Homeಮುಖಪುಟಲಾಕ್‌ಡೌನ್‌ನಲ್ಲಿ ಮಹಿಳೆಯರು: ಕಡೆಗಣಿಸಲ್ಪಟ್ಟ ಈ ಮೌನ ಬಿಕ್ಕಟ್ಟಿಗೆ ಅಗತ್ಯವಿದೆ ಗಟ್ಟಿ ಧ್ವನಿಯ ಪ್ರತಿಕ್ರಿಯೆ

ಲಾಕ್‌ಡೌನ್‌ನಲ್ಲಿ ಮಹಿಳೆಯರು: ಕಡೆಗಣಿಸಲ್ಪಟ್ಟ ಈ ಮೌನ ಬಿಕ್ಕಟ್ಟಿಗೆ ಅಗತ್ಯವಿದೆ ಗಟ್ಟಿ ಧ್ವನಿಯ ಪ್ರತಿಕ್ರಿಯೆ

- Advertisement -
- Advertisement -

ಕೊರೊನಾ ವೈರಸ್ ಹರಡುವುದನ್ನು ನಿಲ್ಲಿಸುವುದಕ್ಕಾಗಿ ಜಾರಿ ಮಾಡಿದ ಹಿಂದೆಂದೂ ಕಾಣದ ಲಾಕ್‌ಡೌನ್ ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಿದೆ. ಒಂದು ವರ್ಷ – ಲಾಕ್‌ಡೌನ್ ಹೇರಿದ ನಂತರ, ಈ ಬಿಕ್ಕಟ್ಟಿನ ಹಲವು ಆಯಾಮಗಳು ಇನ್ನೂ ತೆರೆದುಕೊಳ್ಳುತ್ತಿವೆ. ರಾಷ್ಟ್ರೀಯ ಮಟ್ಟದಲ್ಲಿ, ಜಿಡಿಪಿ ಕುಸಿತಗೊಂಡಿದೆ. ಇದಕ್ಕೆ ಜೊತೆಗೆ, ವ್ಯಾಪಕವಾದ ಉದ್ಯೋಗ ನಷ್ಟ ಮತ್ತು ಕಾರ್ಮಿಕರು ಆರ್ಥಿಕ ಭಾಗವಹಿಸುವಿಕೆಯ ಇಳಿಕೆ ಕಂಡಿದೆ. ತಲಾ ಆದಾಯದಲ್ಲಿ ಗಮನಾರ್ಹ ಕುಸಿತ ನಿರೀಕ್ಷಿಸಲಾಗಿದೆ. ಸಾಮಾಜಿಕ ಮಟ್ಟದಲ್ಲಿ, ಕಡಿಮೆ ಖರ್ಚು ಮತ್ತು ಕಡಿಮೆ ಚಲನಶೀಲತೆಯಿಂದಾಗಿ ಆರ್ಥಿಕತೆಯ ಬಗ್ಗೆ ಜನರ ವಿಶ್ವಾಸ ಕಡಿಮೆಯಾಗಿದೆ.

ತಕ್ಷಣದ ಭವಿಷ್ಯದ ಬಗ್ಗೆ ಅನಿಶ್ಚಿತತೆಯು ಕುಟುಂಬಗಳಲ್ಲಿ ಆತಂಕವನ್ನು ಹುಟ್ಟುಹಾಕಿದೆ ಮತ್ತು ಆರೋಗ್ಯ ವೆಚ್ಚಗಳ ವ್ಯಾಪ್ತಿ ಸೇರಿದಂತೆ ಇತರೆಲ್ಲ ಸಾಮಾಜಿಕ ಭದ್ರತೆಯ ಸಾಧಾರಣ ವೆಚ್ಚಕ್ಕೆ ಧಕ್ಕೆ ತಂದಿರುವುದು ಇದನ್ನು ಉಲ್ಬಣಗೊಳಿಸಿದೆ. ಅಂತೆಯೇ, ಭಾರತೀಯ ಸಮಾಜವು ಆರ್ಥಿಕ ಅಸಮಾನತೆ ಮತ್ತು ಹೆಚ್ಚು ತೀವ್ರವಾದ ಸಾಮಾಜಿಕ ಅಸಮಾನತೆಯಿಂದ ಬಳಲುತ್ತಿದೆ. ಹೀಗಾಗಿ ಬಿಕ್ಕಟ್ಟಿನ ಸಮಯದಲ್ಲಿ, ಕೆಳಮಟ್ಟದ ಸಾಮಾಜಿಕ-ಆರ್ಥಿಕ ಗುಂಪುಗಳು ಹೆಚ್ಚು ಬಳಲುತ್ತವೆ; ಉನ್ನತ ವರ್ಗದ ಜನರು ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳುತ್ತಾರೆ ಮತ್ತು ಒತ್ತಡವನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಸಮಸ್ಯೆ ಹೀಗಿದ್ದು, ಇನ್ನೂ ದೊಡ್ಡ ಮಾನವೀಯ ಬಿಕ್ಕಟ್ಟು ಎಂದರೆ ಲಿಂಗಗಳ ನಡುವಿನ ಅಡ್ಡ ಅಸಮಾನತೆಯಿಂದ ಪ್ರೇರಿತವಾಗಿರುವುದು ಮತ್ತು ಈ ಎಲ್ಲದರಲ್ಲೂ ಸಂಕಷ್ಟ ಅನುಭವಿಸುವವರಲ್ಲಿ ಮಹಿಳೆಯರೇ ಹೆಚ್ಚಿರುವುದು.

ಲಾಕ್‌ಡೌನ್ ಎಲ್ಲಾ ಸಾಮಾಜಿಕ-ಆರ್ಥಿಕ ಗುಂಪುಗಳ ಮಹಿಳೆಯರ ಮೇಲೆ ತೀವ್ರವಾದ ಅಸ್ತಿತ್ವವಾದದ ಬಿಕ್ಕಟ್ಟನ್ನು ಉಂಟು ಮಾಡಿದೆ. 2020ರ ಜನವರಿಯಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯು 9.9% ಇದ್ದು ಇದನ್ನು ಲಾಕ್‌ಡೌನ್ ನಂತರದ ಸಮಯಕ್ಕೆ ಹೋಲಿಸಿದರೆ 6.9%ಕ್ಕೆ ಕುಸಿದಿದೆ. ಮುಂದುವರೆದು, ಸೆಪ್ಟೆಂಬರ್ 2020ರ ನಂತರ, ಪುರುಷರಿಗಿಂತ ಭಿನ್ನವಾಗಿ, ತುಸು ಆರ್ಥಿಕ ಚೇತರಿಕೆ, ಉದ್ಯೋಗದ ವಿಷಯದಲ್ಲಿ ಮಹಿಳೆಯರಿಗೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಲಾಕ್‌ಡೌನ್ ಮಹಿಳೆಯರ ಗಳಿಕೆಯಿಂದ ಲಭಿಸುವ ಸಣ್ಣ ಸ್ವಾತಂತ್ರ್ಯ ಮತ್ತು ಸಂಧಾನ ಶಕ್ತಿಯನ್ನು ಕಸಿದುಕೊಳ್ಳುವುದರಿಂದ ಅವರ ಅಧೀನತೆಯನ್ನು ಹೆಚ್ಚಿಸಿರುವ ಸಾಧ್ಯತೆ ಇದೆ.

PC : YourStory

ಲಾಕ್‌ಡೌನ್ ಮತ್ತು ನಂತರದ ಚಲನಶೀಲತೆಯ ಇಳಿಕೆಯಿಂದಾಗಿ ಜನ ಹೆಚ್ಚಿನ ಸಮಯ ಕೌಟುಂಬಿಕ ವಾಸಸ್ಥಾನಗಳಲ್ಲಿ ವಾಸಿಸುವಂತೆ ಮಾಡಿದೆ. ಹೀಗಾಗಿ, ಮನೆಕೆಲಸಗಳ ಬೇಡಿಕೆ ಹೆಚ್ಚಾಗಿದೆ, ಇದರ ಪರಿಣಾಮವಾಗಿ ಮಹಿಳೆಯರ ಮೇಲೆ ಹೆಚ್ಚಿನ ದೈಹಿಕ ಕೆಲಸದ ಹೊರೆ ಬೀಳುತ್ತದೆ. ರಾಷ್ಟ್ರವ್ಯಾಪಿ ಸಂಶೋಧನೆ (ಪ್ರಿಯಾನ್ಶಿ ಚೌಹಾನ್, ಲಿಂಗ ಸಮಸ್ಯೆಗಳು, 2020) ವರದಿ ಮಾಡಿದ ಪ್ರಕಾರ, ನಿರುದ್ಯೋಗಿ ಮತ್ತು ಉದ್ಯೋಗದಲ್ಲಿರುವ ಮಹಿಳೆಯರು ಕ್ರಮವಾಗಿ 30.5%, 14.5% ಹೆಚ್ಚಿನ ಸಮಯವನ್ನು ಮನೆಗೆಲಸಗಳಿಗಾಗಿ ಮೀಸಲಿಡುತ್ತಿದ್ದಾರೆ, ಆಗಾಗ್ಗೆ ವಾರಕ್ಕೆ 70 ಗಂಟೆಗಳ ಕೆಲಸವನ್ನು ಮೀರುತ್ತಾರೆ. ಆಸಕ್ತಿದಾಯಕ ಎಂದರೆ, ವಿವಾಹಿತ ಮಹಿಳೆಯರ ಮೇಲೆ ಈ ಭಾರ ಅನುಪಾತದ ಎಲ್ಲೆ ಮೀರಿ ಬಿದ್ದಿದೆ ಎಂದು ಈ ಅಧ್ಯಯನ ಸೂಚಿಸುತ್ತದೆ.

ಈ ಸಂಗತಿಯು ವಿವಾಹದ ಪಿತೃಪ್ರಭುತ್ವದ ಸಂಸ್ಥೆಯಿಂದ ವ್ಯಾಖ್ಯಾನಿಸಲ್ಪಟ್ಟ ಅಸಮಾನ ಮತ್ತು ಅನ್ಯಾಯದ ಲಿಂಗ ಪಾತ್ರಗಳನ್ನು ಒತ್ತಿಹೇಳುತ್ತದೆ – ಇದೆಲ್ಲವೂ ಮಹಿಳೆಯರ ಮೇಲೆ ಮಾತ್ರ ಒತ್ತಡ, ಸಂಕಟವನ್ನು ಉಂಟುಮಾಡುತ್ತದೆ. ಗುಜರಾತ್, ದೆಹಲಿ, ಉತ್ತರ ಪ್ರದೇಶ ಇತ್ಯಾದಿ ರಾಜ್ಯಗಳ ಹಲವಾರು ಗುಣಾತ್ಮಕ ಮೌಲ್ಯಮಾಪನ ವರದಿಗಳಲ್ಲಿ, ಮಹಿಳೆಯರಿಗೆ ಕೆಲಸ ಮತ್ತು ಜವಾಬ್ದಾರಿಗಳು ಹೆಚ್ಚಿರುವುದರಿಂದ ಮಾನಸಿಕ ಯಾತನೆ, ಹತಾಶ ಭಾವನೆ, ದೈಹಿಕ ನಿಶಕ್ತಿ ಉಂಟಾಗಿದ್ದನ್ನು ವ್ಯಕ್ತ ಪಡಿಸಿದ್ದಾರೆ. ಮುಖ್ಯವಾಗಿ, ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ಮಹಿಳೆಯರು, ಸಾಮಾನ್ಯವಾಗಿ ಸಹವರ್ತಿಗಳು, ಪುರುಷರು ಮತ್ತು ಸಮುದಾಯದಿಂದ ಬೆಂಬಲದ ಕೊರತೆಯನ್ನು ವ್ಯಕ್ತಪಡಿಸಿದ್ದಾರೆ. ನಿಸ್ಸಂದೇಹವಾಗಿ, ಈ ಕೆಲಸದ ಹೆಚ್ಚಳ, ಈಗಾಗಲೇ ಒತ್ತಡದಲ್ಲಿರುವ ಮಹಿಳೆಯರ ಮೇಲೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಪರಿಣಾಮಗಳನ್ನು ಉಂಟು ಮಾಡುತ್ತದೆ, ಅದು ಗಮನಕ್ಕೆ ಬಾರದ ಸಾಧ್ಯತೆ ಹೆಚ್ಚಿದೆ.

ಕೌಟುಂಬಿಕ ವಾಸಸ್ಥಾನದ ಜಾಗಗಳಲ್ಲಿ ಜನರನ್ನು ಈ ಸಾಂಕ್ರಾಮಿಕ ಗುಂಪುಗೂಡಿಸುತ್ತಿರುವುದರಿಂದ, ಕೌಟುಂಬಿಕ ಮತ್ತು ಸಂಗಾತಿಯ ಹಿಂಸಾಚಾರಕ್ಕೆ ಮಹಿಳೆ ಒಳಗಾಗಿದ್ದಾಳೆ. ಅಂತೆಯೇ, ಒಟ್ಟು ವಿವಾಹಿತ ಮೂವರಲ್ಲಿ ಒಬ್ಬರು ನಿರಂತರ ಕೌಟುಂಬಿಕ ಹಿಂಸಾಚಾರವನ್ನು (ಲೈಂಗಿಕ ಮತ್ತು ದೈಹಿಕ) ಎದುರಿಸುತ್ತಾರೆ ಮತ್ತು 100ರಲ್ಲಿ ಒಬ್ಬರಿಗಿಂತ ಕಡಿಮೆ ಮಹಿಳೆತರಷ್ಟೇ ಬಾಹ್ಯ ಸಹಾಯವನ್ನು ಪಡೆಯಲು ಸಮರ್ಥರಾಗಿದ್ದಾರೆ. ಲಾಕ್‌ಡೌನ್ ಮಹಿಳೆಯರನ್ನು ಕೌಟುಂಬಿಕ ಸ್ಥಳಗಳಲ್ಲಿ (ಅವರ ಸಹಜ ವಾಸಸ್ಥಳದಲ್ಲಿ) ಹಿಂಸಾಚಾರಿಗಳೊಂದಿಗೆ (ಪತಿ, ಅತ್ತೆ-ಮಾವ ಮತ್ತು ವಿಸ್ತೃತ ಕುಟುಂಬ) ದೊಡ್ಡ ಅವಧಿಗೆ ಲಾಕ್ ಮಾಡಿತು. ಹಿಂದಿನ ಸಂಶೋಧನೆಗಳ ಪ್ರಕಾರ, ಆರ್ಥಿಕ ಅನಿಶ್ಚಿತತೆ ಮತ್ತು ಮಾನಸಿಕ ಯಾತನೆ ಪುರುಷರ ದರ್ಪವನ್ನು ಹೆಚ್ಚಿಸುತ್ತದೆ, ಇದು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹೆಚ್ಚಿಸುತ್ತದೆ.

ನಿರೀಕ್ಷೆಯಂತೆಯೇ, 2019ರ ಇದೇ ಅವಧಿಗೆ ಹೋಲಿಸಿದರೆ ಮಹಿಳೆಯರಿಗಾಗಿ ಇರುವ ರಾಷ್ಟ್ರೀಯ ಆಯೋಗವು ಲಾಕ್‌ಡೌನ್ ಸಮಯದಲ್ಲಿ ಕೌಟುಂಬಿಕ ಹಿಂಸಾಚಾರದ 2.5 ಪಟ್ಟು ಹೆಚ್ಚು ದೂರುಗಳನ್ನು ದಾಖಲಿಸಿದೆ. ಲಾಕ್‌ಡೌನ್ ಮಾಡಿದ ಮೊದಲ ಹತ್ತು ದಿನಗಳಲ್ಲಿ, ರಾಷ್ಟ್ರೀಯ ಮಕ್ಕಳ ಸಹಾಯವಾಣಿಗೆ 90,000ಕ್ಕೂ ಹೆಚ್ಚು ಎಸ್‌ಒಎಸ್ ಕರೆಗಳು ಬಂದವು. ದೆಹಲಿಯಲ್ಲಿ ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದ ವಿಶೇಷ ಕ್ಲಿನಿಕ್‌ಗಳನ್ನು ನಡೆಸುವ ಡಾಕ್ಟರ್ಸ್ ವಿಥ್‌ಔಟ್ ಬಾರ್ಡರ್ಸ್ ಸಂಸ್ಥೆ ಲಾಕ್‌ಡೌನ್ ನಂತರ, ವೈದ್ಯಕೀಯ ಆರೈಕೆ ಬಯಸುವ ಸಂತ್ರಸ್ತರ ಪ್ರಮಾಣ ದುಪ್ಪಟ್ಟಾಗಿರುವುದನ್ನು ಕಂಡಿತು. ಮಹಿಳೆಯ ಧ್ವನಿಯ ’ಲೋಕಲ್ ಡೈರಿಸ್’ ಎಂಬ ದಾಖಲೆ ವ್ಯವಸ್ಥೆ ಲಾಕ್‌ಡೌನ್ ಸಂದರ್ಭದಲ್ಲಿನ ಭಾರತದಾದ್ಯಂತದ ಮಹಿಳೆಯರ ಕಥೆಗಳನ್ನು ನಿರೂಪಿಸಿದೆ. ಅವರು ಸಾಮಾನ್ಯವಾಗಿ ಗಂಡಂದಿರಿಂದ ದಿನವಿಡೀ ದೈಹಿಕ ಹಲ್ಲೆ ಎದುರಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುವುದು ಬಿಕ್ಕಟ್ಟಿನ ಕಥೆಯ ಒಂದು ಭಾಗ ಮಾತ್ರ. ಲಾಕ್‌ಡೌನ್ ಮಹಿಳೆಯರಿಗೆ ಸಹಾಯವನ್ನು ಪಡೆಯುವುದನ್ನು ಅಥವಾ ಹಿಂಸಾಚಾರದ ವಿರುದ್ಧ ನಿಭಾಯಿಸುವ ಕ್ರಮಗಳನ್ನು ತೆಗೆದುಕೊಳ್ಳದಂತೆ ತೀವ್ರವಾಗಿ ನಿರ್ಬಂಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಚಲನವಲನದ ನಿರ್ಬಂಧಗಳು ಬಾಹ್ಯ ಸಹಾಯವನ್ನು ಪಡೆಯಲು ಅಥವಾ ಸಮಾಧಾನಕ್ಕಾಗಿ ಇತರ ಮಹಿಳೆಯರೊಂದಿಗೆ ಬೆರೆಯಲು ಒಂದು ತಡೆಯಾಗಿತ್ತು. ಇದಲ್ಲದೆ, ಕೌಟುಂಬಿಕ ಹಿಂಸಾಚಾರದ ವಿರುದ್ಧ ಪ್ರಾಥಮಿಕ ಪರಿಹಾರವನ್ನು ನೀಡುವ ಸರ್ಕಾರದ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಲೂ ತೊಂದರೆಯಾಗಿದೆ. ಈಗ ಅವರುಗಳನ್ನು ಕೋವಿಡ್ ಸಂಬಂಧಿ ಚಟುವಟಿಕೆಗಳಿಗೆ ತಿರುಗಿಸಲಾಗಿದೆ. ಆರ್ಥಿಕ ತೊಂದರೆ ಮತ್ತು ಚಲನೆಯ ನಿರ್ಬಂಧಗಳಿಂದಾಗಿ ತಳಮಟ್ಟದ ಎನ್‌ಜಿಒಗಳು ಅಥವಾ ಸಮುದಾಯ ಬೆಂಬಲ ಗುಂಪುಗಳನ್ನು ಕೊನೆಗೊಳಿಸಲಾಗಿದೆ ಅಥವಾ ನಿಷ್ಕ್ರಿಯಗೊಳಿಸಲಾಗಿದೆ. ಇದಲ್ಲದೆ, ಹಿಂಸಾಚಾರಿಗಳ ನಿರಂತರ ಉಪಸ್ಥಿತಿ ಮಹಿಳೆಯರಿಗೆ ಫೋನ್ ಮೂಲಕ ಸಹಾಯ ಅಥವಾ ಪರಿಹಾರವನ್ನು ಪಡೆಯುವುದನ್ನು ತಡೆಯುತ್ತದೆ. ಇದನ್ನು ಇನ್ನಷ್ಟು ಹದಗೆಡಿಸುವುದು, ಹೆಚ್ಚಿದ ಮನೆಕೆಲಸ, ಮಹಿಳೆಯರಿಗೆ ತಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಮಾತನಾಡಲು ಸಮಯವಿಲ್ಲದಂತೆ ಮಾಡಲಾಗಿರುವುದು.

PC : Financial Times

ತೀವ್ರವಾದ ಲಾಕ್‌ಡೌನ್ ಸರಾಗಗೊಳಿಸುವಿಕೆಯು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡಿದೆ ಮತ್ತು ಮನೆಯ ಕೆಲಸದ ಒತ್ತಡವನ್ನು ಕೂಡ ಕಡಿತಗೊಳಿಸಿದೆ.

ಆದರೂ, ಚಲನವಲನದ ನಿರ್ಬಂಧಗಳು ಹಾಗೇ ಉಳಿದಿವೆ ಮತ್ತು ಸಾಮಾಜಿಕವಾಗಿ ಬೆರೆಯಲು ಅವಕಾಶಗಳು ಕಡಿಮೆಯಾಗಿವೆ. ವಲಯ ನಿಯಂತ್ರಣ (ಕಂಟೇನ್ಮೆಂಟ್) ಮತ್ತು ಸ್ಥಳೀಯ ಲಾಕ್‌ಡೌನ್‌ಗಳ ಹೇರಿಕೆ ಮುಂದುವರಿಯುತ್ತಿವೆ ಮತ್ತು ಮುಂದಿನ ದಿನಗಳಲ್ಲಿ ಅದು ದಿನನಿತ್ಯದ ವಾಸ್ತವ ಆಗಲಿದೆ.

ನಿರುದ್ಯೋಗ ಮತ್ತು ಸಾಮಾಜಿಕ-ಆರ್ಥಿಕ ಯಾತನೆ ಹೆಚ್ಚಾದರೆ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕೌಟುಂಬಿಕ ಯಾತನೆ ತೀವ್ರಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ, ನಾಗರಿಕ ಮತ್ತು ಪ್ರಗತಿಪರ ಸಮಾಜವು ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಪ್ರತಿಕ್ರಿಯಿಸಬೇಕು ಮತ್ತು ಸಂತ್ರಸ್ತರೆ ಪರಿಹಾರ ನೆರವಿಗೆ ಮುಂದಾಗಬೇಕು.

ಹಿಂಸೆಯ ರಚನಾತ್ಮಕ ಮತ್ತು ವ್ಯವಸ್ಥಿತ ಸ್ವರೂಪವನ್ನು ಗಮನಿಸಿದರೆ, ಮಹಿಳೆಯರಿಗೆ ಪರಿಹಾರಕ್ಕಾಗಿ ಪರಿಣಾಮಕಾರಿ ಪ್ರತಿಕ್ರಿಯೆ ಬರುವುದು ಸುಲಭವಲ್ಲ. ಯಾವುದೇ ಪ್ರತಿಕ್ರಿಯೆಯನ್ನು ರೂಪಿಸುವುದು ಸಮಸ್ಯೆಯ ಗುರುತಿಸುವಿಕೆ ಮತ್ತು ತಿಳಿವಳಿಕೆಯೊಂದಿಗೆ ಪ್ರಾರಂಭವಾಗುತ್ತದೆ.

ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯವು ಸಾಂಸ್ಕೃತಿಕವಾಗಿ ಅಂಗೀಕರಿಸಲ್ಪಟ್ಟ ರೂಢಿ ಆಗಿರುವುದರಿಂದ ಸರ್ಕಾರ ಅಥವಾ ಸಾಮಾಜಿಕ ನಿರೂಪಣೆಗೆ ಸಮಸ್ಯೆಯ ಆಳವನ್ನು ಸೆರೆಹಿಡಿಯಲು ಸಾಧ್ಯವಿಲ್ಲ. ಬಹುಸಂಖ್ಯಾತ ಸಾಮಾಜಿಕ ರಚನೆಯು ಕೆಲಸದ ಹೊರೆಯನ್ನು ಸೀಮಿತಗೊಳಿಸದೆ ಮಹಿಳೆಯರ ಮೇಲಿನ ಮನೆಕೆಲಸಗಳ ಜವಾಬ್ದಾರಿಯನ್ನು ಒತ್ತಾಯಿಸುತ್ತದೆ. ಇದಲ್ಲದೆ, ಕೌಟುಂಬಿಕ ಹಿಂಸಾಚಾರವು ಹೆಚ್ಚಾಗಿ ಕುಟುಂಬದ ಅಥವಾ ಸುತ್ತಲಿನ ಸಮಾಜದ ಒಳಗಿನ ನಾಗರಿಕ ವಿಷಯವಾಗಿದ್ದು, ಅದು ಮಾತುಕತೆಯ ಆಟದಲ್ಲಿ ಕೊನೆಗೊಳ್ಳುವುದಕ್ಕೆ ಮುಕ್ತವಾಗಿದ್ದು, ಮಹಿಳೆಯರನ್ನು ಅದೇ ಸಂಕಷ್ಟದಲ್ಲಿ ಇಡುತ್ತದೆ, ಈ ಕಾರಣಕ್ಕೆ ನಿಕಟ ಸಂಗಾತಿಯ ಹಿಂಸಾಚಾರವನ್ನು ಉದ್ದೇಶಪೂರ್ವಕವಾಗಿ ಗುರುತಿಸಲಾಗುವುದಿಲ್ಲ. ಆದ್ದರಿಂದ, ಹಿಂಸಾಚಾರವನ್ನು ತಡೆಗಟ್ಟಲು ಅಥವಾ ಸಂತ್ರಸ್ತರಿಗೆ ಪರಿಹಾರವನ್ನು ನೀಡುವ ವ್ಯವಸ್ಥಿತ ಕಾರ್ಯಕ್ರಮವು ಸಾಧ್ಯವಾದಷ್ಟು ದೂರವಿದೆ. ಹೀಗಾಗಿ, ಹಿಂಸೆ-ದೌರ್ಜನ್ಯದ ಸ್ಥಳಗಳಲ್ಲಿ ಸಿಲುಕಿರುವ ಮಹಿಳೆಯರ ಪರಿಹಾರಕ್ಕಾಗಿ ತುರ್ತು ಪ್ರತಿಕ್ರಿಯೆಯನ್ನು ಆಯೋಜಿಸಲು ತಿಳುವಳಿಕೆಯುಳ್ಳ ನಾಗರಿಕ ಸಮಾಜದ ಮೇಲೆ ಜವಾಬ್ದಾರಿ ಇದೆ.

