ಸರ್ಕಾರಿ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಚಟುವಟಿಕೆಗಳನ್ನು ನಿಷೇಧಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ನಂತರ ರಜ್ಯ ರಾಜಕಾರಣದಲ್ಲಿ ವಾಗ್ವಾದ ಭುಗಿಲೆದ್ದಿದೆ.
ಮುಖ್ಯಮಂತ್ರಿಗಳಿಗೆ ಪ್ರಿಯಾಂಕ್ ಬರದಿರುವ =ಪತ್ರದಲ್ಲಿ, ಸರ್ಕಾರಿ ಶಾಲೆಗಳು, ಆಟದ ಮೈದಾನಗಳು, ದೇವಾಲಯಗಳಲ್ಲಿ ಶಾಖೆಗಳು ಮತ್ತು ಕೂಟಗಳನ್ನು ನಡೆಸುವ ಮೂಲಕ ಆರ್‌ಎಸ್‌ಎಸ್ ಮಕ್ಕಳು ಮತ್ತು ಯುವಕರಲ್ಲಿ ವಿಭಜಕ ವಿಚಾರಗಳನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಅಂತಹ ಕಾರ್ಯಕ್ರಮಗಳನ್ನು ಸಂವಿಧಾನಬಾಹಿರ ಮತ್ತು ರಾಷ್ಟ್ರೀಯ ಏಕತೆಯ ಮನೋಭಾವಕ್ಕೆ ವಿರುದ್ಧವೆಂದು ಕರೆದು ಅವುಗಳ ಮೇಲೆ ಸಂಪೂರ್ಣ ನಿಷೇಧ ಹೇರುವಂತೆ ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ಇದಾದ ಸ್ವಲ್ಪ ಸಮಯದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಗೃಹ ಸಚಿವರಾಗಿದ್ದಾಗ 2002 ರಲ್ಲಿ ಬೆಂಗಳೂರಿನ ನಾಗವಾರದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಹಳೆಯ ಛಾಯಾಚಿತ್ರವನ್ನು ಹಂಚಿಕೊಂಡಿದೆ.
Dear dimwits at @BJP4Karnataka, in case your memory fails you,
Sri. Kharge ji was the Home Minister at the time.He visited the RSS event site after chairing a peace committee meeting with officials and representatives of all communities, to caution your people against… https://t.co/UJqZpgAQd6
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 13, 2025
“ಪ್ರಿಯಾಂಕ್ ಖರ್ಗೆ ಅವರೇ ಇಲ್ಲಿ ನೋಡಿ, ನಿಮ್ಮ ತಂದೆ ವೈಯಕ್ತಿಕವಾಗಿ ಶಿಬಿರಕ್ಕೆ ಭೇಟಿ ನೀಡಿದರು, ಆರ್‌ಎಸ್‌ಎಸ್‌ನ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮೆಚ್ಚಿದರು ಮತ್ತು ಪೂರ್ಣ ಸಹಕಾರವನ್ನು ನೀಡಿದರು. ಹೈಕಮಾಂಡ್ ಅನ್ನು ಮೆಚ್ಚಿಸಲು ನೀವು ಇಂದು ಇಂತಹ ಕೃತ್ಯ ಮಾಡುತ್ತಿದ್ದೀರಾ” ಪ್ರಶ್ನಿಸಿದೆ.
ಬಿಜೆಪಿ ಪೋಸ್ಟ್‌ಗೆ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿಯ ಹೇಳಿಕೆಗಳನ್ನು ಸುಳ್ಳು ಪ್ರಚಾರ ಎಂದು ಕರೆದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕಾರಿಗಳು ಮತ್ತು ಸಮುದಾಯ ಪ್ರತಿನಿಧಿಗಳೊಂದಿಗೆ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ ನಂತರ ಆರ್‌ಎಸ್‌ಎಸ್ ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಅವರು ಸ್ಪಷ್ಟಪಡಿಸಿದರು.
“ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರದಂತೆ ನಿಮ್ಮ ಜನರಿಗೆ ಎಚ್ಚರಿಕೆ ನೀಡಲು ಅವರು ಆಗಿನ ಪೊಲೀಸ್ ಆಯುಕ್ತ ಸಾಂಗ್ಲಿಯಾನ ಅವರೊಂದಿಗೆ ಅಲ್ಲಿಗೆ ಹೋಗಿದ್ದರು, ಸಂಘಟಕರು ನೆಲದ ಕಾನೂನಿಗೆ ಬದ್ಧರಾಗಿರಬೇಕು ಅಥವಾ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು” ಎಂದು ಪ್ರಿಯಾಂಕ್ ಬರೆದಿದ್ದಾರೆ.
ಸರ್ಕಾರದ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ


