2023 ರಲ್ಲಿ ಕೊಲೆಯಾಗಿದ್ದಾರೆ ಎಂದು ನಂಬಲಾದ ಮಧ್ಯಪ್ರದೇಶದ ಮಹಿಳೆಯೊಬ್ಬರು ಜೀವಂತವಾಗಿ ಹಿಂತಿರುಗಿ ಬಂದಿರುವ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಅದಾಗ್ಯೂ, ಅವರನ್ನು ಕೊಲೆ ಮಾಡಿದ್ದಾರೆ ಎಂದು ಶಿಕ್ಷೆಗೆ ಒಳಗಾದ ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ ಎಂದು TNIE ವರದಿ ಮಾಡಿದೆ. 2023 ರಲ್ಲಿ ‘ಕೊಲೆಯಾದ’
ಮಹಿಳೆಯು ಜೀವಂತವಾಗಿ ಮರಳಿದ್ದು ಅವರ ಕುಟುಂಬ ಮತ್ತು ಸ್ನೇಹಿತರಲ್ಲಿ ಆಘಾತ ಮತ್ತು ಆಶ್ಚರ್ಯವನ್ನುಂಟುಮಾಡಿದೆ. 35 ವರ್ಷದ ಲಲಿತಾ ಬಾಯಿ ಮಂದ್ಸೌರ್ ಜಿಲ್ಲೆಯ ಮನೆಗೆ ಹಿಂದಿರುಗಿದ ತಕ್ಷಣ, ಅವರ ತಂದೆ ಆಕೆಯನ್ನು ಗಾಂಧಿ ಸಾಗರ್ ಪೊಲೀಸ್ ಠಾಣೆಗೆ ಕರೆದೊಯ್ದು ಈ ಬಗ್ಗೆ ತಿಳಿಸಿದ್ದಾರೆ.
ಅದೇ ವೇಳೆ, ಲಲಿತಾ ಬಾಯಿ ಅವರ “ಕೊಲೆ” ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾದ ನಾಲ್ವರು ವ್ಯಕ್ತಿಗಳು ಜೈಲಿನಲ್ಲಿ ತಮ್ಮ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಲಲಿತಾ ತನ್ನ ಗುರುತನ್ನು ದೃಢೀಕರಿಸಲು ತನ್ನ ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ಸೇರಿದಂತೆ ದಾಖಲೆಗಳನ್ನು ಹಾಜರುಪಡಿಸಿದ್ದಾರೆ. 2023 ರಲ್ಲಿ ‘ಕೊಲೆಯಾದ’
ಕುಟುಂಬವು ತನ್ನ ಮಗಳ ವಿರೂಪಗೊಂಡ ದೇಹದ ಅಂತ್ಯಕ್ರಿಯೆಯನ್ನು ಅವರ ಕೈಯಲ್ಲಿನ ಹಚ್ಚೆ ಮತ್ತು ಕಾಲಿಗೆ ಕಟ್ಟಲಾದ ಕಪ್ಪು ದಾರ ಸೇರಿದಂತೆ ದೈಹಿಕ ಗುರುತುಗಳ ಸಹಾಯದಿಂದ ನಡೆಸಿತ್ತು ಎಂದು ಲಲಿತಾ ಅವರ ತಂದೆಯನ್ನು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಥಾಂಡ್ಲಾ ಪೊಲೀಸರು ಮಹಿಳೆಯ ಮೃತದೇಹ ಸಿಕ್ಕ ಗಾಂಧಿ ಸಾಗರ್‌ನಿಂದ 30 ಕಿ.ಮೀ ದೂರದಲ್ಲಿರುವ ಭನ್‌ಪುರದ ಶಾರುಖ್, ಇಮ್ರಾನ್, ಸೋನು ಮತ್ತು ಎಜಾಜ್ ಎಂಬ ನಾಲ್ವರು ಶಂಕಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
“ಅವರು ಅಪರಾಧ ಮಾಡಿದ್ದಾರೆಂದು ಸಾಬೀತುಪಡಿಸಲು ನಮಗೆ ಸಾಕಷ್ಟು ಪುರಾವೆಗಳಿವೆ. ಆದ್ದರಿಂದ ಆರೋಪಪಟ್ಟಿ ಸಲ್ಲಿಸಲಾಗಿದೆ. ವಿಷಯವು ಈಗ ನ್ಯಾಯಾಲಯದಲ್ಲಿದೆ ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ತನ್ನ ಬಗ್ಗೆ ಮಾಹಿತಿ ನೀಡಿರುವ ಲಲಿತಾ, ಶಾರುಖ್ ಜೊತೆ ತಾನು ಸ್ವಇಚ್ಛೆಯಿಂದ ಭಾನ್‌ಪುರಕ್ಕೆ ಹೋಗಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಕೇವಲ ಎರಡು ದಿನಗಳ ನಂತರ, ಅವನು ತನ್ನನ್ನು ಶಾರುಖ್ ಎಂಬ ಇನ್ನೊಬ್ಬ ವ್ಯಕ್ತಿಗೆ 5 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಮಹಿಳೆ ಕೋಟಾದಲ್ಲಿ ಎರಡನೇ ಶಾರುಖ್ ಜೊತೆ 18 ತಿಂಗಳು ವಾಸಿಸುತ್ತಿದ್ದಳು. ಯಾವಾಗಲೂ ತಪ್ಪಿಸಿಕೊಳ್ಳಲು ಅವಕಾಶವನ್ನು ಹುಡುಕುತ್ತಿದ್ದ ಅವರು ತಪ್ಪಿಸಿಕೊಳ್ಳಲು ಅವಕಾಶ ಸಿಕ್ಕಾಗ ಮನೆಗೆ ಮರಳಿದ್ದಾರೆ.
ಮಹಿಳೆಯ ‘ಕೊಲೆ’ ಪ್ರಕರಣದಲ್ಲಿ ಜೈಲಿನಲ್ಲಿರುವ ನಾಲ್ವರ ಬಗ್ಗೆ ಮಾತನಾಡಿರುವ ಪೊಲೀಸರು, “ನಾವು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ಜೊತೆಗೆ ಲಲಿತಾ ಅವರ ಕುಟುಂಬವು ಯಾರ ಶವವನ್ನು ಅಂತ್ಯಕ್ರಿಯೆ ಮಾಡಿದೆ ಎಂಬ ವಿಚಾರವನ್ನು ಇದೀಗ ತನಿಖೆ ಮಾಡುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹಿಂಸಾಚಾರ ಪೀಡಿತ ಮಣಿಪುರ ತಲುಪಿದ ಐವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿಯೋಗ
ಹಿಂಸಾಚಾರ ಪೀಡಿತ ಮಣಿಪುರ ತಲುಪಿದ ಐವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿಯೋಗ

