Homeಮುಖಪುಟಬ್ರಾಹ್ಮಣರ ಪಠ್ಯಗಳನ್ನು ಕನ್ನಡ ಮಕ್ಕಳು ಏಕೆ ಓದಬೇಕು?

ಬ್ರಾಹ್ಮಣರ ಪಠ್ಯಗಳನ್ನು ಕನ್ನಡ ಮಕ್ಕಳು ಏಕೆ ಓದಬೇಕು?

ಶೇ. 2.1ರಷ್ಟು ಇರುವ ಜಾತಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಶೇ. 100ರಷ್ಟು ಮೀಸಲಾತಿ ಕೊಟ್ಟಿರುವುದು ಯಾಕೆ?

- Advertisement -
- Advertisement -

ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಮೇಲೆ ಕೇಸರೀಕರಣ ನಡೆಯುತ್ತಿರುವುದು ಹೊಸ ಸಂಗತಿಯಲ್ಲ. ಏಕೆಂದರೆ, ಆರ್.ಎಸ್.ಎಸ್. ಮನುವಾದಿ ಸಿದ್ಧಾಂತದಿಂದ ಪ್ರೇರಣೆ ಹೊಂದಿದ್ದು, ತನ್ನ ಜನಾಂಗವೇ ಶ್ರೇಷ್ಠ ಎಂಬ ವ್ಯಸನ ಹಾಗೂ ಶೇ. 85ರಷ್ಟು ಇರುವ ಶೂದ್ರರು, ಮಹಿಳೆಯರು, ದಲಿತರು, ಬುಡಕಟ್ಟುಗಳನ್ನು ಯಥಾಸ್ಥಿತಿಯಲ್ಲಿಡುವುದು ಅವರ ಸ್ಪಷ್ಟ ಅಜೆಂಡಾ. ಮನುಸ್ಮೃತಿಯಲ್ಲಿ ಶೂದ್ರರು (ಲಿಂಗಾಯತರು, ಒಕ್ಕಲಿಗರು, ಕುರುಬರು, ಅಕ್ಕಸಾಲಿಗರು, ಬಡಗಿಗಳು, ಕಮ್ಮಾರರು, ಅಗಸರು, ಉಪ್ಪಾರರು, ಸಿಂಪಿಗರು ಮತ್ತು ಇನ್ನುಳಿದ ಶ್ರಮವನ್ನು ಆಧರಿಸಿ ದುಡಿಯುವ ವರ್ಗ ಹಾಗೂ ಮಹಿಳೆಯರಿಗೆ) ಶಿಕ್ಷಣ, ಆಸ್ತಿ, ಅಧಿಕಾರ, ಧನಸಂಗ್ರಹದ ಅಧಿಕಾರ ಇಲ್ಲವೆಂದು ಸ್ಪಷ್ಟವಾಗಿ ಹೇಳಲಾಗಿದೆ. ಇದೇ ಮನುಸ್ಮೃತಿಯನ್ನು ಸಂವಿಧಾನವಾಗಿ ಜಾರಿಗೆ ತರಬೇಕು ಎನ್ನುವುದು ಆರ್.ಎಸ್.ಎಸ್ ಮತ್ತು ಬಿಜೆಪಿಯ ದುರುದ್ದೇಶ.

ಸದ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಗೆ ಸಮಿತಿಯನ್ನು ರಚಿಸಿದ್ದು, ಇದರಲ್ಲಿ ಬ್ರಾಹ್ಮಣರಿಂದ, ಬ್ರಾಹ್ಮಣರಿಗಾಗಿ ಮತ್ತು ಬ್ರಾಹ್ಮಣರಿಗೋಸ್ಕರ ಎಂಬಂತಹ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಈ ಪರಿಷ್ಕರಣೆ ಸಮಿತಿಯಲ್ಲಿರುವ ರೋಹಿತ್ ಚಕ್ರತೀರ್ಥ, ರಾಜಾರಾಮ ಹೆಗಡೆ, ಸತ್ಯ ಪ್ರಕಾಶ್, ಬಿ.ಜೆ.ವಾಸುಕಿ, ಡಾ. ಅನಂತ ಕೃಷ್ಣ ಭಟ್ ವಿಠಲ್ ಪೋತೆದಾರ್, ರಂಗನಾಥ ಎಲ್ಲರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ.

ಬ್ರಾಹ್ಮಣರೇ ಇರುವ ಪಠ್ಯ ಪುಸ್ತಕ ಸಮಿತಿ ಪರಿಷ್ಕರಣೆ ಮಾಡಿ ಸೇರಿಸಿರುವವರ ಪೈಕಿ ಎಸ್. ಎಲ್.ಭೈರಪ್ಪ, ಕೆ.ಬಿ.ಹೆಡ್ಗೇವಾರ್, ಗಜಾನನ ಶರ್ಮಾ, ಎನ್.ರಂಗನಾಥ ಶರ್ಮಾ, ಸುಶ್ರುತ ದೊಡ್ಡೇರಿ, ಎಸ್.ವಿ.ಪರಮೇಶ್ವರ ಭಟ್, ಗಣೇಶ್ ಶತಾವಧಾನಿ, ಬನ್ನಂಜೆ ಗೋವಿಂದಾಚಾರ್ಯ, ಶಿವಾನಂದ ಕಳವೆ, ಚಕ್ರವರ್ತಿ ಸೂಲಿಬೆಲೆಯವರ ಪಠ್ಯಗಳನ್ನು ಸೇರಿಸಲಾಗಿದೆ. ಇವರಲ್ಲಿ ಎಲ್ಲರೂ ಬ್ರಾಹ್ಮಣ ಜಾತಿಗೆ ಸೇರಿದ್ದಾರೆ.

ಶೂದ್ರ-ದಲಿತ ಸಂಘಟನೆಯ ಪಿ.ಲಂಕೇಶ್, ಎಲ್.ಬಸವರಾಜು, ಕೆ.ನೀಲಾ, ಅರವಿಂದ ಮಾಲಗತ್ತಿ ಸಾರಾ ಅಬೂಬಕ್ಕರ್ ಮತ್ತು ಬಿ.ಟಿ.ಲಲಿತಾ ನಾಯಕ್ ರವರ ಪಠ್ಯ ಕೈಬಿಡಲಾಗಿದೆ.

ಪರಿಷ್ಕರಣೆ ಸಮಿತಿ ಸೇರಿಸಿರುವ ಪುರೋಹಿಶಾಹಿಗಳ ಪಠ್ಯಗಳು

ಸ್ವಾತಂತ್ರ್ಯ ಹೋರಾಟವನ್ನು ವಿರೋಧಿಸಿದ್ದ, ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್ ಸೇರುವ ಬದಲು ಬ್ರಿಟಿಷ್ ಸೇನೆ ಸೇರಿ ಎಂದು ಕರೆನೀಡಿದ್ದವರ ಗುಂಪಿನ ಸದಸ್ಯ ಕೆ.ಬಿ.ಹೆಡ್ಗೇವಾರ್ ಅವರ ಅರೆಬರೆ ಭಾಷಣ, ಲಿಂಗ ತಾರತಮ್ಯವನ್ನು ಸಮರ್ಥಿಸುವ ಶುಕಾಸನ ಉಪದೇಶ, ಯಜ್ಞ, ಯಾಗಗಳನ್ನು ಉತ್ತೇಜಿಸುವ ಲೇಖನ, ರಾಮರಾಜ್ಯದ ಕಟ್ಟುಕತೆಯನ್ನು ತಲೆಯಲ್ಲಿ ತುಂಬುವ ಪಠ್ಯಗಳನ್ನು ಮತ್ತು ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಹೆಂಗ್ ಪುಂಗ್ಲೀ ಎಂದು ನಗೆಪಾಟಲಿಗೆ ಗುರಿಯಾಗಿರುವ, ಕಮೆಡಿಯನ್ ಗಳನ್ನು ಮೀರಿಸುವ ವ್ಯಕ್ತಿ ಎಂದು ಕುಖ್ಯಾತಿಯಾಗಿರುವ ಚಕ್ರವರ್ತಿ ಸೂಲಿಬೆಲೆಯವರ ಪಠ್ಯಗಳನ್ನು ಸೇರಿಸಲಾಗಿದೆ.

ಹತ್ತನೇ ತರಗತಿಯಿಂದ ಕೈಬಿಡಲಾದ ಪಠ್ಯಗಳು

ಭಗತ್ ಸಿಂಗ್

ತನ್ನನ್ನು ನೇಣಿಗೇರಿಸುವ ಬದಲು ಗುಂಡಿಟ್ಟು ಕೊಲ್ಲಿ ಎಂದು ಬ್ರಿಟಿಷರನ್ನು ಒತ್ತಾಯಿಸಿದ ಮತ್ತು ಎಂದಿಗೂ ಜೀವ ಭಿಕ್ಷೆಗಾಗಿ ಬ್ರಿಟಿಷರ ಕ್ಷಮೆಯನ್ನು ಕೋರದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮತ್ತು ನಾಸ್ತಿಕ ಭಗತ್ ಸಿಂಗ್. ಭಗತ್ ಸಿಂಗ್ ರಂತಹ ದೇಶಭಕ್ತರನ್ನು ಕಂಡರೆ ಸಂಘಪರಿವಾರದವರಿಗೆ ಆಗುವುದಿಲ್ಲ. ಏಕೆಂದರೆ, RSSನವರ ಪರಮ ಗುರು ವಿನಾಯಕ ದಾಮೋದರ ಸಾವರ್ಕರ್ ಬ್ರಿಟಿಷರಿಗೆ ಸುಮಾರು 8 ಬಾರಿ ಕ್ಷಮಾಪಣೆ ಪತ್ರ ಬರೆದು ಅಂಡಮಾನ್ ನ ಸೆಲ್ಯುಲರ್ ಸೆರೆಮನೆಯಿಂದ ಬಿಡುಗಡೆಯಾಗಿ, ತಾವು ಬರೆದುಕೊಟ್ಟ ಮುಚ್ಚಳಿಕೆ ಪತ್ರದಂತೆಯೇ ಸ್ವಾತಂತ್ರ್ಯ ಹೋರಾಟದಿಂದ ಹೊರಬಿದ್ದವರು. ಮತ್ತು ಇದೇ ಕಾರಣಕ್ಕೆ ಬ್ರಿಟಿಷರಿಂದ ಪಿಂಚಣಿ ಪಡೆದವರು. ಇಂತಹವರನ್ನು ಸಮರ್ಥಿಸುವವರಿಗೆ ದೇಶಭಕ್ತರ ಪಠ್ಯಗಳನ್ನು ಇಡುವುದು ಸಾಧ್ಯವಿಲ್ಲ.

ಬ್ರಹ್ಮರ್ಷಿ ಶ್ರೀ ನಾರಾಯಣಗುರು ಅವರ ಧರ್ಮ ಪರಿಪಾಲನ ಯೋಗಂ

ಇವರು ಈಳವರಿಗಾಗಿ (ಈಡಿಗ) ಶಿವ ದೇವಾಲಯವನ್ನು ಕೇರಳದಲ್ಲಿ ಸ್ಥಾಪಿಸಿದವರು. ಬಸವಣ್ಣ 12ನೇ ಶತಮಾನದಲ್ಲಿ ಶೋಷಣೆಯ ವಿರುದ್ಧದ ಹೋರಾಟದಲ್ಲಿ ರೂಪಿಸಿದ ಇಷ್ಟ ಲಿಂಗ ಪರಿಕಲ್ಪನೆಯಂತೆ ನಾರಾಯಣ ಗುರುಗಳು ಶಿವ ದೇಗುಲವನ್ನು ಸ್ಥಾಪಿಸಿ, ತಳಸಮುದಾಯದವರಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಯಾವುದೇ ಆಟಗಳು ಕೇರಳದಲ್ಲಿ ನಡೆಯುವುದಿಲ್ಲ. ಇದೇ ಕಾರಣದಿಂದ ಅವರ ಪಠ್ಯವನ್ನು ಕೈಬಿಡಲಾಗಿದೆ. 2022ರ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕೂಡ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಕೇಂದ್ರ ಸರ್ಕಾರ ಅವಕಾಶವನ್ನು ನಿರಾಕರಿಸಿದ್ದನ್ನು ಇದೇ ಹಿನ್ನೆಲೆಯಲ್ಲಿ ಗಮನಿಸಬೇಕಿದೆ.

ಸ್ವಾಮಿ ವಿವೇಕಾನಂದ

ಅವರ ಕುರಿತ ಪೂರಕ ಪಠ್ಯವನ್ನು ಕೈಬಿಡಲಾಗಿದೆ. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಜಾತಿ ವ್ಯವಸ್ಥೆ, ಮೂಢನಂಬಿಕೆಗಳನ್ನು ಎಂದಿಗೂ ಸಮರ್ಥಿಸಿದವರಲ್ಲ. ಹಸಿದವನ ಮುಂದೆ ತತ್ವಜ್ಞಾನವನ್ನು ಹೇಳಬಾರದು ಎಂದವರು. ಜೊತೆಗೆ ಸಂಸ್ಕೃತದ ಹೇರಿಕೆ ಕುರಿತು ತಕರಾರು ಮತ್ತು ಗೋಮಾಂಸ ಸೇವನೆಯ ಪರ ಇದ್ದವರು. ಹಾಗಾಗಿ ಅವರ ಪಠ್ಯ ತೆಗೆದು “ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಆದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ” ಎಂಬ ವೈದಿಕ ಪಠ್ಯ ಸೇರಿಸಲಾಗಿದೆ.

ಪೆರಿಯಾರ್: ಇವರು ದ್ರಾವಿಡ ಸ್ವಾಭಿಮಾನಿ ಚಳವಳಿಯನ್ನು ಕಟ್ಟಿದವರು. ತಮಿಳುನಾಡಿನಲ್ಲಿ ಇವರ ಸ್ವಾಭಿಮಾನಿ ಚಳವಳಿಗಳ ಕಾರಣದಿಂದಲೇ ಬಿಜೆಪಿ ಮತ್ತು ಸಂಘಪರಿವಾರದ ಬೇಳೆ ಬೇಯದು. ಧರ್ಮ, ದೇವರು, ಜಾತಿ, ಮೂಢನಂಬಿಕೆ, ಅಸ್ಪೃಶ್ಯತೆ ವಿರುದ್ಧದ ಇವರ ಹೋರಾಟಗಳು ಯಥಾಸ್ಥಿತಿವಾದಿಗಳಿಗೆ ಎಂದಿಗೂ ನುಂಗಲಾಗದ ಕಹಿಗುಳಿಗೆ. ತಮಿಳುನಾಡಿನಲ್ಲಿ ಕೂಡ ಬಿಜೆಪಿಯವರಿಗೆ ಬೇರು ಬಿಡಲು ಇದೇ ಕಾರಣದಿಂದ ಸಾಧ್ಯವಾಗುತ್ತಿಲ್ಲ.

ಕೋಮು ಸಾಮರಸ್ಯದ ರಂಜಾನ್ ಸುರಕುಂಬ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕನ್ನಡ ಮೌಲ್ವಿ

ಆರ್.ಎಸ್.ಎಸ್. ಮತ್ತು ಬಿಜೆಪಿಗೆ ಸಾಮರಸ್ಯದಲ್ಲಿ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ಇವೆರೆಡೂ ಪಠ್ಯಗಳನ್ನು ಕೈಬಿಡಲಾಗಿದೆ. ದೇಶವನ್ನು ನಿರ್ಣಾಯಕವಾಗಿ ಒಡೆಯುವುದೇ ಇವರ ಸಿದ್ಧಾಂತ. ದೇಶದಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದು ಕೂಡ ಸಂಘ ಪರಿವಾರವೇ. ಇದಕ್ಕೂ ಮುನ್ನ ಪುಷ್ಯಮಿತ್ರನ ಕಾಲದಲ್ಲಿ ಮನುಧರ್ಮಶಾಸ್ತ್ರವನ್ನು ರಚಿಸಿ, 6,500 ಜಾತಿಗಳಾಗಿ ಭಾರತೀಯರನ್ನು ಒಡೆದವರೂ ಇವರ ಸಂತಾನವೇ. ಇನ್ನು ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ, ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ, ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ವಿವಾದ, ಕೊರೊನಾ ಸಮಯದಲ್ಲಿ ತಬ್ಲೀಘಿ ಸೋಂಕು, ಇತ್ತೀಚಿನ ದಿನಗಳಲ್ಲಿ ಹಿಜಾಬ್, ಹಲಾಲ್ ವರ್ಸಸ್ ಜಟ್ಕಾ, ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ವ್ಯಾಪಾರಕ್ಕೆ ವಿರೋಧ, ಆಜಾನ್ ವಿವಾದ ಮೊದಲಾದ ನೂರಾರು ಕುತುಂತ್ರಗಳೊಂದಿಗೆ ದೇಶವನ್ನು ಇಬ್ಬಾಗ ಮಾಡುವುದೇ ಇವರ ನಿತ್ಯ ನಿರಂತರ ಕಾಯಕವಾಗಿದೆ. ಇವರು ದೇಶದ ಸಾರ್ವಭೌಮತೆ, ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾಮರಸ್ಯಕ್ಕೆ ಕಂಟಕವಾಗಿದ್ದಾರೆ. ಇಂತಹ ಮನಃಸ್ಥಿತಿಯವರು ಊರುಭಂಗ, ಮರಳಿ ಮನೆಗೆ, ಶಿವಕೋಟಾಚಾರ್ಯರ ಸುಕುಮಾರ ಸ್ವಾಮಿ ಕಥೆ, ಮೂರ್ತಿರಾಯರ ವ್ಯಾಘ್ರ ಪಠ್ಯಗಳನ್ನು ಕೂಡ ಕೈಬಿಟ್ಟಿದ್ದಾರೆ.

ರಾಜ್ಯದಲ್ಲಿ ಜಾತಿವಾರು ಆಧಾರದಲ್ಲಿರುವ ಜನಸಂಖ್ಯೆ
ಜಾತಿ ಜನಸಂಖ್ಯೆ ಶೇಕಡಾವಾರು
ದಲಿತರು – 1.8 ಕೋಟಿ – 18%
ಮುಸ್ಲಿಮರು – 75 ಲಕ್ಷ – 11.53%
ಲಿಂಗಾಯತರು – 59 ಲಕ್ಷ – 9.8%
ಒಕ್ಕಲಿಗರು – 49 ಲಕ್ಷ – 8.16%
ಕುರುಬರು – 43 ಲಕ್ಷ – 7.1%
ಪರಿಶಿಷ್ಟ ಪಂಗಡ – 42 ಲಕ್ಷ – 7೫
ಈಡಿಗರು – 14 ಲಕ್ಷ – 2.2%
ಬ್ರಾಹ್ಮಣರು – 13 ಲಕ್ಷ – 2.1%

ಮೇಲಿನ ಅಂಕಿಅಂಶಗಳನ್ನು ನೋಡಿದಾಗ ಅತ್ಯಂತ ಕನಿಷ್ಠ ಸಂಖ್ಯೆಯಲ್ಲಿರುವ ಶೇ. 2.1ರಷ್ಟಿರುವ ಬ್ರಾಹ್ಮಣರು ಪಠ್ಯ ಪರಿಷ್ಕರಣೆಯಲ್ಲಿ ಸ್ಥಾನ ಪಡೆದದ್ದು ಹೇಗೆ? ಎಂಬ ಪ್ರಶ್ನೆಗೆ ಸರಳ ಉತ್ತರವಿದೆ. ರಾಜ್ಯದಲ್ಲಿ ಲಿಂಗಾಯತ ಜಾತಿಗೆ ಸೇರಿದ ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಹುದ್ದೆಯಲ್ಲಿ ಕೂರಿಸಿ ಅಧಿಕಾರ ನಡೆಸುತ್ತಿರುವವರು ಯಾರು ಎಂಬುದು ಮೇಲಿನ ಉದಾಹರಣೆಗಳನ್ನು ನೋಡಿದರೆ ಮನದಟ್ಟಾಗದೆ ಇರದು.

ಇನ್ನು ಬ್ರಾಹ್ಮಣರೇ, ಬ್ರಾಹ್ಮಣರಿಗಾಗಿ, ಬ್ರಾಹ್ಮಣರಿಗೋಸ್ಕರ ಹಾಗು ಸಾಮರಸ್ಯವನ್ನು ಕದಡುವ, ಮೂಢನಂಬಿಕೆ, ಕಂದಾಚಾರವನ್ನು ಬಿತ್ತುವ ಸಲುವಾಗಿ ರೂಪಿಸಿರುವ ಪಠ್ಯಗಳನ್ನು ಬಹುಸಂಖ್ಯಾತರು ಏಕೆ ಓದಬೇಕು? ಶೇ. 2.1ರಷ್ಟು ಇರುವ ಜಾತಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಶೇ. 100ರಷ್ಟು ಮೀಸಲಾತಿ ಕೊಟ್ಟಿರುವುದು ಯಾಕೆ? ಅಷ್ಟಕ್ಕೂ ಬ್ರಾಹ್ಮಣರ ಮಕ್ಕಳು ಸಂಸ್ಕೃತ ವಿಷಯವನ್ನು ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಾರೆ. ಸಂಸ್ಕೃತ, ಹಿಂದಿ ಪರ ಇರುವವರು ಮತ್ತು ಯಥಾಸ್ಥಿತಿವಾದವನ್ನು ಸಮರ್ಥಿಸುವವರು ರೂಪಿಸಿರುವ ಪಠ್ಯಗಳನ್ನು ಕನ್ನಡ ಶಾಲೆಯ ಮಕ್ಕಳು ಯಾಕೆ ಓದಬೇಕು? ಹಾಗೆ ನೋಡಿದರೆ ಬ್ರಾಹ್ಮಣರು ಕನ್ನಡ ಪಠ್ಯ ಪುಸ್ತಕ ಸಮಿತಿಯಲ್ಲಿ ಇರಲಿಕ್ಕೆ ಕೂಡ ಅರ್ಹರಲ್ಲ.

ಇದನ್ನೂ ಓದಿ: ಸ್ವಾಮಿ ವಿವೇಕಾನಂದರ ಚಿಂತನೆಗಳ ತಿರುಚುವಿಕೆ: ಪ್ರಗತಿಪರ ವಿಚಾರ ಕೈಬಿಟ್ಟು, ಶಾಸ್ತ್ರ, ವೇದಾಂತ ಹೇರಿದ ನೂತನ ಪಠ್ಯ ಸಮಿತಿ

ಬ್ರಾಹ್ಮಣರು ಕೈಬಿಟ್ಟಿರುವ ಪಠ್ಯಗಳಲ್ಲಿ ಲಿಂಗಾಯತರು, ಮುಸ್ಲಿಮರು, ದಲಿತರು, ಲಂಬಾಣಿ ಜಾತಿಗೆ ಸೇರಿದ ಲೇಖಕರಿದ್ದರೆ, ಇವರು ಸೇರಿಸಿರುವ ಪಠ್ಯಗಳಲ್ಲಿ ಎಲ್ಲರೂ ಬ್ರಾಹ್ಮಣರೇ ರಚಿಸಿರುವ ಮತ್ತು ಯಥಾಸ್ಥಿತಿವಾದವನ್ನು ಪೋಷಿಸುವ, ಸಾಮರಸ್ಯವನ್ನು ಹಾಳುಗೆಡಹುವ, ಮೂಢನಂಬಿಕೆಯನ್ನು ಬಿತ್ತುವ ಲೇಖನಗಳಿವೆ. ಇವನ್ನು ಕನ್ನಡ ಶಾಲೆಯ ಬಡ, ಶೂದ್ರ, ದಲಿತ, ಶೋಷಿತ ಸಮುದಾಯಗಳು ಏಕೆ ಓದಬೇಕು? ಇನ್ನಾದರೂ ಇಂತಹ ವಿಷಯಗಳನ್ನು ಕನ್ನಡಿಗರು ಗಂಭೀರವಾಗಿ ಪರಿಗಣಿಸಬೇಕು. ವಿಶೇಷವಾಗಿ ಲಿಂಗಾಯತ, ದಲಿತ, ಮುಸ್ಲಿಂ, ಲಂಬಾಣಿ ಜಾತಿಯವರು ಭವಿಷ್ಯದಲ್ಲಿ ತಮ್ಮ ನಿಲುವನ್ನು ಖಚಿತಪಡಿಸಿಕೊಳ್ಳಬೇಕು.

  • ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬ್ರಾಹ್ಮಣರು, ದಲಿತರು ಅಂಥ ಸಮಾಜವನ್ನು ಒಡೆಯಲು ಯತ್ನಿಸುತ್ತಿರುವ ನೀವು ಜಾತ್ಯಾತೀತರೆ?

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...