Homeಅಂತರಾಷ್ಟ್ರೀಯಅರ್ನಾಬ್ ಗೋಸ್ವಾಮಿ boycott Pakistana ಅಂದ್ರೆ, ಸೌದಿ ರಾಜಕುಮಾರನ ಮುಂದೆ friendship Pakistana ಅಂದ್ರು ಮೋದಿ!

ಅರ್ನಾಬ್ ಗೋಸ್ವಾಮಿ boycott Pakistana ಅಂದ್ರೆ, ಸೌದಿ ರಾಜಕುಮಾರನ ಮುಂದೆ friendship Pakistana ಅಂದ್ರು ಮೋದಿ!

- Advertisement -
- Advertisement -

ಪುಲ್ವಾಮಾ ಭಯೋತ್ಪಾದಾಕ ದಾಳಿ ನಡೆದು ಸರಿಯಾಗಿ ಆರು ದಿನಗಳ ನಂತರ ಫೆಬ್ರವರಿ 20ರಂದು ಪ್ರಧಾನಿ ಮೋದಿಯವರು ಮತ್ತು ಸೌದಿ ಅರೇಬಿಯಾದ ರಾಜಕುಮಾರ ಅಬ್ದುಲ್ಲಾ (ಎಂಬಿಎಸ್) ಜೊತೆಯಾಗಿ ಬಿಡುಗಡೆ ಮಾಡಿದ ಉಭಯ ದೇಶಗಳ ಜಂಟಿ ಹೇಳಿಕೆ ಮೋದಿಯವರ ಸಮರ್ಥಕರಿಗೆ, ಮುಖ್ಯವಾಗಿ ಮೀಡಿಯಾದಲ್ಲಿ ಅವರ ಪರ ಚಿಯರ್ ಮಾಡುವ ಅರ್ನಾಬ್ ಗೋಸ್ವಾಮಿಯಂತಹ ಆಂಕರುಗಳಿಗೆ ಭಾರೀ ನಿರಾಸೆ ಉಂಟುಮಾಡಿತ್ತು. ಯಾಕೆಂದರೆ ಪುಲ್ವಾಮಾ ದಾಳಿಗೆ ಪಾಕಿಸ್ತಾನವನ್ನು ಖಂಡಿಸುವಂತ ಒಂದೇಒಂದು ಸಾಲೂ ಅದರಲ್ಲಿ ಇರಲಿಲ್ಲ. ಅರ್ಥಾತ್, ಸೌದಿ ರಾಜಕುಮಾರನಿಗೆ ಪಾಕಿಸ್ತಾನದ ಡಬಲ್ ಸ್ಟಾಂಡರ್ಡ್ ಅರ್ಥ ಮಾಡಿಸುವ ವಿಚಾರದಲ್ಲಿ ಮೋದಿ ಸಂಪೂರ್ಣವಾಗಿ ಸೋತುಹೋಗಿದ್ದರು. ಬದಲಿಗೆ ಆ ಹೇಳಿಕೆಯಲ್ಲಿ ಭಾರತ-ಪಾಕಿಸ್ತಾನದ ನಡುವೆ ಸಂಬಂಧ ವೃದ್ಧಿಯಾಗಬೇಕು ಎಂಬ ಆಶಯವಿತ್ತು. ದಾಯಾದಿ ದೇಶಗಳ ನಡುವೆ ಸಂಬಂಧ ಸುಧಾರಿಸಬೇಕು ಎನ್ನುವುದೇನೊ ಒಪ್ಪಬಹುದಾದ ಸಂಗತಿ, ಆದರೆ ಇಂಥಾ ಭಯೋತ್ಪಾದನೆ ದಾಳಿ ನಡೆದ ಸಂದರ್ಭದಲ್ಲಿ ಹೇಳುವ ಮಾತಾ ಇದು. ಅದರಲ್ಲು, ಪುಲ್ವಾಮಾ ದಾಳಿಯ ಸುದ್ದಿ ತಿಳಿದ ಮೇಲೆ ಝಾನ್ಸಿ ರ್ಯಾಲಿಯಲ್ಲಿ ಸ್ವತಃ ಮೋದಿಯವರೇ `ಮೋದಿಯ ಆಳ್ವಿಕೆಯಲ್ಲಿ ಭಾರತ ಏಳಿಗೆ ಆಗುತ್ತಿರೋದನ್ನು ಸಹಿಸದ ಹೊಟ್ಟೆಕಿಚ್ಚಿನ ದೇಶದವಾದ ಪಾಕಿಸ್ತಾನ ಇಂಥಾ ದಾಳಿ ನಡೆಸಿದೆ’ ಎಂದು ದೂರಿದ್ದರು. ಹಾಗಿರುವಾಗ ಇಂಡಿಯಾ-ಸೌದಿ ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನವನ್ನು ಖಂಡಿಸದೆ ಅದರ ಜೊತೆ ಸಂಬಂಧ ವೃದ್ಧಿಯ ಪ್ರಸ್ತಾಪ ಬಂದಿದೆಯೆಂದರೆ ಮೋದಿ ಜಾಗತಿಕ ವೇದಿಕೆಯಲ್ಲಿ ಸೋತಿದ್ದಾರೆ ಅಂತ ತಾನೇ ಅರ್ಥ!

ಜಂಟಿ ಹೇಳಿಕೆಯಲ್ಲಿ ಪುಲ್ವಾಮ ದಾಳಿಯನ್ನು ಖಂಡಿಸಲಾಗಿದೆಯಾದರು, ಅದಕ್ಕೆ ಪಾಕಿಸ್ತಾನವನ್ನು ಹೊಣೆ ಎಂದು ಎಲ್ಲೂ ಕರೆದಿಲ್ಲ. “ಜಮ್ಮು ಮತ್ತು ಕಾಶ್ಮೀರಾದ ಪುಲ್ವಾಮಾದಲ್ಲಿ 14 ಫೆಬ್ರವರಿ 2019ರಂದು ಭಾರತ ಭದ್ರತಾ ಪಡೆಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನ ಮಂತ್ರಿಗಳು ಮತ್ತು ಘನತೆವೆತ್ತ ದೊರೆಗಳು ಖಂಡಿಸುತ್ತಾರೆ” ಎಂದಷ್ಟೇ ಅದರಲ್ಲಿದೆ.

ಇದೇ ಜಂಟಿ ಹೇಳಿಕೆಯಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿರುವ ರಾಷ್ಟ್ರಗಳ ಬಗ್ಗೆ ಮಾತಾಡುವಾಗಲೂ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸಿಲ್ಲ! “ಭಯೋತ್ಪಾದನೆಯನ್ನು ತಮ್ಮ ಆಡಳಿತ ನೀತಿಯ ಒಂದು ಅಸ್ತ್ರವನ್ನಾಗಿ ಮಾಡಿಕೊಂಡ ಎಲ್ಲಾ ರಾಷ್ಟ್ರಗಳು ಅದನ್ನು ತ್ಯಜಿಸಬೇಕು ಎಂದು ಉಭಯ ದೇಶಗಳು ಕರೆಕೊಡುತ್ತವೆ. ಬೇರೆ ದೇಶಗಳ ಮೇಲೆ ಭಯೋತ್ಪಾದಕ ದಾಳಿಗಳನ್ನು ನಡೆಸಲು ಮಿಸೈಲ್ ಮತ್ತು ಡ್ರೋಣ್ ಗಳನ್ನು ಒಳಗೊಂಡಂತೆ ಯಾವ ಶಸ್ತ್ರಾಸ್ತ್ರಗಳನ್ನೂ ಪೂರೈಕೆ ಮಾಡಬಾರದು ಎಂಬುದಾಗಿಯೂ ನಾವು ಕರೆಕೊಡುತ್ತೇವೆ”.

ಹೀಗೆ ಮುಂದುವರೆಯುವ ಹೇಳಿಕೆಯು, “ಉಗ್ರವಾದ ಮತ್ತು ಭಯೋತ್ಪಾದನೆಗಳು ಎಲ್ಲಾ ದೇಶಗಳು ಮತ್ತು ಸಮಾಜಗಳಿಗೆ ಕಂಟಕ ಪ್ರಾಯವಾದವು ಎಂಬುದನ್ನು ದೃಢಪಡಿಸುತ್ತಲೇ, ಈ ಜಾಗತಿಕ ಪಿಡುಗನ್ನು ಯಾವುದೇ ನಿರ್ದಿಷ್ಟ ಜನಾಂಗ, ಧರ್ಮ ಅಥವಾ ಸಂಸ್ಕೃತಿಗೆ ತಳುಕು ಹಾಕುವ ಯಾವುದೇ ಪ್ರಯತ್ನವನ್ನು ಉಭಯ ರಾಷ್ಟ್ರಗಳು ತಿರಸ್ಕರಿಸುತ್ತವೆ. ಇತರೆ ದೇಶಗಳ ಮೇಲೆ ಭಯೋತ್ಪಾದನೆಯನ್ನು ಒಂದು ಅಸ್ತ್ರವಾಗಿ ಪ್ರಯೋಗಿಸದಂತೆ; ಈಗಾಗಲೇ ತಮ್ಮ ಒಳಗೆ ಭಯೋತ್ಪಾದಕ ಸಂಘಟನೆಗಳು ಇದ್ದರೆ ಅವುಗಳನ್ನು ನಾಶ ಮಾಡುವಂತೆ ಮತ್ತು ಬೇರೆ ರಾಷ್ಟ್ರಗಳ ಮೇಲೆ ಭಯೋತ್ಪಾದನಾ ದಾಳಿಗೆ ಯಾವುದೇ ರೀತಿಯ ನೆರವು, ಹಣಕಾಸು ನೀಡದಂತೆ; ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಸಮಾಜಘಾತುಕರನ್ನು ನ್ಯಾಯಾಲಯದ ವ್ಯಾಪ್ತಿಗೆ ತರುವಂತೆ ಎಲ್ಲಾ ದೇಶಗಳಿಗೆ ಉಭಯ ದೇಶಗಳು ಕರೆಕೊಡುತ್ತೇವೆ.”

ಇಲ್ಲು ಸಹಾ ಎಲ್ಲೂ ಪಾಕಿಸ್ತಾನದ ಹೆಸರನ್ನೇ ತರಲಾಗಿಲ್ಲ. ಪುಲ್ವಾಮಾ ದಾಳಿ ನಡೆಯುತ್ತಿದ್ದಂತೆಯೇ ಸ್ವತಃ ಪ್ರಧಾನಿ ಮೋದಿಯವರಲ್ಲದೆ ಅವರ ಹಿಂಬಾಲಕರೆಲ್ಲ ಪಾಕಿಸ್ತಾನವೇ ಇದನ್ನು ಮಾಡಿಸಿರುವುದಾಗಿ ಬಹಳ ಸ್ಪಷ್ಟವಾಗಿ ಹೇಳುತ್ತಾ ಬಂದಿದ್ದಾರೆ. ಈಗಲೂ ಬಿಜೆಪಿಯ ಸಂಬಂಧಿತ ಸೋಶಿಯಲ್ ನೆಟ್ ವರ್ಕ್ ಗಳು ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ದೇಶಪ್ರೇಮದ ಹೆಸರಲ್ಲಿ ಲೋಡುಗಟ್ಟಲೆ ಮೆಸೇಜುಗಳನ್ನು ಹರಿಬಿಡುತ್ತಿವೆ. ಆದರೆ ಸ್ವತಃ ಮೋದಿಯವರೇ ಸೌದಿ ಅರೇಬಿಯಾದ ರಾಜನಿಗೆ ಇದನ್ನು ಮನವರಿಕೆ ಮಾಡಿಕೊಡಲು ಸೋತು ಹೋಗಿದ್ದಾರೆ.

ಇಡೀ ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನದ ಹೆಸರು ಕಾಣಿಸಿಕೊಂಡಿರುವುದು ಒಂದೇ ಕಡೆ, ಅದೂ `ಭಾರತ-ಪಾಕಿಸ್ತಾನ’ ನಡುವೆ ಮತ್ತೆ ಮಾತುಕತೆ ಶುರುವಾಗಬೇಕೆಂಬ ಫ್ರೆಂಡ್ಲಿ ಅಡ್ವೈಸಿಂಗ್ ನ ಬಿಟ್ಟಿ ಸಲಹೆಯಲ್ಲಿ. “ಉಭಯ ದೇಶಗಳು ಪ್ರಾದೇಶಿಕ ಸ್ಥಿರತೆ ಮತ್ತು ನೆರೆ ರಾಷ್ಟ್ರಗಳ ಜೊತೆ ಸೌಹಾರ್ದಯುತ ಸಂಬಂಧದ ಪ್ರಾಮುಖ್ಯತೆಗೆ ಒತ್ತು ನೀಡುತ್ತವೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ಜೊತೆ ಸ್ನೇಹವನ್ನು ವೃದ್ಧಿಸಲು ಮೇ 2014ರಲ್ಲಿ ತಾವು ಅಧಿಕಾರ ವಹಿಸಿಕೊಂಡ  ನಂತರ ಪ್ರಧಾನಿ ಮೋದಿಯವರು   ಕೈಗೊಂಡಿರುವ ನಿರಂತರ ಪ್ರಯತ್ನಗಳನ್ನು ಘನತೆವೆತ್ತ ರಾಜಕುಮಾರರು ಪ್ರಶಂಸಿಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ, ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸಮಗ್ರ ಮಾತುಕತೆಗಳು ಪುನರಾರಂಭಗೊಳ್ಳುವಂತಹ ವಾತಾವರಣ ನಿರ್ಮಿಸಲು ಉಭಯ ರಾಷ್ಟ್ರಗಳು ಬಯಸುತ್ತವೆ”.

ಒಟ್ಟಿನಲ್ಲಿ ಮೋದಿ ಪರ ಮೀಡಿಯಾ ಚಿಯರ್ ಆಂಕರುಗಳು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು `ಸಮರ್ಥ ನಾಯಕ’ ಭಾರತಕ್ಕೆ ಬೇಕಾಗಿದೆ ಅಂತ ಮೋದಿಯನ್ನೇ ಮತ್ತೊಮ್ಮೆ ಕದ್ದುಮುಚ್ಚಿ ಪ್ರೊಜೆಕ್ಟ್ ಮಾಡಲು ಹೆಣಗಾಡುತ್ತಿರುವಾಗಲೇ, ಹಿಂದೊಮ್ಮೆ (ಪ್ರಧಾನಿಯಾಗುವುದಕ್ಕೂ ಮುನ್ನ) `ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ಉತ್ತರ ಕೊಡಬೇಕು’ ಎಂದು ಗುಡುಗಿದ್ದ ಮೋದಿ, ಭಾರತದ ಪ್ರಧಾನಿಯ ಹುದ್ದೆಯಲ್ಲಿ ಕೂತುಕೊಂಡು ­ದೇಶದ ಮೇಲೆ ಮತ್ತೊಂದು ಡಿಪ್ಲೊಮ್ಯಾಟಿಕ್ ದುರಂತವನ್ನು ಎಳೆದುಬಿಟ್ಟಿದ್ದಾರೆ! ಪಾಪಾ, ಪುಲ್ವಾಮ ಘಟನೆಯಲ್ಲಿ ಮಡಿದ ನಮ್ಮ 45 ಸೈನಿಕರ ಜೀವಗಳನ್ನೇ ಬಂಡವಾಳ ಮಾಡಿಕೊಂಡು #boycottpakistan ಅನ್ನೋ ಹ್ಯಾಷ್‌ಟ್ಯಾಗ್ ಓಡಿಸುತ್ತಿದ್ದ ಅರ್ನಾಬ್ ಗೋಸ್ವಾಮಿ ಥರದ ಚಿಯರ್ ಆಂಕರುಗಳು ಮೋದಿಯ ಜಂಟಿ ಹೇಳಿಕೆಯಿಂದ ಗಪ್.ಚುಪ್ ಆಗಿದ್ದಾರೆ.

ಆಧಾರ: janta ka reporter

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...