ಬೆಂಗಳೂರು ಅಭಿವೃದ್ದಿಯ ನೆಪದಲ್ಲಿ ಬಿ.ಡಿ.ಎ. ನಿರ್ಮಿಸಲು ಹೊರಟಿರುವ ‘ಶಿವರಾಮ ಕಾರಂತ ಬಡವಣೆ ಯೋಜನೆ’ಯ ವಿರುದ್ದ ಮತ್ತು ಯೋಜನೆಯ ಅನುಷ್ಠಾನದಲ್ಲಿ ಬಿ.ಡಿ.ಎ. ಅಧಿಕಾರಿಗಳು ನಡೆಸುತ್ತಿರುವ ದೌರ್ಜ್ಯನ್ಯವನ್ನು ಖಂಡಿಸಿ, ರಾಮಗೊಂಡನಹಳ್ಳಿ ಗ್ರಾಮದ ರೈತರು ತಮ್ಮ ಜಾನುವಾರುಗಳೊಂದಿಗೆ ದಲಿತ ಸಂಘರ್ಷ ಸಮಿತಿ(ಸಂಯೋಜಿತ) ಅಡಿಯಲ್ಲಿ, ‘ವಿಧಾನಸೌಧ ಚಲೋ’ ಚಳವಳಿ ನಡೆಸಿ ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಳಿಗ್ಗೆ ರಾಮಗೊಂಡನಹಳ್ಳಿಯಲ್ಲಿ ಪ್ರಾರಂಭವಾದ ಮೆರವಣಿಗೆಯಲ್ಲಿ ನೂರಾರು ರೈತರ ಜೊತೆಗೆ ಅವರ ಜಾನುವಾರುಗಳೂ ಸಾಥ್‌ ನೀಡಿದವು. ಆದರೆ ಪೊಲೀಸರು ಮೆರವಣಿಗೆಯು ಮುಖ್ಯರಸ್ತೆಗೆ ತೆರಳುತ್ತಿದ್ದಂತೆ ತಡೆದಿದ್ದರಿಂದ, ರೈತರು ರಸ್ತೆಯಲ್ಲೆ ತಮ್ಮ ಜಾನುವಾರುಗಳಿಗೆ ಹುಲ್ಲುಗಳನ್ನು ನೀಡಿ ಪ್ರತಿಭಟಿಸಿದರು. ನಂತರ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪ್ರತಿಭಟನಾಕಾರರ ಆಗ್ರಹ ಪತ್ರವನ್ನು ಪಡೆದುಕೊಂಡ ಘಟನೆ ನಡೆಯಿತು.

ಇದನ್ನೂ ಓದಿ: ಶಿವರಾಮ ಕಾರಂತ್ ಬಡಾವಣೆ ಎಂಬ ‘ಅಭಿವೃದ್ಧಿ’ ಯೋಜನೆ; ದಲಿತರು-ಬಡಬಗ್ಗರ ಮೇಲೆ ಪ್ರಹಾರ

ರಾಮಗೊಂಡನಹಳ್ಳಿಯ ರೈತರು ಮತ್ತು ನಿವಾಸಿಗಳು, ತಮ್ಮ ನೆಲವನ್ನು ಅಕ್ರಮವಾಗಿ ಪಡೆಯಲು ಪ್ರಯತ್ನಿಸುತ್ತಿರುವ ಬಿಡಿಎ ವಿರುದ್ದ ಆಗಸ್ಟ್‌ 2 ರಿಂದ ಇಂದಿನವರೆಗೂ ಅನಿರ್ಧಿಷಾವದಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಆಗಸ್ಟ್‌ 18 ರಂದು ಕೂಡಾ ಪಾದಯಾತ್ರೆಯನ್ನು ನೆಡೆಸಿ ಮುಖ್ಯಮಂತ್ರಿ, ಬಿಡಿಎಗೆ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರು. ಅಂದು ಮನವಿಯನ್ನು ಸ್ವೀಕರಿಸಿದ್ದ ಅಧಿಕಾರಿಗಳು 7 ದಿನಗಳೊಳಗಾಗಿ ಪ್ರತಿಭಟನಾಕಾರರಿಗೆ ಲಿಖಿತ ಉತ್ತರವನ್ನು ನೀಡುವುದಾಗಿ ತಿಳಿಸಿದ್ದರು. ಆದರೆ 12 ದಿನ ಕಳೆದರು ಅಧಿಕಾರಿಗಳು ಯಾವುದೇ ಉತ್ತರವನ್ನು ನೀಡಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.

ಇದರ ವಿರುದ್ದ ಪ್ರತಿಭಟಿಸಿ ರೈತರು ಇಂದು ತಮ್ಮ ಜಾನುವಾರುಗಳೊಂದಿಗೆ ವಿಧಾನಸೌಧ ಚಲೋ ಚಳವಳಿಯನ್ನು ಹಮ್ಮಿಕೊಂಡಿದ್ದಾರೆ.

ಇದನ್ನೂ ಓದಿ: ಬಿಡಿಎ ಲೇಔಟ್‌‌ಗಾಗಿ ಕೃಷಿ ಭೂಮಿ ಒತ್ತುವರಿಗೆ ವಿರೋಧ – ರೈತರಿಂದ ಪ್ರತಿಭಟನೆ

ನಾನುಗೌರಿ.ಕಾಂ ಜೊತೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಎಂ. ರಮೇಶ್, “ರಾಮಗೊಂಡನಹಳ್ಳಿಯಲ್ಲೇ ಸುಮಾರು 400 ಹಸುಗಳು ಮತ್ತು 80 ಕ್ಕೂ ಹೆಚ್ಚು ಎತ್ತುಗಳಿವೆ. ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದ್ದ ನಮ್ಮ ಜೊತೆ ಸ್ಥಳೀಯ ಶಾಸಕ ಮತ್ತು ಬಿಡಿಎ ಅಧ್ಯಕ್ಷರೂ ಆಗಿರುವ ವಿಶ್ವನಾಥ್‌ ಇತ್ತೀಚೆಗೆ ಸಭೆ ನಡೆಸಿದ್ದರು. ನಮ್ಮ ಅಹವಾಲುಗಳನ್ನು ಹಾಗೂ ಹಸುಗಳ ಬಗ್ಗೆ ಹೇಳಿದ್ದೆವು. ಅದಕ್ಕೆ ಅವರು ನಿಮ್ಮ ಹಸುಗಳನ್ನ ಗೋಶಾಲೆಗೆ ಹೊಡೆದುಬಿಡಿ ಎಂದು ಹೇಳಿದ್ದರು. ಅದಕ್ಕಾಗಿ ಸಾಂಕೇತಿಕವಾಗಿ 150-200 ಹಸುಗಳನ್ನು ಮೆರೆವಣಿಗೆಗೆ ಕರೆದುಕೊಂಡು ಹೋಗಿದ್ದೇವೆ” ಎಂದು ಹೇಳಿದ್ದಾರೆ.

“ಗೋರಕ್ಷಕ ಸರ್ಕಾರವೇ ನಮ್ಮನ್ನು ರಕ್ಷಿಸಿ, ಅಧಿಕಾರಿಗಳೆ ನಮ್ಮ ಹಾಲಿನ ಸ್ಮರಿಸಿ, ನಮ್ಮ ಪಾಲಕರೊಂದಿಗೆ ನಮ್ಮನ್ನು ಬದುಕಲು ಬಿಡಿ” ಎಂದು ಮೆರವಣಿಗೆಯುದ್ದಕ್ಕೂ ಹಸುಗಳ ಕುತ್ತಿಗೆಯಲ್ಲಿ ಘೋಷಣಾ ಫಲಕಗಳು ರಾರಾಜಿಸುತ್ತಿದ್ದವು.

ಪ್ರತಿಭಟನೆಯ ಉದ್ದಕ್ಕೂ ರೈತರು ಸರ್ಕಾರದ ವಿರುದ್ದ ತಮ್ಮ ಆಕ್ರೊಶ ವ್ಯಕ್ತಪಡಿಸಿದರು. ವಿಧಾನಸೌಧಕ್ಕೆ ತೆರಳುತ್ತಿದ್ದ ರೈತರನ್ನು ತಡೆದದ್ದರಿಂದ ರೈತರು ಅಲ್ಲಿಯೆ ತಮ್ಮ ಪ್ರತಿಭಟನೆಗಳನ್ನು ಮುಂದುವರೆಸಿದರು. ನಂತರ ಅಧಿಕಾರಿಗಳು ಪ್ರತಿಭಟನಾಕಾರರಿಂದ ಆಗ್ರಹ ಪತ್ರವನ್ನು ಸ್ವೀಕರಿಸಿದರು. ರೈತರು ಸರ್ಕಾರಕ್ಕೆ ಸಲ್ಲಿಸಿರುವ ಆಗ್ರಹ ಪತ್ರವನ್ನು ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬಹುದು.

ಇದನ್ನೂ ಓದಿ: ಬೆಂಗಳೂರಿಗರಿಗೆ ಆಘಾತ: ಆಸ್ತಿ ತೆರಿಗೆ ಎರಡು ಪಟ್ಟು ಏರಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here