Homeಮುಖಪುಟಏಪ್ರಿಲ್ 14 ರಂದು ಲಾಕ್‌ಡೌನ್ ಕೊನೆಗೊಳ್ಳುವುದೇ? ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದೇನು?

ಏಪ್ರಿಲ್ 14 ರಂದು ಲಾಕ್‌ಡೌನ್ ಕೊನೆಗೊಳ್ಳುವುದೇ? ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದೇನು?

- Advertisement -
- Advertisement -

ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಷ್ಟ್ರೀಯ ಲಾಕ್‌ಡೌನ್ ಅನ್ನು ಏಪ್ರಿಲ್ 15ರ ನಂತರವೂ ವಿಸ್ತರಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ “ರಾಷ್ಟ್ರೀಯ ಹಿತದೃಷ್ಟಿಯಿಂದ. ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

“ನಾವು ಪ್ರತಿ ನಿಮಿಷವೂ ವಿಶ್ವದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅದಕ್ಕಾಗಿಯೇ ತಜ್ಞರ ತಂಡ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸರಿಯಾದ ಸಮಯದಲ್ಲಿ ನಿರ್ಧಾರ ಘೋಷಿಸಲಾಗುವುದು” ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ವಿಡಿಯೋ ಲಿಂಕ್ ಮೂಲಕ ಕೇಂದ್ರ ಸಚಿವ ಸಂಪುಟದ ಸಭೆಯ ನಂತರ ಹೇಳಿದ್ದಾರೆ.

ಆದಾಗ್ಯೂ, ಉತ್ತರ ಪ್ರದೇಶದ ಉನ್ನತ ಅಧಿಕಾರಿಯೊಬ್ಬರು, COVID-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜನರು ಇನ್ನೂ ಹೆಚ್ಚು ಸಮಯ ಕಾಯಬೇಕಾಗಬಹುದು ಎಂದು ಹೇಳಿದ್ದಾರೆ.

“ರಾಜ್ಯವು ಕೊರೋನಾ ಮುಕ್ತವಾಗಿದೆ ಎಂಬ ಖಚಿತ ಪರಿಸ್ಥಿತಿ ಇದ್ದಾಗ ಮಾತ್ರ ನಾವು ನಾವು ಲಾಕ್‌ಡೌನ್ ಅನ್ನು ತೆರವುಗೊಳಿಸಬಹುದು. ಒಬ್ಬ ಕೊರೋನಾ ಸಕಾರಾತ್ಮಕ ವ್ಯಕ್ತಿ ಉಳಿದಿದ್ದರೂ ಸಹ ಲಾಕ್‌ಡೌನ್ ತೆರೆಯುವುದು ತುಂಬಾ ಕಷ್ಟವಾಗುತ್ತದೆ. ಮತ್ತು ಅದಕ್ಕಾಗಿ ಇನ್ನು ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು” ಎಂದು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಅವಸ್ಥಿ ಹೇಳಿದ್ದಾರೆ.

ಸರ್ಕಾರ ಲಾಕ್‌ ಡೌನ್‌ ಅನ್ನು ಮುಂದುವರಿಸುತ್ತದೆ ಎಂದು ಹಲವರು ನಂಬಿದ್ದಾರೆ. ಆದರೆ ಆರ್ಥಿಕ ವೆಚ್ಚಗಳು ಮತ್ತು ಅಗತ್ಯ ವಸ್ತುಗಳ ಅಗತ್ಯತೆ ಹೆಚ್ಚುತ್ತಿರುವುದರಿಂದ ಭಾಗಶಃ ತೆರವುಗೊಳಿಸಬಹುದು ಎಂದು ಇನ್ನು ಕೆಲವರು ನಂಬಿದ್ದಾರೆ.

ದೃಢೀಕರಿಸದ ವರದಿಗಳು ಹೇಳುವಂತೆ ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡಬಹುದು, ವಿಮಾನಗಳನ್ನು ಭಾಗಶಃ ತೆರೆಯಬಹುದು ಮತ್ತು ಸಂಪೂರ್ಣ ಲಾಕ್‌ಡೌನ್ ಹೆಚ್ಚು ಕೊರೊನಾ ಇರುವ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಬಹುದು ಎಂದು ಸೂಚನೆ ನೀಡಿವೆ.

ಲಾಕ್‌ಡೌನ್‌ ಕುರಿತು ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ನಿರ್ಧಾರ ತೆಗೆದುಕೊಳ್ಳುವ ತೀರ್ಮಾನವನ್ನು ಕೇಂದ್ರವು ರಾಜ್ಯಗಳಿಗೆ ನೀಡಬಹುದು ಎಂಬ ಮಾತು ಸಹ ಚಾಲ್ತಿಯಲ್ಲಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿನ್ನೆ ರಾಜ್ಯ ಸಂಸದರಿಗೆ ನೀಡಿದ ಸೂಚನೆಗಳು ಸಹ ಹಲವು ಊಹಾಪೋಹಗಳಿಗೆ ಉತ್ತೇಜನ ನೀಡಿವೆ. “ಏಪ್ರಿಲ್ 15 ರಂದು ಲಾಕ್‌ಡೌನ್‌ ಅನ್ನು ತೆಗೆದುಹಾಕಲಾಗುತ್ತದೆ. ಆದರೆ ಜನಸಂದಣಿ ಸೇರದಂತೆ ನಾವು ಖಚಿತಪಡಿಸಿಕೊಳ್ಳಬೇಕು. ಲಾಕ್‌ಡೌನ್ ಅನ್ನು ತೆಗೆದುಹಾಕಿದ ನಂತರ ಮತ್ತು ಜನಸಂದಣಿ ಸೇರಿದರೆ, ನಮ್ಮ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುತ್ತವೆ” ಎಂದು ಹೇಳಿದ್ದಾರೆಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಉಲ್ಲೇಖಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...