ಭಾರತ ಮತ್ತು ನ್ಯೂಝಿಲೆಂಡ್ ನಡುವೆ ನಡೆಯಬೇಕಿದ್ದ ವಿಶ್ವಕಪ್‌ನ ಮೊದಲ ಸೆಮಿಫೈನಲ್ಸ್ ಮಳೆಯಿಂದಾಗಿ ತಾತ್ಕಾಲಿಕವಾಗಿ ರದ್ಧಾಗಿದ್ದು ಬುಧವಾರಕ್ಕೆ ಪಂದ್ಯವನ್ನು ಮುಂದೂಡಲಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಸಧ್ಯ 46.1 ಓವರ್‌ಗೆ ತನ್ನ 5 ವಿಕೆಟ್‌ಗಳನ್ನು ಕಳೆದುಕೊಂಡು 211 ರನ್ ಗಳಿಸಿದೆ. ಬಿರುಸಿನ ಆಟಗಾರ ರಾಸ್ ಟೇಲರ್ ಔಟಾಗದೆ 67 ರನ್ ಗಳಿಸಿ ಇನ್ನೂ ಕ್ರೀಸ್‌ನಲ್ಲಿ ಇದ್ದಾರೆ. ಈಗ ಮಳೆಯ ಕಾರಣಕ್ಕೆ ಆಟ ತಾತ್ಕಲಿಕವಾಗಿ ರದ್ಧಾಗಿದ್ದು ಮುಂದಿನ ಸಾಧ್ಯತೆಯ ಕುರಿತು ICC ಹಾಗೂ BCCI ಸರಣಿ ಟ್ವೀಟ್‌ಗಳನ್ನು ಮಾಡಿದೆ. ಅವರ ಪ್ರಕಾರ ಪಂದ್ಯ ಎಲ್ಲಿಗೆ ನಿಂತಿದ್ದೆಯೋ ಅಲ್ಲಿಂದಲೇ ಬುಧವಾರ ಮುಂದುವರೆಯಲಿದೆ.

ICC ಪ್ರಕಾರ ಈ ಪಂದ್ಯದ ಫಲಿತಾಂಶ ಪ್ರಕಟವಾಗುವುದು ಬಹಳ ಮುಖ್ಯವಾಗಿದ್ದು, ಫಲಿತಾಂಶ ಪ್ರಕಟವಾಗಲೇಬೇಕಾದರೆ ಭಾರತ ಕನಿಷ್ಠ 20 ಓವರ್‌ಗಳ ಪಂದ್ಯವನ್ನು ಆಡಲೇಬೇಕಿದೆ. ಹಾಗೊಂದು ವೇಳೆ ಎರಡನೇ ದಿನವೂ ಮಳೆ ಬಂದು ಒಂದೂ ಬಾಲ್ ಆಡಲು ಸಾಧ್ಯವಾಗಿಲ್ಲ ಎಂದಾದರೆ ಭಾರತವನ್ನು ಫೈನಲ್‌ಗೆ ಕಳಿಸಬಹುದಾಗಿದೆ. (ಈ ಸಾಧ್ಯತೆ ಬಹಳ ಕಡಿಮೆ) ಇದರ ಹೊರತಾಗಿ ಇರುವ ಬೇರೆ ಸಾಧ್ಯತೆಗಳು ಹೀಗಿವೆ.
- ಬುಧವಾರ ಮಳೆ ಬಾರದಿದ್ದರೆ ನ್ಯೂಝಿಲೆಂಡ್ ತಂಡ ಮತ್ತೆ ತಾನು ನಿಲ್ಲಿಸಿದ 211/5 (46.1) ರಿಂದ ಶುರು ಮಾಡಬೇಕಿರುತ್ತದೆ.
- ಬುಧವಾರವೂ ನ್ಯೂಝಿಲೆಂಡ್ ಬ್ಯಾಟ್ ಮಾಡದೇ ಇದ್ದರೆ DLS ಪ್ರಕಾರ ಪಂದ್ಯವನ್ನು 46 ಓವರ್‌ಗೆ ಸೀಮಿತಗೊಳಿಸಿ ಭಾರತಕ್ಕೆ 237 ರನ್ ನ ಗುರಿ ನೀಡಲಾಗುತ್ತದೆ. ಅಥವಾ
- ಪಂದ್ಯವನ್ನು 20 ಓವರ್‌ಗೆ ಇಳಿಸಿ 148 ರನ್ ಪೂರ್ಣಗೊಳಿಸುವ ಗುರಿಯನ್ನು ಭಾರತಕ್ಕೆ ನೀಡಲಾಗುತ್ತದೆ.
ನಾಳಿನ ಪಂದ್ಯಕ್ಕೂ ಪ್ರಕ್ಷಕರು ಅದೇ ಟಿಕೆಟ್‌ನಿಂದ ಕ್ರೀಡಾಂಗಣ ಪ್ರವೇಶ ಮಾಡಬಹುದು ಆದರೆ ಅದನ್ನು ಬೇರೆಯವರಿಗೆ ಮಾರಾಟ/ಹಸ್ತಾಂತರ ಮಾಡಲು ಸಾಧ್ಯವಿಲ್ಲ ಎಂದು ICC ತಿಳಿಸಿದೆ.


