ತುಮಕೂರಿನಲ್ಲಿ RSS ಕಟ್ಟಡ ಕಟ್ಟುತ್ತಿರುವ ವಿಷಯವನ್ನು ಸಂಸದ ಪ್ರತಾಪ್ ಸಿಂಹರವರು ಹಂಚಿಕೊಂಡ ಬೆನ್ನಲ್ಲೆ, ನೋಂದಣಿಯಾಗದ, ಆಸ್ತಿಯಿಲ್ಲದ RSS ಗೆ ಕಟ್ಟಡ ಕಟ್ಟುತ್ತಿರುವುದೇಕೆ ಮತ್ತು ಹೇಗೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಮೈಸೂರು -ಕೊಡಗು ಸಂಸದರಾದ ಪ್ರತಾಪ್ ಸಿಂಹರವರು ನಿನ್ನೆ ಬೆಳಿಗ್ಗೆ ‘ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಆರ್ ಎಸ್ ಎಸ್ ಕಟ್ಟಡದ ಸ್ಥಳಕ್ಕೆ ಭೇಟಿ ನೀಡಲಾಯಿತು’ ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

“ವಿಧಾನ ಪರಿಷತ್ತಿನಲ್ಲಿ Question Hour ಸಮಯದಲ್ಲಿ RSS ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದೆ. ಆಗ RSS ಸಂಘ ನೊಂದಣೆಯಾಗಿಲ್ಲ ಹಾಗು ಯಾವುದೆ ಆಸ್ತಿ ಹೊಂದಿಲ್ಲ ಅನ್ನುವ ಮಾಹಿತಿಯನ್ನು ಸರ್ಕಾರ ನೀಡಿದೆ.
ಇನ್ನೊಂದು ಕಡೆ ಆರ್‌ಎಸ್‌ಎಸ್ ಹೊಸ ಕಟ್ಟಡದ ಬಗ್ಗೆ ಸಂಸದ ಪ್ರತಾಪ್ ಸಿಂಹರವರು ಮಾಹಿತಿ ಹಂಚಿಕೊಂಡಿದ್ದಾರೆ ಅಂದರೆ ಏನರ್ಥ” ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.
ಭಾರತದಲ್ಲಿನ NGO ಗಳ ಮೇಲೆ ಇಲ್ಲ ಸಲ್ಲದ ಕಾನೂನು ಏರಿ, ಅವುಗಳ ಲೆಕ್ಕಾಚಾರ ಕೇಳಿ ಅವುಗಳ ಮೇಲೆ income Tax ಮತ್ತು CBI / ED raid ಮಾಡುವ ಆಡಳಿತ ಸರ್ಕಾರ, ಆರ್‌ಎಸ್‌ಎಸ್ ಸಂಘಟನೆಯ ಲೆಕ್ಕಾಚಾರದ ಬಗ್ಗೆ ಯಾಕೆ ಪ್ರಶ್ನಿಸುವುದಿಲ್ಲ. ಯಾಕೆ ಈ ದ್ವಂದ್ವ ನಿಲುವು? ಈ ದೇಶದಲ್ಲಿನ ಕಾನೂನು ಸಾಮಾನ್ಯರಿಗೆ ಒಂದು ಮತ್ತು RSS ಸಂಘಟನೆಗೆ ಬೇರೆ ಇದೆಯೆ ಎಂದು ಪ್ರಶ್ನಿಸಿದ್ದಾರೆ.

ಸತ್ಯ, ಧರ್ಮ, ದೇಶಪ್ರೇಮದ ಬಗ್ಗೆ ಉಪದೇಶ ಕೊಟ್ಟು ಅಧಿಕಾರ ಹಿಡಿಯುವ ರೀತಿಯಲ್ಲಿ, ಆರ್‌ಎಸ್‌ಎಸ್ ಏಕೆ ಲೆಕ್ಕಾಚಾರ ನೀಡುವುದಿಲ್ಲ? ಏಕೆ ನೋಂದಣಿ ಮಾಡಿಸುವುದಿಲ್ಲ, ಏಕೆ ಸಂವಿಧಾನಬದ್ಧವಾಗಿ ಆಂತರಿಕ ಚುನಾವಣೆ ನಡೆಸುವುದಿಲ್ಲ? ಆದಾಯ ಖರ್ಚು ವೆಚ್ಚಗಳ ಬಗ್ಗೆ ಸರ್ಕಾರಕ್ಕೆ ಉತ್ತರದಾಯಿತ್ವ ಸಲ್ಲಿಸದ ಸಂಘಟನೆಗಳು ಸರ್ಕಾರಕ್ಕೆ ಅರ್ಥಾತ್ ಸಮಾಜಕ್ಕೆ ವಂಚಿಸಿದಂತೆ ಅಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಹರಿಪ್ರಸಾದ್‌ರವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಅಡಿಯಲ್ಲಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್‌ರವರಿಗೆ ಆರ್‌ಎಸ್‌ಎಸ್ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿದ ಅವರು, “ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ನೋಂದಣಿಯಾಗಿಲ್ಲ” ಎಂದು ಉತ್ತರಿಸಿದ್ದರು. ಇನ್ನು ಸ್ವಂತ ಆಸ್ತಿ ಅಥವಾ ಬಾಡಿಗೆ ಕಟ್ಟಡ ಇದೆಯೆ ಎಂಬ ಹಲವು ಪ್ರಶ್ನೆಗಳಿಗೆ ಅನ್ವಹಿಸುವುದಿಲ್ಲ ಎಂದು ಉತ್ತರಿಸಿದ್ದರು.
ಕೇಂದ್ರ ಸರ್ಕಾರವು ಹಲವು ಎನ್‌ಜಿಓಗಳ ಮೇಲೆ ದಾಳಿ ನಡೆಸುತ್ತಿದೆ. ಸರ್ಕಾರದ ಎನ್‌ಐಎ ಕಳೆದ ಒಂದು ವಾರದಲ್ಲಿಯೇ ಬೆಂಗಳೂರು ಸೇರಿದಂತೆ 20ಕ್ಕೂ ಹೆಚ್ಚು ಎನ್‌ಜಿಓ ಕಚೇರಿಗಳ ಮೇಲೆ ದಾಳಿ ನಡೆಸಿ ಲೆಕ್ಕಪತ್ರ ಶೋಧಿಸುತ್ತಿದೆ. ಸರ್ಕಾರಗಳ ಈ ದಾಳಿಯಿಂದ ಖ್ಯಾತ ಮಾನವ ಹಕ್ಕು ಸಂಸ್ಥೇಯಾದ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಈ ಸಂದರ್ಭದಲ್ಲಿ ಹರಿಪ್ರಸಾದ್‌ರವರ ಪ್ರಶ್ನೆಗಳು ಬಂದಿವೆ.
ಇದನ್ನೂ ಓದಿ: ಮತ್ತೊಬ್ಬ RSS ಕಾರ್ಯಕರ್ತನ ಕೊಲೆ ಪ್ರಕರಣ: ಕೇರಳದ 9 RSS ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ



please make some changes in payment like debit card credit card. thanking you