Homeಅಂಕಣಗಳುನಾವು ದಕ್ಷಿಣ ಭಾರತೀಯರು ಕಪಿಗಳಾ?

ನಾವು ದಕ್ಷಿಣ ಭಾರತೀಯರು ಕಪಿಗಳಾ?

- Advertisement -
- Advertisement -

ಗೌರಿ ಲಂಕೇಶ್ |

ರಾಮಸೇತುವಿನ ಸುತ್ತ ನಡೆಯುವ ವಾದವಿವಾದಗಳಲ್ಲಿ ನನ್ನದೊಂದು ಪ್ರಶ್ನೆಗೆ ಯಾರಾದರೂ ಉತ್ತರ ನೀಡುತ್ತಾರಾ? ಪ್ರಶ್ನೆ ಏನೆಂದರೆ ರಾಮ ಸೇತುವನ್ನು ರಾಮನೇ ಕಟ್ಟಿದ್ದು-ನಂಬಿಕೆ/ಪುರಾಣ/ಚರಿತ್ರೆ ಅಥವಾ ಇನ್ನಾವುದೋ ಕಾಗಕ್ಕ-ಗುಬ್ಬಕ್ಕ ಕತೆಯ ಪ್ರಕಾರ ಎಂಬುದನ್ನು ಸತ್ಯ ಎಂದು ಒಪ್ಪಿಕೊಳ್ಳುವುದಾದರೆ, ಅದೇ ಪ್ರಕರಣ ಕುರಿತಂತೆ ನಾವು ದಕ್ಷಿಣ ಭಾರತದ ಜನ ವಾನರರು-ಅಂದರೆ ಕಪಿಗಳು, ಮಂಗಗಳು ಎಂಬುದನ್ನು ಒಪ್ಪಿಕೊಳ್ಳಬೇಕಲ್ಲವೇ?

ಈ ಪ್ರಶ್ನೆ ಯಾಕೆಂದರೆ ರಾಮಾಯಣದ ಪ್ರಕಾರ ರಾಮನ ಸೈನ್ಯದಲ್ಲಿ ಇದ್ದದ್ದು ಕಪಿಗಳು. ಆ ಕಾಲದಲ್ಲೇ ರಾಮ ಆದರ್ಶ ಪುರುಷನಾಗಿದ್ದರೂ, ಏಕಪತ್ನಿವ್ರತಸ್ಥನಾಗಿದ್ದರೂ ದಕ್ಷಿಣ ಭಾರತದ ‘ಜನ’ ಇನ್ನೂ ಮಂಗಗಳಾಗಿಯೇ ಉಳಿದಿದ್ದರಲ್ಲದೆ, ಪಕ್ಕಾ ಕಾಡುಪ್ರಾಣಿಗಳಂತೆ ಜೀವಿಸುತ್ತಿದ್ದರು. ಒಬ್ಬರ ಹೆಂಡಂದಿರನ್ನು ಇನ್ನೊಬ್ಬರು ಲಪಟಾಯಿಸುತ್ತಿದ್ದರು, ವಿವೇಚನಾ ಶಕ್ತಿ ಇಲ್ಲದವರಾಗಿದ್ದರು!

ಕತೆ, ಪುರಾಣ, ಚರಿತ್ರೆ, ಇತಿಹಾಸ, ವಿಜ್ಞಾನ ಇವುಗಳ ನಡುವಿನ ವ್ಯತ್ಯಾಸವನ್ನು ಅರಿಯದ ಜನ ‘ಹದಿನೇಳು ಲಕ್ಷ ಐವತ್ತು ಸಾವಿರ ವರ್ಷಗಳ ಹಿಂದೆಯೇ ರಾಮನ ವಾನರ ಸೈನ್ಯ ಈ ಸೇತುವೆಯನ್ನು ನಿರ್ಮಿಸಿತ್ತು’ ಎಂದು ವಾದಿಸುತ್ತಾರಲ್ಲವೆ, ಬೀದಿಗಿಳಿದು ಮಂಗಗಳಂತೆ ವರ್ತಿಸುತ್ತಾರೆ.
ಎಲ್ಲಾ ಧರ್ಮಗಳಲ್ಲೂ ಅತಿಶಯೋಕ್ತಿ ಎನಿಸುವ ಮೆಟಫರ್‌ಗಳಿರುತ್ತವೆ. ಅಥವಾ ಆ ಧರ್ಮ ಜನಿಸಿದ್ದ ಕಾಲದ ಮರ್ತಮಾನದಲ್ಲಿ ಮನುಷ್ಯನ ಅರಿವಿಗೆ ಬಂದಿರುವ ಮಾಹಿತಿಯನ್ನು ಆಧರಿಸಿ ಹಲವು ಕತೆಗಳನ್ನು, ನೀತಿಪಾಠಗಳನ್ನು ಕಟ್ಟಿ ಕೊಡುತ್ತವಲ್ಲದೆ ಮನುಷ್ಯನ ಕಲ್ಪನೆಗೆ ಅರೋಪಿಸಿ ದೈವಶಕ್ತಿಯ ಬಗ್ಗೆ ನಂಬಿಕೆ ಜನಿಸುವಂತೆ ಮಾಡಿರಲಾಗುತ್ತದೆ.

ಉದಾಹರಣೆಗೆ ಕ್ರೈಸ್ತ ಧರ್ಮ ಎರಡು ಸಾವಿರ ವರ್ಷಗಳ ಹಿಂದೆ ಜನಿಸಿದಾಗ ಮಾನವನ ವಿಕಸನದ ಬಗ್ಗೆ ಗೊತ್ತಿರಲಿಲ್ಲ. ಆದ್ದರಿಂದ ಆ ಧರ್ಮದಲ್ಲಿ ಈಡನ್ ಗಾರ್ಡನ್‌ನ ಕಲ್ಪನೆ ಇದೆಯಲ್ಲದೆ, ಭೂಮಿ ಚಪ್ಪಟೆ ಆಗಿದೆ ಎಂದೂ, ಅದರ ಸುತ್ತ ಸೂರ್ಯನೆ ಚಲಿಸುತ್ತಾನೆಂದೂ ಅದರ ಧರ್ಮಗ್ರಂಥ ಬೈಬಲ್‌ನಲ್ಲಿ ದಾಖಲಿಸಲಾಗಿದೆ. ಅಂದಮಾತ್ರಕ್ಕೆ ಇವತ್ತು ಸತ್ಯ ಎಂದು ಸಾಬೀತುಪಡಿಸಲಾಗಿರುವ ಚಾರ್ಲ್ಸ್ ಡಾರ್ವಿನ್‌ನ ವಿಕಾಸವಾದವನ್ನು, ಕೊಪರ್ ನಿಕಸ್‌ನ ಸೌರ ಮಂಡಲದ ರೂಪವನ್ನು ನಿರಾಕರಿಸಲಾಗುತ್ತದೆಯೇ?

ಅಂದಹಾಗೆ ಹದಿನಾರನೇ ಶತಮಾನದಲ್ಲಿ ಕೊಪರ್‌ನಿಕಸ್ ಮತ್ತು 19ನೇ ಶತಮಾನದಲ್ಲಿ ಚಾರ್ಲ್ಸ್ ಡಾರ್ವಿನ್ ಇಬ್ಬರೂ ಅಂದಿನ ಮೂಲಭೂತವಾದಿ ಕ್ರೈಸ್ತರ ನಿಂದನೆಗೆ ಗುರಿಯಾಗಿದ್ದರು. ನಮ್ಮ ವಿಪರ್ಯಾಸ ಎಂತಹದ್ದೆಂದರೆ ಇವತ್ತು 21ನೇ ಶತಮಾನದಲ್ಲಿ ವೈಜ್ಞಾನಿಕವಾಗಿ ಲಭ್ಯವಿರುವ ಸಾಕ್ಷ್ಯಯಗಳನ್ನು ಆಧರಿಸಿ ರಾಮಸೇತುವನ್ನು ರಾಮನಾಗಲಿ, ಕಪಿಸೈನ್ಯವಾಗಲಿ ನಿರ್ಮಿಸಿದ್ದಲ್ಲ ಎಂದು ಹೇಳಿದರೆ ‘ಹಿಂದೂ ನಂಬಿಕೆಗಳಿಗೆ ಅವಮಾನ’ ಎಂದು ಕೂಗಾಡುವವರು, ಪ್ರತಿಭಟನೆಗೆ ಇಳಿಯುವವರು ನಮ್ಮ ಸುತ್ತಲೂ ಇದ್ದಾರೆ.
ಹೋಗಲಿ, ಇಲ್ಲಿಯವರೆಗೂ ಲಭ್ಯವಾಗಿರುವ ಮಾಹಿತಿ ಏನನ್ನು ಹೇಳುತ್ತದೆ ಎಂಬುದಕ್ಕೆ ಹಲವು ಅಂಕಿಅಂಶಗಳನ್ನು ಗಮನಿಸೋಣ. ಭೂಖಂಡ ಚದುರುವಿಕೆ ಸಂಭವಿಸಿ ಇಂದಿನ ವಿವಿಧ ಖಂಡಗಳು ನಿರ್ಮಿತವಾಗಿದ್ದು ಸುಮಾರು 2,00,000,000 ವರ್ಷಗಳ ಹಿಂದೆ. ಅಷ್ಟೇ ಅಲ್ಲ, ಆಧುನಿಕ ಮಾನವ ರೂಪಗೊಂಡಿದ್ದೂ 1,00,000 ವರ್ಷಗಳ ಹಿಂದೆ. ಅದರಲ್ಲೂ ತೀರಾ ಇತ್ತೀಚೆಗೆ ಎನಿಸುವ 10,000 ವರ್ಷಗಳ ಹಿಂದಷ್ಟೇ ಆತ ಕಾಡುಪ್ರಾಣಿಯಂತೆ ಜೀವಿಸುವುದನ್ನು ನಿಲ್ಲಿಸಿ ಕೃಷಿಕನಾಗಿದ್ದು. ಅಂದರೆ ಹತ್ತು ಸಾವಿರ ವರ್ಷಗಳಷ್ಟು ಹಿಂದೆ ಭೂಮಿಯ ಮೇಲೆ ರಾಜರು, ರಾಜವಂಶಗಳು, ಇಂಥದ್ದು ಯಾವುದೂ ಇರಲಿಲ್ಲ.

ಭಾರತದ ಬಗ್ಗೆ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಮಧ್ಯೆಪ್ರದೇಶದ ಭೀಮ್‌ಬೆಟ್ಟ ಎಂಬಲ್ಲಿ ಲಭ್ಯವಾಗಿರುವ ಮಾಹಿತಿಯ ಪ್ರಕರ 9,000 ವರ್ಷಗಳ ಹಿಂದೆ ಇಲ್ಲಿ ಕಾಡುಮಾನವ ವಾಸಿಸುತ್ತಿದ್ದ, ಅದಕ್ಕಿಂತ ಪುರಾತನ ಕಾಲದಲ್ಲಿ ಇಲ್ಲಿ ಮಾನವ ಇದ್ದನೆಂಬುದಕ್ಕೆ ಯಾವುದೇ ಪುರಾವೆಗಳೂ ಸಿಕ್ಕಿಲ್ಲ. ಅಷ್ಟು ಮಾತ್ರವಲ್ಲ, ಹರಪ್ಪ ನಾಗರಿಕತೆ ಇದ್ದದ್ದು ಸುಮಾರು 4,000 ವರ್ಷಗಳ ಹಿಂದೆ; ಋಗ್ವೇದ ರಷಿತವಾಗಿದ್ದು 3.000 ವರ್ಷಗಳ ಹಿಂದೆ, ರಾಮಾರಣವನ್ನು ವಾಲ್ಮೀಕಿ ರಚಿಸಿದ್ದು 2,300 ವರ್ಚಗಳ ಕೆಳಗೆ. ತುಳಸಿದಾಸ ತನ್ನ ರಾಮಚರಿತ ಮಾನಸ ಸೃಷ್ಟಿಸಿದ್ದು 400 ವರ್ಷಗಳ ಹಿಂದೆ.

ಈ ಎಲ್ಲಾ ಅಂಕಿ, ಅಂಶಗಳನ್ನು ಗಣನೆಗೆ ತೆಗೆದುಕೊಂಡು ನೋಡಿದಾಗ ‘ಹದಿನೇಳು ಲಕ್ಷ ಐವತ್ತು ಸಾವಿರ ವರ್ಷಗಳ ಹಿಂದೆಯೇ ರಾಮ ಈ ಸೇತುವೆಯನ್ನು ನಿರ್ಮಿಸಿದ್ದ’ ಎಂದು ಚೆಡ್ಡಿಗಳು ಅರಚುತ್ತಿರುವುದು ಎಷ್ಟು ಹಾಸ್ಯಾಸ್ಪದವಾಗಿ ಕಾಣಿಸುತ್ತದಲ್ಲವೇ?!

26 ಸೆಪ್ಟೆಂಬರ್, 2007 (‘ಕಂಡಹಾಗೆ’ ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...