ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಲು ಹೊರಟಿರುವ ‘ಶಿವರಾಮ ಕಾರಂತ ಬಡಾವಣೆ ಯೋಜನೆ’ಯ ವಿರುದ್ದ, ರಾಮಗೊಂಡನ ಹಳ್ಳಿಯ ಸುತ್ತಲಿನ 17 ಹಳ್ಳಿಗಳ ರೈತರು ಯಲಹಂಕ ಸರ್ಕಾರಿ ಶಾಲೆಯ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ಶುಕ್ರವಾರದಂದು ನಡೆಸಿದ್ದಾರೆ. ಪ್ರತಿಭಟನಾ ಸಭೆಯಲ್ಲಿ ಕಂದಾಯ ಇಲಾಖೆಯ ಸಹಾಯಕ ಆಯುಕ್ತ ರಂಗನಾಥ್ ಮುಖಾಂತರ ಮುಖ್ಯಮಂತ್ರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಲಾಗಿದೆ.
ಬೆಂಗಳೂರು ಅಭಿವೃದ್ದಿಯ ಹೆಸರು ಹೇಳಿ, ರಾಮಗೊಂಡನ ಹಳ್ಳಿಯ ಸುತ್ತಲಿನ 17 ಹಳ್ಳಿಗಳಲ್ಲಿ ಬಿಡಿಎ ‘ಶಿವರಾಮ ಕಾರಂತ ಬಡಾವಣೆ’ ಎಂಬ ವಸತಿ ಸೌಕರ್ಯವನ್ನು ನಿರ್ಮಿಸಲು ಹೊರಟಿದೆ. ಯೋಜನೆಯ ವಿರುದ್ದ, ಅಲ್ಲಿನ ರೈತರು ಮತ್ತು ನಿವಾಸಿಗಳು ಸುಮಾರು 47 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಶಿವರಾಮ ಕಾರಂತ್ ಬಡಾವಣೆ ಎಂಬ ‘ಅಭಿವೃದ್ಧಿ’ ಯೋಜನೆ; ದಲಿತರು-ಬಡಬಗ್ಗರ ಮೇಲೆ ಪ್ರಹಾರ
ಬೆ೦ಗಳೂರು ಅಬಿವೃದ್ಧಿ ಪ್ರಾಧಿಕಾರವು, ‘ಡಾ| ಕೆ. ಶಿವರಾಮ ಕಾರಂತ ಬಡಾವಣೆ’ಗಾಗಿ ಬೆ೦ಗಳೂರು ಉತ್ತರ ತಾಲೂಕು ರಾಮಗೊಂಡನಹಳ್ಳಿಯ ಸುತ್ತಮುತ್ತಲಿನ 17 ಹಳ್ಳಿಗಳ 3546 ಎಕರೆ 12 ಗುಂಟೆ ಭೂಮಿಯನ್ನು ಸ್ವಾಧೀನಪಡಿಸುವುದಾಗಿ ಈಗಾಗಲೆ ಹೇಳಿದೆ.
ಸಂತ್ರಸ್ತ ರೈತರು ಪ್ರಾಧಿಕಾರ ಹಾಗೂ ಸರ್ಕಾರಕ್ಕೆ ಅನೇಕ ಮನವಿಗಳನ್ನು ನೀಡಿದ ಹೊರತಾಗಿಯು ಸಮಸ್ಯೆ ಪರಿಹಾರವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಸಂತ್ರಸ್ತ 17 ಹಳ್ಳಿಯ ರೈತರು ಇಂದು ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದ್ದರು.
“ಉದ್ದೇಶಿತ ಡಾ| ಕೆ. ಶಿವರಾಮ ಕಾರಂತ ಬಡಾವಣೆಗೆ ಒಳಪಡುವ 17 ಗ್ರಾಮಗಳು ಬಹುತೇಕ ಅಬಿವೃದ್ಧಿ ಹೊ೦ದಿರುವುದರಿಂದ ಈ ಯೋಜನೆಯನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್‌ಗೆ ಸರ್ಕಾರ ಮನವಿ ಸಲ್ಲಿಸಬೇಕು” ಎಂದು ರೈತರು ಸಭೆಯಲ್ಲಿ ಒಕ್ಕೊರೊಳಿನಿಂದ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಮಗೊಂಡನಹಳ್ಳಿ: ತಮ್ಮ ನೆಲವನ್ನು ಕಸಿಯುತ್ತಿರುವ ಸರ್ಕಾರದ ವಿರುದ್ಧ ಪ್ರತಿಭಟಿಸಿದ ದನಗಳು!
ಈ ಹಿಂದೆ ದೊಡ್ಡಬೆಡ್ಡ ಹಳ್ಳಿಯ ದಲಿತ ಮಹಿಳೆ ಜಯಮ್ಮ ಮತ್ತು ಶಾಂತರಾಜು ಎಂಬವರ ಮನೆಯನ್ನು ಬಿಡಿಎ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ಧ್ವಂಸಗೊಳಿಸಿದ್ದರು. ಅವರಿಗೆ ಕೂಡಲೆ ಪುನರ್‌ವಸತಿ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ರೈತರು ತಮ್ಮ ಹೋರಾಟವನ್ನು ಮತ್ತೆ ಮುಂದುವರೆಸಿದ್ದು, ಮುಂದಿನ ತಿಂಗಳು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಯಲಹಂಕದಲ್ಲಿ ‘‘ಅರೆ ಬೆತ್ತಲೆ ಮೆರವಣಿಗೆ” ನಡೆಸಿ ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
ಇಲ್ಲಿನ ರೈತರು ಇತ್ತೀಚೆಗಷ್ಟೇ, ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಬಿಡಿಎ ಅಧಿಕಾರಿಗಳು ನಡೆಸುತ್ತಿರುವ ದೌರ್ಜ್ಯನ್ಯವನ್ನು ಖಂಡಿಸಿ, ಕೃಷ್ಣಜನ್ಮಾಷ್ಠಮಿಯ ದಿನದಂದು ‘ವಿಧಾನಸೌಧ ಚಲೋ’ ಚಳವಳಿ ನಡೆಸಿ ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ರೈತರು ಮುಖ್ಯಮಂತ್ರಿಗೆ ಸಲ್ಲಿಸಿರುವ ಪತ್ರವನ್ನು ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ‘ಶಿವರಾಮ ಕಾರಂತ ಬಡಾವಣೆ’ ವಿವಾದ – ಸಮಸ್ಯೆ ಪರಿಹರಿಸುವಂತೆ 17 ಹಳ್ಳಿಗಳಿಂದ ಬೃಹತ್ ಪ್ರತಿಭಟನೆ



ಅಡ್ಡಾದಿಡ್ಡಿ ಬೆಳವಣಿಗೆ ತಡೆಯಲು ಬಿಡಿಎ ಯ planned layoutsಗಳೇ ಮದ್ದು. ಬೆಂಗಳೂರು ಸೇರಿದಂತೆ ಉಳಿದ ಪಟ್ಟಣಗಳ ಸುತ್ರಾ ಸರ್ಕಾರದ ವತಿಯಿಂದ planning layoutಗಳನ್ನು ಮಾಡುವುದನ್ನು ಅಲ್ಲಿನ ಬೆಳೆಬೆಳೆಯದ ನೆಲದೊಡೆಯರು ತಡೆಯುತ್ತಿದ್ದಾರೆ.
ಇದು ತುಂಬಾ ಗಂಬೀರ ಸಂಗತಿ.
ಇಂತ ಹೊಸ layout ಗಳಲ್ಲಿ ದೊಡ್ಡ ಅಳತೆಯ(50*80,40*60 ) ನಿವೇಶನಗಳನ್ನು ಮಾಡುವುದನ್ನು ಕಯ್ ಬಿಟ್ಟು ಬಡವರಿಗೆ,ನಡುಪದರಿನ ಮಂದಿಗೆ ನೆರವಾಗುವಂತೆ ೩೦*೪೦ ರಂತ ಅಳತೆಯ ನಿವೇಶನಗಳನ್ನು ಮಾಡಿ ಹಂಚಬೇಕು. ಈಗಾಗಲೇ ಬೆಂಗಳೂರಿನಲ್ಲಿ ನೆಲೆಇರುವ ಮಂದಿಯ ಸೊತ್ತುಗಳನ್ನು ಆದಾರ್ ಕಾರ್ಡ್ ಗೆ ಜೋಡಿಸಿ, ಉಳ್ಳವರೇ ಮತ್ತೆ ನಿವೇಶನ ಪಡೆದಂತೆ ಮಾಡಬೇಕು.
ಕೊಳ್ಳೆಮಾಡುವ ಕಾಸಗಿ ರಿಯಲ್ ಎಸ್ಟೇಟ್ ಮಾಪಿಯಾವನ್ನು ಮಟ್ಟಹಾಕಲು ಇದೊಂದು ತಕ್ಕ ದಾರಿ.