Homeಅಂಕಣಗಳುಹೊಸ ಮೌಲ್ಯಕ್ಕಾಗಿ ಯುವಕರು ಹೊಸ ಪಕ್ಷ ಕಟ್ಟುವಂತಾಗಬೇಕು

ಹೊಸ ಮೌಲ್ಯಕ್ಕಾಗಿ ಯುವಕರು ಹೊಸ ಪಕ್ಷ ಕಟ್ಟುವಂತಾಗಬೇಕು

- Advertisement -
- Advertisement -

ಕವಿಯತ್ರಿ ಸರೋಜಿನಿ ನಾಯ್ಡು ಅವರು ಗಾಂಧೀಜಿಯನ್ನು ಪ್ರಥಮ ಬಾರಿಗೆ 1915ರಲ್ಲಿ ಇಂಗ್ಲೆಂಡಿನಲ್ಲಿ ಭೇಟಿಮಾಡುತ್ತಾರೆ. ಆಗ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಇಂಗ್ಲೆಂಡಿಗೆ ಕಾರ್ಯನಿಮಿತ್ತ ಬಂದಿರುತ್ತಾರೆ. ಗಾಂಧೀಜಿ ಕಂಬಳಿ ಮೇಲೆ ನೆಲದಲ್ಲಿ ಕೂತು ಕಡಲೆಕಾಯಿ ಬೀಜ, ಬಿಸ್ಕತ್, ಕಿವಿಚಿದ ಟಮೋಟಗೆ ಬೆರೆಸಿದ ಆಲೀವ್ ಆಯಿಲ್ ಸೇವಿಸುತ್ತಿದ್ದರು. ಇದನ್ನು ನೋಡಿದ ಸರೋಜಿನಿ ನಾಯ್ಡು ಗಾಂಧೀಜಿಯವರ ಕುರಿತು ‘ನೀವು ನನಗೆ ದಕ್ಷಿಣ ಆಫ್ರಿಕಾದ ಭಾರತೀಯರ ಪರವಾಗಿ ಹೋರಾಡುವ ಧೀರರಾಗಿ ಕಾಣುತ್ತಿಲ್ಲ. ನೀವು ಒಂದು ಮಿಕ್ಕಿಮೌಸ್‍ನಂತೆ ಕಾಣುತ್ತಿದ್ದೀರಿ’ ಎಂದರು. ‘ನೀವು ಸರೋಜಿನಿ ಅಲ್ಲವೇ? ಇನ್ನು ಯಾರಿಗೆ ಇಷ್ಟು ಧಿಮಾಕು, ಧೈರ್ಯ ಇದ್ದೀತು?’ ಎಂದರು ಗಾಂಧೀಜಿ ಆ ತುಂಟ ಮಾತು ಆಕೆಯ ಮನ ತುಂಬಿತು. ಅಂದು ಗಾಂಧೀಜಿಯ ಅನುಯಾಯಿಯಾದ ಸರೋಜಿನಿದೇವಿ ಮುಂದೆ 33 ವರ್ಷಗಳ ಕಾಲ ಗಾಂಧೀಜಿಯ ನಿಕಟವರ್ತಿಯಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಬಾರಿ ಸೆರೆಮನೆವಾಸ ಅನುಭವಿಸಿದರು. ಬ್ರಿಟಿಷರೊಡನೆ ರಾಯಭಾರ ಕೆಲಸಕೂಡ ಮಾಡಿದರು.
ಗಾಂಧೀಜಿ ಅವರ ರಾಷ್ಟ್ರಭಕ್ತಿ ಎಂಥದ್ದು? ಅವರು ಹೀಗೆ ಬರೆಯುತ್ತಾರೆ. ‘ನನ್ನ ರಾಷ್ಟ್ರ ಭಕ್ತಿ ಉದಾರ ಚರಿತವಾದುದು. ನಾನು ವಸುಧೈವ ಕುಟುಂಬಕಂ ಎಂಬ ವಿಚಾರದಲ್ಲಿ ಶ್ರದ್ಧೆಯುಳ್ಳವನು. ನಾನು ಬದುಕಿರುವುದು ಭಾರತದ ಸ್ವಾತಂತ್ರ್ಯಕ್ಕಾಗಿ. ನಾನು ಸಾಯುವುದೂ ಆ ಗುರಿ ಸಾಧನೆಯಲ್ಲಿಯೇ.’
‘ನಾನು ಹಿಂದು, ಆದರೆ ನನ್ನ ನಿಲುವು ‘ಸರ್ವಧರ್ಮ ಸಮನ್ವಯ’, ಎಲ್ಲ ಧರ್ಮಗಳನ್ನು ಸಮಾನ ದೃಷ್ಟಿಯಿಂದ ಕಾಣುತ್ತೇನೆ. ನನ್ನ ಕನಸಿನ ಭಾರತದಲ್ಲಿ ನಾನಾ ಧರ್ಮದವರು ಸಂಪೂರ್ಣ ಸ್ನೇಹದಿಂದ ಕೂಡಿಕೊಂಡು ಬದುಕುತ್ತಾರೆ.’
‘ಸ್ವರಾಜ್ಯವೆಂದರೆ ಹಿಂದು ರಾಷ್ಟ್ರವಲ್ಲ. ನನ್ನ ಶಕ್ತಿಯನ್ನೆಲ್ಲ ಬಳಸಿ ಈ ಸಂಕುಚಿತ ರಾಷ್ಟ್ರ ಪರಿಕಲ್ಪನೆಯ ವಿರುದ್ಧವಾಗಿ ಹೋರಾಡುತ್ತೇನೆ. ಅಧಿಕಾರದ ಅಮಲಿನಲ್ಲಿ ಅಲ್ಪಸಂಖ್ಯಾತರನ್ನು ತುಳಿದು ಹಾಕಿ ಅಂಥಾ ರಾಷ್ಟ್ರ ಸ್ಥಾಪಿಸುವುದಾದರೆ ಅದು ಹಿಂದೂ ಧರ್ಮಕ್ಕೇ ದ್ರೋಹ ಬಗೆದಂತೆ. ಅದು ಹಾನಿಕಾರಕವೂ ಹೌದು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆಗ ಹಿಂದು ದೇವಾಲಯಗಳಿಗೆ ಹರಿಜನರು ಬರುವಂತಿರಲಿಲ್ಲ. ಬಂದರೆ ಅವರನ್ನು ಸನಾತನಿಗಳು ಬರ್ಬರವಾಗಿ ನಡೆಸಿಕೊಳ್ಳುತ್ತಿದ್ದರು. ‘ಭಾರತೀಯರು ತಮ್ಮ ಇಂಥಾ ವರ್ತನೆಗಾಗಿ ಪಶ್ಚಾತಾಪ ಪಡಬೇಕು’ ಎಂದರು ಗಾಂಧೀಜಿ. ಹರಿಜನರಿಗೆ ದೇವಾಲಯಕ್ಕೆ ಪ್ರವೇಶದ ಹಕ್ಕನ್ನು ನೀಡಬೇಕೆಂದು ಹಿಂದುಗಳಲ್ಲಿ ವಿನಂತಿಸಿಕೊಂಡರು. ಸನಾತನಿಗಳು ಗಾಂಧಿಯವರ ನಿಲುವನ್ನು ಅಲ್ಲಗಳೆದರು. ಆಗ ಗಾಂಧೀಜಿ ಹಿಂದುಗಳು ಹರಿಜನರಿಗೆ ದೇವಾಲಯಗಳಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕೆಂದು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಹಳ್ಳಿಹಳ್ಳಿಗೂ ಗಾಂಧೀಜಿಯ ಉಪವಾಸದ ಸುದ್ದಿ ಕಾಳ್ಗಿಚ್ಚಿನಂತೆ ಮುಟ್ಟಿತು. ಗಾಂಧೀಜಿ ಉಪವಾಸ 21 ದಿನ ನಡೆಯಿತು. ಉಪವಾಸ ಮುಕ್ತಾಯಕ್ಕೆ ಮೊದಲೇ ಅನೇಕ ಕಡೆ ಹರಿಜನರ ದೇವಾಲಯ ಪ್ರವೇಶಕ್ಕೆ ಜನರು ಅವಕಾಶ ಮಾಡಿಕೊಟ್ಟರು.
ಭಾರತದ ರಾಜಕೀಯವನ್ನು ‘ನಾವು’ ಯುವಕರು ಆಮೂಲಾಗ್ರವಾಗಿ ಬದಲಾಯಿಸಬೇಕು. ರಾಜಕೀಯದಿಂದ ಜಾತಿ, ಧರ್ಮಗಳನ್ನು ದೂರ ಇಡಲು ಹೋರಾಟ ಮಾಡಬೇಕು. ಈ ಬದಲಾವಣೆ ಆಗುವುದೆಂದು ನಿರೀಕ್ಷಣೆ ಮಾಡುತ್ತಾ ಕಾದು ಕೂರುವುದು ಮೂರ್ಖತನ; ಅಥವಾ ಇನ್ಯಾರೋ ನಮ್ಮ ಪರವಾಗಿ ರಾಜಕೀಯದಲ್ಲಿ ಬದಲಾವಣೆ ತರುವುದೆಂದು ಕನಸು ಕಾಣುತ್ತಾ ಕೂಡುವುದೂ ಸರಿಯಲ್ಲ. ಯುವಕರು ತಾವೇ ಬದಲಾವಣೆಯ ವಾಹಕರು ಎಂದು ಘೋಷಣೆ ಮಾಡಬೇಕು.
ದೆಹಲಿಯಲ್ಲಿ ಆಮ್‍ಆದ್ಮಿಪಕ್ಷ ಒಮ್ಮೆಯಲ್ಲ ಎರಡು ಸಾರಿ ಚುನಾವಣೆ ಎದುರಿಸಿ ಸರ್ಕಾರ ರಚಿಸಿದೆ. ಸ್ವಲ್ಪವೇ ಹಣ ಖರ್ಚುಮಾಡಿ ಈ ಚುನಾವಣೆಗಳಲ್ಲಿ ಪಕ್ಷ ಜಯಗಳಿಸಿದೆ. ಹಾಗೆ ಗೆಲ್ಲಿಸಬಹುದು ಎಂಬುದನ್ನು ನಮಗೆ ತೋರಿಸಿಕೊಟ್ಟಿದೆ. ಜನರಿಗೆ ಈಗಿನ ರಾಜಕೀಯ ಪಕ್ಷಗಳ ವೈಫಲ್ಯಗಳನ್ನು ನೋಡಿ ಬೇಸರವಾಗಿದೆ. ಜನರಿಗೆ ಬದಲಾವಣೆ ಬೇಕಾಗಿದೆ. ಅವರ ಆಸೆಯನ್ನು ಪೂರೈಸುವ ಕೆಲಸವನ್ನು ಯುವಕರು ಮಾಡಬೇಕಾಗಿದೆ.
ಇಂದಿನ ರಾಜಕೀಯ ಹೀಗಿದೆ:- ಅಧಿಕಾರಬೇಕೆನ್ನುವವರು ಯಾವುದೋ ಒಂದು ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ. ಚುನಾವಣೆಯಲ್ಲಿ ಸೋತರೆ ಮತ್ತೊಂದು ಪಕ್ಷಕ್ಕೆ ಹಾರುತ್ತಾರೆ. ಸೀಟು ಸಿಗದಿದ್ದರೆ ಬೇರೆ ಪಕ್ಷಕ್ಕೆ ಜಿಗಿಯುತ್ತಾರೆ. ಆ ಪಕ್ಷಗಳು ಇಂತಹವರ ಬರುವಿಕೆಗಾಗಿ ಕಾಯುತ್ತಿರುತ್ತವೆ. ಬಂದೊಡನೆ ಸೇರಿಸಿಕೊಳ್ಳುತ್ತವೆ. ನಾಯಿ ಹಸಿದಿತ್ತು ಹಿಟ್ಟು ಹಳಸಿತ್ತು ಎಂಬಂತಾಗಿದೆ ನಮ್ಮ ಇಂದಿನ ರಾಜಕೀಯ. ಈ ಪದ್ಧತಿ ಬದಲಾಗಬೇಕಲ್ಲವೇ? ಈ ವ್ಯವಸ್ಥೆಗೆ ಬೇಸತ್ತು ಜನ ಯಾವ ಒಂದು ಪಕ್ಷಕ್ಕೂ ಬಹುಮತ ನೀಡದೆ ಒಂದು ಅಭದ್ರ ಸ್ಥಿತಿಯನ್ನು ಸೃಷ್ಟಿಸುತ್ತಾರೆ. ಆಗ ರಾಜಕೀಯ ಪಕ್ಷಗಳು ಇತರ ಪಕ್ಷಗಳೊಡನೆ ಹೊಂದಾಣಿಕೆ ಮಾಡಿಕೊಳ್ಳತೊಡಗುತ್ತವೆ. ಆಗ ಎತ್ತು ಏರಿಗೆ ಎಮ್ಮೆ ನೀರಿಗೆ ಎಂಬ ಅನುಭವ ಆ ಪಕ್ಷಗಳದಾಗುತ್ತದೆ.
ಇಂದಿನ ಪರಿಸ್ಥಿತಿಯಲ್ಲಿ ಕಪ್ಪು ಹಣ ಇಲ್ಲದೆ ಚುನಾವಣೆ ಎದುರಿಸುವುದು ಕಷ್ಟವಾಗಿದೆ. ಅಷ್ಟೇ ಅಲ್ಲ, ಚುನಾವಣೆಗೆ ಭಾರೀ ಹಣ ಚೆಲ್ಲಲು ತಯಾರಾಗಬೇಕು. ಈ ಹಣ ರಾಜಕೀಯ ಪಕ್ಷಗಳಿಗೆ ಯಾರು ಯಾರು ಕೊಡುತ್ತಾರೆ? ರಾಜಕೀಯ ಪಕ್ಷಗಳು ಆಯ್ದ ಉದ್ಯಮಿಗಳಿಗೆ ಕೋಟಿ ಕೋಟಿರೂಗಳನ್ನು ದೋಚಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತವೆ. ಈ ಉದ್ಯಮಿಗಳು ಗಳಿಸಿದ ಪಾಪದ ಹಣದಲ್ಲಿ ಒಂದಿಷ್ಟು ನರಿಪಾಲನ್ನು ರಾಜಕೀಯ ಪಕ್ಷಗಳಿಗೆ ಎಸೆಯುತ್ತವೆ. ಹೀಗೆ ಕೊಡಲಾದ ಹಣ ಕೋಟ್ಯಾಂತರ ರೂಪಾಯಿಗಳು.
ಪಕ್ಷ ಕಟ್ಟಲು ಹತ್ತಾರು ವರ್ಷ ಬೇಕು, ಪಕ್ಷ ಬೆಳೆಸಲು ಕೋಟ್ಯಾಂತರ ರೂಗಳು ಬೇಕು ಎನ್ನುವುದು ಈಗ ಸುಳ್ಳಾಗಿದೆ. ಇಷ್ಟು ಬಲವಾಗಿ ಬೇರೂರಿರುವ ಪಕ್ಷಗಳನ್ನು ಮೂಲೋಚ್ಚಾಟನೆ ಮಾಡಲಾಗದು ಎನ್ನುವುದೂ ಒಂದು ಮಿಥ್ಯೆಯಾಗಿದೆ. ಜನ ಈಗಿರುವ ರಾಜಕೀಯ ಪಕ್ಷಗಳಿಂದ, ರಾಜಕಾರಣಿಗಳಿಂದ ಬೇಸತ್ತು ಹೋಗಿದ್ದಾರೆ. ಅವರಿಗೆ ಬದಲಾವಣೆ ಬೇಕಾಗಿದೆ.
ಇದಕ್ಕೆ ಪರ್ಯಾಯವಾಗಿ ಆದರ್ಶಗಳಿಂದ ಕೂಡಿದ ಒಂದು ಪಕ್ಷದ ಅಗತ್ಯತೆ ಇದೆ. ಈಗಿರುವ ರಾಜಕೀಯ ಪಕ್ಷಗಳಿಗೆ ಪ್ರತಿ ಸ್ಪರ್ಧಿಯಾಗಿ ನಿಲ್ಲುವುದಷ್ಟೇ ನಮ್ಮ ಆಶಯವಾಗಬಾರದು. ಒಂದು ಹೊಸ ಮೌಲ್ಯ ಸ್ಥಾಪನೆಗಾಗಿ ನಮ್ಮ ಹೋರಾಟ ಎಂಬ ಧ್ಯೇಯವಾಕ್ಯ ಇಟ್ಟುಕೊಂಡು ನಾವು ಹೊಸ ಪಕ್ಷ ಕಟ್ಟಬೇಕು.

-ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...