ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ ಅವರನ್ನು ದೆಹಲಿ ಪೊಲೀಸರು ಮಂಗಳವಾರ ಸಂಜೆ ಬಂಧಿಸಿದ್ದಾರೆ. ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡರು ಮುಂದಾಗಿದ್ದರು.
ಈ ಕುರಿತು ಸರಣಿ ಟ್ವೀಟ್, ರೀ ಟ್ವೀಟ್‌ಗಳನ್ನು ಬಿ.ವಿ.ಶ್ರೀನಿವಾಸ್ ಅವರ ಟ್ವಿಟರ್ ಖಾತೆಯಲ್ಲಿ ಮಾಡಲಾಗಿದೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಎಳೆದಾಡುತ್ತಿರುವ ದೃಶ್ಯಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
“ನಾವು ಸಂಸತ್ತಿನಲ್ಲಿ ಧ್ವನಿ ಎತ್ತುವಂತಿಲ್ಲ, ಸ್ವತಂತ್ರ ಭಾರತದಲ್ಲಿ ಶಾಂತಿಯುತವಾಗಿಯೂ ಟಾರ್ಚ್ ಲೈಟ್ ಮೆರೆವಣಿಗೆಯನ್ನೂ ನಡೆಸುವಂತಿಲ್ಲ. ಅಷ್ಟಕ್ಕೂ ಇದು ಯಾವ ರೀತಿಯ ಸರ್ವಾಧಿಕಾರ?” ಎಂದು ಶ್ರೀನಿವಾಸ್ ಟ್ವೀಟ್ ಮಾಡಿದ್ದಾರೆ.
संसद में हम आवाज़ नही उठा सकते, आजाद भारत की सबसे बड़ी पहचान #लाल_किले पर हम शांति मशाल मार्च नही निकाल सकते..
आखिर तानाशाही का ये कैसा दौर है?? pic.twitter.com/JH9UnnlyUz
— Srinivas BV (@srinivasiyc) March 28, 2023
“ಕೆಂಪು ಕೋಟೆಯಲ್ಲಿ ನಾವು ಶಾಂತಿಯುತವಾಗಿ ಧ್ವನಿ ಎತ್ತಲು ಸಾಧ್ಯವಾಗದಿದ್ದರೆ, ಶಾಂತಿಯ ಜ್ಯೋತಿಯನ್ನು ಬೆಳಗಿಸಲು ಸಾಧ್ಯವಿಲ್ಲ. ಹಾಗಾದರೆ ಪ್ರಜಾಪ್ರಭುತ್ವ ಎಲ್ಲಿ ಉಳಿದಿದೆ?” ಎಂದು ಪ್ರಶ್ನಿಸಿದ್ದಾರೆ.
अगर लाल किले से भी हम शांतिपूर्ण तरीके से अपनी आवाज़ बुलंद नही कर सकते, शांति की मशाल नही जला सकते,
तो फिर आखिर लोकतंत्र बचा कहाँ है? pic.twitter.com/avkI29OQ5X
— Srinivas BV (@srinivasiyc) March 28, 2023
“ಸರ್ವಾಧಿಕಾರಿ ಭಯವಿದು. ಅದಾನಿ ಹೆಸರು ಬಂದ ತಕ್ಷಣ ಸಂಸತ್ತು ಮ್ಯೂಟ್ ಆಗುತ್ತದೆ. ರಸ್ತೆಯಲ್ಲಿ ಹೋರಾಟಕ್ಕಿಳಿದರೆ, ಪೊಲೀಸರು ತಡೆಯುತ್ತಾರೆ. ‘20 ಸಾವಿರ ಕೋಟಿ’ಯ ಗುಟ್ಟು ಬಯಲಾಗುವುದಿಲ್ಲ ಎಂಬ ಆತಂಕ ಎದುರಾಗಿದೆ” ಎಂದು ಕಾಂಗ್ರೆಸ್ ಟೀಕಿಸಿದೆ.
तानाशाह का डर देखिए
अडानी का नाम आते ही संसद म्यूट करवा देता है। सड़क पर प्रदर्शन हो तो पुलिस लगवा देता है।
डर है कि '20 हजार करोड़' का राज न खुल जाए। pic.twitter.com/0Xj30nwdbE
— Congress (@INCIndia) March 28, 2023
ನ್ಯೂಸ್18 ಸಹಾಯಕ ಸಂಪಾದಕ ಅರುಣ್‌ಕುಮಾರ್ ಸಿಂಗ್ ಟ್ವೀಟ್ ಮಾಡಿದ್ದು, “ಯುವ ಕಾಂಗ್ರೆಸ್ ಅಧ್ಯಕ್ಷರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ” ಎಂದು ತಿಳಿಸಿದ್ದಾರೆ.
लाल किला के पास खासी मशक्कत के बाद @IYC अध्यक्ष @srinivasiyc और कार्यकर्ताओं को हिरासत में लेती पुलिस। pic.twitter.com/F9kPhfjsgv
— Arun Kumar Singh (@arunsingh4775) March 28, 2023
‘ಲೋಕತಂತ್ರ ಬಚಾವೋ ಮಶಾಲ್ ಮಾರ್ಚ್’ ಹಮ್ಮಿಕೊಳ್ಳಲಾಗಿತ್ತು. ಕೆಂಪು ಕೋಟೆಯಿಂದ ಟೌನ್ ಹಾಲ್ ಹೋಗಲು ಪೊಲೀಸರು ಅನುಮತಿ ನೀಡಲಿಲ್ಲ. ಹಲವರನ್ನು ಬಂಧಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿರುವುದಾಗಿ ಪತ್ರಕರ್ತ ನೋಮನ್ ಸಿದ್ದಿಕಿ ಟ್ವೀಟ್ ಮಾಡಿದ್ದಾರೆ.
#Congress Members of the grand old party allege Delhi Police did not allow their 'Loktantra Bachao Mashal March' from Red Fort to Town Hall & have detained several @INCIndia workers including @IYC president @srinivasiyc #RahulGandhi #Adani pic.twitter.com/FRUUVn3Zix
— Noman Siddiqui (@nomanssiddiqui) March 28, 2023
ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಸಚಿವೆ ಸ್ಮೃತಿ ಇರಾನಿಯವರನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ತುಚ್ಛವಾಗಿ ಟೀಕಿಸಿದರೆ?


