Homeಮುಖಪುಟರೆಡ್ಡಿ ಹಣಿಯುವ ಶಾ ತಂತ್ರಕ್ಕೆ ರಾಮುಲು ಆದರೇ ಬದಾಮಿಯ ಹರಕೆಯ ಕುರಿ?

ರೆಡ್ಡಿ ಹಣಿಯುವ ಶಾ ತಂತ್ರಕ್ಕೆ ರಾಮುಲು ಆದರೇ ಬದಾಮಿಯ ಹರಕೆಯ ಕುರಿ?

- Advertisement -
- Advertisement -

– ಗಿರೀಶ್ ತಾಳಿಕಟ್ಟೆ /

ಈ ಸಲದ ಎಲೆಕ್ಷನ್‍ನ ಹೈವೋಲ್ಟೇಜ್ ಕ್ಷೇತ್ರ ಅಂತ್ಯಾವುದಾದರು ಇದ್ದರೆ ಅದು ಬದಾಮಿ ಅನ್ನೋದ್ರಲ್ಲಿ ಯಾವ ಡೌಟೂ ಇಲ್ಲ. ಸಿಎಂ ಸಿದ್ರಾಮಯ್ಯ ಅಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಗಾಳಿ ಸುದ್ದಿ ತೇಲಾಡಿದಾಗಲೇ ಬದಾಮಿ ಹೈಲೈಟಿಗೆ ಬಂದಿತ್ತು. ಆದರೆ ಯಾವಾಗ ಬಿಜೆಪಿ, ಶ್ರೀರಾಮುಲು ಎಂಬ ರೆಡ್ಡಿ ಬೆಟಾಲಿಯನ್ ಬಂಟನನ್ನು ತಂದು ಸಿದ್ರಾಮಯ್ಯನ ಎದುರು ನಿಲ್ಲಿಸಿತೋ ಆಗಿನಿಂದ ಅದು ಸಿಕ್ಕಾಪಟ್ಟೆ ಸೆನ್ಸೇಷನಲ್ ಕ್ಷೇತ್ರವಾಗಿದೆ. ಚಾಮುಂಡೇಶ್ವರಿಯಲ್ಲಿ ಗೆಲುವು ಕಷ್ಟ ಅಂತಾ, ಕುರುಬರ ಸಾಲಿಡ್ ಮತಗಳಿರುವ ಬದಾಮಿಗೂ ಸಿದ್ರಾಮಯ್ಯ ತನ್ನ ಸ್ಪರ್ಧೆ ವಿಸ್ತರಿಸಿದರೆ ಬಿಜೆಪಿ ಅಲ್ಲಿಯೂ ಶ್ರೀರಾಮುಲು ಎಂಬ ರೊಕ್ಕಸ್ಥ ಆಸಾಮಿಯನ್ನು ಕಣಕ್ಕಿಳಿಸಿ ಬೆವರಿಳಿಸುವಂತೆ ಮಾಡುತ್ತಿದೆ ಎಂಬ ವೆರಿ ಸೂಪರ್‍ಫಿಶಿಯಲ್ ಅಭಿಪ್ರಾಯ ಜನರ ನಡುವೆ ಹರಿದಾಡುತ್ತಿದೆ, ಅಥವಾ ಹರಿದಾಡಿಸಲಾಗುತ್ತಿದೆ.
ಕಾಂಗ್ರೆಸ್ ಪಾಲಿಗೆ ದಿಲ್ಲಿ ಕೂಸು ರಾಹುಲ್‍ಗಿಂತಲೂ ಸ್ಟಾರ್ ಕ್ಯಾಂಪೇನರ್ ಅಂತಂದರೆ ಅದು ಸಿಎಂ ಸಿದ್ರಾಮಯ್ಯ. ಈಗಾಗಲೇ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಜನರನ್ನು ಕೈ ಪಾರ್ಟಿಯತ್ತ ಸೆಳೆದಿವೆ. ಇನ್ನು ಸಿದ್ರಾಮಯ್ಯನಂತ ಮಾಸ್ ಲೀಡರ್ರು ಪ್ರಚಾರ ಮಾಡಿಬಿಟ್ರೆ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯೋದ್ರಲ್ಲಿ ಸಂಶಯವಿಲ್ಲ. ಬಹುತೇಕ ಸಮೀಕ್ಷೆಗಳು ಇದನ್ನೇ ಹೇಳುತ್ತಿವೆ. ಹಾಗಾಗಿ ಸಿಎಂ ಸಿದ್ರಾಮಯ್ಯರನ್ನು ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿಸಬೇಕು ಅನ್ನೊ ಪ್ಲ್ಯಾನು ಹಾಕಿಕೊಂಡೇ ಬಿಜೆಪಿ ಬದಾಮಿಯಲ್ಲಿ ಶ್ರೀರಾಮುಲುರನ್ನು ಫೀಲ್ಡಿಗಿಳಿಸಿದೆ. ಇದು ರಾಮುಲು ಸ್ಪರ್ಧೆಯ ನೇರಾನೇರ ವಾಸ್ತವ. ಆದ್ರೆ ಪಾಲಿಟಿಕ್ಸ್ ಅನ್ನೋದು ಇಷ್ಟು ಸರಳವಾದ ಸಂಗತಿ ಅಲ್ಲ. ಒಂದೊಂದು ತಿರುವಿನೊಳಗೂ ಹತ್ತಾರು ಒಳಹುಗಳು ಮಲಗಿರುತ್ತವೆ. ರಾಮುಲು ಸ್ಪರ್ಧೆಯ ಹಿಂದೆಯೂ ಇಂತದ್ದೇ ಒಂದು ಹಿಡನ್ ಕಾರ್ಯತಂತ್ರವಿದೆ. ಅದು ಸ್ವತಃ ಬಿಜೆಪಿಯೇ ಅಳೆದು-ತೂಗಿ ಮಡಗಿದ ಮಹೂರ್ತ! ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿಸೋ ಅಮಿತ್ ಶಾ ಸ್ಕೆಚ್ಚು!!

ಸೋಲಿನ ಪಾಕ

ಎತ್ತಿಂದೆತ್ತ ಲೆಕ್ಕ ಹಾಕಿದರೂ, ಏನೆಲ್ಲಾ ಪರ್ಮುಟೇಷನ್-ಕಾಂಬಿನೇಷನ್ ಗುಣಿಸಿ ಗುಡ್ಡೆ ಹಾಕಿದರೂ ಬದಾಮಿಯಲ್ಲಿ ಸಿದ್ರಾಮಯ್ಯನ ಎದುರು ಬಿಜೆಪಿ ಗೆಲ್ಲೋದಕ್ಕೆ ಸಾಧ್ಯವೇ ಇಲ್ಲ. ಜಾತಿ ಕೆಮಿಸ್ಟ್ರಿಯನ್ನೇ ಅಪ್ಲೈ ಮಾಡಿ ನೋಡೋಣ. ಅಜಮಾಸು ಎರಡು ಕಾಲು ಲಕ್ಷದಷ್ಟು ಮತದಾರರಿರುವ ಬದಾಮಿಯಲ್ಲಿ ಕುರುಬರದ್ದೇ ಮೇಲುಗೈ. ಏನಿಲ್ಲವೆಂದರು 46 ಸಾವಿರ ಓಟುಗಳಿವೆ. 36 ಸಾವಿರ ಮತಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಲಿಂಗಾಯತರು ಪಂಚಮಸಾಲಿ ಮತ್ತು ಬಣಜಿಗ ಎಂಬ ಎರಡು ಪಂಗಡಗಳಾಗಿ ಇಬ್ಬಾಗವಾಗಿವೆ. ಇನ್ನು ಗಾಣಿಗರ 26 ಸಾವಿರ, ನೇಕಾರರ 17 ಸಾವಿರ, ದಲಿತರ 25 ಸಾವಿರ, ನಾಯಕರ 13 ಸಾವಿರ, ಅಲ್ಪಸಂಖ್ಯಾತರ 12 ಸಾವಿರ ಮತಗಳಿವೆ. ಕುರುಬರ, ದಲಿತರ, ಅಲ್ಪಸಂಖ್ಯಾತರ ಮತಗಳು ಒಗ್ಗೂಡಿದರೆ ಸಾಕು ಸಿದ್ರಾಮಯ್ಯ ಗೆಲುವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದಾಗ್ಯೂ ಇನ್ನುಳಿದ ಜಾತಿಗಳ ಮೇಲೂ ಆರ್.ಬಿ.ತಿಮ್ಮಾಪೂರ, ಬಿ.ಬಿ.ಚಿಮ್ಮನಕಟ್ಟಿ, ಸತೀಶ್ ಜಾರಕಿಹೊಳಿಯಂತಹ ಲೋಕಲ್ ಲೀಡರುಗಳ ಪವರ್‍ಫುಲ್ ಪ್ರಭಾವವಿದೆ. ಇನ್ನು ಲಿಂಗಾಯತ ಮತಗಳನ್ನು ಸೆಳೆಯಲು ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಲಿಂಗಾಯತ ಲೀಡರುಗಳ ದಂಡೇ ಕಾರ್ಯಪ್ರವೃತ್ತವಾಗಿದೆ. ಪರಿಸ್ಥಿತಿ ಹೇಗಿದೆಯೆಂದರೆ ಬಿಜೆಪಿಯ ರಾಮುಲುಗೆ ತನ್ನದೇ ಜಾತಿಯ ನಾಯಕರ ಮತಗಳು ಬೀಳೋದೂ ಡೌಟು. ಯಾಕೆಂದ್ರೆ ಅವು ಅದೇ ಸಮುದಾಯದ ಸತೀಶ್ ಜಾರಕಿಹೊಳಿಯ ಸ್ಥಳೀಯ ಪ್ರಭಾವಳಿಯಲ್ಲಿವೆ.
ಇಲ್ಲಿ ಬಿಜೆಪಿಗೆ ನಿಜಕ್ಕೂ ಸಿದ್ರಾಮಯ್ಯನ ನಿದ್ದೆಗೆಡಿಸುವುದೇ ಏಕಮೇವ ಇರಾದೆಯಾಗಿದ್ದಿದ್ದರೆ ಯಾರಾದರು ಪವರ್‍ಫುಲ್ ಲಿಂಗಾಯತ ಲೀಡರನ್ನು ಚುನಾವಣೆಗೆ ಇಳಿಸಬೇಕಿತ್ತು. ಕೇವಲ ಇದೊಂದು ಕ್ಷೇತ್ರದ ಲಿಂಗಾಯತರ ಮತಗಾತ್ರವನ್ನು ಕಬ್ಜಾ ಮಾಡಿಕೊಳ್ಳುವುದಲ್ಲದೇ ಇಡೀ ಉತ್ತರ ಕರ್ನಾಟಕದಲ್ಲಿ ಈಗಲೂ ಲಿಂಗಾಯತರ ಜೊತೆ ನಾವೇ ಹೆಜ್ಜೆ ಹಾಕುತ್ತಿದ್ದೇವೆ ಎಂಬ ಸಂದೇಶ ಹೊರಬೀಳುವಂತೆ ಮಾಡುವಲ್ಲೂ ಅದು ಪ್ರಮುಖ ಪಾತ್ರ ವಹಿಸುತ್ತಿತ್ತು. ಆದರೆ ಹಾಗೆ ಮಾಡದೆ ಜಾತಿ ಲೆಕ್ಕಾಚಾರದಲ್ಲೂ ಹಿಂದೆ ಬಿದ್ದಿರುವ, ಕ್ಷೇತ್ರ ಒಡನಾಟದಲ್ಲೂ ತಾಳೆಯಾಗದ ರೆಡ್ಡಿ ಪಾಳೆಯದ ಶ್ರೀರಾಮುಲುವನ್ನು ಬಿಜೆಪಿ ಕಣಕ್ಕಿಳಿಸಿರೋದು ಯಾಕೆ?

