Homeಮುಖಪುಟಜುಬೀನ್ ಗರ್ಗ್ 'ಹತ್ಯೆ' ಪ್ರಕರಣ: ಅಸ್ಸಾಂ ಸಿಐಡಿಯಿಂದ 3,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಜುಬೀನ್ ಗರ್ಗ್ ‘ಹತ್ಯೆ’ ಪ್ರಕರಣ: ಅಸ್ಸಾಂ ಸಿಐಡಿಯಿಂದ 3,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

- Advertisement -
- Advertisement -

ಗುವಾಹಟಿ: ಖ್ಯಾತ ಗಾಯಕ ಜುಬೀನ್ ಗರ್ಗ್ ಅವರ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಅಸ್ಸಾಂ ಸಿಐಡಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಗುವಾಹಟಿಯ ನ್ಯಾಯಾಲಯದಲ್ಲಿ 3,500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ

ಅಸ್ಸಾಂ ಸಾಂಸ್ಕೃತಿಕ ಪ್ರತಿಮೆ ಎಂದೇ ಗುರಿತಿಕೊಂಡಿದ್ದ ಜುಬೀನ್ ಗರ್ಗ್ ಅವರ ಸಾವು ಕೊಲೆಯೇ ಅಥವಾ ಅಪಘಾತ ಪ್ರಕರಣವೇ ಎಂಬ ಊಹಾಪೋಹಗಳ ನಡುವೆಯೇ ಎಸ್ಐಟಿ ತನ್ನ ಆರೋಪಪಟ್ಟಿಯನ್ನು ಸಲ್ಲಿಸಿದೆ.

ಸಿಐಡಿಯ ವಿಶೇಷ ಮಹಾನಿರ್ದೇಶಕ ಮುನ್ನಾ ಪ್ರಸಾದ್ ಗುಪ್ತಾ ನೇತೃತ್ವದ ಎಸ್‌ಐಟಿ, ಗುವಾಹಟಿಯ ಕಾಮರೂಪ ಮೆಟ್ರೋಪೊಲಿಟನ್ ಜಿಲ್ಲೆ(ಮಹಾನಗರ) ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ 3,500 ಕ್ಕೂ ಹೆಚ್ಚು ಪುಟಗಳು ಮತ್ತು ಲಗತ್ತುಗಳನ್ನು ಒಳಗೊಂಡ ಆರೋಪಪಟ್ಟಿಯನ್ನು ಸಲ್ಲಿಸಿದೆ. 

ದಾಖಲೆಗಳನ್ನು ಹೊತ್ತ ನಾಲ್ಕು ಟ್ರಂಕ್‌ಗಳನ್ನು ಬೆಳಿಗ್ಗೆ 11.20 ರ ಸುಮಾರಿಗೆ ನ್ಯಾಯಾಲಯದೊಳಗೆ ತೆಗೆದುಕೊಂಡು ಹೋಗಿ ನ್ಯಾಯಾಲಯದ ಮುಂದೆ ಸಲ್ಲಿಸಲಾಯಿದೆ. ಜುಬೀನ್ ಅವರ ಮ್ಯಾನೇಜರ್, ಅವರ ಸೋದರ ಸಂಬಂಧಿ ಮತ್ತು ಸಿಂಗಾಪುರದಲ್ಲಿ ಉತ್ಸವದ ಆಯೋಜಕರು ಸೇರಿದಂತೆ ಏಳು ಜನರನ್ನು ಎಸ್‌ಐಟಿ ಬಂಧಿಸಿದೆ. ತನಿಖೆಯ ಸಮಯದಲ್ಲಿ ಅವರ ಕುಟುಂಬ ಸದಸ್ಯರು, ಸ್ನೇಹಿತರು, ಬ್ಯಾಂಡ್ ಸದಸ್ಯರು, ಅಭಿಮಾನಿಗಳು ಮತ್ತು ಸಿಂಗಾಪುರದಲ್ಲಿರುವ ಅಸ್ಸಾಮಿ ಎನ್‌ಆರ್‌ಐಗಳು ಸೇರಿದಂತೆ 300 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಸಿಂಗಾಪುರದಲ್ಲಿ ಸಮುದ್ರದಲ್ಲಿ ಈಜುತ್ತಿದ್ದಾಗ ಪ್ರಸಿದ್ಧ ಗಾಯಕ, ಸಂಗೀತಗಾರ, ಚಲನಚಿತ್ರ ನಿರ್ಮಾಪಕ ಮತ್ತು ನಟ ಗರ್ಗ್ ಸೆಪ್ಟೆಂಬರ್ 19 ರಂದು ನಿಧನರಾದ ನಂತರ ಅಸ್ಸಾಂನಾದ್ಯಂತ ಜನಜೀವನ ಸ್ತಬ್ಧವಾಯಿತು. ಸಿಂಗಾಪುರ ಮೂಲದ ಅಸ್ಸಾಮಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ವಿಹಾರ ನೌಕೆ ಪಾರ್ಟಿಯ ನಂತರ ಗರ್ಗ್ ತನ್ನ ಸ್ನೇಹಿತರು ಮತ್ತು ಸಹಚರರೊಂದಿಗೆ ಈಜುತ್ತಿದ್ದರು. 52 ವರ್ಷದ ಗರ್ಗ್ “ಸಾಂಸ್ಕೃತಿಕ ರಾಯಭಾರಿ”ಯಾಗಿ ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ಸಿಂಗಾಪುರದಲ್ಲಿದ್ದರು. 

ಕೊಲೆ ಅಥವಾ ಅಪಘಾತ  

ಆರಂಭದಲ್ಲಿ ಗರ್ಗ್ ಸಾವು ಅಪಘಾತದಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದರೂ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇದು ಕೊಲೆ ಪ್ರಕರಣ ಎಂದು ಹಲವಾರು ಬಾರಿ ಹೇಳಿಕೊಂಡರು. ನವೆಂಬರ್ 25 ರಂದು, ಗರ್ಗ್ ಅವರನ್ನು ಒಬ್ಬ ವ್ಯಕ್ತಿ ಕೊಂದಿದ್ದಾನೆ ಮತ್ತು ಇತರರು ಅಪರಾಧ ಮಾಡಲು ಸಹಾಯ ಮಾಡಿದ್ದಾರೆ ಎಂದು ಶರ್ಮಾ ವಿಧಾನಸಭೆಯಲ್ಲಿ ಅವರು ನೇರವಾಗಿ ಹೇಳಿದ್ದರು. “ಇದು ಸರಳ, ಸರಳ ಕೊಲೆ ಪ್ರಕರಣವಾಗಿತ್ತು. ಆರೋಪಪಟ್ಟಿಗಳು ಎಲ್ಲರನ್ನೂ ಆಘಾತಗೊಳಿಸುತ್ತವೆ” ಎಂದು ಶರ್ಮಾ ವಿಧಾನಸಭೆಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಹೇಳಿದ್ದರು. 

ಗರ್ಗ್ ಸಾವಿನ ಪ್ರಕರಣ ರಾಜಕೀಯ ಆದಾಗಲೂ, ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಇತರರು ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಇತ್ತೀಚೆಗೆ, ಕೇಂದ್ರ ವಿದೇಶಾಂಗ ಸಚಿವಾಲಯವು ಈಶಾನ್ಯ ಭಾರತ ಉತ್ಸವವನ್ನು ಬೆಂಬಲಿಸಿದ್ದರಿಂದ ಅದನ್ನು ತನಿಖೆಯ ವ್ಯಾಪ್ತಿಗೆ ತರಬೇಕು ಎಂದು ಹೇಳಿದ್ದಾರೆ. ಅವರ ಅಭಿಮಾನಿಗಳು ಆನ್‌ಲೈನ್ ಮತ್ತು ಬೀದಿಗಳಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದು, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದರು.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳಿಗೆ ಈ ಪ್ರಕರಣವು ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ಗರ್ಗ್ ಅವರ ಸಾವು ಮತ್ತು ಪ್ರಕರಣವನ್ನು ನಿರ್ವಹಿಸುತ್ತಿರುವ ರೀತಿ ಚುನಾವಣಾ ಪ್ರಚಾರದಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿರುವುದರಿಂದ, ಮೂರನೇ ಅವಧಿಗೆ ಮುಖ್ಯಮಂತ್ರಿಯಾಗುವ ನಿರೀಕ್ಷೆಯಲ್ಲಿರುವ ಆಡಳಿತಾರೂಢ ಬಿಜೆಪಿ ಒತ್ತಡದಲ್ಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಪೂರ್ಣ ಗೋಹತ್ಯೆ ನಿಷೇಧದ ಜೊತೆಗೆ ‘ರಾಷ್ಟ್ರೀಯ ಮಾತೃ ಸ್ಥಾನಮಾನ ನೀಡಬೇಕು: ಕಾಂಗ್ರೆಸ್ ಸಂಸದ ಉಜ್ವಲ್ ರಮಣ್ ಸಿಂಗ್

"ಗೋವನ್ನು ರಾಷ್ಟ್ರಮಾತೆ ಅಥವಾ ರಾಜಮಾತೆ" ಎಂದು ಘೋಷಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಮೂಲಕ ಕಾಂಗ್ರೆಸ್ ಸಂಸದ ಉಜ್ವಲ್ ರಮಣ್ ಸಿಂಗ್ ಸಂಸತ್ತಿನಲ್ಲಿ ಹಲವರನ್ನು ಅಚ್ಚರಿಗೊಳಿಸಿದರು. ಕಲಾಪದ ಶೂನ್ಯ ವೇಳೆಯಲ್ಲಿ ಅವರು...

14 ವರ್ಷದೊಳಗಿನ ಶಾಲಾ ಬಾಲಕಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಆಸ್ಟ್ರಿಯಾ

14 ವರ್ಷದೊಳಗಿನ ಹುಡುಗಿಯರು ಶಾಲೆಗಳಲ್ಲಿ ಶಿರಸ್ತ್ರಾಣ ಧರಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಕಾನೂನನ್ನು ಆಸ್ಟ್ರಿಯಾದ ಸಂಸತ್ತು ಅಂಗೀಕರಿಸಿದೆ. ಸಂಪ್ರದಾಯವಾದಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಬೆಂಬಲಿಸಿದ ಈ ಕ್ರಮವು ತಕ್ಷಣವೇ ಟೀಕೆಗೆ ಗುರಿಯಾಗಿದೆ. ಇದು ತಾರತಮ್ಯ...

ನೆಹರು ಮೇಲೆ ಕೇಂದ್ರ ಸಚಿವರ ಆರೋಪ: ಸರ್ದಾರ್ ಪಟೇಲ್ ಮಗಳ ಡೈರಿಯನ್ನು ರಾಜನಾಥ್‌ಗೆ ನೀಡಿದ ಜೈರಾಮ್ ರಮೇಶ್

'ಬಾಬರಿ ಮಸೀದಿ ನಿರ್ಮಾಣಕ್ಕೆ ನೆಹರು ಸಾರ್ವಜನಿಕ ಹಣ ಬಳಸಿದ್ದರು' ಎಂದಿದ್ದ ರಕ್ಷಣಾ ಸಚಿವರು ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ರಿ ಮಣಿಬೆನ್ ಪಟೇಲ್ ಅವರ ಡೈರಿ ನಮೂದುಗಳನ್ನು...

ಇಂಡಿಗೋ ಬಿಕ್ಕಟ್ಟು: ನಾಲ್ವರು ವಿಮಾನ ಕಾರ್ಯಾಚರಣೆಯ ಇನ್ ಸ್ಪೆಕ್ಟರ್ ಗಳ ಅಮಾನತು 

ನವದೆಹಲಿ: ಇಂಡಿಗೋ ವಿಮಾನದ ಕಾರ್ಯಾಚರಣೆಯಲ್ಲಿ ಉಂಟಾದ ಪ್ರಮುಖ ಅಡಚಣೆಗಳಿಂದಾಗಿ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿ ಸಾವಿರಾರು ವಿಮಾನಗಳ ಹಾರಾಟ ರದ್ದತಿಗೆ ಕಾರಣವಾದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ನಾಲ್ವರು ವಿಮಾನ ಕಾರ್ಯಾಚರಣೆಯ...

ಆಂಧ್ರಪ್ರದೇಶ| ‘ಇಂಗ್ಲಿಷ್ ಕಲಿಯುವುದಕ್ಕಿಂತ ಸಾಯುವುದು ಸುಲಭ..’ ಎಂದು ಆತ್ಮಹತ್ಯೆಗೆ ಶರಣಾದ ದಲಿತ ವಿದ್ಯಾರ್ಥಿನಿ

ಕರ್ನೂಲ್‌ನಲ್ಲಿ 17 ವರ್ಷದ ದಲಿತ ಬಾಲಕಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂಗ್ಲಿಷ್ ಕಲಿಯುವ ಒತ್ತಡದಿಂದ ಆಕೆ ಹಲವು ತಿಂಗಳುಗಳಿಂದ ಹೋರಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಬಿ ತಂಧ್ರಪಡುವಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ...

ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ಬಸ್ ಉರುಳಿ ಬಿದ್ದು 9 ಮಂದಿ ಸಾವು, 22 ಮಂದಿಗೆ ಗಾಯ

ಬಸ್ ಕಣಿವೆಗೆ ಉರುಳಿ ಬಿದ್ದು, 9 ಮಂದಿ ಸಾವನ್ನಪ್ಪಿ, 22 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದಿದೆ.  ಶುಕ್ರವಾರ ಚಿತ್ತೂರಿನಿಂದ ನೆರೆಯ ತೆಲಂಗಾಣಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಚಾಲಕ ಮತ್ತು...

ಗೋವಾ ನೈಟ್ ಕ್ಲಬ್ ಮಾಲೀಕರ ಮಧ್ಯಂತರ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ: ಥೈಲ್ಯಾಂಡ್‌ನಿಂದಲೂ ಗಡಿಪಾರು ಪ್ರಕ್ರಿಯೆ ಆರಂಭ 

ನವದೆಹಲಿ: ಕಳೆದ ವಾರ ಕನಿಷ್ಠ 25 ಜನರ ಸಾವಿಗೆ ಕಾರಣವಾಗಿದ್ದ, ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲುಥ್ರಾಸ್ ಅವರ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು...

ಮಾದಕ ದ್ರವ್ಯ ಬಳಕೆ-ಮಾರಾಟದ ಶಿಕ್ಷೆಯ ಕುರಿತು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ: ಪರಮೇಶ್ವರ್

ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮ, ಮಾರಾಟದ ಶಿಕ್ಷೆಯ ಕುರಿತು ಶಾಲಾ-ಕಾಲೇಜುಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿರುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಗುರುವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ...

ದುಡ್ಡು ಕೊಟ್ಟವರಿಗೆ ರಾಜಾತಿಥ್ಯ, ಪೌರತ್ವಕ್ಕೆ ರಹದಾರಿ : ಏನಿದು ‘ಟ್ರಂಪ್ ಗೋಲ್ಡ್ ಕಾರ್ಡ್’

ಟ್ರಂಪ್ ಆಡಳಿತವು ಬುಧವಾರ (ಡಿಸೆಂಬರ್ 10) ಔಪಚಾರಿಕವಾಗಿ 'ಟ್ರಂಪ್ ಗೋಲ್ಡ್ ಕಾರ್ಡ್'ಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಇದನ್ನು ಅಮೆರಿಕ ಸರ್ಕಾರ ಕನಿಷ್ಠ 1 ಮಿಲಿಯನ್ ಡಾಲರ್ ಪಾವತಿಸುವ ಜನರಿಗೆ ನೀಡಲು ಯೋಜಿಸಿದೆ. 'ಟ್ರಂಪ್ ಗೋಲ್ಡ್...

ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಜೈಲು ಶಿಕ್ಷೆ ಅಮಾನತು ಮನವಿ ನಿರಾಕರಿಸಿದ ಸುಪ್ರೀಂ ಕೋರ್ಟ್

1996 ರ ಮಾದಕ ದ್ರವ್ಯ ವಶ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ 20 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದರಿಂದ ಗುರುವಾರ ಅವರ ಬಿಡುಗಡೆಗಾಗಿನ ಪ್ರಯತ್ನ...