ಕಲರ್ಸ್ ಕನ್ನಡ ಚಾನೆಲ್‍ಗೂ ಪೊಲೀಸ್ ಕೇಸಿಗೂ ಅದೇನು ಬಾಂಧವ್ಯವೋ ಗೊತ್ತಿಲ್ಲ. ಹಿಂದೆ ಈ ಚಾನೆಲ್‍ನ ಪ್ರೊಡಕ್ಟ್‍ಗಳಾದ ಬಿಗ್‍ಬಾಸ್ ಪ್ರಥಮ್, ಭುವನ್ ಪರಸ್ಪರ `ಕಚ್ಚಾಡಿ’ಕೊಂಡು ಪೊಲೀಸ್ ಠಾಣೆ ಹೊಕ್ಕಿ ಬಂದಿದ್ದರು. ಅದಕ್ಕೂ ಮೊದಲು ಇದೇ ಚಾನೆಲ್‍ನ ಪುಟ್ಟಗೌರಿ ಮದುವೆಯ ಹೀರೊ ಮಹೇಶ್ ಪಾತ್ರಧಾರಿ ಕೂಡಾ ಕುಡಿದು ಡ್ರೈವಿಂಗ್ ಮಾಡಿದ ರಾದ್ಧಾಂತದಲ್ಲಿ ಪೊಲೀಸರ ಅತಿಥಿಯಾಗಿ ಸುದ್ದಿಯಾಗಿದ್ದ. ಇನ್ನು ಆ ಚಾನೆಲ್‍ನ ಹೆಮ್ಮೆಯ ಕೊಡುಗೆ ಹುಚ್ಚಾ ವೆಂಕಟ್ ವಿವಾದ ಹುಟ್ಟುಹಾಕೋದರಲ್ಲಿ ಎತ್ತಿದ ಕೈ. ಇದೀಗ ಕಲರ್ಸ್ ಕನ್ನಡದ ಮತ್ತೊಂದು ಪ್ರತಿಭೆ(!) ಜೈಲು ಸೇರಿ ಚಲಾವಣೆಗೆ ಬಂದಿದೆ. ಈ ವಾಹಿನಿಯಲ್ಲಿ ಪ್ರಸಾರವಾಗೋ `ಕಿನ್ನರಿ’ ಸೀರಿಯಲ್‍ನ ಹೀರೊ ಕಿರಣ್ ರಾಜ್‍ನನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಅಂತ ಮಾಡೆಲ್ ಯಾಸ್ಮಿನ್ ಪಠಾಣ್ ಕಂಫ್ಲೆಂಟೇ ಅವನಿಗೆ ಜೈಲುದಾರಿ ತೋರಿಸಿದೆ. ಅಷ್ಟಕ್ಕೂ ಈ ಯಾಸ್ಮಿನ್ ಬೇರೆಯಾರೂ ಅಲ್ಲ, ಕಿರಣ್ ರಾಜ್ ಜತೆ ಕಳೆದ ಐದು ವರ್ಷಗಳಿಂದ ಲಿವಿಂಗ್ ಟು ಗೆದರ್ ರಿಲೇಶನ್‍ಶಿಪ್‍ನಲ್ಲಿದ್ದಾಕೆ. ಆದರೆ ಇದಕ್ಕೆ ಪ್ರತಿಯಾಗಿ, ತಮ್ಮ ತಂದೆ ಹಾಗೂ ತಾಯಿ ಮೇಲೆ ಯಾಸ್ಮಿನ್‍ಳೇ ಹಲ್ಲೆ ಮಾಡಿದ್ದಾಳೆ ಅಂತ ಕಿರಣ್‍ರಾಜ್ ಕೂಡ ದೂರು ನೀಡಿದ್ದಾನೆ. ಪಾಪಾ, ಈ ಪರ್ಸನಲ್ ಕಾದಾಟದಲ್ಲಿ ಕಲರ್ಸ್ ಕನ್ನಡ ಚಾನೆಲ್ ಹೆಸರು ಮತ್ತೊಮ್ಮೆ ಬೀದಿಗೆ ಬಿದ್ದಂತಾಗಿದೆ. ಸೋ… ಸ್ಯಾಡ್…


