ರಾಸ್ ಹಬ್ಬದ ದಿನ ದುರ್ಗಾ ದೇವಾಲಯದ ಆವರಣದಲ್ಲಿ ಯುವತಿಯೊಬ್ಬರ ಮೇಲೆ ಒಂಬತ್ತು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಕೃತ್ಯದ ಮಾಸ್ಟರ್‌ಮೈಂಡ್‌ಗಳೆಂದು ನಂಬಲಾದ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಸ್ಸಾಂ
ಬಂಧಿತ ವ್ಯಕ್ತಿಗಳನ್ನು ಕುಲದೀಪ್ ನಾಥ್, ಪಿಂಕು ದಾಸ್, ಮೃಣಾಲ್ ರಭಾ, ಗಗನ್ ದಾಸ್, ಬಿಜೋಯ್ ರಭಾ, ಸೌರವ್ ಬೋರೋ ಮತ್ತು ದೀಪಂಕರ್ ಮುಖಿಯಾ ಎಂದು ಗುರುತಿಸಲಾಗಿದೆ. ಈ ಆರೋಪಿಗಳು 18 ವರ್ಷದಿಂದ 23 ವರ್ಷ ವಯಸ್ಸಿನವರು ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಮಾಸ್ಟರ್‌ಮೈಂಡ್‌ಗಳೆಂದು ನಂಬಲಾದ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಗುರುವಾರ ಮಧ್ಯರಾತ್ರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರಿಗೆ ಘಟನೆಯ ಬಗ್ಗೆ ತಿಳಿದು ಬಂದಿತ್ತು. ನಗರದ ಹೊರವಲಯದ ಬೋರಗಾಂವ್‌ನ ನಿಜಾರಪರ್ ಪ್ರದೇಶದ ದುರ್ಗಾ ದೇವಸ್ಥಾನದ ಆವರಣದಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ವರದಿಯಾಗಿದೆ.
“ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗುತ್ತಿರುವ ವಿಡಿಯೋವನ್ನು ಬೋರಗಾಂವ್ ನಿವಾಸಿಗಳ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ಎಂದು ನಮಗೆ ತಿಳಿಯಿತು. ಶೀಘ್ರದಲ್ಲೇ, ನಾವು ಅದನ್ನು ಪಡೆದು ತನಿಖೆ ನಡೆಸಿದೆವು. ಎಂಟರಿಂದ ಒಂಬತ್ತು ದುಷ್ಕರ್ಮಿಗಳು ಬೆತ್ತಲೆಯಾಗಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ದುಷ್ಕರ್ಮಿಗಳು ಅವರ ಮೇಲೆ ಹಿಂಸಾತ್ಮಕವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಕ್ಷಣವೇ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ವಿಡಿಯೋದಲ್ಲಿ ಮುಖಗಳು ಸ್ಪಷ್ಟವಾಗಿ ಗೋಚರಿಸುವ ಇಬ್ಬರು ಆರೋಪಿಗಳನ್ನು ಗುರುತಿಸಬಹುದು ಎಂದು ಅವರು ಹೇಳಿದ್ದಾರೆ. “ನಂತರದ ದಾಳಿಗಳಲ್ಲಿ, ನಾವು ನಗರದ ಮೂರು ವಿಭಿನ್ನ ಪ್ರದೇಶಗಳಿಂದ ಏಳು ಜನರನ್ನು ಬಂಧಿಸಿದ್ದೇವೆ. ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದ್ದೇವೆ,” ಎಂದು ಹೇಳಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ನವೆಂಬರ್ 17 ರಂದು ಈ ಘಟನೆ ನಡೆದಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಅಸ್ಸಾಂ
“ಆರೋಪಿಗಳು ರಾಸ್ ಹಬ್ಬವನ್ನು ನೋಡಲು ಹೋಗಿದ್ದರು. ಹೀಗಿರುವಾಗ ಕೆಲವರು ಬೆಟ್ಟದ ಮೇಲಿರುವ ದುರ್ಗಾ ದೇವಸ್ಥಾನಕ್ಕೆ ಮದ್ಯ ಸೇವಿಸಲು ಹೋದರೆ ಇನ್ನು ಕೆಲವರು ಮಾದಕ ವಸ್ತು ಸೇವಿಸಲು ತೆರಳಿದ್ದರು. ಆರೋಪಿಯೊಬ್ಬ ಯುವತಿಯನ್ನು ಸ್ಥಳಕ್ಕೆ ಕರೆದೊಯ್ದಿದ್ದ. ಅವರೆಲ್ಲರೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಕೃತ್ಯವನ್ನು ಸಹ ಚಿತ್ರೀಕರಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ನಾವು ಸಂತ್ರಸ್ತೆಯ ಗುರುತನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅವರ ಹೇಳಿಕೆಯನ್ನು ಆಧರಿಸಿ ನಾವು ಪ್ರಕರಣವನ್ನು ದಾಖಲಿಸುತ್ತೇವೆ ಅಥವಾ ನಾವೆ ಅದನ್ನು ಸ್ವಯಂಪ್ರೇರಿತವಾಗಿ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಟ ಅಲ್ಲು ಅರ್ಜುನ್ ಬಂಧನ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಆರ್‌ಎಸ್ ನಾಯಕ ಕೆಟಿಆರ್


