Homeಸಾಮಾಜಿಕಕೆಆರ್‍ಎಸ್ ಬುಡದಲ್ಲಿ ಗಣಿಗಾರಿಕೆ ಕಂಪನ

ಕೆಆರ್‍ಎಸ್ ಬುಡದಲ್ಲಿ ಗಣಿಗಾರಿಕೆ ಕಂಪನ

- Advertisement -
- Advertisement -

ಸೋಮಶೇಖರ್ ಚಲ್ಯ |

ಸ್ವಾತಂತ್ರ್ಯಾ ನಂತರದಲ್ಲಿ ಕಾವೇರಿ ಸಮಸ್ಯೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಬಿಕ್ಕಟ್ಟಾಗಿಯೇ ಉಳಿದಿರುವುದರಿಂದ ಮೈಸೂರು-ಮಂಡ್ಯ ಭಾಗದ ಜನರ ಮನದಲ್ಲಿ ಕೃಷ್ಣರಾಜಸಾಗರವು ಭಾವನಾತ್ಮಕವಾಗಿ ಉಳಿದಿರುವುದು ವಿಶೇಷವೇನೂ ಅಲ್ಲ. ಅದರೆ ಈ ಸೆಂಟಿಮೆಂಟು ಕಾವೇರಿ ನದಿ ತೀರದ ಮರಳು ಗಣಿಗಾರಿಕೆಗೇನೂ ಕಡಿವಾಣ ಹಾಕಲಿಲ್ಲ. ಮರಳು ಮಾಫಿಯಾವನ್ನು ತಡೆಗಟ್ಟುವ ಹೋರಾಟಗಳು ಎಂದೂ ಈ ಭಾಗದಲ್ಲಿ ಭುಗಿಲೇಳಲಿಲ್ಲ.ಕೆಲವೇ ಕೆಲವರು ನಡೆಸಿದ ಪ್ರಯತ್ನದಿಂದಾಗಿ ಮರಳು ದಂದೆಕೋರರನ್ನು ನಿಗ್ರಹಿಸುವ ಸಾಹಸ ನಡೆದಿತ್ತು. ಆದರೆ ಇಂದಿಗೂ ಮರಳಿನ ದಂಧೆಗೆ ಸಂಪೂರ್ಣವಾಗಿ ಫುಲ್‍ಸ್ಟಾಪ್ ಇಟ್ಟಿಲ್ಲವೆಂಬ ಅಸಮಾಧಾನ ಇರುವ ಬೆನ್ನಲ್ಲೇ ಮತ್ತೊಂದು ಕಲ್ಲುಗಣಿಗಾರಿಕೆಯ ಭೂತ ಬೆನ್ನತ್ತಿದೆ.

ದಕ್ಷಿಣ ಕರ್ನಾಟಕದಲ್ಲಿ ಸೈಲೆಂಟಾಗಿಯೇ ಮರಳು ಮತ್ತು ಕಲ್ಲು ಗಣಿಗಾರಿಕೆಯ ಮಾಫಿಯಾ ಗುದ್ದು ಕೊಡುತ್ತಿದೆ. ಈ ಮೈನಿಂಗ್ ಮಾಫಿಯಾದಲ್ಲಿ ಕಳೆದೆರಡು ದಶಕಗಳಿಂದ ಮಂಡ್ಯ ಸುದ್ದಿಯಾಗುತ್ತಲೇ ಇದೆ.

ಇದೀಗ ದಕ್ಷಿಣ ಕರ್ನಾಟಕದ ಪ್ರಮುಖ ಜಿಲ್ಲೆಗಳ ಜನರಿಗೆ ನೀರುಣಿಸುತ್ತಾ, ರೈತದ ಬದುಕನ್ನು ಮುನ್ನಡೆಸುತ್ತಿರುವ ಕೆಆರ್‍ಎಸ್ ಜಲಾಶಯಕ್ಕೇ ಅಪಾಯವೊದಗಿದೆ. ಕೆಆರ್‍ಎಸ್‍ನಿಂದ 10.5ಕಿ.ಮೀ ದೂರದಲ್ಲಿರುವ ನೂರಾರು ಎಕರೆಯಲ್ಲಿರುವ ಬೇಬಿಬೆಟ್ಟದ ಕಾವಲಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಸ್ಫೋಟದಿಂದ ಹೊರಟ ಕಂಪನಗಳು ಇದೇ ಸೆಪ್ಟೆಂಬರ್ 25ರಂದು ಕೆಆರ್‍ಎಸ್ ಬುಡದಲ್ಲಿರುವ ಭೂಕಂಪ ಮಾಪನ ಯಂತ್ರದಲ್ಲಿ ದಾಖಲಾಗಿದೆ. ಕೆಆರ್‍ಎಸ್ ನಿರ್ಮಾಣವಾಗಿ ಇನ್ನೂ ಒಂದು ಶತಮಾನವೂ ಕಳೆದಿಲ್ಲ ಆದರೀಗ ಕೆಆರ್‍ಎಸ್ ಶಿಥಿಲೀಕರಣದ ಸುಳಿಗೆ ಸಿಲುಕುತ್ತಿದೆ.ಜಲಾಶಯ ನಿಂತಿರುವುದೇ ಸುತ್ತ-ಮುತ್ತಲ ಬೆಟ್ಟಗಳ ಆಧಾರದಿಂದ. ಅದೇ ಬೆಟ್ಟಗಳ ಸರಣಿಯ ಇನ್ನೊಂದು ಕಡೆ ಗುಡ್ಡ ಕರಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ.

ಆದರೆ ಈ ಕಂಪನ ಭೂಕಂಪವಲ್ಲ, ಹಾಗಾಗಿ ಅಂತಹ ತೊಂದರೆಯಿಲ್ಲ ಎಂಬ ವರದಿಯನ್ನು ನೈಸರ್ಗಿಕ ವಿಕೋಪ ಸಂಸ್ಥೆಯು ನೀಡಿ ಹಲವು ಎಚ್ಚರಿಕೆಯ ಮಾತುಗಳನ್ನು ಹೇಳಿದೆ. ಕೆಆರ್‍ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ಮೆಗಾಬ್ಲಾಸ್ಟ್‍ಗೆ ಅನುಮತಿ ಇಲ್ಲದಿದ್ದರೂ ಬೇಬಿ ಬೆಟ್ಟದಲ್ಲಿ ಸಿಡಿಸಿದ ಮೆಗಾಬ್ಲಾಸ್ಟ್‍ನಿಂದಾಗಿ ಈ ಕಂಪನ ಉಂಟಾಗಿದೆ. ಈ ಸದ್ಯ ಅಪಾಯವಾಗಿಲ್ಲ ಎಂಬುದನ್ನು, ಮುಂದೆಯೂ ಅಪಾಯವಾಗುವುದಿಲ್ಲವೆಂದು ವ್ಯಾಖ್ಯಾನಿಸುತ್ತಿರುವ ಗಣಿ ಮಾಲೀಕರು ನಿರಂತರ ಲೂಟಿಗೆ ಮುಂದಾಗಿದ್ದಾರೆ.

ಈಗಾಗಲೇ 20 ವರ್ಷಗಳಿಂದ ನಡೆದು ಬಂದಿರುವ ಮೈನಿಂಗ್ ಮಾಫಿಯಾದಿಂದಾಗಿ ಜಲಾಶಯದ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿವಿದ್ದ ಪ್ರಾಣಿಸಂಕುಲ ಕ್ಷೀಣಿಸುತ್ತಾ ಬಂದಿದ್ದು ಪಕ್ಷಿಗಳ ತವರು ಮನೆಯಂತಿದ್ದ ಬೆಟ್ಟಗಳಿದ್ದ ಪ್ರದೇಶದಲ್ಲಿ ಅಂತರ್ಜಲವು ನೂರಾರು ಅಡಿಗಳ ಆಳಕ್ಕೆ ಇಳಿದುಹೋಗಿವೆ. ಪ್ರಾಣಿ-ಪಕ್ಷಿಗಳು ನೆಲೆಗಾಗಿ ಈ ಪ್ರದೇಶವನ್ನೇ ಬಿಟ್ಟುಹೋಗಿದ್ದು, ಅವುಗಳ ಅವಶೇಷಗಳನ್ನು ಕಾಣಲಾಗದ ಸ್ಥಿತಿ ಬೇಬಿ ಬೆಟ್ಟದಲ್ಲಿ ನಡೆಯುತ್ತಿದೆ. ಅದಷ್ಟೇ ಅಲ್ಲದೆ ಕೃಷಿಯನ್ನು ನಂಬಿದ್ದ ಜನಕ್ಕೆ ಪ್ರತಿನಿತ್ಯ ಧೂಳಿನ ಗಾಳಿಯೇ ಉಸಿರಾಟಕ್ಕೆ ಎನ್ನುವಂತಾಗಿದ್ದು, ಮೈನಿಂಗ್ ಏರಿಯಾದಲ್ಲಿ ಜನವಸತಿಯೂ ಕಷ್ಟವೆಂಬಂತಾಗಿದೆ. ಸಾವಿರಾರು ಜನ ಕೃಷಿ ತೊರೆದು ನಗರಗಳತ್ತ ಮುಖಮಾಡಲೂ ಕೂಡ ಕಾರಣವಾಗಿದೆ.

ಬೆರಳೆಣಿಕೆಯಷ್ಟು ಜನ ಲೈಸೆನ್ಸ್ ಪಡೆದು ಮಾಡುತ್ತಿರುವ ಮೈನಿಂಗ್ ಇದಾಗಿಲ್ಲ. ಕೆಆರ್‍ಎಸ್‍ನಿಂದ 20 ಕಿ.ಮೀ ದೂರದಲ್ಲಿ ಎರಡು ಮೂರು ಎಕರೆಗಳಲ್ಲಿ ಗಣಿಗಾರಿಕೆಗೆ ಪರ್ಮಿಷನ್ ಪಡೆದುಕೊಂಡಿದ್ದರೂ ಈಗ ಕೆಆರ್‍ಎಸ್ ಬುಡಕ್ಕೆ ಬಂದು ನಿಂತಿದೆ. ಅಷ್ಟೇ ಅಲ್ಲದೆ 170ಕ್ಕೂ ಹೆಚ್ಚು ಅಕ್ರಮ ಗಣಿಗಾರಿಕೆಗಳು ಈ ಭಾಗದಲ್ಲಿ ನಡೆಯುತ್ತಿವೆ. ಬೇಬಿಬೆಟ್ಟವೊಂದರಲ್ಲೇ 44 ಜೆಲ್ಲಿ ಕ್ರಶರ್‍ಗಳು ನಿಂತಿವೆ. ಇವಾವೂ ಹೊಟ್ಟೆ ಪಾಡಿಗಾಗಿ ಬೇರಾವುದೇ ಆಧಾರವಿಲ್ಲ ಎಂದು ಜೀವನಾಧಾರಕ್ಕಾಗಿ ಮಾಡುತ್ತಿರುವ ಗಣಿಗಾರಿಕೆಗಳಲ್ಲ. ಕೆಲವು ವ್ಯಕ್ತಿಗಳ ಸಂಪತ್ತಿನ ಕೇಂದ್ರೀಕರಣದ ದುರಾಸೆಯಿಂದ ಮಾಡಲಾಗುತ್ತಿರುವ ಲೂಟಿ.

ಇಂತಹ ಲೂಟಿಯಿಂದಾಗಿ ಸಾವಿರಾರು ಜನರ ಬದುಕು ಬೀದಿಪಾಲಾಗುವ ದಿನಗಳು ಕಣ್ಣೆದುರು ನಿಂತಿವೆ. ಹೀಗಾಗಿಯೇ ಕಳೆದ 15 ವರ್ಷಗಳಿಂದ ರೈತ ಹೋರಾಟಗಾರ ಮತ್ತು ಮಾಜಿ ಶಾಸಕ ದಿ.ಪುಟ್ಟಣ್ಣಯ್ಯ, ರೈತ ಸಂಘಗಳು ಕೆಆರ್‍ಎಸ್ ಉಳಿಸಿ-ಅಕ್ರಮಗಣಿಗಾರಿಕೆ ನಿಲ್ಲಿಸಿ ಎಂದು ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ಅಕ್ರಮ ಗಣಿಗಾರಿಕೆ ಮಾತ್ರವಲ್ಲ ಸಕ್ರಮ ಗಣಿಗಾರಿಕೆಯನ್ನೂ ನಿಲ್ಲಿಸಿ ಎಂಬ ಕೂಗು ಭುಗಿಲೇಳುತ್ತಿದೆ.

ಈಗಾಗಲೇ ಇಂತಹ ಮೈನಿಂಗ್ ಮಾಫಿಯಾ, ದರೋಡೆ, ಲೂಟಿಗಳಂತಹ ಕಾರಣಗಳಿಂದಾಗಿ ದೇಶದ 36 ಜಲಾಶಯಗಳು ಶಿಥಿಲಗೊಂಡಿವೆ. ಹಾಗಾಗಿ 86 ವರ್ಷ ಹಳೆಯದಾದ ಕೆಆರ್‍ಎಸ್ ಕೂಡ ಈ ಪಟ್ಟಿಗೆ ಸೇರುವ ದಿನಗಳು ದೂರವಿಲ್ಲ. ಹಾಗಾಗಿ ಕೆಆರ್‍ಎಸ್ ಉಳಿವಿಗಾಗಿ 20ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಯನ್ನು ನಡೆಸಲು ಬಿಡಬಾರದು ಎಂಬ ಕೂಗು ಕೇಳಿಬರುತ್ತಿದೆ. ಭೂವಿಜ್ಞಾನಿಗಳು ನೀಡಿರುವ ವರದಿಯನ್ನೇ ಆಧಾರವಾಗಿಟ್ಟುಕೊಂಡು ಮೈನಿಂಗ್ ಮಾಫಿಯಾದ ಪರವಾಗಿ ನಿಂತಿರುವುದು ಸಾಕ್ಷಾತ್ ಉಸ್ತುವಾರಿ ಸಚಿವರು. ಮೇಲುಕೋಟೆ ಕ್ಷೇತ್ರದ ಶಾಸಕರೂ ಆದ ಸಿ.ಎಸ್.ಪುಟ್ಟರಾಜು ಇದಕ್ಕಾಗಿ ಟೊಂಕಕಟ್ಟಿ ನಿಂತಿದ್ದಾರೆ. ಅದರಲ್ಲೂ ಅವರ ಅಣ್ಣನ ಮಗ ಅಶೋಕ್ ಹೆಸರಿನಲ್ಲಿ ಮೈನಿಂಗ್ ಲೈಸೆನ್ಸ್ ಪಡೆದು ನಡೆಸುತ್ತಿರುವ ಗಣಿಗಾರಿಕೆಯು ಎಲ್ಲರಿಗೂ ತಿಳಿದಿರುವ ಸಂಗತಿ. ಕೆಆರ್‍ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಸಕ್ರಮ ಗಣಿಗಾರಿಕೆಗಳಲ್ಲಿ ಅತ್ಯುತ್ತಮ ಆಧುನಿಕ ಯಂತ್ರೋಪಕರಣಗಳನ್ನು ಒಳಗೊಂಡಿರುವ ಕ್ರಶರ್ ಪುಟ್ಟರಾಜುನ ಅಣ್ಣನ ಮಗನದ್ದೇ ಆಗಿದೆ. 10 ಕ್ರಶರ್‍ಗಳಿಂದಾಗುವಷ್ಟು ಕೆಲಸ ಈತನ ಒಂದೇ ಕ್ರಶರ್‍ನಲ್ಲಿ ನಡೆಯುತ್ತಿದೆ. ಹಾಗಾಗಿಯೇ ಮೈನಿಂಗ್ ಉಳಿಸಿಕೊಳ್ಳುವ ವಾದವನ್ನ ಮಣ್ಣಿನ ಮಕ್ಕಳ ಪಕ್ಷದಲ್ಲಿರುವ ಪ್ರಜಾಪ್ರತಿನಿಧಿ ಪುಟ್ಟರಾಜು ಮಾಡುತ್ತಿದ್ದಾರೆ.

ಇಷ್ಟೆಲ್ಲ ಅವಾಂತರಗಳಿಂದ ಕೆಆರ್‍ಎಸ್ ಉಳಿವಿಗೇ ಕುತ್ತು ಬಂದಿದ್ದರೆ, ಮೈನಿಂಗ್ ಮಾಫಿಯಾಕ್ಕೆ ಫುಲ್‍ಸ್ಟಾಪ್ ಇಡುವಂತಹ ಕೆಲಸಕ್ಕೆ ಯೋಜನೆ ಮಾಡಬೇಕಾದ ರಾಜ್ಯ ಸರ್ಕಾರ ಕೆಆರ್‍ಎಸ್ ಎದುರು ಕಾವೇರಿ ಪ್ರತಿಮೆ ನಿಲ್ಲಿಸುವ ತರಾತುರಿಯಲ್ಲಿದೆ. ಇದು ಸರ್ಕಾರದ ಬೊಕ್ಕಸದಿಂದ ದುಡ್ಡು ಬಾಚುವ ಹುನ್ನಾರವೇ ಹೊರತು ಮತ್ತೇನು ಅಲ್ಲ. ಮಣ್ಣಿನ ಮಕ್ಕಳೆಂದು ಹಣೆಪಟ್ಟಿ ಕಟ್ಟಿಕೊಂಡಿರುವ, ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದಿರುವ ಜೆಡಿಎಸ್ ನಾಯಕರು ಕೆಆರ್‍ಎಸ್ ಉಳಿವಿಗಾಗಿ ಸೂಕ್ತ ಕ್ರಮಗಳನ್ನು ಕೈಗೊಂಡು, ಅಣೆಕಟ್ಟೆಯ ಸುತ್ತಲಿನ 20 ಕಿ.ಮೀ ವ್ಯಾಪ್ತಿಯ ಗಣಿಗಾರಿಕೆಗೆ ಇತಿಶ್ರೀ ಹಾಕುವ ಕೆಲಸಕ್ಕೆ ಮುಂದಾಗಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...