Homeರಾಜಕೀಯಪ್ರಿಯಾಂಕಾ ಕುಡಿದು ಅರಚಿದರಂತೆ: ಅಮಲೇರಿದ ‘ಭಕ್ತರ’ ಫೇಕ್ ಸ್ಟೋರಿ

ಪ್ರಿಯಾಂಕಾ ಕುಡಿದು ಅರಚಿದರಂತೆ: ಅಮಲೇರಿದ ‘ಭಕ್ತರ’ ಫೇಕ್ ಸ್ಟೋರಿ

- Advertisement -
- Advertisement -

ಪ್ರಿಯಾಂಕ ಗಾಂಧಿಯವರ ಅದಿಕೃತ ರಾಜಕೀಯ ಪ್ರವೇಶದ ಘೋಷಣೆಯ ನಂತರ, ವಿಕೃತ ಬುದ್ಧಿಯ ‘ಭಕ್ತರು’ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಅವಹೇಳನ ಮಾಡಲು ಯತ್ನಿಸುತ್ತಿದ್ದಾರೆ. ಅದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಒಂದು ವಿಡಿಯೋ ಹರಿದಾಡುತ್ತಿದ್ದು ಸುಳ್ಳನ್ನು ಕಕ್ಕುತ್ತ ಸಾಗಿದೆ.
ಮಿಥ್ಯ: ‘ಪಾನಮತ್ತ ನಾಯಕಿ ಕಾಂಗ್ರೆಸ್‍ಗೆ ಹೊಸ ಭರವಸೆ ಇರಬಹುದು, ಆದರೆ ಈ ದೇಶದ ಜನರಿಗಲ್ಲ’ ಎಂಬ ಕ್ಯಾಪ್ಸನ್‍ನೊಂದಿಗೆ ಪ್ರಿಯಾಂಕಾ ಗಾಂಧಿಯ ಒಂದು ವಿಡಿಯೋವನ್ನು ಫೇಸ್‍ಬುಕ್, ವ್ಯಾಟ್ಸಾಪ್, ಟ್ವಿಟರ್‍ಗಳಲ್ಲಿ ಅಮಲೇರಿದ ‘ಭಕ್ತರು’ ತೇಲಿಬಿಟ್ಟಿದ್ದಾರೆ. ‘humlog’ ಎನ್ನುವ ಫೇಸ್‍ಬುಕ್ ಈ ಸುದ್ದಿ ಮೂಲವಾಗಿದ್ದು, ಇದಕ್ಕೆ ಈಗ 98 ಸಾವಿರಕ್ಕೂ ಹೆಚ್ಚು ವ್ಯೂವ್‍ಗಳಿದ್ದು, 3,800ಕ್ಕೂ ಹೆಚ್ಚು ಸಲ ಶೇರ್ ಆಗಿದೆ.

ಹಮಲೋಗ್ ಫೇಸಬುಕ್ ಪೇಜ್‍ನ ವಿಕೃತ ಬುದ್ಧಿ

ವಿಮಲ್ ಶರ್ಮಾ ಎಂಬ ವ್ಯಕ್ತಿಯ ಫೇಸ್‍ಬುಕ್ ಪೇಜ್ ಕೂಡ ಇದನ್ನೇ ಹರಡುತ್ತ, ‘ಪ್ರತಿದಿನ ಸಂಜೆ ಕುಡಿಯುವವರ ಮೇಲೆ ಕಾಂಗ್ರೆಸ್‍ಗೆ ಭರವಸೆ ಇರಬಹುದು, ದೇಶದ ಜನರಿಗಲ್ಲ. ಒಬ್ಬ ಮದ್ಯವ್ಯಸನಿ ನಾಯಕಿಯಾಗಲು ಸಾಧ್ಯವಿಲ್ಲ….’ ಎಂದೆಲ್ಲ ಬರೆಯಲಾಗಿದೆ.
ಸತ್ಯ: ಇದು ವಿಕೃತ ಮನಸ್ಸಿನ ಬಲಪಂಥಿಯರ ಕೆಲಸವೇ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಪ್ರಚಲಿತದಲ್ಲಿರುವ ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ಸಿಟ್ಟಿನಿಂದ ಗದರಿದ್ದು ನಿಜ. ಆದರೆ, ಈ ವಿಡಿಯೋ 9 ತಿಂಗಳ ಹಳೆಯದಾಗಿದ್ದು, ಇದನ್ನು ಏಪ್ರಿಲ್ 18, 2018ರಂದು ಎಎನ್‍ಐ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ‘ಕ್ಯಾಂಡಲ್ ಲೈಟ್ ಪ್ರತಿಭಟನೆಯಲ್ಲಿ ಕೋಪಿತರಾದ ಪ್ರಿಯಾಂಕಾ ಗಾಂಧಿ’ ಎಂಬ ಕ್ಯಾಪ್ಸನ್ ನೀಡಲಾಗಿದ್ದು, ‘ಪರೆಸ್ಪರ ತಳ್ಳಾಡಬೇಡಿ. ನೀವು ಯಾವ ಕಾರಣಕ್ಕೆ ಇಲ್ಲಿ ಸೇರಿದ್ದಿರಿ ಎಂಬುದು ನಿಮಗೆ ಅರಿವಿರಲಿ. ನಿಮಗೆ ಸರಿಯಾಗಿ ವರ್ತಸಲಾಗದಿದ್ದರೆ ಮನೆಗೆ ಹೋಗಿ. ಈಗ ಎಲ್ಲರೂ ಅಲ್ಲಿವರೆಗೆ ಸಾಲಾಗಿ ಸಂಯಮದಿಂದ ನಡೆಯಿರಿ’ ಎಂದು ಗದರಿದರು ಎಂದು ವಿವರಿಸಲಾಗಿದೆ.
ಕಥುವಾ ಮತ್ತು ಉನ್ನಾವೊ ರೇಪ್ ಪ್ರಕರಣಗಳನ್ನು ಖಂಡಿಸಿ, ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಿದ್ದ ಮಧ್ಯರಾತ್ರಿಯ

ವಿಮಲ್ ಶರ್ಮಾ ಎನ್ನುವ ಕೊಳಕನ ಫೇಕ್ ಪೋಸ್ಟ್

ಕ್ಯಾಂಡಲ್ ಲೈಟ್ ಪ್ರತಿಭಟನೆಯಲ್ಲಿನ ಘಟನೆಯಿದು. ಆನರು ಏಕಾಏಕಿ ತಳ್ಳಾಟ ಆರಂಭಿಸಿದಾಗ, ಪ್ರಿಯಾಂಕಾ ಗಾಂಧಿ ಮೇಲಿನಂತೆ ಗದರಿದ್ದಾರೆ. ಈ ಘಟನೆಯನ್ನು ಇಂಡಿಯಾ ಟುದೇ, ಹಿಂದೂಸ್ತಾನ್ ಟೈಮ್ಸ್‍ಗಳು ಕೂಡ ವರದಿ ಮಾಡಿದ್ದವಲ್ಲದೇ ಜನರ ನೂಕಾಟ, ಕಿಡಿಗೇಡಿತನ ತಡೆಯಲು ಪೊಲೀಸರೂ ಶ್ರಮ ಪಡಬೇಕಾಗಿತು. ತಳ್ಳಾಟದಲ್ಲಿ ಪ್ರಿಯಾಂಕಾರ ಮಕ್ಕಳನ್ನೂ ನೂಕಲಾಗಿತ್ತು. ಪಾನಮತ್ತರಾಗಿದ್ದ ಕೆಲವರು ಬ್ಯಾರಿಕೇಡ್‍ಗಳನ್ನು ಕೀಳಲೂ ಯತ್ನಿಸಿದರು ಎಂದು ವರದಿ ಮಾಡಲಾಗಿತ್ತು.
ವಿಡಿಯೋ ವಿಳಾಸ: https://twitter.com/i/status/984515031621668864

ಇದು ಅಸಲಿ ಸತ್ಯ. ಆದರೆ ಕೊಳಕು ಬುದ್ಧಿಯ ಭಕ್ತರು ಈ ವಿಡಿಯೋಕ್ಕೆ ಅವಹೇಳನದ ಕ್ಯಾಪ್ಸನ್ ಹಾಕಿ ಸುಳ್ಳು ಕತೆಯನ್ನು ಹರಡತೊಡಗಿದ್ದಾರೆ. ಕರ್ನಾಟಕದಲ್ಲಿ ವಿಕೃತ ವಿಷಭಟ್ಟನೂ ಕೂಡ ಗೌರಿ ಲಂಕೇಶರ ಕೊಲೆಯ ನಂತೆ ಇದೇ ಮಾದರಿಯಲ್ಲಿ ತನ್ನ ಹಲ್ಕಾ ಬುದ್ಧಿ ತೋರಿಸಿದ್ದ. ಈಗ ಈತನನ್ನು ಹಂಪಿ ಕನ್ನಡ ವಿವಿ ಕಾರ್ಯಕ್ರಮಕ್ಕೆ ಬರದಂತೆ ಓಡಿಸಲಾಗಿದೆ.
ಪ್ರಿಯಾಂಕಾ ಕುರಿತ ಮೇಲಿನ ಫೇಕ್‍ಸ್ಟೋರಿಯನ್ನು ಅಲ್ಟ್‍ನ್ಯೂಸ್, ಡೆಬ್‍ಕೂಪ್, ಬಿಬಿಸಿ (ಹಿಂದಿ)ಗಳು ಬಸ್ರ್ಟ್ ಮಾಡಿದ್ದು ‘ಭಕ್ತರ’ ವಿತಂಡ ಬುದ್ದಿಯನ್ನು ತೆರೆದು ಇಟ್ಟಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...