ಬಿಸಿ ತುಪ್ಪಕ್ಕೆ ದ್ವಂದ್ವ ಸೂತ್ರ
ಗಣಿ ಮಾಫಿಯಾದ ಕಾರಣಕ್ಕೆ ಜೈಲುಪಾಲಾಗಿ, ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಬಂದರೂ ಬಳ್ಳಾರಿ ಜಿಲ್ಲೆಯೊಳಗೆ ಕಾಲಿಡದಂತೆ ನಿರ್ಬಂಧ ಹೇರಿಸಿಕೊಂಡಿರುವ ಜನಾರ್ಧನ ರೆಡ್ಡಿ ಮತ್ತವರ ಟೀಮು ಬಿಜೆಪಿ ಪಾಲಿಗೆ ಬಿಸಿ ತುಪ್ಪದಂತಾಗಿದ್ದಾರೆ. ಅತ್ತ ನುಂಗುವಂತೆಯೂ ಇಲ್ಲ, ಇತ್ತ ಉಗುಳುವಂತೆಯೂ ಇಲ್ಲ. ರೆಡ್ಡಿಗಳ ಕಾಸು, ವರ್ಚಸ್ಸು ಬೇಕು ಆದರೆ ಪಕ್ಷದೊಳಗೆ ಅವರು ಪ್ರಭಾವಿಗಳಾಗೋದು ಬೇಡ. ಇದು ಬಿಜೆಪಿಯ ಆಂತರಿಕ ಇಂಗಿತ. ಚುನಾವಣೆ ಗೆಲ್ಲೋದಕ್ಕೆ, ಅಗತ್ಯ ಬಿದ್ದರೆ ಆಪರೇಷನ್ ಕಮಲಕ್ಕೆ ರೆಡ್ಡಿಗಳೇ ಫೈನಾನ್ಸ್ ಮಾಡಬೇಕಾಗಿರೋದ್ರಿಂದ ಅವರನ್ನು ಅಷ್ಟು ಸುಲಭಕ್ಕೆ ಸೈಡ್‍ಲೈನ್ ಮಾಡಲಾಗದು. ಹಾಗಂತ ಈ ಹಿಂದೆ ಅವರೇ ಪಕ್ಷವನ್ನು ಹೈಜಾಕ್ ಮಾಡುವಷ್ಟರ ಮಟ್ಟಕ್ಕೆ ಬೆಳೆಯಲೂ ಬಿಡುವಂತಿಲ್ಲ. ಇಂಥಾ ಇಕ್ಕಟ್ಟನ್ನು ನಿಭಾಯಿಸಿಕೊಳ್ಳಲೇ ಅಮಿತ್ ಷಾ, ಸಂಘ ಪರಿವಾರದ ಜೊತೆಗೆ ಸಮಾಲೋಚನೆ ನಡೆಸಿ ಶ್ರೀರಾಮುಲುವನ್ನು ಸಿದ್ರಾಮಯ್ಯ ವಿರುದ್ಧ ಕಣಕ್ಕಿಳಿಸಿದ್ದಾರೆ ಎನ್ನಲಾಗುತ್ತಿದೆ.
ಹೀಗೆ ಮಾಡೋದ್ರಿಂದ ಷಾ ಮತ್ತು ಸಂಘ, ಒಂದೇ ಕಲ್ಲಿಗೆ ಎರಡು ಹಕ್ಕಿಯ ಕಾಲು ಮುರಿಯಲು ಹೊರಟಿದ್ದಾರೆ. ಏನೇ ತಿಪ್ಪರಲಾಗ ಹಾಕಿದರೂ ಬದಾಮಿಯಲ್ಲಿ ತಮ್ಮ ಪಕ್ಷದ ಕ್ಯಾಂಡಿಡೇಟು ಸಿದ್ರಾಮಯ್ಯನ ವಿರುದ್ಧ ಗೆಲ್ಲೊಲ್ಲ ಅನ್ನೋದು ಅಮಿತ್ ಷಾಗೂ ಗೊತ್ತಿತ್ತು. ಆದರೆ ಆ ಸೋಲಿನಿಂದಲೂ ಒಂದು ಲಾಭ ಮಾಡಿಕೊಳ್ಳುವ ತಂತ್ರ ಹೆಣೆದೇ ರಾಮುಲುವನ್ನು ಕಣಕ್ಕಿಳಿಸುವಂತೆ ಜನಾರ್ಧನ ರೆಡ್ಡಿಯ ಮುಂದೆ ಅಮಿತ್ ಶಾ ಆಫರ್ ಇಟ್ಟಿದ್ದಾರೆ. ಅದು ಪಕ್ಷದೊಳಗೆ ರೆಡ್ಡಿಗಳನ್ನು ಅಡ್ಡಡ್ಡ ಮಲಗಿಸುವ ನಾಜೂಕಯ್ಯನ ತಂತ್ರ. ಹೇಗೂ ರೆಡ್ಡಿ ಬ್ರಿಗೇಡು ಪೊಲಿಟಿಕಲ್ ಪುನರ್ಜನ್ಮಕ್ಕಾಗಿ ಹಾತೊರೆಯುತ್ತಾ ಇರೋದ್ರಿಂದ ಪಕ್ಷ ಇಟ್ಟ ಈ ಆಫರ್ರನ್ನು ಜನಾರ್ಧನ್ ರೆಡ್ಡಿ ತಿರಸ್ಕರಿಸಲು ಬರುವುದಿಲ್ಲ. ಒಂದೊಮ್ಮೆ ಆತ ಅಲ್ಲಿ ಸೋಲುವ ಸುಳಿವಿಡಿದು ತನ್ನ ಭಂಟನ ಸ್ಪರ್ಧೆಗೆ ಅಡ್ಡಡ್ಡ ತಲೆಯಾಡಿಸಿದರೆ ಪಕ್ಷದೊಳಗೆ ರೆಡ್ಡಿ ತಾನಾಗೇ ಆತ್ಮಹತ್ಯೆ ಮಾಡಿಕೊಂಡಂತಾಗುತ್ತಿತ್ತು. ಧೈರ್ಯ ಮಾಡಿ ಸ್ಪರ್ಧೆಗೆ ಸೈ ಅಂದರೂ, ಶ್ರೀರಾಮುಲುಗೆ ಅಲ್ಲಿ ಸೋಲು ಕಟ್ಟಿಟ್ಟ ಬುತ್ತಿ. ಆ ಸೋಲು ಸಹಾ ರೆಡ್ಡಿ ಬೆಟಾಲಿಯನನ್ನು ಪಕ್ಷದೊಳಗೆ ಕೆಡವಿ ಬಿಡುತ್ತೆ! ಅಲ್ಲಿಗೆ ಯಾವ ದುಶ್ಮನಿ, ಮನಸ್ತಾಪವನ್ನೂ ಕಟ್ಟಿಕೊಳ್ಳದೆ ರೆಡ್ಡಿಗಳನ್ನು ಮಟ್ಟ ಹಾಕಿದಂತೆ ಆಯ್ತಲ್ಲವೇ!! ಅಪ್ಪಿತಪ್ಪಿ, ಶ್ರೀರಾಮುಲು ಗೆದ್ದೇ ಬಿಟ್ಟರು ಅಂತಿಟ್ಟುಕೊಳ್ಳಿ ಆಗಲೂ ಲಾಭ ಬಿಜೆಪಿಗೇ ತಾನೇ.

ಒಂದು ಕಡೆ ಸಿದ್ರಾಮಯ್ಯರನ್ನು ವಿಚಲಿತ ಮಾಡಿದಂತಾಗುತ್ತೆ. ಮತ್ತೊಂದೆಡೆ ರೆಡ್ಡಿಗಳನ್ನು ಎರಡು ತುದಿಯ ಖಡ್ಗದಿಂದ ಇರಿದಂತಾಗುತ್ತೆ! ಇದು ಅಮಿತ್ ಷಾ ಲೆಕ್ಕಾಚಾರ. ಒಟ್ಟಿನಲ್ಲಿ ರೆಡ್ಡಿಗಳನ್ನು ಕಟ್ಟಿಹಾಕಲು ರಾಮುಲು ಎಂಬ ಹರಕೆಯ ಕುರಿಯನ್ನು ಷಾ ಬಳಸಿಕೊಳ್ಳುತ್ತಿರೋದು ಸ್ಪಷ್ಟ. ಕಾಕತಾಳೀಯ ಅಂದ್ರೆ, ಹಿಂದೆ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದಾಗ ಬಿಜೆಪಿಯ ಮಿನುಗು`ತಾರೆ’ ಸುಷ್ಮಾ ಸ್ವರಾಜ್ ಪರ ರಿಸ್ಕನ್ನು ಕೈಗೆತ್ತಿಕೊಂಡು ಬಿಜೆಪಿಯೊಳಗೆ ಬಲಾಢ್ಯರಾಗಿ ಬೆಳೆದಿದ್ದ ರೆಡ್ಡಿಗಳನ್ನು ಮಟ್ಟ ಹಾಕಲು ಇದೀಗ ಅಂತದ್ದೇ ಚಾಲೆಂಜಿಂಗ್ ಚುನಾವಣೆ ಬಳಕೆಯಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...