Homeಮುಖಪುