ಎಂ.ಡಿ.ಒಕ್ಕುಂದ |
ಪಪ್ಪಾ
ಭಾರತದ ನಕಾಶೆಯಲ್ಲಿ
ಕಾಶ್ಮೀರದ ಗಡಿರೀಖೆಗಳನ್ನೆಳೆಯುವಾಗ
ದಳದಳ ಕಣ್ಣೀರುದುರಿ
ಗಡಿರೇಖೆಗಳು
ತೊಳೆದು ಹೋದವು
ಮತ್ತೆ ಬಿಡಿಸಲಾರೆ
ಯಾವಾಗ ಬರುವೆ ಪಪ್ಪಾ…..
ಪಪ್ಪಾ
ನಮ್ಮ ಹೊಟ್ಟೆ ಬಟ್ಟೆಗಾಗಿ
ನೀನು ಸೈನ್ಯ ಸೇರಿದೆಯಂತೆ
ನನಗೆ ರೊಟ್ಟಿ ತಿನ್ನುವಾಗೊಮ್ಮೆ
ಹೊಟ್ಟೆ ತೊಳಸಿದಂತಾಗುತ್ತದೆ
ಬಟ್ಟೆ ತೊಡುವಾಗೊಮ್ಮೆ
ಬೆಂಕಿ ಸುತ್ತಿಕೊಂಡಂತಾಗುತ್ತದೆ
ಯಾವಾಗ ಬರುವಿ ಪಪ್ಪಾ……
ಪಪ್ಪಾ
ನೀ ತಂದ ಹೊಸ ಬಟ್ಟೆ
ಹೊಲಿಸಿಕೊಳ್ಳುವ ಮೊದಲೇ
ನೀ ಹೋಗಿಬಿಟ್ಟಿ
ಮತ್ತೆ ಬರುವೆಯಾ ಪಪ್ಪಾಾ….
ಆಪ್ಪ ಆಪ್ಪಾಜಿ ಆಪ್ಪಯ್ಯಾ ಪಪ್ಪಾ
ಆಪ್ಪಂದಿರನು ಕರೆವ
ಆಕ್ಕರೆಯ ದನಿಗಳನ್ನು
ಕೇಳೆದಾಗೊಮ್ಮೆ
ಗುಡ್ದದೋರೆಗೋಡಿ
ಯೆಲ್ಲ ಪದಗಳಲ್ಲಿ
ನಿನ್ನನ್ನು ಕೂಗಿ ಕರೆಯುತ್ತೇನೆ
ಮರುದನಿ ಕೇಳುವುದಿಲ್ಲ
ಮರಳಿ ಬರುವೆಯಾ ಪಪ್ಪಾ…..
ಪಪ್ಪಾ
ಹುತಾತ್ಮ ಯೋಧ
ಸರಕಾರಿ ಗವ್ರವಗಳೊಂದಿಗೆ
ಮಣ್ಣು ಸೇರುವದ ಟಿವಿಯಲಿ ಕಂಡೆ
ಹೇಗೆ ಮಲಗಲಿ ತಂದೆ
ಬಿಕ್ಕುತ್ತಿದಗದಾಳೆ ತಾಯಿ ಆ ಕಡೆಗೆ ಮುಖಮಾಡಿ
ಕಣ್ಣು ಮುಚ್ಚಿರುವೆ ನಾನೀ ಕಡೆಗೆ ಮುಖತೊರುವಿ
ಮೆದುಳಿನ ಕಪ್ಪು ಲೋಕದಲ್ಲಿ
ತೇಲಿ ಬರುತ್ತದೆ ನಿನ್ನ
ಬಿಳಿಬಿಳಿ ಹೆಣ
ಕೇಸರಿ ಬಿಳಿ ಹಸಿರು ನಿಸಾನೆಯಲ್ಲಿ
ಚಿಟ್ಟನೇ ಚೇರುತ್ತೇನೆ
ಬಿಗಿದಪ್ಪಿದ್ದಾಳೆ ತಾಯಿ
ಬೇಗ ಬಾರೋ ತಂದೆ…..