ಹಿಂಸಾಚಾರದ ರಚನಾತ್ಮಕ ಮತ್ತು ಪ್ರಮಾಣಿತ ಸ್ವರೂಪವನ್ನು ಪರಿಗಣಿಸಿದರೆ, ನಾಗರಿಕ ಸಮಾಜ ಕೂಡ ಮಧ್ಯಸ್ಥಿಕೆ ವಿಧಾನಗಳ ಸೀಮಿತ ಆಯ್ಕೆಗಳನ್ನು ಹೊಂದಿದೆ. ಮಹಿಳೆಯರಿಗೆ ಸಮುದಾಯ ಮಟ್ಟದ ಬೆಂಬಲವನ್ನು (ಮಾನಸಿಕ ಆರೋಗ್ಯ, ವೈದ್ಯಕೀಯ ಮತ್ತು ಹಣಕಾಸು) ಆಯೋಜಿಸುವುದು ನೊಂದ ಮಹಿಳೆಯರಿಗೆ ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ ಎಂದು ಪುರಾವೆಗಳು ಸೂಚಿಸುತ್ತವೆ. ಆದರೂ, ಚಾಲ್ತಿಯಲ್ಲಿರುವ ಆರ್ಥಿಕ ಪರಿಸ್ಥಿತಿಗಳು ಮತ್ತು ಕೋವಿಡ್ ಭಯವು ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಸವಾಲನ್ನೆಸೆಯುತ್ತವೆ. ಸಾಂಪ್ರದಾಯಿಕ ಸಮುದಾಯ ಬೆಂಬಲ ವಿಧಾನಗಳು ಹೊಸ ಅಡೆತಡೆಗಳನ್ನು ಎದುರಿಸಲು ಸೃಜನಶೀಲ ಸಾಧನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಸಮುದಾಯ ಬೆಂಬಲ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲು ಮತ್ತು ಕಾರ್ಯಗತಗೊಳಿಸಲು ತುರ್ತು ಸಾರ್ವಜನಿಕ ಸಂವಾದದ ಅಗತ್ಯವಿದೆ. ಸಮಾನಾಂತರವಾಗಿ, ತಿಳಿವಳಿಕೆಯುಳ್ಳ ನಾಗರಿಕ ಸಮಾಜವು ಮಹಿಳೆಯರ ಈ ಬಿಕ್ಕಟ್ಟನ್ನು ಮುಖ್ಯವಾಹಿನಿಯ ಸಾಮಾಜಿಕ ನಿರೂಪಣೆಯಲ್ಲಿ ಪ್ರತಿನಿಧಿಸಲು ಪ್ರಯತ್ನಿಸಬೇಕು. ಮೂಕ ಯಾತನೆ ಮತ್ತದೇ ಹೊಸ ಸಾಮಾನ್ಯ ಸ್ಥಿತಿಯನ್ನು ಮಾತ್ರ ಸ್ಥಾಪಿಸುತ್ತದೆ.

ಡಾ. ಹಿಮಾಂಶು

ಡಾ. ಹಿಮಾಂಶು
ಆರೋಗ್ಯ ಯೋಜನೆಗಳನ್ನು ರೂಪಿಸುವ ಅನುಭವವಿರುವ ಹಿಮಾಂಶು ಅವರು ಜಾಗತಿಕ ಆರೋಗ್ಯ ವಿಷಯದಲ್ಲಿ ಸಂಶೋಧಕರು ಮತ್ತು ವೈದ್ಯರು. ನವದೆಹಲಿಯ ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆಯ ಜೊತೆಗೆ ಅವರು ಪ್ರಸಕ್ತ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಕೊರೊನಾ: ಪಂಜಾಬ್‌‌‌ನ 9 ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ 2 ಗಂಟೆ ವಿಸ್ತರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...