ಆನ್‌ಲೈನ್ ವಿಶ್ವಕೋಶ ವಿಕಿಪೀಡಿಯಾ ವಿರುದ್ಧ ಸುದ್ದಿ ಸಂಸ್ಥೆ ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ (ANI) ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿವಾದಿತ ಪೇಜ್ ಅನ್ನು ತೆಗೆದುಹಾಕುವಂತೆ ನಿರ್ದೇಶಿಸಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ವಿಕಿಪೀಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿತ್ತು. ವಿಕಿಪೀಡಿಯಾ ಪೇಜ್
ವಿಕಿಪೀಡಿಯಾವನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ವಿರುದ್ಧ ಜುಲೈ 2024 ರಲ್ಲಿ ANI ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿವರಗಳನ್ನು ಪುಟದಲ್ಲಿ ಉಲ್ಲೇಖಿಸಲಾಗಿತ್ತು. ಮಾನನಷ್ಟ ಪ್ರಕರಣಗಳ ವಿಚಾರಣೆಯ ಸಮಯದಲ್ಲಿ ದೆಹಲಿ ಹೈಕೋರ್ಟ್ ಮಾಡಿದ ಅವಲೋಕನಗಳ ಬಗ್ಗೆಯೂ ಅದು ವಿವರಗಳನ್ನು ಪಟ್ಟಿ ಮಾಡಿತ್ತು.
ಹೈಕೋರ್ಟ್ ನಿರ್ದೇಶನಗಳನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ನ್ಯಾಯಾಲಯ ನಿಂದನೆಯಿದ್ದರೆ ಮಾತ್ರ ಕೆಳ ನ್ಯಾಯಾಲಯವು ಅದನ್ನು ತೆಗೆದುಹಾಕುವಂತೆ ಆದೇಶಿಸಬಹುದಿತ್ತು ಎಂದು ಹೇಳಿದೆ. ಈ ಹಿಂದೆ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಎಎನ್‌ಐಗೆ ನೋಟಿಸ್ ನೀಡಿತ್ತು.
ಹೈಕೋರ್ಟ್ ಮಾಧ್ಯಮಗಳ ಟೀಕೆಗಳಿಗೆ ಪ್ರತಿಕ್ರಿಯಿಸುವಲ್ಲಿ “ಸೂಕ್ಷ್ಮವಾಗಿ” ವರ್ತಿಸುತ್ತಿದೆ ಎಂದು ನ್ಯಾಯಾಲಯ ಹೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. .
ಜುಲೈ 2024 ರಲ್ಲಿ, ANI ಸುದ್ದಿ ಸಂಸ್ಥೆಯು ವಿಕಿಪೀಡಿಯಾದ ತನ್ನ ANI ಪೇಜ್ “ದಾರಿತಪ್ಪಿಸುವ, ನಕಾರಾತ್ಮಕ ಮತ್ತು ಮಾನನಷ್ಟಕರ” ತಿದ್ದುಪಡಿಗಳನ್ನು ಅನುಮತಿಸುತ್ತಿದೆ. ಈ ತಿದ್ದುಪಡಿ ಮಾಡಲು ಅನುಮತಿ ನೀಡಿದ್ದಕ್ಕಾಗಿ ANI ಮಾನನಷ್ಟ ಮೊಕದ್ದಮೆ ಹೂಡಿತ್ತು. ವಿಕಿಪೀಡಿಯಾ ತನ್ನ ANI ಪೇಜ್‌ನಲ್ಲಿ ಈ ಸುದ್ದಿ ಸಂಸ್ಥೆಯನ್ನು ಕೇಂದ್ರ ಸರ್ಕಾರದ “ಪ್ರಚಾರ ಸಾಧನ” ಎಂದು ಉಲ್ಲೇಖಿಸಿತ್ತು.
ಮಾನನಷ್ಟ ಪ್ರಕರಣದ ನಂತರ, ವಿಕಿಪೀಡಿಯಾವು ದೆಹಲಿ ಹೈಕೋರ್ಟ್‌ನ ಕೋಪಕ್ಕೆ ಗುರಿಯಾದ ಮೊಕದ್ದಮೆಯ ಮೇಲೆಯೇ ಒಂದು ಪೇಜ್ ಅನ್ನು ರಚಿಸಿತ್ತು. ಈ ನಡೆಯನ್ನು ಅಪಾಯಕಾರಿ ಎಂದು ಬಣ್ಣಿಸಿದ್ದ ದೆಹಲಿ ಹೈಕೋರ್ಟ್, ಇದನ್ನು ಯಾರಾದರೂ ಇದ್ದಬಹುದು ಎಂದು ದೂರಿತ್ತು. ವಿಕಿಪೀಡಿಯಾ ಪೇಜ್


