಲೂ ಅನೇಕರಿಗೆ ಬಾಕಿ ಉಳಿಸಿಕೊಂಡು ಆನಂತರದಲ್ಲಿ ಹಣ ನೀಡಲಾಯಿತು. ಹೀಗಾಗಿ ಚಕ್ರತೀರ್ಥ ಸಮಿತಿಗೆ ನೀಡಿರುವ ಸಂಭಾವನೆ 5,000 ರೂಪಾಯಿಯಲ್ಲ, 33,800 ರೂಪಾಯಿ ಎಂಬುದು ಸತ್ಯ ಸಂಗತಿ.

ಸ್ಪಷ್ಟನೆ- 3: ಮುಡಂಬಡಿತ್ತಾಯ ಸಮಿತಿಯು 3 ಕೋಟಿ 63 ಲಕ್ಷ ಖರ್ಚು ಮಾಡಿದೆ ಎಂದೂ, ನಮ್ಮ ಸಮಿತಿ 2 ಕೋಟಿ 59 ಲಕ್ಷ ಖರ್ಚು ಮಾಡಿದೆ ಎಂದೂ, ಚಕ್ರತೀರ್ಥ ಸಮಿತಿ 49 ಲಕ್ಷ 99 ಸಾವಿರ ರೂ. ಖರ್ಚು ಮಾಡಿದೆ ಎಂದೂ ವರದಿ ಹೇಳುತ್ತದೆ. ಇದು ನಿಜವೇ ಇರಬಹುದು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಮೇಲ್ನೋಟಕ್ಕೆ ನಮ್ಮ ಸಮಿತಿ ತುಂಬಾ ಖರ್ಚು ಮಾಡಿದೆ ಎಂದೂ ಚಕ್ರತೀರ್ಥ ಸಮಿತಿಯು ಕಡಿಮೆ ಖರ್ಚು ಮಾಡಿದೆ ಎಂದೂ ತೋರಿಸಲಾಗುತ್ತಿದೆ. ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಏನೆಂದರೆ- ನಮ್ಮ ಸಮಿತಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದೆ. ವಾಸ್ತವವಾಗಿ ಮೊದಲು 27 ಸಮಿತಿಗಳ ರಚನೆ ಮಾಡಲಾಯಿತು. ಆ ನಂತರ ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಯಿತು. ಆ ಸಮಿತಿಗಳು ಎರಡೂವರೆ ವರ್ಷ ಕೆಲಸ ಮಾಡಿದವು. ನಾನು ಎರಡು ವರ್ಷ ಕೆಲಸ ಮಾಡಿದೆ. ಒಟ್ಟು ಸಮಿತಿಯಲ್ಲಿ 172 ಜನರಿದ್ದರು. ಅಧಿಕಾರಿಗಳನ್ನೂ ಒಳಗೊಂಡು ಚಕ್ರತೀರ್ಥ ಸಮಿತಿಯಲ್ಲಿದ್ದದ್ದು (ಸರ್ಕಾರದ ಆದೇಶದ ಪ್ರಕಾರ) ಕೇವಲ 16 ಜನ. ಇವರು ಕೆಲಸ ಮಾಡಿದ್ದು ಹೆಚ್ಚೆಂದರೆ ಎರಡು ಅಥವಾ ಮೂರು ತಿಂಗಳು ಮಾತ್ರ. ಇಲ್ಲಿ ವ್ಯತ್ಯಾಸ ಬಹಳ ಸ್ಪಷ್ಟವಾಗಿದೆ. ನಾನು ಸರ್ವಾಧ್ಯಕ್ಷನಾಗಿದ್ದಾಗ 27 ಸಮಿತಿಗಳು, 172 ಜನರು ಕೆಲಸ ಮಾಡಿದ್ದಾರೆ. ಅದರ ಜೊತೆಗೆ ಹೊರಗಿನ 30ಕ್ಕೂ ಹೆಚ್ಚು ತಜ್ಞರ ಜೊತೆಯಲ್ಲಿ, ಅಧ್ಯಾಪಕರ ಜೊತೆಯಲ್ಲಿ ಸಭೆ ಮಾಡಿದ್ದೇವೆ. ಒಟ್ಟಾರೆ ಹೇಳುವುದಾದರೆ ನೂರಾರು ಕಾರ್ಯಾಗಾರಗಳು ನಡೆದಿವೆ. ಇವರಿಗೆ ಪ್ರಯಾಣ  ಭತ್ಯೆ, ಸಭಾ ಭತ್ಯೆ ಇತ್ಯಾದಿಗಳನ್ನು ಭರಿಸಿದ್ದು ಪಠ್ಯಪುಸ್ತಕ ಸಂಘ. ಅದೆಲ್ಲವೂ ಈ ರಚನಾ ಪ್ರಕ್ರಿಯೆಯಲ್ಲಿ ಸೇರಿವೆ. ಇಷ್ಟು ಕಾಲ, ಇಷ್ಟು ಮಂದಿ ಮಾಡಿದ ರಚನೆಯ ಕುರಿತು ಆ ವರದಿಯಲ್ಲಿ ಉಲ್ಲೇಖ ಇಲ್ಲದೆ ಇರುವುದರಿಂದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತದೆ. ಕಾಲವಧಿಯ ವ್ಯತ್ಯಾಸ, ಕೆಲಸದ ರೀತಿಯ ವ್ಯತ್ಯಾಸ, ಸದಸ್ಯರ ಸಂಖ್ಯೆಯ ವ್ಯತ್ಯಾಸ ಈ ವಿವರಗಳೆಲ್ಲ ವರದಿಯಲ್ಲಿ ಇದ್ದಿದ್ದರೆ ಓದುಗರಿಗೆ ಸ್ಪಷ್ಟವಾಗುತ್ತಿತ್ತು.

ಇದನ್ನೂ ಓದಿರಿ: ಪಠ್ಯಪುಸ್ತಕ ರಚನೆಯಲ್ಲಿ ಏಕ‘ಚಕ್ರ’ ಅಧಿಪತ್ಯ: ಸಮಿತಿ ಸದಸ್ಯರ ಗೊಂದಲಕಾರಿ ಹೇಳಿಕೆ

ಸ್ಪಷ್ಟನೆ – 4: ಪಠ್ಯಪುಸ್ತಕ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಡಿಟಿಪಿ ಮಾಡಿರುವ ಖರ್ಚುಗಳೂ ಸೇರಿರುತ್ತವೆ. ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಮೇಲೆ ನಿಯಮಗಳ ಪ್ರಕಾರ ಸರ್ಕಾರ ಕೊಡುವ ಭತ್ಯೆಗಳ ಜೊತೆಗೆ ಡಿಟಿಪಿ ಇತ್ಯಾದಿಗಳೆಲ್ಲವೂ ಸೇರಿರುತ್ತವೆ. ಸಮಿತಿಯ ಸದಸ್ಯರಿಗಾಗಲೀ, ಅಧ್ಯಕ್ಷರಿಗಾಗಿ ಹಣ ಕೊಟ್ಟು ಹಂಚಲಾಗುವುದಿಲ್ಲ. ಪಠ್ಯ ಪುಸ್ತಕ ಸಂಘ ಅಥವಾ ಇಲಾಖೆ ಆ ಹಣವನ್ನು ಹಂಚುತ್ತದೆ. ಇಡೀ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುವುದು ನಿಯಮಾನುಸಾರ ಪಠ್ಯಪುಸ್ತಕ ಸಂಘವೇ ಹೊರತು ನಮ್ಮ ಸಮಿತಿಗಳೂ ಅಲ್ಲ, ಸದಸ್ಯರೂ ಅಲ್ಲ, ಅಧ್ಯಕ್ಷರೂ ಅಲ್ಲ. ಈ ವ್ಯತ್ಯಾಸವನ್ನು ಸಾರ್ವಜನಿಕರು ಗಮನಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಪಠ್ಯ ಪುಸ್ತಕ ಪರಿಷ್ಕರಣೆಗಾಗಿ ನೇಮಕಗೊಂಡ ಬರಗೂರು ರಾಮಚಂದ್ರಪ್ಪ ಅವರ ಸಮಿತಿಯ ಕೆಲಸ ಕಾರ್ಯಗಳ ವ್ಯಾಪ್ತಿಗೂ, ಸಂಕೀರ್ಣ ವಿಷಯಗಳ ಪರಿಶೀಲನೆಗಾಗಿ ನೇಮಕವಾದ ರೋಹಿತ್ ಚಕ್ರತೀರ್ಥ ಸಮಿತಿಯ ಕೆಲಸ ಕಾರ್ಯಗಳ ವ್ಯಾಪ್ತಿಗೂ ವ್ಯತ್ಯಾಸ ಇದೆ; ಅದಕ್ಕಾಗಿ, ತೆಗೆದುಕೊಂಡ ಸಮಯ ಮತ್ತು ಮಾಡಿದ ಖರ್ಚು ಸಹಜವಾಗಿ ಬೇರೆ ಬೇರೆಯಾಗಿ ಇರುವುದು ಸಾಮಾನ್ಯ. ಒಬ್ಬ ವರದಿಗಾರನಿಗೆ ಈ ವ್ಯತ್ಯಾಸದ ಸಾಮಾನ್ಯ ಜ್ಞಾನ ಇರಬೇಕು. ಇಲ್ಲ ಎಂದಾದರೆ, ಈ ವರದಿ ದುರುದ್ದೇಶಪೂರಿತ ಎಂಬುದು ಸ್ಪಷ್ಟ! ಇಂತಹ ಕುಚೋದ್ಯ ಮಾಡಲು ಪತ್ರಿಕೆಯನ್ನು ಪ್ರತಿನಿಧಿಸುವವರಿಗೆ ನಾಚಿಕೆಯೂ ಆಗುವುದಿಲ್ಲವೆ?!?

  2. ಜೀ ಹುಜೂರ್‌ ಎನ್ನುವ ಗುಲಾಮ ವರದಿಗಾರ ಮಾತ್ರ ಈ ರೀತಿ ಸುಳ್ಳು ವರದಿ ನೀಡಲು ಸಾಧ್ಯ. ದೇವರಾಜ್‌ ಕನಕಪುರ ತಲೆಯು ಸಾಮಾನ್ಯರಂತೆ ಇಲ್ಲದಿರುವುದು ಆಶ್ಚರ್ಯ. ಇವನು ಹೊಟ್ಟೆಗೆ ಎಲ್ಲರ ತರಹ ಹೊಟ್ಟೆಗೆ ಅನ್ನ ತಿನ್ನುತ್ತಾನೋ? ಇಲ್ಲ ಇನ್ನೇನಾದರೂ ತಿನ್ನುತ್ತಾನೋ? ಗೊತ್ತಿಲ್ಲ. ಇಂತಹ ಭ್ರಷ್ಟ ವರದಿಗಾರು ಸುಳ್ಳು ಮಾಹಿತಿಯನ್ನು ದುರದ್ದೇಶಪೂರಿತವಾಗಿ ನೀಡಲು ಕಾರಣವೇನಿಬಹುದು ಎಂದು ಬಹಿರಂಗ ಪಡಿಸಲಿ. ಇಲ್ಲದಿದ್ದರೆ ಸಾರ್ವಜಿಕವಾಗಿ ಕನ್ನಡ ಜನತೆಯ ಕ್ಷಮೆ ಕೇಳಲಿ.

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...