ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟರ್) ಕೇಂದ್ರ ಸರ್ಕಾರದಿಂದ 8,000ಕ್ಕೂ ಹೆಚ್ಚು ಖಾತೆಗಳನ್ನು ಭಾರತದಲ್ಲಿ ಬ್ಲಾಕ್ ಮಾಡುವಂತೆ ಆದೇಶವನ್ನು ಪಡೆದಿದೆ ಎಂದು ಮೇ 08ರ ಗುರುವಾರ ಹೇಳಿದೆ. ಈ ಆದೇಶದಲ್ಲಿ, ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಮತ್ತು ಪ್ರಮುಖ ಎಕ್ಸ್ ಬಳಕೆದಾರರ ಖಾತೆಗಳು ಒಳಗೊಂಡಿದೆ ಎಂದು ಎಕ್ಸ್‌ನ Global Government Affairs ತಂಡ ತಿಳಿಸಿದೆ. 8000ಕ್ಕೂ ಹೆಚ್ಚು
ಅದಾಗ್ಯೂ, ಬಿಜೆಪಿ ಸರ್ಕಾರದ ಈ ಕ್ರಮವನ್ನು “ಮುಕ್ತ ಅಭಿವ್ಯಕ್ತಿಯ ಮೂಲಭೂತ ಹಕ್ಕಿಗೆ ವಿರುದ್ಧ” ಎಂದು ಎಕ್ಸ್ ಟೀಕಿಸಿದ್ದು, ಅದಾಗ್ಯೂ, ಸರ್ಕಾರದ ಈ ಆದೇಶವನ್ನು ಪಾಲಿಸುವ ಪ್ರಕ್ರಿಯೆಯನ್ನು ತಾನು ಆರಂಭಿಸಿರುವುದಾಗಿ ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಕ್ಸ್‌ನ ಗ್ಲೋಬಲ್ ಗೌವರ್ನಮೆಂಟ್ ಅಫೈರ್ಸ್, “ಭಾರತ ಸರ್ಕಾರದ ಈ ಕಾರ್ಯನಿರ್ವಾಹಕ ಆದೇಶಗಳು ಭಾರಿ ದಂಡ ಮತ್ತು ಕಂಪನಿಯ ಸ್ಥಳೀಯ ಉದ್ಯೋಗಿಗಳಿಗೆ ಜೈಲು ಶಿಕ್ಷೆಯಂತಹ ಸಂಭಾವ್ಯ ದಂಡನೆಗಳನ್ನು ಒಳಗೊಂಡಿವೆ” ಎಂದು ಹೇಳಿದೆ.
ಅದಾಗ್ಯೂ, ಬ್ಲಾಕ್ ಮಾಡಲು ಹೇಳಲಾಗಿರುವ ಹೆಚ್ಚಿನ ಖಾತೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಯಾವ ಪೋಸ್ಟ್‌ಗಳು ಭಾರತದ ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಿವೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಅಥವಾ ಪುರಾವೆಗಳನ್ನು ನೀಡಿಲ್ಲ ಎಂದು ಎಕ್ಸ್ ಆರೋಪಿಸಿದೆ. “ಗಣನೀಯ ಸಂಖ್ಯೆಯ ಖಾತೆಗಳಿಗೆ, ಬ್ಲಾಕ್ ಮಾಡಲು ಯಾವುದೇ ಸಾಕ್ಷ್ಯ ಅಥವಾ ಸಮರ್ಥನೆಯನ್ನು ನೀಡಲಾಗಿಲ್ಲ,” ಎಂದು ಎಕ್ಸ್ ಹೇಳಿದೆ.
ಅದಾಗ್ಯೂ, ಕೇಂದ್ರ ಸರ್ಕಾರದ ಈ ಆದೇಶಗಳನ್ನು ತಾನು ಒಪ್ಪುವುದಿಲ್ಲ ಎಂದು ಎಕ್ಸ್ ಸ್ಪಷ್ಟಪಡಿಸಿದೆ. ಸಂಪೂರ್ಣ ಖಾತೆಗಳನ್ನು ಬ್ಲಾಕ್ ಮಾಡುವುದು “ಅನಗತ್ಯ”ವಾಗಿದ್ದು, ಅದು “ಸೆನ್ಸಾರ್‌ಶಿಪ್‌ಗೆ ಸಮಾನ”ವಾಗಿರುವತ್ತದೆ, ಇದು ಈಗಿರುವ ಮತ್ತು ಭವಿಷ್ಯದ ವಿಷಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಎಕ್ಸ್ ಆತಂಕ ವ್ಯಕ್ತಪಡಿಸಿದೆ.
ಸರ್ಕಾರದ ಈ ಆದೇಶವು ಇದು ಮುಕ್ತ ಅಭಿವ್ಯಕ್ತಿಯ ಮೂಲಭೂತ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಹೇಳಿರುವ ಎಕ್ಸ್, ಆದಾಗ್ಯೂ, ಭಾರತದಲ್ಲಿ ಪ್ಲಾಟ್‌ಫಾರ್ಮ್ ಅನ್ನು ಲಭ್ಯವಾಗಿಡುವುದು ಭಾರತೀಯರಿಗೆ ಮಾಹಿತಿಯನ್ನು ಪಡೆಯಲು ಅತ್ಯಂತ ಮುಖ್ಯ ಎಂದು ಪರಿಗಣಿಸಿ, ಆದೇಶವನ್ನು ಪಾಲಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ.
ಎಕ್ಸ್ ಈ ಕಾರ್ಯನಿರ್ವಾಹಕ ಆದೇಶಗಳನ್ನು ಸಾರ್ವಜನಿಕಗೊಳಿಸುವುದು ಪಾರದರ್ಶಕತೆಗೆ ಅತ್ಯಗತ್ಯ ಎಂದು ಪರಿಗಣಿಸಿರುವುದಾಗಿ ಹೇಳಿದ್ದು, ಅದನ್ನು ಪ್ರಕಟಿಸದೆ ಇರುವುದು ಜವಾಬ್ದಾರಿಯನ್ನು ಕಡಿಮೆ ಮಾಡುತ್ತದೆ ಮತ್ತು ಅನಿಯಂತ್ರಿತ ನಿರ್ಧಾರ ತೆಗೆದುಕೊಳ್ಳುವಿಕೆಗೆ ಕಾರಣವಾಗಬಹುದು ಎಂದು ಎಕ್ಸ್ ಹೇಳಿದೆ. ಆದರೆ, ಕಾನೂನು ನಿರ್ಬಂಧಗಳಿಂದಾಗಿ ಈ ಆದೇಶಗಳನ್ನು ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಅದಾಗ್ಯೂ, ಈ ಆದೇಶಗಳ ವಿರುದ್ಧ ತನ್ನ ಕಾನೂನು ಆಯ್ಕೆಗಳನ್ನು ತಾನು ಪರಿಶೀಲಿಸುತ್ತಿರುವುದಾಗಿ ಎಕ್ಸ್ ಹೇಳಿದ್ದು, ಭಾರತದ ಕಾನೂನುಗಳ ಪ್ರಕಾರ ಎಕ್ಸ್‌ಗೆ ಈ ಆದೇಶಗಳ ವಿರುದ್ಧ ನೇರವಾಗಿ ಕಾನೂನು ಸವಾಲು ಹಾಕುವ ಸಾಮರ್ಥ್ಯ ಸೀಮಿತವಾಗಿದೆ ಎಂದು ಅದು ಹೇಳಿದೆ. ಆದರೆ, ಈ ಆದೇಶದಿಂದ ತೊಂದರೆಗೆ ಒಳಗಾದ ಬಳಕೆದಾರರು ನ್ಯಾಯಾಲಯದ ಮೂಲಕ ಸೂಕ್ತ ಪರಿಹಾರವನ್ನು ಕೋರಲು ಅದು ಕೇಳಿಕೊಂಡಿದೆ. ಈ ಸಂಬಂಧ ಕೆಲವು ಕಾನೂನು ಸಹಾಯ ಸಂಸ್ಥೆಗಳಾದ iProbono India, National Legal Services Authority, Karnataka Legal Services Authority, ಮತ್ತು Supreme Court Legal Services ಗಳ ಸಂಪರ್ಕ ವಿವರಗಳನ್ನು ಎಕ್ಸ್ ಒದಗಿಸಿದೆ.
X has received executive orders from the Indian government requiring X to block over 8,000 accounts in India, subject to potential penalties including significant fines and imprisonment of the company’s local employees. The orders include demands to block access in India to…
— Global Government Affairs (@GlobalAffairs) May 8, 2025
ಈ ನಡುವೆ, ಮಾನವ ಹಕ್ಕುಗಳು ಮತ್ತು ಅಲ್ಪಸಂಖ್ಯಾತರ ವಿಷಯಗಳ ಮೇಲೆ ಕೇಂದ್ರೀಕರಿಸುವ ಸುದ್ದಿ ಸಂಸ್ಥೆ Maktoob Media, ಇಂಡಿಯನ್ ಎಕ್ಸ್‌ಪ್ರೆಸ್‌ನ ಉಪ ಸಂಪಾದಕ, ಹಿರಿಯ ಪತ್ರಕರ್ತ ಮುಝಮಿಲ್ ಜಲೀಲ್, ಸುದ್ದಿ ವೆಬ್‌ಸೈಟ್ ಕಾಶ್ಮೀರಿಯತ್, ಅರ್ಪಿತ್ ಶರ್ಮಾ, ರಕ್ಷಣಾ ವಿಷಯಗಳ ಮ್ಯಾಗಝೀನ್ ಫೋರ್ಸ್, ಜಾಕ್ಸನ್ ಹಿನ್‌ಕಲ್, ಮಾರಿಯೋ ನೌಫಲ್‌ರಂತಹ ಪ್ರಮುಖ ಬಳಕೆದಾರರ ಖಾತೆಗಳು ಸಹ ಬ್ಲಾಕ್ ಆಗಿವೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರದ ಈ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಈ ಖಾತೆಗಳು ತಪ್ಪು ಮಾಹಿತಿ ಹರಡುತ್ತವೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿದರೆ, ಇತರರು ಇದನ್ನು ಮುಕ್ತ ಅಭಿವ್ಯಕ್ತಿ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಟೀಕಿಸಿದ್ದಾರೆ.
2024ರಲ್ಲಿ ತನ್ನ ವಿರುದ್ಧ ನಡೆದ ಬೃಹತ್ ರೈತ ಪ್ರತಿಭಟನೆಯ ಸಂದರ್ಭದಲ್ಲಿ ಕೂಡಾ ಕೇಂದ್ರ ಸರ್ಕಾರ ಎಕ್ಸ್‌ನ ಹಲವು ಖಾತೆಗಳನ್ನು ಬ್ಲಾಕ್ ಮಾಡುವಂತೆ ಆದೇಶಿಸಿತ್ತು. ಈ ವೇಳೆ ಕೂಡಾ ಎಕ್ಸ್ ಈ ಆದೇಶವನ್ನು ಮುಕ್ತ ಅಭಿವ್ಯಕ್ತಿಗೆ ಧಕ್ಕೆ ಎಂದು ಟೀಕಿಸಿತ್ತು. 8000ಕ್ಕೂ ಹೆಚ್ಚು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನಕ್ಸಲರು ನಡೆಸಿದ ನೆಲಬಾಂಬ್ ಸ್ಫೋಟಕ್ಕೆ 3 ಗ್ರೇಹೌಂಡ್ಸ್ ಕಮಾಂಡೋ ಪೊಲೀಸರ ಸಾವು
ನಕ್ಸಲರು ನಡೆಸಿದ ನೆಲಬಾಂಬ್ ಸ್ಫೋಟಕ್ಕೆ 3 ಗ್ರೇಹೌಂಡ್ಸ್ ಕಮಾಂಡೋ ಪೊಲೀಸರ ಸಾವು