Homeಕರ್ನಾಟಕಯಾನಾಗುಂದಿ ಮಾತೆ ಮಾಣಿಕಮ್ಮನ ಸುತ್ತ ಪವಾಡಗಳ ಹುತ್ತ ?!

ಯಾನಾಗುಂದಿ ಮಾತೆ ಮಾಣಿಕಮ್ಮನ ಸುತ್ತ ಪವಾಡಗಳ ಹುತ್ತ ?!

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ಯಾದಗಿರಿ ಜಿಲ್ಲೆಯ ಕಟ್ಟ ಕಡೆಯ ಹಳ್ಳಿಯ ಯಾನಾಗುಂದಿ ಮಾಣಿಕಮ್ಮನ ಆರೋಗ್ಯಕ್ಕಾಗಿ ಕೋರ್ಟ ನಿರ್ದೇಶನದಂತೆ ಜಿಲ್ಲಾಧಿಕಾರಿ, ವೈದ್ಯಾಧಿಕಾರಿಗಳು ನಿಗಾವಹಿಸುತ್ತಿದ್ದಾರೆ. ಇದೆಲ್ಲ ಒಂದು ರೀತಿ ಸರಿ ಇರಬಹುದು. ಆದರೆ ಈ ಮಾಣಿಕಮ್ಮ ಊಟ ಉಪಚಾರವನ್ನೆ ಮಾಡದೆ ಇಲ್ಲಿಯವರೆಗೂ ಹಾಗೆಯೇ ಜೀವಿಸುತ್ತಿದ್ದಾಳೆ ಎಂಬ ಸಂಗತಿ ತುಂಬಾ ಮಹತ್ವದ್ದು. ಈ ಪವಾಡದ ಘಟನೆಗಾಗಿಯೆ ಕರ್ನಾಟಕ, ಆಂದ್ರ ಹಾಗೂ ಮಹಾರಾಷ್ಟ್ರದಾದ್ಯಂತ ಈಕೆಗೆ ಭಕ್ತರು ಹುಟ್ಟಿಕೊಂಡರು. ಮುಸುರೆಗೆ ನೊಣ ಮುತ್ತಿಕೊಂಡಂತೆ ರಾಜಕಾರಣಿಗಳೂ ಸಹ ಜನ ಸಾಮಾನ್ಯರು ಸೇರುವ ಕಡೆಗೆ ಅವರೂ ಸೇರಿ ಯಾನಾಗುಂದಿಯನ್ನು ನೋಡ ನೋಡುತ್ತಲೆ ಯಾತ್ರಾಕ್ಷೇತ್ರವಾಗಿ ಪರಿವರ್ತನೆಗೊಳಿಸಿದ್ದಾರೆ.

ವರ್ಷಕ್ಕೆ ಒಂದೆ ಒಂದು ಬಾರಿ ಅಂದರೆ ಶಿವರಾತ್ರಿಯ ದಿನ ಮಾಣಿಕೇಶ್ವರಿ ತನ್ನ ಭಕ್ತಾದಿಗಳಿಗೆ ದರ್ಶನ ಭಾಗ್ಯ ಕರುಣಿಸಿ ಮತ್ತೆ ವರ್ಷದುದ್ದಕ್ಕೂ ತನ್ನ ನೆಲ ಮಹಡಿಯನ್ನು ಸೇರಿ ಬಿಡುತ್ತಾಳೆ. ಮಾಣಿಕಮ್ಮ ಮಾಣಿಕೇಶ್ವರಿ ಆಗುವುದಕ್ಕಿಂತ ಪೂರ್ವದಲ್ಲಿ ಸೇಡಂ ತಾಲೂಕಿನ ಮಲ್ಲಾಬಾದ ಗ್ರಾಮದ ಬುಗ್ಗಮ್ಮ ಆಶಪ್ಪ ದಂಪತಿಗಳ ನಾಲ್ಕನೆಯ ಮಗಳು. ಬಡತನಕ್ಕೆ ಕಷ್ಟಗಳು ಜಾಸ್ತಿ ಎನ್ನುವಂತೆ ಅನ್ನ ನೀರಿಲ್ಲದೆ ಬಳಲಿಕೆಯಿಂದ ಮಾಣಿಕಮ್ಮ ಪವಾಡಗಳನ್ನು ಮಾಡುತ್ತಲೆ ಬಂದಳು. ಚಿಕ್ಕಂದಿನಲ್ಲಿ ಈಕೆ ಯಾರೊಂದಿಗೂ ಬೆರೆಯದೆ, ಮಾತಾಡದೆ, ಅರಳಿಯ ಮರದ ಟೊಂಗೆ ಏರಿ ಕುಳಿತುಕೊಳ್ಳುವಳು. ಇದನ್ನು ಕಂಡು ಕಂಗಾಲಾದ ತಂದೆ ತಾಯಿಗಳು ದೇವರಿಗೆ ಹರಕೆ ಹೊತ್ತಿದ್ದಾರೆ. ಸಾಲದೆಂಬಂತೆ ದೆವ್ವ ಬಿಡಿಸುವವರ ಮನೆಗೂ ಎಡತಾಕಿದ್ದಾರೆ. ಕೊನೆಗೆ ಯಾರ ಮಾತೋ ಕೇಳಿ ಮಾಣಿಕಮ್ಮಳಿಗೆ ಹತ್ತನೆ ವರ್ಷದಲ್ಲಿಯೆ ಬಾಲ್ಯ ವಿವಾಹವನ್ನೂ ಮಾಡಿದರು. ಆದರೂ ಆಕೆ ಸರಿ ಹೋಗಲಿಲ್ಲ.

ಗುರುಮಿಠಕಲ್ ಮಠದ ಹಿಂದಿನ ಪೀಠಾಧಿಪತಿಗಳು ತಮ್ಮ ಮಠದಲ್ಲಿಯೆ ಈಕೆಯನ್ನು ಇಟ್ಟುಕೊಂಡು ಔಷದೋಪಚಾರ ಮಾಡಿದ್ದಾರೆ. ಆದರೂ ಅದು ಸರಿ ಹೋಗದೆ ಇದ್ದಾಗ ಮಾಣಿಕಮ್ಮನಿಗೆ ಕಾವಿ ಧರಿಸಿ ಸನ್ಯಾಸಿ ಮಾಡಿದರು ಎಂಬ ಪ್ರತೀತಿ ಇದೆ. ಒಟ್ಟಿನಲ್ಲಿ ತನ್ನಷ್ಟಕ್ಕೆ ತಾನು ಇರುವ ಹರೆಯದ ಹುಡುಗಿ, ಶೂನ್ಯದಲ್ಲಿ ಏನನ್ನೋ ನೋಡುತ್ತ ಕುಳಿತ ಮಾಣಿಕಮ್ಮ ಮೌಢ್ಯ ಭಕ್ತರ ಕಣ್ಣಲ್ಲಿ ಪವಾಡ ಪುರುಷಳಾಗಿ ಗೋಚರವಾಗಿದ್ದಾಳೆ. ಕೆಲವು ಐನಾತಿಗಳಿಗೆ ಇಂಥದ್ದನ್ನು ಕಂಡರೆ ರಸಗವಳ. ಮಾಣಿಕಮ್ಮನನ್ನೆ ಬಂಡವಾಳ ಮಾಡಿಕೊಂಡ ಜನರು ಆಕೆಗಾಗಿ ಯಾನಾಗುಂದಿಯಲ್ಲಿ ಭರ್ಜರಿ ಕಟ್ಟಡವೊಂದನ್ನು ಕಟ್ಟಿ ನೆಲ ಮಹಡಿಯಲ್ಲಿಟ್ಟರು. ಹೇಳಿ ಕೇಳಿ ಆಂದ್ರದ ಜನ ಭಾವನಾತ್ಮಕತೆಯಲ್ಲಿಯೇ ಇರುವವರು.

ಮಾಣಿಕಮ್ಮ ಊಟವನ್ನೇ ಮಾಡದೆ ಜೀವಿಸಿದ್ದಾಳೆ ಎಂಬ ಹರಿಬಿಟ್ಟ ಸಂಗತಿ ಕಿವಿಯಿಂದ ಕಿವಿಗೆ ತಲುಪಿ, ಯಾನಾಗುಂದಿಯಲ್ಲಿ ಜನ ಜಂಗುಳಿಯೆ ಕೂಡಲು ಆರಂಭವಾಯಿತು. ಸಣ್ಣಗೆ ಆರಂಭವಾದ ಧಾರ್ಮಿಕ ವ್ಯಾಪಾರ ಇಂದು ಭರ್ಜರಿಯಾಗಿ ನಡೆಯುತ್ತಿವೆ. ಕಾಯಿ, ಕರ್ಪೂರ, ಹಾರ, ತುರಾಯಿ, ಪ್ರಸಾದ, ದಾಸೋಹ ಸೇವೆ ಕೈಂಕರ್ಯಗಳು ಅವ್ಯಾಹತವಾಗಿ ನಡೆದಿವೆ. ಕುರಿಗಳು ಸಾರ್ ನಾವು ಕುರಿಗಳು ಎಂಬ ಹಾಡಿನಂತೆ ಯೋಚಿಸುವ ಶಕ್ತಿಯನ್ನು ಕಳಕೊಂಡ ಜನತೆ ನಾ ಮುಂದೆ ತಾ ಮುಂದೆ ಎನ್ನುತ್ತಾ ದೌಡಾಯಿಸಿ ಯಾನಾಗುಂದಿಗೆ ಹೋಗಿ ಮಾಣಿಕಮ್ಮನ ದರ್ಶನ ಪಡೆದು ಬಂದರು.

ಆದರೆ ಇದುವರೆಗೂ ಯಾರೊಬ್ಬರೂ ಮಾಣಿಕಮ್ಮ ಊಟ ಮಾಡದೆ, ನೀರು ಕುಡಿಯದೆ ಹೇಗೆ ಜೀವಿಸಬಲ್ಲಳು ? ಎಂಬುದು ಯಾರೂ ಪ್ರಶ್ನಿಸಿಲ್ಲ. ಧಾರ್ಮಿಕ ನಂಬಿಕೆಯನ್ನು ಪ್ರಶ್ನಿಸುವುದು ಅಂದರೆ ಬತ್ತಲೆ ಇದ್ದವರ ರಾಜ್ಯದಲ್ಲಿ ಬಟ್ಟೆ ಉಟ್ಟವನ ಸ್ಥಿತಿಯಂತೆ. ಪುಂಡ ಪುರೋಹಿತರು, ಆಡಳಿತ ವರ್ಗದವರು ಹಬ್ಬಿಸಿದ ಗಾಳಿ ಸುದ್ದಿಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡಿದ ಪರಿಣಾಮ ಯಾನಾಗುಂದಿ ಸುಕ್ಷೇತ್ರವಾಯಿತು, ಸುಪ್ರಸಿದ್ಧವಾಯಿತು.

ಜಗತ್ತಿನಾದ್ಯಂತ ಆಹಾರಕ್ಕಾಗಿ ನಡೆದ ಅಲ್ಲೋಲ ಕಲ್ಲೋಲ ಅಷ್ಟಿಷ್ಟಲ್ಲ. ಮನುಷ್ಯನ ಮೋಸ, ತಟವಟ, ವಂಚನೆ, ಭ್ರಷ್ಟಾಚಾರಕ್ಕೆಲ್ಲ ಮೂಲ ಕಾರಣ ಹಸಿವು. ಆ ಹಸಿವಿಗಾಗಿಯೆ ಆತ ಏನೆಲ್ಲ ಸರ್ಕಸ್ ಮಾಡುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗಲಾದರೂ ಮಾತೆ ಮಾಣಿಕಮ್ಮ ಊಟ ಮಾಡದೆ , ನೀರು ಕುಡಿಯದೆ ಬದುಕಲು ಹೇಗೆ ಸಾಧ್ಯ ? ಎಂಬ ಸೂತ್ರವನ್ನು ಜಗತ್ತಿಗೆ ನೀಡಿದರೆ ಈ ಜಗತ್ತು ಆಕೆಯನ್ನು ಕೃತಜ್ಞತೆಯಿಂದ ನೆನೆಯುತ್ತದೆ. ಆಹಾರ ಮತ್ತು ನೀರಿಗಾಗಿ ಜಗತ್ತಿನಲ್ಲಿ ನಡೆದಿರುವ ಅಂತಃಕಲಹ ತಪ್ಪುತ್ತದೆ. ಮದ್ದು ಗುಂಡುಗಳು ಸೈನಿಕರು ಯುದ್ದ ವಿಮಾನಗಳು ಅರ್ಥಕಳೆದುಕೊಳ್ಳುತ್ತವೆ.

ವೈಜ್ಞಾನಿಕ ಮನೋಭಾವ ಇರುವ ಕೋರ್ಟ, ಸರಕಾರ ಆಕೆಯ ಆರೋಗ್ಯದ ಜೊತೆ ಜೊತೆಗೆ ಆಹಾರದ ಗುಟ್ಟನ್ನು ಬಯಲು ಮಾಡಿ ಪುಣ್ಯ ಕಟ್ಟಿಕೊಳ್ಳಬೇಕಿದೆ. ಇದೆಲ್ಲ ಇಂದು ಸಾಧ್ಯವೆ ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...