Homeಮುಖಪುಟಯೋಹಾನಿ ಹಾಡು ಕನ್ನಡಕ್ಕೆ: ಹೊನ್ನಾವರದ ರೋಡ್ರಿಗಸ್ ಸಹೋದರರ ಸಿಂಹಳದ ಕನ್ನಡ ಹಾಡು ವೈರಲ್

ಯೋಹಾನಿ ಹಾಡು ಕನ್ನಡಕ್ಕೆ: ಹೊನ್ನಾವರದ ರೋಡ್ರಿಗಸ್ ಸಹೋದರರ ಸಿಂಹಳದ ಕನ್ನಡ ಹಾಡು ವೈರಲ್

- Advertisement -
- Advertisement -

ಸಂಗೀತದ ಸಂಮ್ಮೋಹಕ ಶಕ್ತಿಯೇ ಅಂತದ್ದು! ಅದಕ್ಕೆ ದೇಶ-ಭಾಷೆಯ ಎಲ್ಲೆಯಿಲ್ಲ. ಶ್ರೀಲಂಕಾದ ಜನಪ್ರಿಯ ಯುವ ಗಾಯಕಿ ಯೋಹಾನಿ ಅಲ್ಲಿಯ ಭಾಷೆಯಲ್ಲಿ ಹಾಡಿ ದೊಡ್ಡ ಸಂಚಲನ ಸೃಷ್ಟಿದ್ದ ಹಾಡೊಂದು ಕನ್ನಡೀಕರಣಗೊಂಡು ಕನ್ನಡ ನಾಡಲ್ಲೂ ಲಕ್ಷ-ಲಕ್ಷ ಜನರನ್ನು ಮರುಳುಗೊಳಿಸಿದೆ. ಸಿಂಹಳ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಹಾಡನ್ನು ಹೊನ್ನಾವರದ ರೋಡ್ರಿಗಸ್ ಸಹೋದರರು ಹಾಡಿ ಯೂಟ್ಯೂಬ್‌ಗೆ ಹಾಕಿದ ಒಂದೇ ವಾರದಲ್ಲಿ ಬರೋಬ್ಬರಿ 3.58 ಲಕ್ಷ ಮಂದಿ ಮನವಿಟ್ಟು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.!

ಶ್ರೀಲಂಕಾದ ಗಾಯಕಿ ಯೋಹಾನಿ ಹಾಡಿರುವ ಮನಿಕೆ ಮಗೆ ಹಿತೆ ಹಾಡು ಅಲ್ಲಿ ತನ್ನದೆಯಾದ ಟ್ರೆಂಡ್ ಸೃಷಿಸಿಬಿಟ್ಟಿದೆ. ಅದರ ಹಿಂದಿ ಹಾಗೂ ಕನ್ನಡ ಅನುವಾದವನ್ನು ಹೊನ್ನಾವರದ ಹಡಿನಬಾಳದ ಆಲ್ಬನ್ ರಚಿಸಿದ್ದಾರೆ. ಯೋಹಾನಿನಾರಿ ಮನಹಾರಿ ಸುಕುಮಾರಿ ಎಂದು ತಮಿಳಿನಲ್ಲಿ ಶುರು ಮಾಡುವ ಹಾಡನ್ನು ಹೊನ್ನಾವರದ ಹುಡುಗ ಬೆನ್‌ರುಬೆನ್ ರೋಡ್ರಿಗಸ್ ಅಪ್ಸರೆ ನೀ ನನ್ನವಳೆ ನೀನಂದ್ರೆ ತುಂಬಾ ತುಂಬಾ… ಎಂಬ ಕನ್ನಡ ಸಾಲುಗಳಿಂದ ಮುಂದುವರಿಸಿದ್ದಾರೆ. ಅಲ್ಲಿಂದ ಮುಂದೆ ಅವರ ತಮ್ಮ ಬೆನ್‌ಸ್ಟನ್ ರೋಡ್ರಿಗಸ್ ಹಿಂದಿಯಲ್ಲಿ ತೇರಾ ಸಾಥ್ ನಿಭಾವೂಂಗಾ ಹಮ್ ಸಾಥ್ ರಹೇಂಗೆ… ಎಂದು ಹಾಡಿದ್ದಾರೆ.

ಯೂಟ್ಯೂಬ್‌ನಲ್ಲಿರುವ ಈ 2.50 ನಿಮಿಷದ ರೊಡ್ರಗಿಸ್ ಸಹೋದರರ ಹಾಡನ್ನು ಲಕ್ಷ ಲಕ್ಷ ಮಂದಿ ನೋಡುತ್ತಿದ್ದಾರೆ. ಹಿಂದೆ ಯೋಹಾನಿಯ ಬೇರೊಂದು ಹಾಡನ್ನು ಇದೇ ಸಹೋದರರು ಹಾಡಿದದ್ದರು. ಈ ರೋಡ್ರಿಗಸ್ ಸಹೋದರರು ಕನ್ನಡ, ಕೊಂಕಣಿ ಮತ್ತು ಇಂಗ್ಲಿಷ್‌ನಲ್ಲಿ ಒಟ್ಟೂ 11 ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಲಾಕ್ ಡೌನ್ ಖಾಲಿತನದ ಹೊತ್ತಲಿ ಮನೆಯಲ್ಲಿ ಕುಳಿಕತು ನಾವು ಹಾಡುತ್ತಿದ್ದೆವು. ಅದೇ ಯೋಹಾನಿ ಹಾಡಿನ ಅನುಕರಣೆಗೆ ಪ್ರೇರಣೆಯಾಯಿತೆಂದು ಅಣ್ಣ-ತಮ್ಮ ಹೇಳುತ್ತಾರೆ.

ಹೊನ್ನಾವರ ಕಾಲೇಜಿನಲ್ಲಿ ಬೆನ್‌ರುಬೆನ್ ಎಂಕಾಂ ಓದುತ್ತಿದ್ದಾರೆ. ಅವರ ತಮ್ಮ ಬೆನ್‌ಸ್ಟನ್ ಹೋಲಿರೋಸರಿ ಕಾನ್ವೆಂಟಿನಲ್ಲಿ 6ನೇ ತರಗತಿಯಲ್ಲಿದ್ದಾರೆ. ಮಕ್ಕಳ ಸಂಗೀತದ ಹುಚ್ಚು ಕಂಡು ಅವರ ತಂದೆ ಮುನ್ವೇಲ್ ರೋಡ್ರಿಗಸ್ ಮನೆಯಲ್ಲಿ ದ್ವನಿ ಮುದ್ರಣದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇಬ್ಬರಿಗೂ ತಬಲಾ, ಕೀಬೋರ್ಡ್‌ನಲ್ಲೂ ಆಸಕ್ತಿ.


ಇದನ್ನೂ ಓದಿ: ಕುಂದಾಪುರದ ಗೌಲು: ಡಾ ಜಯಪ್ರಕಾಶ್‌ ಶೆಟ್ಟಿ ಹೆಚ್‌ ಕುಂದಾಪುರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...