ಅಮೆರಿಕಾಕ್ಕೆ ಮಲೇರಿಯಾ ಔಷಧಿ ಪೂರೈಸದಿದ್ದರೆ ಪ್ರತಿಕಾರ: ಭಾರತದ ಉತ್ತರ?

ಪ್ರಪಂಚದೆಲ್ಲೆಡೆ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಸದ್ಯಕ್ಕೆ ಮಲೇರಿಯಾ ನಿರೋಧಕ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಕೊರೊನಾ ಸೋಂಕಿತರಿಗೂ ನೀಡಲಾಗುತ್ತದೆ. ಹಾಗಾಗಿ ಭಾರತ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್ ಮೇಲಿನ ರಫ್ತು ನಿರ್ಬಂಧವನ್ನು ತೆರವುಗೊಳಿಸದಿದ್ದರೆ ಪ್ರತಿಕಾರ ಅನಿವಾರ್ಯ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಧಮಕಿ ಹಾಕಿದ್ದಾರೆ.

ವೈಟ್‌ಹೌಸ್‌ನಲ್ಲಿ ಮಾತನಾಡಿದ ಅವರು “ಕೊರೊನಾ ಹಿನ್ನೆಲೆಯಲ್ಲಿ ಮಲೇರಿಯಾ ನಿರೋಧಕವನ್ನು ಕಳಿಸಿಕೊಡುವಂತೆ ಭಾರತರವನ್ನು ಕೋರಲಾಗಿದೆ. ಆದರೂ ಅವರು ಅದರ ಮೇಲಿನ ರಫ್ತುನಿರ್ಬಂದವನ್ನು ತೆರವುಗೊಳಿಸದಿರುವುದು ಏಕೆಂದು ತಿಳಿಯುತ್ತಿಲ್ಲ. ಹಾಗೇನಾದರೂ ಅವರು ನಮ್ಮ ಮನವಿಯನ್ನು ತಿರಸ್ಕರಿಸಿ ಔಷಧಿ ಪೂರೈಸದಿದ್ದರೆ ಪ್ರತಿಕಾರವಂತೂ ಇದ್ದೇ ಇರುತ್ತದೆ ಎಂದು ಟ್ರಂಪ್‌ ತಿಳಿಸಿದ್ದಾರೆ.

ಭಾರತದಲ್ಲಿಯೂ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣದಿಂದ ಮಾರ್ಚ್‌ 25ರಂದು ಭಾರತವು ಹೈಡ್ರಾಕ್ಸಿಕ್ಲೋರೋಕ್ವಿನ್ ಮೇಲೆ ರಫ್ತು ನಿರ್ಬಂಧವನ್ನು ಹೇರಿತ್ತು. ಆದರೆ ಟ್ರಂಪ್‌ ಮೋದಿಯವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕಳಿಸುವಂತೆ ಇತ್ತೀಚೆಗೆ ಮನವಿ ಮಾಡಿದ್ದರು. ಆದರೆ ಭಾರತದಲ್ಲಿಯೂ ಕೊರೊನಾ ಉಲ್ಬಣಗೊಳ್ಳುತ್ತಿರುವ ಕಾರಣದಿಂದ ಭಾರತ ಸರ್ಕಾರ ಇದುವರೆಗೂ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿರಲಿಲ್ಲ.

ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಪ್ರತೀಕಾರದ” ಬೆದರಿಕೆಗೆ ಗುರಿಯಾಗಲು ಭಾರತವು ನಿರಾಕರಿಸಿದ್ದು, ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿರ್ಬಂಧವನ್ನು ಭಾರತ ಭಾಗಶಃ ಸಡಿಲಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಸಾಂಕ್ರಾಮಿಕ ರೋಗದ ಮಾನವೀಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಸಾಮರ್ಥ್ಯಗಳ ಮೇಲೆ ಅವಲಂಬಿತವಾಗಿರುವ ನಮ್ಮ ಎಲ್ಲಾ ನೆರೆಯ ರಾಷ್ಟ್ರಗಳಿಗೆ ಭಾರತವು ಪ್ಯಾರಸಿಟಮಾಲ್ ಮತ್ತು ಹೈಡ್ರಾಕ್ಸಿಕ್ಲೋರೊಕ್ವಿನ್‌ ರಫ್ತಿಗೆ ಸೂಕ್ತ ಪ್ರಮಾಣದಲ್ಲಿ ಪರವಾನಗಿ ನೀಡಲಿದೆ ಎಂದು ನಿರ್ಧರಿಸಲಾಗಿದೆ. ನಾವು ಈ ಅಗತ್ಯ ಔಷಧಿಗಳನ್ನು ಸಾಂಕ್ರಾಮಿಕ ರೋಗದಿಂದ ವಿಶೇಷವಾಗಿ ಕೆಟ್ಟ ಪರಿಣಾಮ ಬೀರಿದ ಕೆಲವು ರಾಷ್ಟ್ರಗಳಿಗೆ ಪೂರೈಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಎಲ್ಲಾ ದೇಶೀಯ ಅವಶ್ಯಕತೆಗಳನ್ನು ಪೂರೈಸಿದ ನಂತರವೇ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್‌ ಮಾತ್ರೆಗಳನ್ನು ಇತರ ದೇಶಗಳಿಗೆ ರಫ್ತು ಮಾಡಲಾಗುವುದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಪ್ರಪಂಚದೆಲ್ಲಿಯೇ ಹೈಡ್ರಾಕ್ಸಿಕ್ಲೋರೊಕ್ವಿನ್ ಉತ್ಪಾದಿಸುವಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಆರಂಭದಲ್ಲಿ ದೇಶೀಯ ಸರಬರಾಜನ್ನು ಖಚಿತಪಡಿಸಿಕೊಳ್ಳಲು ಮಾರ್ಚ್ 25 ರಂದು ಭಾರತವು ರಫ್ತು ಮಾಡುವುದನ್ನು ನಿಷೇಧಿಸಿತು. ನಂತರ ಏಪ್ರಿಲ್ 4 ರಂದು ನಿಯಮಗಳನ್ನು ಬಿಗಿಗೊಳಿಸಲಾಯಿತು.

ಈ ಕುರಿತು ಶಶಿ ತರೂರ್‌ ಟ್ವೀಟ್‌ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿಶ್ವ ವ್ಯವಹಾರಗಳ ನನ್ನ ದಶಕಗಳ ಅನುಭವದಲ್ಲಿ ಎಂದಿಗೂ ಯಾವುದೇ ರಾಷ್ಟ್ರದ ಮುಖ್ಯಸ್ಥರು ಅಥವಾ ಸರ್ಕಾರ ಈ ರೀತಿಯ ಇನ್ನೊಬ್ಬರಿಗೆ ಬಹಿರಂಗವಾಗಿ ಬೆದರಿಕೆ ಹಾಕುವುದನ್ನು ನಾನು ಕೇಳಿಲ್ಲ. ಮಿಸ್ಟರ್ ಪ್ರೆಸಿಡೆಂಟ್, ಭಾರತೀಯ ಹೈಡ್ರಾಕ್ಸಿಕ್ಲೋರೋಕ್ವಿನ್ ಅದು “ನಮ್ಮ ಪೂರೈಕೆ”ಯಾಗಿರುತ್ತದೆ. ಭಾರತವು ಅದನ್ನು ನಿಮಗೆ ಮಾರಾಟ ಮಾಡಲು ನಿರ್ಧರಿಸಿದಾಗ ಮಾತ್ರ ಅದು ನಿಮ್ಮ ಪೂರೈಕೆಯಾಗುತ್ತದೆ ತಿಳಿಯಿರಿ” ಎಂದು ಕಿಡಿಕಾರಿದ್ದಾರೆ.

ನರೇಂದ್ರ ಮೋದಿಯವರು ತೆರಿಗೆ ಪಾವತಿದಾರರ ಹಣವನ್ನು ಕೋಟಿಗಟ್ಟಲೆ ಖರ್ಚು ಮಾಡಿ ಡೊನಾಲ್ಡ್‌ ಟ್ರಂಪ್‌ಗೆ ಭರ್ಜರಿ ಸ್ವಾಗತ ನೀಡಿದ್ದರು. ಇಂದು ಅದೇ ವ್ಯಕ್ತಿ ಭಾರತದ ವಿರುದ್ಧ ಪ್ರತೀಕಾರದ ಬಗ್ಗೆ ಮಾತನಾಡುತ್ತಾನೆ. ಭಾರತವು ಪ್ರತಿ ದೇಶಕ್ಕೂ ಎಲ್ಲ ರೀತಿಯಿಂದಲೂ ಸಹಾಯ ಮಾಡಬೇಕು ಆದರೆ ಮೊದಲು ಅದು ತನ್ನ ನಾಗರಿಕರ ಅಗತ್ಯಗಳನ್ನು ಪೂರೈಸಿರಬೇಕು ಎಂದು ಆಲ್ಟ್‌ನ್ಯೂಸ್‌ ಸ್ಥಾಪಕ ಪ್ರತೀಕ್‌ ಸಿನ್ಹಾ ತಿಳಿಸಿದ್ದಾರೆ.

https://twitter.com/free_thinker/status/1247383311854342145

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here