ಆಂತರಿಕ ದತ್ತಾಂಶ ಹಂಚಿಕೊಂಡ ಆರೋಪ ಹೊತ್ತಿರುವ ಗೌತಮ್ ಅದಾನಿ ಅವರ ಸೋದರಳಿಯ ಪ್ರಣವ್ ಅದಾನಿ ವಿರುದ್ಧ ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಮೊಕದ್ದಮೆ ಹೂಡುತ್ತದೆಯೇ? ಎಂದು ಕಾಂಗ್ರೆಸ್ ಶನಿವಾರ (ಮೇ.3) ಪ್ರಶ್ನಿಸಿದೆ.
ಅದಾನಿಯವರ 24 ಸೆಕ್ಯುರಿಟೀಸ್ ಕಾನೂನುಗಳ ಉಲ್ಲಂಘನೆಯ ತನಿಖೆಯನ್ನು ಸೆಬಿ ಪೂರ್ಣಗೊಳಿಸಲು ಭಾರತದ ಜನರು ಇನ್ನೂ ಕಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
“ಅದಾನಿ ಸಮೂಹದ ಹಲವು ಕಂಪನಿಗಳಿಗೆ ನಿರ್ದೇಶಕರಾಗಿರುವ ಗೌತಮ್ ಅದಾನಿಯವರ ಸೋದರಳಿಯ ಇನ್ನು ಪ್ರಕಟಗೊಳ್ಳದ ಗೌಪ್ಯ ಹಣಕಾಸಿನ ಮಾಹಿತಿಯನ್ನು ತಮ್ಮ ಭಾವನೊಂದಿಗೆ ಹಂಚಿಕೊಳ್ಳುವ ಮೂಲಕ ಇನ್‌ಸೈಡರ್ ಟ್ರೇಡಿಂಗ್ (ಆಂತರಿಕ ವ್ಯವಹಾರ) ಮಾಡಿದ್ದಾರೆ. ಇದರ ಪರಿಣಾಮವಾಗಿ 90 ಲಕ್ಷ ರೂಪಾಯಿಗಳಷ್ಟು ‘ಅಕ್ರಮ ಲಾಭ ಪಡೆದಿದ್ದಾರೆ” ಎಂದು ಜೈರಾಮ್ ರಮೇಶ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.
मोदानी मामला खत्म होने का नाम ही नहीं ले रहा है।
हाल ही में गौतम अडानी के भतीजे, जो अडानी समूह की कई कंपनियों में निदेशक हैं, उन पर इनसाइडर ट्रेडिंग का आरोप लगा है। आरोप यह है कि उन्होंने अपने रिश्तेदार के साथ अप्रकाशित गोपनीय वित्तीय जानकारी साझा की, जिसके चलते 90 लाख रुपये का…
— Jairam Ramesh (@Jairam_Ramesh) May 3, 2025
“ಸೆಬಿ ಮತ್ತೊಮ್ಮೆ ಪ್ರಧಾನಿಯವರ ನೆಚ್ಚಿನ ವ್ಯವಹಾರ ಸಮೂಹವನ್ನು ಸುಮ್ಮನೆ ಬಿಟ್ಟು ಬಿಡುತ್ತಾ? ಇಲ್ಲ ಕಾನೂನಿನ ಮೂಲಕ ಪೂರ್ಣ ಪ್ರಮಾಣದಲ್ಲಿ ಪ್ರಕರಣವನ್ನು ವಿಚಾರಣೆಗೆ ಒಳಪಡಿಸುತ್ತಾ?” ಎಂದು ಪ್ರಣವ್ ಆದಾನಿ ಆಂತರಿಕ ಡೇಟಾವನ್ನು ಹಂಚಿಕೊಂಡಿದ್ದಾರೆ ಎಂಬ ವರದಿಗಳನ್ನು ಹಂಚಿಕೊಳ್ಳುವಾಗ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಅದಾನಿಯವರ 24 ಸೆಕ್ಯುರಿಟೀಸ್ ಕಾನೂನುಗಳ ಉಲ್ಲಂಘನೆಯ ತನಿಖೆಯನ್ನು ಸೆಬಿ ಪೂರ್ಣಗೊಳಿಸಲು ಭಾರತದ ಜನರು ಇನ್ನೂ ಕಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
“ಹಿಂಡೆನ್‌ಬರ್ಗ್ ವರದಿ ಅಕ್ರಮದ ಬಗ್ಗೆ ಬಹಿರಂಗಪಡಿಸಿದ ನಂತರ ಸೆಬಿಗೆ ತನಿಖೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ನಿರ್ದೇಶಿಸಿ 26 ತಿಂಗಳುಗಳಾಗಿವೆ” ಎಂದಿದ್ದಾರೆ.
2020 ಮತ್ತು 2024ರ ನಡುವೆ ಗೌತಮ್ ಅದಾನಿ ಮತ್ತು ಅವರ ಏಳು ಮಂದಿ ಆಪ್ತರು ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ 2,000 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂಬುದಕ್ಕೆ ಪುರಾವೆಗಳು ದೊರೆತ ನಂತರ, ಸೆಬಿಯ ಅಮೆರಿಕದ ಪ್ರತಿರೂಪವಾದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (ಎಸ್‌ಇಸಿ) ಹೆಚ್ಚು ಕಾರ್ಯಪ್ರವೃತ್ತವಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
2025ರ ಏಪ್ರಿಲ್ 25 ರ ಎಸ್‌ಇಸಿ ನೀಡಿದ ಅಪ್ಡೇಟ್ ಪ್ರಕಾರ, ಅದಾನಿ ವಿರುದ್ದ ಕಾನೂನು ಸಮನ್ಸ್ ಜಾರಿ ಮಾಡುವಲ್ಲಿ ಸಹಾಯ ಮಾಡುವಂತೆ ಎಸ್‌ಇಸಿ ಪದೇ ಪದೇ ವಿನಂತಿಸಿದರೂ, ಮೋದಿ ಸರ್ಕಾರ ನಿರಾಕರಿಸಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಶ್ರೀಲಂಕಾ ಕರಾವಳಿ ಕಾವಲು ಪಡೆ ಬಂಧಿಸಿದ್ದ ತಮಿಳುನಾಡಿನ 25 ಮೀನುಗಾರರ ಬಿಡುಗಡೆ


