ಉದ್ಯಮಿ ಮುಕೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿಯ ಮದುವೆಯ ಕುರಿತು ಧನಾತ್ಮಕ ಪ್ರಚಾರ ನಡೆಸಲು ನನಗೆ ₹3.6 ಲಕ್ಷದ ಆಫರ್ ನೀಡಲಾಗಿತ್ತು. ಆದರೆ, ನಾನು ಅದನ್ನು ತಿರಸ್ಕರಿಸಿದೆ ಎಂದು ಖ್ಯಾತ ಕಂಟೆಂಟ್ ಕ್ರಿಯೇಟರ್ (ಯೂಟ್ಯೂಬರ್) ಕಾವ್ಯ ಕರ್ನಾಟಕ್ ತಿಳಿಸಿದ್ದಾರೆ.
“ಅನಂತ್ ಅಂಬಾನಿಯ ಅದ್ದೂರಿ ಮದುವೆ ಭಾರತದ ಆರ್ಥಿಕತೆಯ ಮೇಲೆ ಹೇಗೆ ಧನಾತ್ಮಕ ಪರಿಣಾಮ ಬೀರುತ್ತದೆ ಅಥವಾ ಅರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಪ್ರಚಾರ ಪಡಿಸುವುದು ನನ್ನ ಕೆಲಸವಾಗಿತ್ತು. ಅಂಬಾನಿ ಕುಟುಂಬ ಕೊಟ್ಟ ಆಫರ್ ನನ್ನ ಸಾಮಾನ್ಯ ದರ ಮೂರು ಲಕ್ಷಕ್ಕಿಂತ ಕೊಂಚ ಹೆಚ್ಚೇ ಇತ್ತು. ನನ್ನ ಪೋಷಕರು ಕೂಡ ಒಪ್ಪಂದ ಸ್ವೀಕರಿಸುವಂತೆ ಒತ್ತಾಯಿಸಿದ್ದರು. ಆದರೂ ನಾನು ತಿರಸ್ಕರಿಸಿದೆ” ಎಂದಿರುವ ಕಾವ್ಯ, ಅದಕ್ಕೆ ನಾಲ್ಕು ಕಾರಣಗಳನ್ನು ವಿವರಿಸಿದ್ದಾರೆ.
Influencer says on LinkedIn she was offered 3.6lakh ($4300) to praise how the reported $500-600M Ambani wedding would benefit India’s economy.
At its reported cost, the wedding exceeded education/culture/sports budgets of smaller states eg Goa or Manipurhttps://t.co/bATFmZUwBW pic.twitter.com/TrXJi3yDrE
— Gerry Shih (@gerryshih) July 19, 2024
ಕಾರಣಗಳು ಹೀಗಿದೆ..
1. ವೈವಿದ್ಯತೆ ಮತ್ತು ವೈಯಕ್ತಿಕ ಬ್ರ್ಯಾಂಡ್ : ಎಲ್ಲರೂ ಹೇಳುವ ಅದೇ ವಿಷಯದ ಬಗ್ಗೆ ಮತ್ತೆ ಹೇಳುವುದು ನನಗೆ ಇಷ್ಟವಿರಲಿಲ್ಲ. ವೈವಿಧ್ಯತೆ ಮತ್ತು ಸ್ವಂತಿಕೆಯ ಮೇಲೆ ಬೆಳೆಯುವ ನನ್ನ ವಿಷಯದ ವಿಶಿಷ್ಟತೆ ಮತ್ತು ಮೌಲ್ಯವನ್ನು ಕಾಪಾಡಿಕೊಳ್ಳಲು ನಾನು ಬಯಸುತ್ತೇನೆ. ಅಂಬಾನಿಯವರ ವಿವಾಹದಂತಹ ಅತಿಯಾಗಿ ಪ್ರಚಾರಗೊಂಡ ವಿಷಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ನನ್ನ ಬ್ರ್ಯಾಂಡ್‌ನ ವಿಶಿಷ್ಟತೆಯನ್ನು ದುರ್ಬಲಗೊಳಿಸುತ್ತದೆ.
2. ಪ್ರೇಕ್ಷಕರ ನಂಬಿಕೆ : ಜಿಯೋ ಇಂಟರ್ನೆಟ್ ಶುಲ್ಕವನ್ನು ಹೆಚ್ಚಿಸಿರುವ ಈ ಸಮಯದಲ್ಲಿ, ಅಂಬಾನಿಯಂತಹ ಕಾರ್ಪೊರೇಟ್ ದೈತ್ಯರನ್ನು ಪ್ರಚಾರ ಮಾಡುವುದು ಪ್ರಾಮಾಣಿಕತೆಯಲ್ಲ. ಇದು ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ. ನನ್ನ ಪ್ರೇಕ್ಷಕರು ವಿವೇಚನಾಶೀಲರಾಗಿದ್ದಾರೆ. ಅವರು ಪಾವತಿಸಿದ ಪ್ರಚಾರಗಳು ಮತ್ತು ನಿಜವಾದ ವಿಷಯದ ನಡುವೆ ವ್ಯತ್ಯಾಸವನ್ನು ಅರಿತವರು. ಹೀಗಾಗಿ, ಅವರ ನಂಬಿಕೆಯನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ.
3. ನೈತಿಕ ಕಾಳಜಿಗಳು : ಜಾತಿ, ವರ್ಗ, ಲಿಂಗ ಮತ್ತು ಧರ್ಮದ ಕಾರಣದಿಂದಾಗಿ ಮದುವೆಗಳು ಹೆಚ್ಚಾಗಿ ರದ್ದುಗೊಳ್ಳುವ ದೇಶದಲ್ಲಿ, ಈ ಮಾನದಂಡಗಳಿಗೆ ಅನುಗುಣವಾಗಿ ನಡೆಯುವ ಉನ್ನತ ಮಟ್ಟದ ವಿವಾಹವನ್ನು ಪ್ರಚಾರ ಮಾಡುವುದು ನನ್ನ ಮೌಲ್ಯಗಳೊಂದಿಗೆ ಹೊಂದಿಕೆಯಾಗುವುದಿಲ್ಲ. ಶಿಕ್ಷಣ ಮತ್ತು ಇತರ ಉತ್ತಮ ವಿಷಯಗಳನ್ನು ತಲುಪಿಸುವ ನಾನು ಮದುವೆಯ ಕುರಿತು ಪ್ರಚಾರ ಮಾಡುವುದು ತಪ್ಪುದಾರಿಗೆಳೆಯಬಹುದು. ಇದು ಫ್ಯಾಷನ್ ಅಥವಾ ಜೀವನಶೈಲಿಯ ಪ್ರಭಾವಿಗಳಿಗೆ ಹೆಚ್ಚು ಸೂಕ್ತವಾಗಿದೆ. ನಾನು ಈ ಹಿಂದೆ ಅಂಬಾನಿಯೊಂದಿಗೆ ಕೆಲಸ ಮಾಡುತ್ತಿದ್ದಾಗ, ವಂತರಾವನ್ನು ಪ್ರಚಾರ ಮಾಡುತ್ತಿದ್ದೆ. ಮದುವೆಯು ಭಾರತೀಯ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂದು ಹೇಳುವುದು ವಾಸ್ತವಿಕವಾಗಿ ಸರಿಯಲ್ಲ.
4. ವೈಯಕ್ತಿಕ ಸಮಗ್ರತೆ : ₹3.6 ಲಕ್ಷದ ವ್ಯವಹಾರವು ಲಾಭದಾಯಕವಾಗಿದೆ. ಆದರೂ, ನನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ದೀರ್ಘಾವಧಿಯ ಪ್ರಯೋಜನಗಳು ಇಂತಹ ಅಲ್ಪಾವಧಿಯ ಆರ್ಥಿಕ ಲಾಭವನ್ನು ಮೀರಿದ್ದಾಗಿದೆ. ಸಮಗ್ರತೆಯು ನಿಷ್ಠಾವಂತ ಅನುಸರಣೆಯನ್ನು ನಿರ್ಮಿಸುತ್ತದೆ, ಅದು ಅಮೂಲ್ಯವಾಗಿದೆ.
ಈ ಮೇಲಿನ ನಾಲ್ಕು ಕಾರಣಗಳನ್ನು ಕಾವ್ಯ ಅವರು ದೊಡ್ಡ ಮೊತ್ತದ ಒಪ್ಪಂದ ತಿರಸ್ಕರಿಸುವುದಕ್ಕೆ ನೀಡಿದ್ದಾರೆ. ದೊಡ್ಡ ಮೊತ್ತದ ಒಪ್ಪಂದ ತಿರಸ್ಕರಿಸುವುದು ಸವಾಲಿನ ಸಂಗತಿಯಾಗಿದೆ. ಅದೃಷ್ಟವಶಾತ್, ನಾನು ನನ್ನ ವೃತ್ತಿಜೀವನದಲ್ಲಿ ಈ ಬಗ್ಗೆ ಆಯ್ಕೆಗಳನ್ನು ಮಾಡಬಹುದಾದ ಹಂತದಲ್ಲಿದ್ದೇನೆ. ಪ್ರತಿಯೊಬ್ಬರೂ ಇಲ್ಲ ಎಂದು ಹೇಳಬಾರದು. ಅದು ವೈಯಕ್ತಿಕ ಸಂದರ್ಭಗಳ ಆಧಾರದ ಮೇಲೆ ನಿರ್ಧಾರವಾಗಿದೆ ಎಂದಿದ್ದಾರೆ.
ಲಿಂಕ್ಡ್ ಇನ್‌ನಲ್ಲಿ ಕಾವ್ಯ ಹಾಕಿರುವ ಪೋಸ್ಟ್‌ಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ನಿರ್ಧಾರ ಎಂದಿದ್ದಾರೆ. ಕಾವ್ಯ ಅವರ ಪೋಸ್ಟ್‌ನಿಂದ ಅಂಬಾನಿ ಕುಟುಂಬ ಮದುವೆಯ ಬಗ್ಗೆ ಧನಾತ್ಮಕ ಪ್ರಚಾರ ಮಾಡಲೂ ಕೂಡ ಹಣ ಪಾವತಿಸಿದೆ ಎಂಬ ವಿಷಯವೊಂದು ಬಯಲಾಗಿದೆ.
ಇದನ್ನೂ ಓದಿ : ಬಿಲ್ಕಿಸ್ ಬಾನು ಪ್ರಕರಣ : ಕ್ಷಮಾದಾನ ರದ್ದು ಪ್ರಶ್ನಿಸಿದ್ದ ಅಪರಾಧಿಗಳ ಅರ್ಜಿ ವಜಾ


