ಸಂಗೀತದ ದಂತಕಥೆಗಳಾದ ಎ.ಆರ್. ರೆಹಮಾನ್ ಮತ್ತು ಇಳಯರಾಜ ಮುಂದಿನ ತಿಂಗಳು ನಡೆಯುವ ಮೈಸೂರು ದಸರಾ 2024ರ ಆಚರಣೆಯ ಸಂದರ್ಭದಲ್ಲಿ ಯುವ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಬ್ಬರು ದಿಗ್ಗಜರು ಕೂಡಾ ಇದೆ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಕ್ಟೋಬರ್ 6 ರಂದು ಯುವ ದಸರಾವನ್ನು ಚಲನಚಿತ್ರ ನಿರ್ಮಾಪಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.
ಜಿಲ್ಲಾಡಳಿತವು ಯುವ ದಸರವನ್ನು ಮೈಸೂರು ಹೊರವಲಯದಲ್ಲಿರುವ ಮಹಾರಾಜ ಕಾಲೇಜು ಮೈದಾನದಿಂದ ಉತ್ತನಹಳ್ಳಿ ಮೈದಾನಕ್ಕೆ ಸ್ಥಳವನ್ನು ಬದಲಾಯಿಸಿದ್ದು ಮಾತ್ರವಲ್ಲದೆ ಪ್ರವೇಶ ಶುಲ್ಕವನ್ನು ಸಹ ಪರಿಚಯಿಸಿದೆ. ಕಾರ್ಯಕ್ರಮದ ಗೋಷ್ಠಿಗಳಿಗೆ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರುವ ನಿರೀಕ್ಷೆಯಿದೆ.
ಇದನ್ನೂಓದಿ: FACT CHECK : ಮುಂಬೈನಲ್ಲಿ ಮುಸ್ಲಿಮರಿಂದ ಶಕ್ತಿ ಪ್ರದರ್ಶನ ಎಂದು ಸಂಬಂಧವಿಲ್ಲದ ವಿಡಿಯೋ
ವೇದಿಕೆಯ ಬಳಿ ವಿಶೇಷ ವಿಐಪಿ ಆಸನ ವ್ಯವಸ್ಥೆ 8,000 ರೂ.ಗೆ ಲಭ್ಯವಿದ್ದು, ಪ್ರೀಮಿಯಂ ಗ್ಯಾಲರಿಯ ಟಿಕೆಟ್‌ಗಳು 5,000 ರೂ.ಗೆ ಲಭ್ಯವಿರುತ್ತದೆ ಎಂದು ಯುವ ದಸರಾ ಉಪಸಮಿತಿ ಬುಧವಾರ ಪ್ರಕಟಿಸಿದೆ. ಈ ಹಿಂದೆ, ವಿಐಪಿ ಪಾಸ್‌ಗಳು ಮತ್ತು ಗೋಲ್ಡ್ ಕಾರ್ಡ್‌ಗಳನ್ನು ಹೊಂದಿರುವವರಿಗೆ ಪ್ರೀಮಿಯಂ ಗ್ಯಾಲರಿಗೆ ಪ್ರವೇಶವನ್ನು ನೀಡಲಾಗಿತ್ತು.
ಸೆಪ್ಟೆಂಬರ್ 27ರ ಶುಕ್ರವಾರದಿಂದ ಬುಕ್ ಮೈ ಶೋ ಮತ್ತು http://www.mysoredasara.gov.in ನಲ್ಲಿ ಟಿಕೆಟ್‌ಗಳು ಲಭ್ಯವಿರುತ್ತವೆ. ಅಕ್ಟೋಬರ್ 6 ರಂದು ಗಾಯಕಿ ಶ್ರೇಯಾ ಘೋಷಾಲ್, ಅಕ್ಟೋಬರ್ 7 ರಂದು ಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್, ಅಕ್ಟೋಬರ್ 8 ರಂದು ರಾಪರ್ ಬಾದ್‌ಶಾ, ಅಕ್ಟೋಬರ್ 9 ರಂದು ಎ.ಆರ್. ರೆಹಮಾನ್ ಮತ್ತು ಅಕ್ಟೋಬರ್ 10 ರಂದು ಇಳಯರಾಜ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವಿಡಿಯೊ ನೋಡಿ: ಕಲಬುರಗಿ- ಗೌರಿಯದ್ದು ವೈಚಾರಿಕ ಕೊಲೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಮಾತುಗಳು


