Homeಕರ್ನಾಟಕವಕೀಲರ ಸಂಘದ ‘ಜಾತ್ಯಾತೀತತೆ’ – ಅಂಬೇಡ್ಕರ್ ಜಯಂತಿಗೆ ನಿರಾಕರಣೆ

ವಕೀಲರ ಸಂಘದ ‘ಜಾತ್ಯಾತೀತತೆ’ – ಅಂಬೇಡ್ಕರ್ ಜಯಂತಿಗೆ ನಿರಾಕರಣೆ

- Advertisement -
- Advertisement -

ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‍ರವರು ಪ್ರತಿನಿಧಿಸುವ ರಾಮನಗರ ಜಿಲ್ಲಾ ವಕೀಲರ ಸಂಘದಲ್ಲಿ ‘ಅಂಬೇಡ್ಕರ್ ಜಯಂತಿ’ ಆಚರಿಸುವ ಹಾಗಿಲ್ಲ. ವಿಚಿತ್ರ ಎನಿಸಿದರೂ ಇದು ನಿಜ.

ರಾಮನಗರದ ಜಿಲ್ಲಾ ವಕೀಲರ ಸಂಘದ ಕೆಲ ಜನಪರ ವಕೀಲರು ಅಂಬೇಡ್ಕರ್ ಜಯಂತಿ ಹಾಗೂ ಪರಿನಿರ್ವಾಣ ದಿನವನ್ನು ಆಚರಣೆ ಮಾಡಲು ಕಳೆದ ಒಂದು ವರ್ಷದಿಂದ ಪ್ರಯತ್ನ ಪಡುತ್ತಿದ್ದರೂ ಸಂಘದ ಚುನಾಯಿತ ಪ್ರತಿನಿಧಿಗಳ ಕಾರ್ಯಕಾರಿ ಸಮಿತಿಯು ಅನುಮತಿ ನಿರಾಕರಿಸುತ್ತಿದ್ದರು. ಈ ವರ್ಷದ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ನಡೆಸಲು ಅನುಮತಿ ಕೋರಿ ಏಪ್ರಿಲ್ 11ರಂದು ಸಮಾನ ಮನಸ್ಕ ಸದಸ್ಯರು ಮನವಿ ಸಲ್ಲಿಸಿದ್ದು ಏಪ್ರಿಲ್ 12ರಂದು ಅನುಮತಿಯನ್ನು ಲಿಖಿತವಾಗಿ ನಿರಾಕರಿಸಲಾಗಿದೆ! ಅನುಮತಿಯನ್ನು ವಜಾಗೊಳಿಸಿರುವ ಪತ್ರದಲ್ಲಿ “ರಾಮನಗರ ವಕೀಲ ಸಂಘವು 1927ರಲ್ಲಿ ಸ್ಥಾಪನೆಗೊಂಡಿದ್ದು, ಅಂದಿನಿಂದ ಇಂದಿನವರೆಗು ಎಲ್ಲಾ ಜನಾಂಗದ ಸದಸ್ಯರು ಸೋದರ ಭಾವನೆಯಿಂದ ಯಾವುದೇ ಜಾತಿಬೇಧವಿಲ್ಲದೇ ವಕೀಲ ವೃತ್ತಿಯನ್ನು ನಡೆಸುತ್ತಾ ಬಂದಿರುತ್ತಾರೆ. ಸದರಿ ಸಂಘದಲ್ಲಿ ಹಿಂದಿನ ದಿನದಿಂದಲೂ ಈ ರೀತಿಯ ಯಾವ ಆಚರಣೆಯನ್ನು ನಮ್ಮ ಸಂಘದಲ್ಲಿ ಆಚರಿಸುತ್ತಾ ಬಂದಿರುವುದಿಲ್ಲ… ಸದರಿ ತಮ್ಮ ಮನವಿಯನ್ನು ವಜಾಗೊಳಿಸಿರುವುದಾಗಿ ತಿಳಿಯಪಡಿಸಲಾಗಿದೆ. ಸಂಘದ ಆವರಣದಲ್ಲಿ ಈ ರೀತಿ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಾರದಾಗಿ ಈ ಮೂಲಕ ತಿಳಿಯಪಡಿಸಲಾಗಿದೆ.” ಎಂದು ಬರೆಯಲಾಗಿದೆ.

ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುವುದು ಎಂದರೆ ಜಾತಿಬೇಧ ಮಾಡಿದಂತಾಗುತ್ತದೆ ಎನ್ನುವುದು ಕಾರ್ಯಕಾರಿ ಸಮಿತಿಯ ಅಭಿಪ್ರಾಯವಾಗಿದೆ! ಅಂಬೇಡ್ಕರ್ ಜಯಂತಿ ಅಧಿಕೃತವಾಗಿ ದೇಶದಾದ್ಯಂತ ರಜೆಯನ್ನು ನೀಡಿ ಸರ್ಕಾರದ ಭಾಗವಾಗಿ ನಡೆಯುವ ಕಾರ್ಯಕ್ರಮವಾಗಿದೆ. ಹೀಗಿದ್ದು ರಾಮನಗರದ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಆಚರಣೆಯ ಅನುಮತಿಯನ್ನು ವಜಾ ಮಾಡಿದೆ.

ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಸದಸ್ಯರ ಪ್ರತಿನಿಧಿ ಚಾಂದ್‍ಪಾಷ ಅವರನ್ನು ಮಾತನಾಡಿಸಿದಾಗ “ನಾವು ಕಳೆದ ವರ್ಷದಿಂದ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ, ಅಂಬೇಡ್ಕರ್ ಜಯಂತಿಯಾಗಲಿ ಪರಿನಿರ್ವಾಣ ದಿನಕ್ಕಾಗಲಿ ನಮಗೆ ಅನುಮತಿ ನೀಡುತ್ತಲೇ ಇಲ್ಲ. ಅಂಬೇಡ್ಕರ್ ಜಯಂತಿಯಿಂದ ಜಾತಿಭೇದ ಉಂಟಾಗುತ್ತದೆ ಹಾಗಾಗಿ ಮನವಿಯನ್ನು ವಜಾ ಮಾಡಲಾಗಿದೆ ಎಂದು ಲಿಖಿತ ಪತ್ರವನ್ನು ಉನ್ನತ ಸಮಿತಿ ನೀಡಿದೆ. ಇದನ್ನು ವಿರೋಧಿಸಿ ನಾವು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ದೂರನ್ನು ನೀಡಿದ್ದೇವೆ. ಅನುಮತಿ ನೀಡದೇ ಇದ್ದರೆ ಸಮಾನ ಮನಸ್ಕರ ಸಂಘಟನೆಗಳು ಎಲ್ಲರು ಒಂದಾಗಿ ಸೋಮವಾರದಂದು ಪ್ರತಿಭಟನೆ ನಡೆಸುತ್ತೇವೆ” ಎಂದರು.

ಕಾರ್ಯಕಾರಿ ಸಮಿತಿಯ ಅಧ್ಯಕ್ಷ ದೇವರಾಜ್ ಅವರನ್ನು ಮಾತನಾಡಿಸಿದಾಗ “ಇದೆಲ್ಲಾ ಏನು ಇಲ್ಲ, ಕೋಮುದ್ವೇಷ ಬಿತ್ತಲು ಸಂಚು ಹೂಡುತ್ತಿರುವವರು ಇದನ್ನು ದೊಡ್ಡದು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರ ಎಂಬ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ನಾವು ಎಲ್ಲಿಯೂ ಬಹಿಷ್ಕಾರ ಎಂಬ ಪದವನ್ನು ಬಳಸಿಯೇ ಇಲ್ಲ. 1927ರಿಂದ ನಮ್ಮ ಸಂಘ ಅಸ್ತಿತ್ವದಲ್ಲಿದೆ. ಅಂದಿನಿಂದ ಇಂತಹ ಕಾರ್ಯಕ್ರಮಗಳು ನಡೆದುಕೊಂಡು ಬಂದಿಲ್ಲ. ಅಂಬೇಡ್ಕರ್ ಅವರ ಮೇಲೆ ನಮಗೆ ಗೌರವ ಇದೆ, ಭಾರತದಲ್ಲಿ ಯಾರೂ ಸಹ ಅಂಬೇಡ್ಕರ್ ಅವರನ್ನು ಕೀಳಾಗಿ ಕಾಣಲು ಸಾಧ್ಯವಿಲ್ಲ. ಜಯಂತಿ ಆಚರಣೆ ಮಾಡಬಾರದು ಎಂದು ನನ್ನ ಅಭಿಪ್ರಾಯವಲ್ಲ ಆದರೆ ನಾನೂ ಸಂಘದ ಇತರ ಸದಸ್ಯರ ಅಭಿಪ್ರಾಯಕ್ಕೆ ಬದ್ಧನಾಗಿರಬೇಕಾಗುತ್ತದೆ. ಆಚರಣೆಗೆ ಅನುಮತಿ ನೀಡಿದರೆ ನಾಳೆ ಟಿಪ್ಪು, ವಾಲ್ಮೀಕಿ, ಕನಕದಾಸ ಹೀಗೆ ಎಲ್ಲರೂ ಅನುಮತಿ ಕೇಳುತ್ತಾರೆ ಇದರಿಂದ ಕೋಮುದ್ವೇಷ ಹೆಚ್ಚಾಗಬಹುದು. ರಾಮನಗರ ಸೂಕ್ಷ್ಮ ಪ್ರದೇಶವಾಗಿದೆ. ಹಾಗಾಗಿ ಅಪಾಯ ತಪ್ಪಿಸಲು ನಮ್ಮ ಸಮಿತಿ ಈ ತೀರ್ಮಾನಕ್ಕೆ ಬರಬೇಕಾಯಿತು” ಎಂದರು.

ಆದರೆ ವಕೀಲರ ಪರಿಷತ್ತಿಗೆ ದೂರು ನೀಡಿರುವ ಪತ್ರದ ಪ್ರಕಾರ ಜಿಲ್ಲಾ ಸಂಘದ ಆವರಣದಲ್ಲಿ ಹಿಂದಿನಿಂದಲೂ ಶ್ರೀ ರಾಮನವಮಿ, ಹನುಮ ಜಯಂತಿ, ವಿವೇಕಾನಂದ ಜಯಂತಿ, ಅಂಬರೀಶ್ ಹಾಗೂ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ, ವಕೀಲರು ಮೃತರಾದಾಗ ಶ್ರದ್ಧಾಂಜಲಿ ಕಾರ್ಯಕ್ರಮಗಳು, ವರ್ಷದಲ್ಲಿ 2 ಬಾರಿ ಪೌರಾಣಿಕ ನಾಟಕಗಳು, ಗಣೇಶ ಚತುರ್ಥಿ ಅಂತಹ ಧಾರ್ಮಿಕ ಆಚರಣೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಆದರೆ ಜಾತಿ ವಿನಾಶಕ್ಕೆ ತಮ್ಮಿಡೀ ಜೀವನವನ್ನು ಬೆಸೆದ ಇಡೀ ದೇಶಕ್ಕೆ ಸಲ್ಲಬೇಕಾದ ಮಾನವತಾವಾದಿ ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಸೀಮಿತವಾಗಿ ನೋಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಉಳಿಯುತ್ತದೆ.

ಇದರ ಕುರಿತು ನಾವು ರಾಮನಗರದ ಸಾಮಾಜಿಕ ಕಾರ್ಯಕರ್ತೆ ರಾಣಿಯವರನ್ನು ವಕೀಲರನ್ನು ಮಾತಾಡಿಸಿದಾಗ, ‘ಸರ್, ಇದು ಮಿದುಳಿನಲ್ಲೇ ಅಸ್ಪೃಶ್ಯ ಆಚರಣೆಯ ಮನೋಭಾವ ಇಟ್ಟುಕೊಂಡಿರುವುದರ ಪರವಾಗಿದೆ. ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ ಅಷ್ಟೇ. ದೇಶದಲ್ಲಿ ಅದೇಷ್ಟೋ ಮೂಲೆಗಳಲ್ಲಿ ಈ ರೀತಿ ಅಂಬೇಡ್ಕರ್ ಜಯಂತಿ ಮಾಡಲಾಗದ ಸ್ಥಿತಿ ಇರಲು ಸಾಧ್ಯ. ಇನ್ನು ದಲಿತರ ಸ್ಥಿತಿ?! ಅಂಬೇಡ್ಕರ್ ಅವರ ಆಶಯವನ್ನು ಪಸರಿಸುವ ಜಯಂತಿಯನ್ನು ಮಾಡುತ್ತಾ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದ ವಕೀಲರೇ ಇಂದು ಜಾತಿಗೆ ಸೀಮಿತವಾಗಿ ನೋಡುವುದು ನಿಜಕ್ಕು ಮನುಷ್ಯತ್ವಕ್ಕೆ ಮಾಡಿದ ಅವಮಾನವಾಗಿದೆ. ಇಂತಹ ವೈರಸ್‍ಗಳು ಹರಡದಂತೆ ತಡೆಯಬೇಕಿದೆ. “ಮೊದಲನೆಯದಾಗಿ ಮತ್ತು ಕೊನೆಯದಾಗಿ, ನಾವು ಭಾರತೀಯರು” ಎನ್ನುವ ಅಂಬೇಡ್ಕರ್ ಅವರ ಮಾತುಗಳನ್ನು ವಕೀಲರಿಗೆ ಪಾಠ ಮಾಡುವ ಅವಶ್ಯಕತೆ ಬಂದಿರುವುದು ದುರಂತ’ ಎಂದರು.

ಇದರ ಬಗ್ಗೆ ಕಾನೂನು ವಿದ್ಯಾರ್ಥಿ ಪುಷ್ಟಾ ಅವರೊಡನೆ ನಾನುಗೌರಿ.ಕಾಂ ಮಾತಾಡಿದಾಗ ಅವರು ಸುದೀರ್ಘವಾಗಿ ತಮ್ಮ ಅನಿಸಿಕೆಗಳನ್ನು ಹೇಳಿದರು “ ‘ಪ್ರಗತಿಯ ಹಾದಿಯಲ್ಲಿ ಯಾವುದೇ ದಿಕ್ಕಿಗೆ ನೀವು ಸಾಗಿದರು ಜಾತಿ ಎಂಬ ಭೂತ ನಿಮ್ಮನ್ನು ಎದುರುಗೊಳ್ಳುತ್ತದೆ. ಈ ಭೂತವನ್ನು ನೀವು ನಾಶ ಮಾಡದೇ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ನಾನು ಹೇಳುವ ಮಾರ್ಗದಲ್ಲಿ ಅಲ್ಲದಿದ್ದರೂ ಸರಿ ನಿಮ್ಮದೇ ಆದ ಯಾವುದಾದರೂ ಮಾರ್ಗದಲ್ಲಿ ಜಾತಿ ವಿನಾಶಕ್ಕೆ ಹೋರಾಡಿ’ ಹೀಗೆಂದು ಹೇಳಿದವರು ಮಹಾ ಮಾನವತಾವಾದಿ ಬಾಬಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು. ಭೂಮಿ ಮೇಲೆ ಎಲ್ಲೂ ಇಲ್ಲದ ಕ್ರೂರವಾದ ಭಾರತದಲ್ಲಿನ ಜಾತಿಪದ್ಧತಿಯ ವಿರುದ್ಧ ಆಳವಾದ ಅಧ್ಯಯನ ಮಾಡಿ ಜಾತಿ ವಿನಾಶಕ್ಕೆ ಹೋರಾಟಗಳನ್ನು ರೂಪಿಸಿದವರು ಅಂಬೇಡ್ಕರ್. ಶೋಷಣೆಯ ವಿರುದ್ಧದ ವಿಮೋಚನೆಯ ಹೋರಾಟಗಳಲ್ಲಿಯೂ ಸಹ ಅಂಬೇಡ್ಕರ್ ಅವರು ಕೆಲವೇ ಸಮುದಾಯಗಳಿಗೆ ಸೀಮಿತವಾಗಿರದೆ ಮೇಲ್ಜಾತಿ ಎಂದು ಕರೆಯಲ್ಪಡುವ ಬ್ರಾಹ್ಮಣ ಜಾತಿಯಲ್ಲಿನ ಮಹಿಳೆಯರ ಶಿಕ್ಷಣ, ಸ್ವಾತಂತ್ರದ ಬಗ್ಗೆ ದನಿ ಎತ್ತಿ ಹಿಂದೂ ಕೋಡ್ ಬಿಲ್ ನಂತಹ ನೀತಿಗಳನ್ನು ರೂಪಿಸಲು ಮುಂದಾಗಿದ್ದರು. ಗಣಿ ಕಾರ್ಮಿಕರ ಹಕ್ಕುಗಳು, ಭಾರತದ ರೂಪಾಯಿ ಸಮಸ್ಯೆ, ಶಿಕ್ಷಣ, ನೀರಾವರಿ ಅಣೆಕಟ್ಟು… ಹೀಗೆ ಪುಟಗಳನ್ನು ತುಂಬಿಸಬಹುದಾದಷ್ಟು ಜನಪರ ವಿಚಾರಗಳಲ್ಲಿ ಅಂಬೇಡ್ಕರ್ ಅವರು ಕೆಲಸಗಳನ್ನು ಮಾಡಿದ್ದಾರೆ.

1950ರ ದಶಕದಲ್ಲಿ ಎಲ್ಲಾ ಜಾತಿಯಲ್ಲಿನ ಶೋಷಿತ ಹೆಣ್ಣುಮಕ್ಕಳ ಹಕ್ಕಿಗಾಗಿ ಅಂಬೇಡ್ಕರ್ ಅವರು ರಚಿಸಿದ್ದ ಹಿಂದೂ ಕೋಡ್ ಬಿಲ್‍ನ ವಿರುದ್ಧ, ಅದರ ಫಲಾನುಭವಿಗಳಾಗಬೇಕಿದ್ದ ಮೇಲ್ಜಾತಿಯ ಹೆಣ್ಣು ಮಕ್ಕಳೇ ಪ್ರತಿಭಟನೆ ನಡೆಸಿದ್ದರು. ಅಂದಿನ ಮನಸ್ಥಿತಿಯ ಜನರು ಇಂದಿಗೂ ಜೀವಂತವಾಗಿರುವುದು ದುರಂತ’. ದೇಶದ ಸಮಸ್ತ ಜನರಿಗೂ ಸಿಗಬೇಕಾದ ಹಕ್ಕುಗಳಿಗಾಗಿ ಹೋರಾಡಿದವರು, ಶೋಷಿತ ಸಮುದಾಯಗಳ ವಿಮೋಚನೆಯ ಮೂಲಕ ಎಲ್ಲರ ಮನಸ್ಸಿನಲ್ಲಿರುವ ಕೊಳೆಯನ್ನೂ ಕಳೆಯಲು ಹೊರಟವರನ್ನು ಜಾತಿಗೆ ಸೀಮಿತಗೊಳಿಸುತ್ತಿರುವುದು ದುರಂತ’ ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...