ಜೂನ್ 24 ರಿಂದ ಕಾಣೆಯಾಗಿದ್ದ 35 ವರ್ಷದ ಮಹಿಳೆಯು ಪಾಣಿಪತ್ ರೈಲು ನಿಲ್ದಾಣದಲ್ಲಿ ಅಸ್ವಸ್ಥರಾಗಿ ಪತ್ತೆಯಾಗಿದ್ದಾರೆ. ರೈಲಿನ ಖಾಲಿ ಕೋಚ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಆಕೆಯನ್ನು ಹಳಿಗಳ ಮೇಲೆ ಎಸೆದ ಪರಿಣಾಮ ರೈಲು ಹರಿದು ಕಾಲು ಕಳೆದುಕೊಂಡ ಘಟನೆ ವರದಿಯಾಗಿದೆ.
ಜೂನ್ 26 ರಂದು ಆಕೆಯ ಪತಿಯಿಂದ ಪತ್ನಿ ನಾಪತ್ತೆಯ ಬಗ್ಗೆ ಪೊಲೀಸರಿಗೆ ದೂರು ಬಂದಿದ್ದು, ಜೂನ್ 24 ರಂದು ನಡೆದ ವಿವಾದದ ನಂತರ ಆಕೆ ಕಾಣೆಯಾಗಿದ್ದಾಳೆ ಎಂದು ಹೇಳಿದ್ದಾರೆ. ಈ ಆಕೆ ಮೊದಲು ಕಾಣೆಯಾಗಿದ್ದಾಗ, ಸಾಮಾನ್ಯವಾಗಿ ತಾನಾಗಿಯೇ ಮನೆಗೆ ಹಿಂತಿರುಗುತ್ತಿದ್ದಳು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿದ್ದ ನನ್ನನ್ನು ಸಂಪರ್ಕಿಸಿದ ವ್ಯಕ್ತಿಯು, ಪತಿ ಕಳುಹಿಸಿದ್ದಾನೆಂದು ಹೇಳಿ ಕರೆದೊಯ್ದರು ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
“ಮಹಿಳೆಯನ್ನು ಕರೆದುಕೊಂಡು ಹೋಗಿ ನಿಂತಿದ್ದ ರೈಲಿನ ಖಾಲಿ ಬೋಗಿಯನ್ನು ಹತ್ತಿಸಿದರು, ಅಲ್ಲಿ ಅವನು ಆಕೆಯ ಮೇಲೆ ಅತ್ಯಾಚಾರ ಮಾಡಿದನು ಎಂದು ಆಕೆ ಹೇಳಿದ್ದಾಳೆ. ನಂತರ, ಇತರ ಇಬ್ಬರು ಪುರುಷರು ಅವನೊಂದಿಗೆ ಸೇರಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನಂತರ, ಆಕೆಯನ್ನು ಸೋನಿಪತ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಆರೋಪಿಗಳು ಆಕೆಯನ್ನು ಹಳಿಗಳ ಮೇಲೆ ಎಸೆದರು, ರೈಲು ಆಕೆಯ ಮೇಲೆ ಹಾದು ಹೋಗಿದ್ದ ತೀವ್ರ ಗಾಯವಾಗಿದೆ.
ಸೋನಿಪತ್ ರೈಲ್ವೆ ಹಳಿಗಳ ಬಳಿಯ ಅಂಗಡಿಯವರು ನೀಡಿದ ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಮಹಿಳೆಯೊಬ್ಬರು ಅಳುವುದನ್ನು ಕೇಳಿ ಅವರು ಸಹಾಯ ಮಾಡಲು ಧಾವಿಸಿದರು. ಆಕೆಯ ಸುತ್ತಲೂ ಜನಸಮೂಹ ಜಮಾಯಿಸಿತ್ತು, ರೈಲ್ವೆ ಹಳಿಯ ಸ್ವಿಚ್‌ಗೆ ಸಿಲುಕಿದ ನಂತರ ಆಕೆಯ ಕಾಲು ತುಂಡಾಗಿರುವುದನ್ನು ಪ್ರತ್ಯಕ್ಷದರ್ಶಿಗಳು ಗಮನಿಸಿದರು. ಘಟನೆಯ ಬಗ್ಗೆ ಪಕ್ಕದಲ್ಲಿದ್ದವರು ರೈಲ್ವೆ ಪೊಲೀಸರಿಗೆ ವರದಿ ಮಾಡಿದರು, ಇದರಿಂದಾಗಿ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೋನಿಪತ್ ಜನರಲ್ ಆಸ್ಪತ್ರೆಯಿಂದ ರೋಹ್ಟಕ್ ಪಿಜಿಐಗೆ ಕರೆದೊಯ್ಯಲಾಯಿತು.
“ಸಾಮೂಹಿಕ ಅತ್ಯಾಚಾರಕ್ಕಾಗಿ ನಾವು ಶೂನ್ಯ ಎಫ್‌ಐಆರ್ ದಾಖಲಿಸಿದ್ದೇವೆ, ಮುಂದಿನ ಕ್ರಮಕ್ಕಾಗಿ ಪಾಣಿಪತ್ ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ಕಳುಹಿಸಿದ್ದೇವೆ” ಎಂದು ಅಧಿಕಾರಿ ಹೇಳಿದರು. ಘಟನೆಯ ವ್ಯಾಪ್ತಿಯನ್ನು ಲೆಕ್ಕಿಸದೆ ಯಾವುದೇ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‌ಐಆರ್ ದಾಖಲಿಸಬಹುದು, ಸೂಕ್ತ ಪೊಲೀಸ್ ಠಾಣೆಗೆ ಕ್ರಮಕ್ಕಾಗಿ ವರ್ಗಾಯಿಸಬಹುದು.
ಬಿಹಾರದ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.35 ಮೀಸಲಾತಿ; ನಿತೀಶ್ ಕುಮಾರ್ ಘೋಷಣೆ


