ಸೋಮವಾರ (ಅ.21) ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಬ್ರಿಟನ್‌ನ ರಾಜ ಮೂರನೆಯ ಚಾರ್ಲ್ಸ್ ಭಾಷಣದ ಬಳಿಕ ಸ್ಥಳೀಯ ಸೆನೆಟರ್ (ಸಂಸದೆ) ಲಿಡಿಯಾ ಥೋರ್ಪ್ ಅವರು ವಸಾಹುಶಾಹಿ ದಬ್ಬಾಳಿಕೆಯ ವಿರುದ್ದ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಕಿಂಗ್ ಚಾರ್ಲ್ಸ್ ಭಾಷಣ ಕೊನೆಗೊಳಿಸುತ್ತಿದ್ದಂತೆ ಸಂಸತ್ ಸಭಾಂಗಣಕ್ಕೆ ಆಗಮಿಸಿದ ಸೆನೆಟರ್ ಥೋರ್ಪ್ ಅವರು, “ನೀವು ನಮ್ಮ ರಾಜನಲ್ಲ” ಎಂದು ಘೋಷಣೆ ಕೂಗಿದ್ದು, “ನಮ್ಮ ಭೂಮಿಯನ್ನು ನಮಗೆ ಹಿಂದಿರುಗಿಸಿ” ಎಂದಿದ್ದಾರೆ.
BREAKING:
The end of King Charles speech has been interrupted by a protest from an indigenous campaigner.
Senator Lidia Thorpe shouted at the stage “you are not our King”, “this is not your land”.
She demanded the King apologise for British atrocities in Australia pic.twitter.com/ZytV8X9OC9— Chris Ship (@chrisshipitv) October 21, 2024
ಬ್ರಿಟನ್‌ನ ಐತಿಹಾಸಿಕ ದೌರ್ಜನ್ಯಗಳ ವಿರುದ್ದ ಸೆನೆಟರ್ ಥೋರ್ಪ್ ಪ್ರತಿಭಟಿಸಿದ್ದು, ಆಸ್ಟ್ರೇಲಿಯಾದ ಮೇಲೆ ಬ್ರಿಟನ್ ವಸಾಹತುಶಾಹಿಗಳು ನಡೆಸಿದ ದಬ್ಬಾಳಿಕೆಗೆ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಕರೆದೊಯ್ದರು. ಲಿಡಿಯಾ ಥೋರ್ಪ್ ಅವರು ಸೆನೆಟರ್ ಮಾತ್ರವಲ್ಲದೆ, ಆಸ್ಟ್ರೇಲಿಯಾದ ಮೂಲ ನಿವಾಸಿಗಳ ಹಕ್ಕುಗಳ ದೀರ್ಘಾವಧಿಯ ವಕೀಲರಾಗಿದ್ದಾರೆ.
ಬ್ರಿಟಿಷ್ ವಸಾಹತುಶಾಹಿಗಳು ಅಸ್ಟ್ರೇಲಿಯಾದ ಮೂಲ ನಿವಾಸಿಗಳನ್ನು ನರಮೇಧ ನಡೆಸಿದ ಆರೋಪವನ್ನು ಥೋರ್ಪ್ ಮಾಡಿದ್ದು, “ನೀವು ನಮ್ಮಿಂದ ಕದ್ದಿರುವ ನಮ್ಮ ಭೂಮಿಯನ್ನು ನಮಗೆ ವಾಪಸ್ ಕೊಡಿ” ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯ ವೇಳೆ ಥೋರ್ಪ್ ಅವರು ಸಾಂಪ್ರದಾಯಿಕ ‘ಪೊಸಮ್’ ಚರ್ಮದ ಮೇಲಂಗಿಯನ್ನು ಧರಿಸಿದ್ದರು.
230 ವರ್ಷಗಳ ಹಿಂದೆ ಬ್ರಿಟಿಷ್ ವಸಾಹತುಗಾರರು ಆಸ್ಟ್ರೇಲಿಯಾಕ್ಕೆ ಬಂದು ನೆಲೆಸುವುದಕ್ಕೂ ಮುನ್ನ, ಹತ್ತಾರು ಸಾವಿರಾರು ವರ್ಷಗಳಿಂದ ಆಸ್ಟ್ರೇಲಿಯದಲ್ಲಿರುವ ಮೂಲ ನಿವಾಸಿಗಳನ್ನು ಕಿಂಗ್ ಚಾರ್ಲ್ಸ್ ತಮ್ಮ ಭಾಷಣದಲ್ಲಿ ಶ್ಲಾಘಿಸಿದ್ದರು.
“ನನ್ನ ಜೀವನಪರ್ಯಂತ ಆಸ್ಟ್ರೇಲಿಯಾದ ಮೂಲ ನಿವಾಸಿಗಳು ತಮ್ಮ ಕಥೆಗಳು ಮತ್ತು ಸಂಸ್ಕೃತಿಗಳನ್ನು ಉದಾರವಾಗಿ ಹಂಚಿಕೊಳ್ಳುವ ಮೂಲಕ ನಾನು ಭಾರೀ ಗೌರವಕ್ಕೊಳಗಾಗುವಂತೆ ಮಾಡಿದ್ದಾರೆ” ಎಂದು ಚಾರ್ಲ್ಸ್ ಹೇಳಿದ್ದರು.
ಕಿಂಗ್ ಚಾರ್ಲ್ಸ್ ಭಾಷಣಕ್ಕೂ ಮುನ್ನ ರಾಜ ಮನೆತನದ ದಂಪತಿಗೆ ಸಂಸತ್ತಿನ ಹೊರಗೆ ಸಾಂಪ್ರದಾಯಿಕ ಮೂಲ ನಿವಾಸಿ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ದೇಶದ ಬಹುಸಂಖ್ಯಾತ ಮೂಲನಿವಾಸಿಗಳ ಪೈಕಿ ಹಲವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನವಿರಲಿಲ್ಲ.
ಇದನ್ನೂ ಓದಿ : ಲಡಾಖ್‌ನ ‘ವಾಸ್ತವಿಕ ನಿಯಂತ್ರಣ ರೇಖೆ’ಯಲ್ಲಿ ಗಸ್ತು ತಿರುಗಲು ಭಾರತ-ಚೀನಾ ಒಪ್ಪಿಗೆ


