ಅನುವಾದ – ದಿನೇಶ್ ಕೆ.ಎನ್ |
ವಾಸ್ತವ ಅಂಕಿ ಅಂಶ ಕೊಡದೆ, ದತ್ತಾಂಶ ತಿದ್ದುಪಡಿ ಮಾಡಲು ಮುಂದಾದ ಮೋದಿ ಸರ್ಕಾರ
ಅಂಕಿ ಅಂಶ ವಿಶ್ಲೇಷಕ ಸಂಸ್ಥೆಗಳ ಮೇಲೆ ಮೋದಿ ಸರ್ಕಾರವು ರಾಜಕೀಯ ಹಸ್ತಕ್ಷೇಪ ಮಾಡುತ್ತಿರುವುದನ್ನು ವಿರೋಧಿಸಿ, ಅವುಗಳ ಸಾಂಸ್ಥಿಕ ಸ್ವಾತಂತ್ರ್ಯವನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಜಗತ್ತಿನ 108 ಅರ್ಥಶಾಸ್ತ್ರಜ್ಞರು, ಸಾಮಾಜಿಕ ವಿಜ್ಞಾನಿಗಳು ದನಿ ಎತ್ತಿದ್ದಾರೆ. ಜಿಡಿಪಿ ದರ ಪರಿಕ್ಷರಣೆ ಮತ್ತು ಎನ್.ಎಸ್.ಎಸ್.ಓ ಡಾಟಾ ತಿದ್ದುಪಡಿ ವಿವಾದದ ಹಿನ್ನೆಲೆಯಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ಆಯಾಮಗಲ್ಲಿ ಆರ್ಥಿಕ ಮತ್ತು ಸಾಮಾಜಿಕ ಮಾನದಂಡಗಳ ಆಧಾರದಲ್ಲಿ ಸಮಗ್ರ, ನಂಬಿಕಾರ್ಹವಾದ ಮಾಹಿತಿ ಒದಗಿಸುವ ಕಾರಣಕ್ಕಾಗಿಯೇ ಭಾರತೀಯ ಸಾಂಖ್ಯಿಕ ಸಂಸ್ಥೆಗಳು ದೊಡ್ಡಮಟ್ಟದ ಖ್ಯಾತಿಯನ್ನು ಪಡೆದಿದ್ದವು. ಈ ಹಿಂದೆ ಕೆಲವೊಮ್ಮೆ ಅವರ ಅಂದಾಜುಗಳ ಗುಣಮಟ್ಟದಲ್ಲಿ ಟೀಕೆಗಳು ಬಂದಿದ್ದರೂ, ನಿರ್ಣಯ ತಗೆದುಕೊಳ್ಳುವಾಗ ರಾಜಕೀಯ ಹಸ್ತಕ್ಷೇಪದ ಆರೋಪಗಳು ಕೇಳಿಬಂದಿರಲಿಲ್ಲ ಎಂದು ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ತಮಗೆ ಅನಾನುಕೂಲವಾಗಲಿದೆ ಎಂಬ ಕಾರಣಕ್ಕಾಗಿಯೇ ಡಾಟಾವನ್ನು ತಡೆಯಿಡಿಯುವ/ನಿಗ್ರಹಿಸುವ ಪ್ರವೃತ್ತಿಯನ್ನು ವಿರೋಧಿಸಬೇಕಿದೆ. ಜೊತೆಗೆ ಸಮಗ್ರತೆಯಿಂದ ಎಲ್ಲಾ ಮಾಹಿತಿಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವ ರೀತಿಯಲ್ಲಿ ಸಾರ್ವಜನಿಕ ಸಾಂಖ್ಯಿಕ ಸಂಸ್ಥೆಗಳಿಗೆ ಸ್ವಾತಂತ್ರ್ಯ ಇರಬೇಕೆಂದು ಸರ್ಕಾರವನ್ನು ಒತ್ತಾಯಿಸಲು ವೃತ್ತಿಪರ ಅರ್ಥಶಾಸ್ತ್ರಜ್ಞರು, ಸಂಖ್ಯಾತಜ್ಞರು ಮತ್ತು ಸ್ವತಂತ್ರ ಸಂಶೋಧಕರು ಒಟ್ಟಾಗಿ ದನಿ ಎತ್ತಬೇಕೆಂದು ಮನವಿ ಮಾಡಿದ್ದಾರೆ.
