ಝೀ ಮೀಡಿಯಾವು “ತಬ್ಲಿಘಿ ಜಮಾಅತ್ ಸದಸ್ಯರು ವೈದ್ಯರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಟ್ವೀಟ್ ಮಾಡಿ ಸುಳ್ಳು ಸುದ್ದಿ” ಹರಡಿದೆ. ಆದರೆ ಕೆಲವೇ ಕ್ಷಣಗಳಲ್ಲಿ ಬಿಜೆಪಿ ಪರವಿರುವ ಝಿ ನ್ಯೂಸ್ ಹರಡಿರುವುದು ಸುಳ್ಳು ಸುದ್ದಿ ಎಂದು ಗೊತ್ತಾಗಿ ಅದು ಸಿಕ್ಕಿಬಿದ್ದಿದೆ. ನಂತರ ಉತ್ತರ ಪ್ರದೇಶದ ಫಿರೋಜಾಬಾದ್ ಪೊಲೀಸರು ಎಚ್ಚರಿಕೆ ನೀಡಿದ ನಂತರ ಟ್ವೀಟ್ ಅನ್ನು ಅಳಿಸಲಾಗಿದೆ.
ಈಗ ಅಳಿಸಲಾಗಿರುವ ತನ್ನ ಟ್ವೀಟ್‌ನಲ್ಲಿ, ಉತ್ತರ ಪ್ರದೇಶ ಉತ್ತರಾಖಂಡ್ ಝೀ ನ್ಯೂಸ್ ಟ್ವಿಟ್ಟರ್ ಅಕೌಂಟ್‌ನಿಂದ “ಫಿರೋಜಾಬಾದ್‌ನಲ್ಲಿ ನಾಲ್ಕು ತಬ್ಲೀಘಿ ಜಮಾತ್ ಸದಸ್ಯರ ಕೊರನಾ ಪರೀಕ್ಷೆಯಲ್ಲಿ ಧನಾತ್ಮಕ ಬಂದಿದೆ. ಅದರ ವರದಿ ತೆಗೆದುಕೊಳ್ಳಲು ಬಂದಾಗ ಅವರು ಅಲ್ಲಿರುವ ವೈದ್ಯಕೀಯ ತಂಡದ ಮೇಲೆ ಕಲ್ಲು ತೂರಿದ್ದಾರೆ” ಎಂದು ಟ್ವೀಟ್ ಮಾಡಿದೆ.

ಝೀ ನ್ಯೂಸ್‌ನ ನಕಲಿ ಸುದ್ದಿಗೆ ಕೂಡಲೇ ಪ್ರತಿಕ್ರಿಯಿಸಿದ ಫಿರೋಜಾಬಾದ್ ಪೊಲೀಸರು, “ನೀವು ನಕಲಿ ಮತ್ತು ದಾರಿತಪ್ಪಿಸುವ ಸುದ್ದಿಗಳನ್ನು ಹರಡುತ್ತಿದ್ದೀರಿ. ಫಿರೋಜಾಬಾದ್‌ನಲ್ಲಿ ವೈದ್ಯಕೀಯ ತಂಡ ಅಥವಾ ಆಂಬುಲೆನ್ಸ್ ಮೇಲೆ ಯಾವುದೇ ಕಲ್ಲು ತೂರಾಟದ ಘಟನೆಗಳು ನಡೆದಿಲ್ಲ. ನೀವು ಪೋಸ್ಟ್ ಮಾಡಿದ ಈ ಟ್ವೀಟ್ ಅನ್ನು ನೀವು ತಕ್ಷಣ ಅಳಿಸಬೇಕು” ಎಂದು ತಾಕೀತು ಮಾಡಿದ್ದಾರೆ.
ಝೀ ನ್ಯೂಸ್ ನಿಜಕ್ಕೂ ಮುಸ್ಲಿಂ ಸಮುದಾಯವನ್ನು ಅವಮಾನಿಸಲು ಈ ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡಿದೆ. ಕೆಲವು ಟ್ವಿಟ್ಟರ್ ಬಳಕೆದಾರರು ಫಿರೋಜಾಬಾದ್ ಪೊಲೀಸರಿಂದ ಈ ದೃಢೀಕರಣವನ್ನು ಕೋರಿದಾಗ, ಆ ಟ್ವೀಟ್ ಅನ್ನು ಈಗ ಅಳಿಸಲಾಗಿದೆ ಎಂದು ಅವರು ದೃಢಪಡಿಸಿದ್ದಾರೆ.
@firozabadpolice @ZEEUPUK
राजस्थान में यह ट्वीट वायरल हो रहा है, कृपया करके @ZEEUPUK @Uppolice व @firozabadpolice सुनिश्चित करे की यह ट्वीट डिलीट हुआ या नही ।
कृपया करके जानकारी दें । pic.twitter.com/mZMvFSxEpK— Mohsin Rasheed Tonk (@msinkhan) April 6, 2020
ಝೀ ನ್ಯೂಸ್ ಅಂದಿನಿಂದ ತಬ್ಲೀಘಿ ಜಮಾಅತ್ ಬಗ್ಗೆ ನಕಲಿ ಸುದ್ದಿಗಳನ್ನು ಒಳಗೊಂಡಿರುವ ಟ್ವೀಟ್ ಅನ್ನು ಅಳಿಸಿದೆ. ಅದರ ಶೀರ್ಷಿಕೆಯಿಂದ ಕಲ್ಲು ತೂರಿದ್ದಾರೆ ಎಂಬುದನ್ನು ತೆಗೆದುಹಾಕುವ ಮೂಲಕ ಅದು ತನ್ನ ಸುದ್ದಿಯನ್ನು ಎಡಿಟ್ ಮಾಡಿದೆ. ಈಗ “ಫಿರೋಜಾಬಾದ್‌ನ ಫಾರ್ಸಿ ಮಸೀದಿಯಲ್ಲಿದ್ದ ತಬ್ಲಿಘಿ ಜಮಾಅತ್‌ನ ನಾಲ್ಕು ಜನರು ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್” ಆಗಿದ್ದಾರೆ. ಎಂದು ಬರೆದಿದೆ.
ಈ ಹಿಂದೆ, ಕೆಲವು ಮಾಧ್ಯಮಗಳು “ಕ್ಯಾರೆಂಟೈನ್ ನಲ್ಲಿರುವ ತಬ್ಲೀಘಿ ಜಮಾಅತ್ ಸದಸ್ಯರು ಮಾಂಸಹಾರಿ ಆಹಾರಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಮತ್ತು ಅವರ ಬೇಡಿಕೆಗಳನ್ನು ಈಡೇರಿಸದಿದ್ದಾಗ ಗಲಾಟೆ ಉಂಟುಮಾಡಿದ್ದಾರೆ” ಎಂದು ಆರೋಪಿಸಿದ್ದರು. ಆದರೆ ಈ ಹೇಳಿಕೆಯನ್ನು ಉತ್ತರ ಪ್ರದೇಶದ ಸಹರಾನ್ಪುರ್ ಪೊಲೀಸರು ನಕಲಿ ಸುದ್ದಿ ಎಂದು ಸ್ಪಷ್ಟಪಡಿಸಿ ವಿವರವಾದ ಹೇಳಿಕೆ ನೀಡಿದ್ದರು.
ದೆಹಲಿ ಪೊಲೀಸರು ತಬ್ಲಿಘಿ ಜಮಾಅತ್ ಸದಸ್ಯರನ್ನು ನಿಜಾಮುದ್ದೀನ್ ಮಾರ್ಕಾಜ್‌ನಿಂದ ಸ್ಥಳಾಂತರಿಸಿದಾಗಿನಿಂದಲೂ, ಹಲವಾರು ಮಾಧ್ಯಮಗಳು ಭಾರತದ ಮುಸ್ಲಿಂ ಸಮುದಾಯದ ವಿರುದ್ಧ ನಿರಂತರವಾಗಿ ದುರುದ್ದೇಶಪ್ರೇರಿತ ಅಭಿಯಾನವನ್ನು ನಡೆಸುತ್ತಿದ್ದಾರೆ. ತಬ್ಲಿಘಿ ಜಮಾಅತ್ ಸದಸ್ಯರು ವೈದ್ಯರು ಮತ್ತು ಪೊಲೀಸರ ಮೇಲೆ ಉಗುಳಿದ್ದಾರೆ ಎಂದು ಕೆಲವರು ಸುದ್ದಿ ಮಾಡಿದರೆ ಮತ್ತೆ ಕೆಲವರು ದಾದಿಯರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು.
ಆದರೆ, ನಿಜಾಮುದ್ದೀನ್ ಮಾರ್ಕಾಜ್ ಅವರನ್ನು ಸ್ಥಳಾಂತರಿಸಿದ ತಂಡದ ಭಾಗವಾಗಿದ್ದ ವೈದ್ಯಕೀಯ ಅಧಿಕಾರಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಅವರು ಯಾರೊಂದಿಗೆ ಕೆಟ್ಟದಾಗಿ ವರ್ತಿಸಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
ಕೃಪೆ: ಜನತಾ ಕಾ ರಿಪೋರ್ಟರ್
ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ


