ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಅಮೆರಿಕ ಇರಾನ್‌ನ ಮೂರು ಪರಮಾಣು ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿರುವುದನ್ನು ಭಾರತೀಯ ಕಮ್ಯುನಿಷ್ಟ್ ಪಕ್ಷ (ಸಿಪಿಐ) ಖಂಡಿಸಿದ್ದು, ಅಮೆರಿಕ-ಇಸ್ರೇಲ್ ಮೈತ್ರಿಯು ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ಪ್ರಧಾನಿ ಮೋದಿ ಇದರ ಬಗ್ಗೆ ಏಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದೆ. ಕಾಂಗ್ರೆಸ್ ಕೂಡಾ ಅಮೆರಿಕದ ದಾಳಿಯನ್ನು ವಿರೋಧಿಸಿದ್ದು, ಕಷ್ಟದ ಸಮಯದಲ್ಲಿ ಭಾರತದೊಂದಿಗೆ ನಿಂತ ಇರಾನ್‌ಗೆ ಇದು ನಡೆಯುತ್ತಿರುವು ಒಳ್ಳೆಯ ಬೆಳವಣಿಗೆಯಲ್ಲ, ಆದರೆ ನಮ್ಮ ಸರ್ಕಾರವು ಇದೆಲ್ಲದರ ಬಗ್ಗೆ ಮೌನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಭಾರತದ ಮಿತ್ರ ಇರಾನ್
ಇರಾನ್ ಮೇಲೆ ದಾಳಿ ಮಾಡಿರುವ ಕುರಿತು ಅಧ್ಯಕ್ಷ ಟ್ರಂಪ್ ಸಾಮಾಜಿಕ ಮಾಧ್ಯಮ ಟ್ರುಥ್ ಸೋಶಿಯಲ್‌ನಲ್ಲಿ ಭಾನುವಾರ ಮಾಹಿತಿ ನೀಡಿದ್ದು, “ಅಮೆರಿಕದ ಪಡೆಗಳು ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಇರಾನಿನ ಪರಮಾಣು ನೆಲೆಗಳ ಮೇಲೆ ‘ಅತ್ಯಂತ ಯಶಸ್ವಿ’ ದಾಳಿಗಳನ್ನು ನಡೆಸಿವೆ. ಎಲ್ಲಾ ಅಮೆರಿಕನ್ ವಿಮಾನಗಳು ಈಗ ಇರಾನಿನ ವಾಯುಪ್ರದೇಶದಿಂದ ಹೊರಗಿವೆ” ಎಂದು ತಿಳಿಸಿದ್ದಾರೆ.
“ಪ್ರಾಥಮಿಕ ತಾಣವಾದ ಫೋರ್ಡೋದಲ್ಲಿ ಪೂರ್ಣ ಪ್ರಮಾಣದಲ್ಲಿ ಬಾಂಬ್ ದಾಳಿ ಮಾಡಲಾಗಿದೆ. ಎಲ್ಲಾ ವಿಮಾನಗಳು ಸುರಕ್ಷಿತವಾಗಿ ವಾಪಸ್ ನೆಲೆಗಳಿಗೆ ಹೋಗುತ್ತಿವೆ. ನಮ್ಮ ಅಮೆರಿಕದ ಮಹಾನ್ ಯೋಧರಿಗೆ ಅಭಿನಂದನೆಗಳು. ಈ ರೀತಿ ಕಾರ್ಯಾಚರಣೆ ಮಾಡಬಹುದಾದ ಮತ್ತೊಂದು ಸೇನೆಯು ಜಗತ್ತಿನಲ್ಲಿ ಇಲ್ಲ. ಇದು ಶಾಂತಿಯ ಸಮಯ! ಈ ಬೆಳವಣಿಗೆಯ ಬಗ್ಗೆ ನೀವು ಗಮನ ಹರಿಸಿದ್ದಕ್ಕಾಗಿ ಧನ್ಯವಾದಗಳು,” ಎಂದು ಅವರು ಉಲ್ಲೇಖಿಸಿದ್ದಾರೆ.
ಇರಾನ್ ಮೇಲಿನ ಅಮೆರಿಕ ದಾಳಿಯನ್ನು ಖಂಡಿಸಿರುವ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, “ನಮ್ಮ ಪಕ್ಷವು ಇರಾನ್‌ನಲ್ಲಿ ಅಮೆರಿಕ ನಡೆಸಿದ ಬಾಂಬ್ ದಾಳಿಯನ್ನು ಬಲವಾಗಿ ಖಂಡಿಸುತ್ತದೆ. ಟ್ರಂಪ್ ಮತ್ತು ಅಮೆರಿಕ ಇಸ್ರೇಲ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ, ಅದು ಪಶ್ಚಿಮ ಏಷ್ಯಾದ ಬಿಕ್ಕಟ್ಟಿಗೆ ಮೂಲ ಕಾರಣ” ಎಂದು ಹೇಳಿದ್ದಾರೆ.
“ಅಮೆರಿಕ ಮತ್ತು ಇಸ್ರೇಲ್‌ನ ಮೈತ್ರಿಯ ಹಿಂದಿನ ರಾಜಕೀಯ ಉದ್ದೇಶವನ್ನು ಭಾರತದ ಜನರು ಅರ್ಥಮಾಡಿಕೊಳ್ಳಬೇಕು. ಅಮೆರಿಕ-ಇಸ್ರೇಲ್ ಮೈತ್ರಿಯು ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ಪ್ರಧಾನಿ ಮೋದಿ ಇದರ ಬಗ್ಗೆ ಏಕೆ ಮೌನವಾಗಿದ್ದಾರೆ?” ಎಂದು ಅವರು ಪ್ರಶ್ನಿಸಿದ್ದಾರೆ.
VIDEO | Mathura: CPI leader D Raja condemns US strikes on Iran’s nuclear facilities. He says, “Our party strongly condemns the US bombing in Iran. Mr. Trump and the US have aligned with Israel, which is the root cause of the crisis in West Asia. The people of India must… pic.twitter.com/k1QVkLgMgq
— Press Trust of India (@PTI_News) June 22, 2025
ಇರಾನ್‌ನ ಪರಮಾಣು ಸೌಲಭ್ಯಗಳ ಮೇಲಿನ ಅಮೆರಿಕದ ದಾಳಿಯ ಕುರಿತು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಕೂಡಾ ವಿರೋಧಿಸಿದ್ದು, ಜಗತ್ತು ಅಂತರರಾಷ್ಟ್ರೀಯ ಕಾನೂನುಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ರಾಷ್ಟ್ರದ ಸಾರ್ವಭೌಮತ್ವವನ್ನು ಉಲ್ಲಂಘಿಸುವುದು ಗಂಭೀರ ಅಪರಾಧ ಎಂದು ಹೇಳಿದ್ದಾರೆ.
“ಅಮೆರಿಕವು ತುಂಬಾ ದೂರದಿಂದ ಬಾಂಬ್ ದಾಳಿ ನಡೆಸುತ್ತಿದ್ದು, ನಮ್ಮ ನೆರೆಯ ದೇಶದ ವಿರುದ್ಧ ಇಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ. ಇರಾನ್‌ನಂತ ಕಷ್ಟದ ಸಮಯದಲ್ಲಿ ಭಾರತದೊಂದಿಗೆ ನಿಂತವರ ಮೇಲಿನ ಈ ದಾಳಿ ಒಳ್ಳೆಯ ಬೆಳವಣಿಗೆಯಲ್ಲ ಮತ್ತು ಮತ್ತೊಂದೆಡೆ, ನಮ್ಮ ಸರ್ಕಾರವು ಈ ಎಲ್ಲದರ ಬಗ್ಗೆ ಮೌನವಾಗಿದೆ.” ಎಂದು ಅವರು ಹೇಳಿದ್ದಾರೆ.
VIDEO | Congress leader Pramod Tiwari on US strikes on Iran’s nuclear facilities, says, “The world operates on international laws, and violating the sovereignty of any nation is a serious crime. The US is carrying out bombings from so far away, I just want to say that such… pic.twitter.com/jpz0OqHTbp
— Press Trust of India (@PTI_News) June 22, 2025
ಲೇಖಕ ಸುಧೀಂದ್ರ ಕುಲಕರ್ಣಿ ಅವರು ಕೂಡಾ ಇರಾನ್ ಮೇಲಿನ ದಾಳಿಯನ್ನು ವಿರೋದಿಸಿದ್ದು, ಆಡಳಿತರೂಢ ಬಿಜೆಪಿಯ ಮೋದಿಯ ಮೌನವನ್ನು ಪ್ರಶ್ನಿಸಿದ್ದಾರೆ. “ಭಾರತವನ್ನು ಇದುವರೆಗೆ ಆಳಿದ 14 ಪ್ರಧಾನ ಮಂತ್ರಿಗಳಲ್ಲಿ, ನೆಹರೂ ಅವರಿಂದ ಹಿಡಿದು ಶಾಸ್ತ್ರಿ, ಇಂದಿರಾ ಗಾಂಧಿಯವರವರೆಗೆ…. ವಾಜಪೇಯಿ ಮತ್ತು ಡಾ. ಸಿಂಗ್ ವರಗಿನ 13 ಜನರು ಟ್ರಂಪ್ ಇರಾನ್ ಮೇಲೆ ನಡೆಸಿದ ಅಪ್ರಚೋದಿತ ದಾಳಿಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಖಂಡಿಸುತ್ತಿದ್ದರು. 14ನೇ ಪ್ರಧಾನಿ ಹಾಗೆ ಮಾಡುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.
Of the 14 Prime Ministers India has had so far, 13 of them — from Nehru to Shastri, Indira Gandhi…. Vajpayee and Dr Singh — would have unhesitatingly CONDEMNED Trump’s unprovoked attack on Iran.
Will the 14th PM do so?
— Sudheendra Kulkarni (@SudheenKulkarni) June 22, 2025
ಇರಾನ್‌ನ ಮೂರು ಪರಮಾಣು ನೆಲೆಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದ ಬಳಿಕ, ಪಶ್ಚಿಮ ಏಷ್ಯಾದ ಪ್ರತಿಯೊಬ್ಬ ಅಮೆರಿಕನ್ ನಾಗರಿಕ ಅಥವಾ ಮಿಲಿಟರಿ ಸಿಬ್ಬಂದಿ ಈಗ ನಮ್ಮ ಗುರಿ ಎಂದು ಇರಾನ್‌ನ ಸರ್ಕಾರಿ ದೂರದರ್ಶನವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎಚ್ಚರಿಕೆ ನೀಡಿರುವುದಾಗಿ news18.com ವರದಿ ಮಾಡಿದೆ.
“ಇರಾನ್‌ನ ವಾಯುಪ್ರದೇಶವನ್ನು ಉಲ್ಲಂಘಿಸುವ ಮೂಲಕ ಅಮೆರಿಕ ಇರಾನ್ ವಿರುದ್ಧ ಅಪರಾಧ ಮಾಡಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಇದಕ್ಕೆ ಅವಕಾಶವಿಲ್ಲ. ಅಮೆರಿಕದ ಅಧ್ಯಕ್ಷರೇ, ನೀವು ದಾಳಿ ಪ್ರಾರಂಭಿಸಿದ್ದೀರಿ, ನಾವು ಕೊನೆಗೊಳಿಸುತ್ತೇವೆ” ಎಂದು ಇರಾನ್ ದೂರದರ್ಶನ ಯುಎಸ್ ನೆಲೆಗಳ ಗ್ರಾಫಿಕ್ ಅನ್ನು ಪ್ರದರ್ಶಿಸುತ್ತಾ ಹೇಳಿದೆ” ಎಂದು ವರದಿ ವಿವರಿಸಿದೆ.
ಜೂನ್ 13 ರಂದು ಇಸ್ರೇಲ್ ತನ್ನ ದಾಳಿಯನ್ನು ಪ್ರಾರಂಭಿಸಿದ ನಂತರ ದೇಶದಲ್ಲಿ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 3000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ ಎಂದು ಶನಿವಾರ ಅಜ್‌ಜಝೀರಾ ವರದಿ ಮಾಡಿದೆ. ಇಸ್ರೇಲ್‌ನ “ಆಕ್ರಮಣ” ಕ್ಕೆ ಅಮೆರಿಕ ಸೇರಿಕೊಂಡರೆ ಅದು “ಎಲ್ಲರಿಗೂ ತುಂಬಾ ಅಪಾಯಕಾರಿ” ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.
ಇರಾನ್‌ನ ಆರೋಗ್ಯ ಸಚಿವಾಲಯದ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಹೊಸೈನ್ ಕೆರ್ಮನ್‌ಪೋರ್, ದೇಶದ ಮೇಲೆ ಇಸ್ರೇಲಿ ನಡೆಸಿದ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆಯ ಬಗ್ಗೆ ಮಾಹಿತಿ ನಿಡಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಸುತ್ತಿನ ಸಂಘರ್ಷ ಜೂನ್ 13 ರಂದು ಪ್ರಾರಂಭವಾಯಿತು. ಇಸ್ರೇಲ್ ಸೇನೆಯು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ಉದ್ದೇಶದಿಂದ ಇರಾನ್‌ನಲ್ಲಿ ಪರಮಾಣು ಗುರಿಗಳೆಂದು ಹೇಳಿಕೊಂಡ ಸ್ಥಳಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ಮಾಡಿತು. ಇದಕ್ಕೆ ಪ್ರತಿಯಾಗಿ ಇರಾನ್ ಸೇನೆಯು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ನಿರಂತರ ದಾಳಿಗಳು ಈ ಪ್ರದೇಶದಲ್ಲಿ ವ್ಯಾಪಕ ಸಂಘರ್ಷದ ಆತಂಕಗಳಿಗೆ ಕಾರಣವಾಗಿವೆ. ಭಾರತದ ಮಿತ್ರ ಇರಾನ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಪಹಲ್ಗಾಮ್ ದಾಳಿಕೋರರಿಗೆ ಆಶ್ರಯ ನೀಡಿದ ಆರೋಪ: ಇಬ್ಬರನ್ನು ಬಂಧಿಸಿದ ಎನ್‌ಐಎ
ಪಹಲ್ಗಾಮ್ ದಾಳಿಕೋರರಿಗೆ ಆಶ್ರಯ ನೀಡಿದ ಆರೋಪ: ಇಬ್ಬರನ್ನು ಬಂಧಿಸಿದ ಎನ್‌ಐಎ

