ಕೆಲಸ ಹುಡುಕಿಕೊಂಡು ಉತ್ತರ ಪ್ರದೇಶದ ಬರೇಲಿಗೆ ಬಂದಿದ್ದ ನೇಪಾಳ ಮೂಲದ ಯುವತಿಯನ್ನು ಕಳ್ಳತನದ ಶಂಕೆ ಮೇಲೆ ಕಟ್ಟಿ ಹಾಕಿ ಥಳಿಸಿದ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನೇಪಾಳದ ಪೋಖರಾ ಜಿಲ್ಲೆಯ ಸುಶ್ಮಿತಾ ಸರು ಮಗರ್ ಅಲಿಯಾಸ್ ಕಾಜಲ್ ಹಲ್ಲೆಗೊಳಗಾದ ಯುವತಿ. ಪ್ರಸ್ತುತ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ಹೇಳಿವೆ.
🚨 ब्रेकिंग न्यूज़ | बरेली में दरिंदगी की हद पार
😡 भीड़ ने युवती को चोर समझ बेरहमी से पीटा!
📍 नोएडा से बरेली काम के सिलसिले में आई नेपाल मूल की युवती
🙏 हाथ जोड़ती रही, चीखती रही"मैं चोर नहीं हूं"
📹 फिर भी भीड़ ने की बेरहमी से पिटाई और की अभद्रता
🏃♀️ जान बचाने को युवती ने… pic.twitter.com/jz0D5R0rhW— भारत समाचार | Bharat Samachar (@bstvlive) August 2, 2025
ಪೊಲೀಸರ ಪ್ರಕಾರ, ಶುಕ್ರವಾರ ರಾತ್ರಿ ಯುವತಿ ಬರದಾರಿಯಲ್ಲಿರುವ ಪರಿಚಯಸ್ಥ ವಿನಯ್ ಗಂಗ್ವಾರ್ ಎಂಬವರ ಮನೆಯಲ್ಲಿ ತಂಗಿದ್ದಾಗ ಘಟನೆ ನಡೆದಿದೆ.
ಬೆಳಗಿನ ಜಾವ 1 ಗಂಟೆ ಸುಮಾರಿಗೆ ಯುವತಿ ಫೋನ್‌ನಲ್ಲಿ ಮಾತನಾಡುತ್ತಾ ಮನೆಯ ಟೆರೇಸ್ ಮೇಲೆ ಹೋಗಿದ್ದರು. ಈ ವೇಳೆ ಸ್ಥಳೀಯರು ಆಕೆಯನ್ನು ಕಳ್ಳಿ ಎಂದು ಶಂಕಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.
ಯುವತಿ ಟೆರೇಸ್ ಮೇಲೆ ನಿಂತಿದ್ದಾಗ ಕೆಲ ವ್ಯಕ್ತಿಗಳು ಆಕೆಯ ಕಡೆ ಟಾರ್ಚ್ ಹಾಕಿ ಕಳ್ಳಿ ಎಂದು ಕೂಗಿದ್ದರು. ಧಾವಿಸಿ ಬಂದ ಸ್ಥಳೀಯರೆಲ್ಲ ಆಕೆಯ ಕಡೆಗೆ ಓಡಿ ಹೋಗಿದ್ದಾರೆ. ಈ ವೇಳೆ ಯುವತಿ ಟೆರೇಸ್ ಬಾಗಿಲು ತೆರೆದು ಮನೆಯೊಳಗೆ ಹೋಗಲು ನೋಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಹಾಗಾಗಿ, ಹೆದರಿದ ಯುವತಿ ಟೆರೇಸ್‌ನಿಂದ ಕೆಳಗೆ ಹಾರಿದ್ದರು. ಈ ವೇಳೆ ಆಕೆಯನ್ನು ಬೆನ್ನಟ್ಟಿದ ಸ್ಥಳೀಯರು ಕಂಬಕ್ಕೆ ಕಟ್ಟಿ ಹಾಕಿ ಕೋಲಿನಿಂದ ಥಳಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಯುವತಿ ಕೈಮುಗಿದು “ನಾನು ಕಳ್ಳಿ ಅಲ್ಲ, ಪೊಲೀಸರನ್ನು ಕರೆಯಿರಿ” ಎಂದು ಪದೇ ಪದೇ ಹೇಳುತ್ತಿರುವುದು ಮತ್ತು ಅದನ್ನು ಕೇಳಿಸಿಕೊಳ್ಳದೆ ಸ್ಥಳೀಯರ ಗುಂಪು ಆಕೆಗೆ ಥಳಿಸುವುದನ್ನು ನೋಡಬಹುದು.
थाना किला क्षेत्रान्तर्गत एक युवती के साथ मारपीट/अभद्र व्यवहार की घटना की सूचना पर पुलिस द्वारा 04 अभियुक्तों को गिरफ्तार कर की जा रही पुलिस कार्यवाही के सम्बन्ध में । #UPPolice https://t.co/KjjXBbdPWF pic.twitter.com/OGslzABVJU
— Bareilly Police (@bareillypolice) August 2, 2025
ವಿಡಿಯೋ ಸಾಕ್ಷ್ಯ ಮತ್ತು ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬರದಾರಿಯ ನಿವಾಸಿಗಳಾದ ಗೌರವ್ ಸಕ್ಸೇನಾ, ಶಿವಂ ಸಕ್ಸೇನಾ, ಅಮನ್ ಸಕ್ಸೇನಾ ಮತ್ತು ಅರುಣ್ ಸೈನಿ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾನುಷ್ ಪರೀಕ್ ತಿಳಿಸಿದ್ದಾರೆ.
ಉಳಿದ ಆರೋಪಿಗಳನ್ನು ಗುರುತಿಸಿ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ತಾನು ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ, ಕೆಲಸ ಕಳೆದುಕೊಂಡ ಕಾರಣ ಪರಿಚಿತ ವ್ಯಕ್ತಿಯ ಮೂಲಕ ಕೆಲಸ ಹುಡುಕಿಕೊಂಡು ಬರೇಲಿಗೆ ಬಂದಿದ್ದೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಹಲ್ಲೆಯಿಂದ ಆಕೆಯ ಎರಡು ಹಲ್ಲುಗಳು ಮುರಿದಿವೆ. ಕಾಲಿಗೆ ಗಾಯಗಳಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವರಿಸಿದ್ದಾರೆ.
ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.