2016-17 ರ ಅನಾಣ್ಯೀಕರಗೊಂಡ ವರ್ಷದಲ್ಲಿ ಸಿಎಸ್‍ಓ( ಕೇಂದ್ರೀಯ ಅಂಕಿಅಂಶಗಳ ಕಛೇರಿ) ಜಿಡಿಪಿ ಬೆಳವಣಿಗೆ ದರವನ್ನು 1.1% ರಷ್ಟು ಹೆಚ್ಚಳ ಮಾಡುವ ಮೂಲಕ 8.2% ರಷ್ಟು ಸಾಧಿಸಲಾಗಿದ್ದು ಈ ದಶಕದಲ್ಲೇ ಹೆಚ್ಚಿನಷ್ಟು ಬೆಳವಣಿಗೆ ಆಗಿದೆ ಎಂದು ಹೇಳಿತ್ತು. ಆದರೆ ಜಗತ್ತಿನ ಹಲವು ಅರ್ಥಶಾಸ್ತ್ರಜ್ಞರು ಇದಕ್ಕೆ ದಾಖಲೆ ಸಮೇತ ಭಿನ್ನಮತ ವ್ಯಕ್ತಪಡಿಸಿದ್ದರು. ಅದೇ ರೀತಿಯಲ್ಲಿ ಎನ್‍ಎಸ್‍ಎಸ್‍ಓ ನಡೆಸುವ ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯನ್ನು ನಿಷ್ಕ್ರಿಯಗೊಳಿಸಿದ್ದಲ್ಲದೇ 2017-18ರ ಸಾಲಿನ ವರದಿಯನ್ನು ಸಹ ಸರ್ಕಾರ ತಡೆಹಿಡಿದಿದೆ. ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಂಕಿಅಂಶಗಳ ಆಯೋಗದ ಅಧ್ಯಕ್ಷರಾಗಿದ್ದ ಪಿ.ಸಿ ಮೋಹನನ್ ಮತ್ತು ಜೆ.ವಿ ಮೀನಾಕ್ಷಿರವರು ರಾಜೀನಾಮೆ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು.
ದೇಶದ ಒಳಗಿನ ವಿಷಯಗಳ ವಿಷಯದಲ್ಲಿ ತಲೆಹಾಕಿ ಮೋದಿ ಸ್ವಾಯುತ್ತತೆಯನ್ನು, ದೇಶದ ಸ್ವಾಸ್ಥ್ಯವನ್ನು ಹಾಳು ಮಾಡಿದ್ದಲ್ಲದೇ ಈಗ ಅಂಕಿ ಅಂಶಗಳ ವಿಚಾರಕ್ಕೂ ಕೈ ಹಾಕಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಾಕಲು ಮುಂದಾಗಿದ್ದಾರೆ. ಈಗ ಭಾರತದ ಅಪಾಯಕಾರಿ ಬೆಳವಣಿಗೆಗಳ ವಿರುದ್ಧದ ಜಂಟಿ ಹೇಳಿಕೆ ಹೊರಡಿಸಿರುವ ಅರ್ಥಶಾಸ್ತ್ರಜ್ಞರಲ್ಲಿ ಐಐಎಂ-ಎ ನ ರಾಕೇಶ್ ಬಸಂತ್, ಮೆಸಾಚುಯೇಟ್ಸ್ ವಿ.ವಿಯ ಜೇಮ್ಸ್ ಬಾಯ್ಸೆ, ಹಾರ್ವಡ್ ವಿ.ವಿಯ ಎಮಿಲಿ ಬ್ರೆಜ, ದೆಹಲಿ ವಿ.ವಿ ಸತೀಶ್ ದೇಶಪಾಂಡೆ, ಯುನಿವರ್ಸಿಟ್ ಆಫ್ ಬ್ರಿಟಿಷ್ ಕೊಲಂಬಿಯಾದ ಪೇಟ್ರೀಕ್ ಫ್ರಾನ್ಸಿಸ್, ಮುಂಬೈನ ಟಿಸ್ಸ್‍ನ ಆರ್ ರಾಮ್‍ಕುಮಾರ್, ಐಐಎಂ-ಬಿಯ ಹೇಮಾ ಸ್ವಾಮಿನಾಥನ್ ಮತ್ತು ಜೆ.ಎನ್.ಯುನ ರೋಹಿತ್ ಅಜಾದ್‍ರವರು ಸಹಿ ಹಾಕಿದ ಪ್ರಮುಖರಾಗಿದ್ದಾರೆ.
ಸುಪ್ರೀಂ ಕೋರ್ಟ್‍ನ ಜಡ್ಜ್‍ಗಳು ಬಂದು ದೇಶ ಅಪಾಯದಲ್ಲಿದೆ ಎಂದು ಪತ್ರಿಕಾಗೋಷ್ಠಿ ನಡೆಸಿದರು. ಸಿಬಿಐ ಅಧಿಕಾರಿಗಳು ರಾಜಿನಾಮೇ ಕೊಟ್ಟರು. ಆರ್‍ಬಿಐ ತನ್ನ ಅನುಮತಿ ನೀಡದೆಯೂ ಸಹ ಮೋದಿ ನೋಟು ರದ್ಧತಿ ಘೋಷಿಸಿದರು. ಈಗ ಅರ್ಥಶಾಸ್ತ್ರಜ್ಞರು ಮೋದಿ ಆಡಳಿತದಲ್ಲಿ ಎಲ್ಲವೂ ಸರಿಇಲ್ಲ ಎನ್ನುತ್ತಿದ್ದಾರೆ ಮಾತ್ರವಲ್ಲ ಇದರ ವಿರುದ್ಧ ಪ್ರತಿಭಟಿಸುವಂತೆ ಕರೆ ನೀಡುತ್ತಿದ್ದಾರೆ ಅಂದರೆ ನೀವೇ ಅರ್ಥ ಮಾಡಿಕೊಳ್ಳಿ ದೇಶದ ಪರಿಸ್ಥಿತಿಯನ್ನು.