ಪಪ್ಪಾ
ಭಾರತದ ನಕಾಶೆಯಲ್ಲಿ
ಕಾಶ್ಮೀರದ ಗಡಿರೇಖೆಗಳನ್ನೆಳೆಯುವಾಗ
ದಳದಳ ಕಣ್ಣೀರುದುರಿ
ಗಡಿರೇಖೆಗಳು
ತೊಳೆದು ಹೋದವು
ಮತ್ತೆ ಬಿಡಿಸಲಾರೆ
ಯಾವಾಗ ಬರುವೆ ಪಪ್ಪಾ…
ಪಪ್ಪಾ
ನಮ್ಮ ಹೊಟ್ಟೆ ಬಟ್ಟೆಗಾಗಿ
ನೀನು ಸೈನ್ಯ ಸೇರಿದೆಯಂತೆ
ನನಗೆ ರೊಟ್ಟಿ ತಿನ್ನುವಾಗೊಮ್ಮೆ
ಹೊಟ್ಟೆ ತೊಳಸಿದಂತಾಗುತ್ತದೆ
ಬಟ್ಟೆ ತೊಡುವಾಗೊಮ್ಮೆ
ಬೆಂಕಿ ಸುತ್ತಿಕೊಂಡಂತಾಗುತ್ತದೆ
ಯಾವಾಗ ಬರುವಿ ಪಪ್ಪಾ…
ಪಪ್ಪಾ
ನೀ ತಂದ ಹೊಸ ಬಟ್ಟೆ
ಹೊಲಿಸಿಕೊಳ್ಳುವ ಮೊದಲೇ
ನೀ ಹೋಗಿಬಿಟ್ಟಿ
ಮತ್ತೆ ಬರುವೆಯಾ ಪಪ್ಪಾ…
ಆಪ್ಪ ಆಪ್ಪಾಜಿ ಆಪ್ಪಯ್ಯಾ ಪಪ್ಪಾ
ಆಪ್ಪಂದಿರನು ಕರೆವ
ಆಕ್ಕರೆಯ ದನಿಗಳನ್ನು
ಕೇಳಿದಾಗೊಮ್ಮೆ
ಗುಡ್ದದೋರೆಗೋಡಿ
ಎಲ್ಲ ಪದಗಳಲ್ಲಿ
ನಿನ್ನನ್ನು ಕೂಗಿ ಕರೆಯುತ್ತೇನೆ
ಮರುದನಿ ಕೇಳುವುದಿಲ್ಲ
ಮರಳಿ ಬರುವೆಯಾ ಪಪ್ಪಾ…
ಪಪ್ಪಾ
ಹುತಾತ್ಮ ಯೋಧ
ಸರಕಾರಿ ಗೌರವಗಳೊಂದಿಗೆ
ಮಣ್ಣು ಸೇರುವದ ಟಿವಿಯಲಿ ಕಂಡೆ
ಹೇಗೆ ಮಲಗಲಿ ತಂದೆ
ಬಿಕ್ಕುತ್ತಿದ್ದಾಳೆ ತಾಯಿ
ಆ ಕಡೆಗೆ ಮುಖಮಾಡಿ
ಕಣ್ಣು ಮುಚ್ಚಿರುವೆ ನಾನೀ ಕಡೆಗೆ ಮುಖತೋರುವೆ
ಮೆದುಳಿನ ಕಪ್ಪು ಲೋಕದಲ್ಲಿ
ತೇಲಿ ಬರುತ್ತದೆ ನಿನ್ನ
ಬಿಳಿಬಿಳಿ ಹೆಣ
ಕೇಸರಿ ಬಿಳಿ ಹಸಿರು ನಿಶಾನೆಯಲ್ಲಿ
ಚಿಟ್ಟನೇ ಚೀರುತ್ತೇನೆ
ಬಿಗಿದಪ್ಪಿದ್ದಾಳೆ ತಾಯಿ
ಬೇಗ ಬಾರೋ ತಂದೆ……


