- Advertisement -
- Advertisement -
ವಾರದ ಹಿಂದೆ ಹೊರಬಿದ್ದ ತೀಕ್ಷ್ಣ ರೆಸಲೂಷನ್ನಿನ ಫೋಟೊಗಳು ಬಾಲಾಕೋಟ್ ವಾಯುದಾಳಿಯ ವಿಫಲತೆಯತ್ತ ಬೊಟ್ಟು ಮಾಡಿದ್ದವು.
ಈಗ ಅಮೆರಿಕವು ಪಾಕಿಸ್ತಾನಕ್ಕೆ ನೀಡಿದ್ದ ಎಫ್-16 ವಿಮಾನಗಳ ಎಣಿಕೆ ಮಾಡಿದ್ದು ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಅಂದರೆ ಏಪ್ರಿಲ್ 27ರಂದು ತಾನು ಪಾಕಿಸ್ತಾನ ಸೇನೆಯ ಎಫ್-16 ವಿಮಾನವನ್ನು ಹೊಡೆದು ಉರುಳಿಸಿದ್ದಾಗಿ ಭಾರತ ಪ್ರತಿಪಾದಿಸುತ್ತಿರುವ
ವಿಷಯ ಸುಳ್ಳು ಎಂಬ ಸಂಶಯಕ್ಕೆ ಕಾರಣವಾಗಿದೆ.
ವಿಂಗ್ ಕಮಾಂಡರ್ ಸೆರೆಯಾಗುವ ಮೊದಲು ಪಾಕ್‌ನ ಎಫ್-16 ವಿಮಾನವನ್ನು ಹೊಡೆದು ಉರುಳಿಸಿದ್ದರು ಎಂದು ಭಾರತ ಹೇಳುತ್ತ ಬಂದಿತ್ತು. ಅಮೆರಿಕ ನಡೆಸಿದ ಎಣಿಕೆ ಪ್ರಕಾರ, ಪಾಕ್‌ನ ಎಫ್-16 ವಿಮಾನಗಳ ಸಂಖ್ಯೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಅಮೆರಿಕ ನೀಡಿದ ಎಲ್ಲ ಎಫ್-16 ಪಾಕಿಸ್ತಾನದ ಬಳಿ ಇವೆ ಎಂದು ಖುದ್ದು ಅಮೆರಿಕವೇ ಸ್ಪಷ್ಟಪಡಿಸಿದೆ.
ಆಧಾರ: ದಿವೈರ್


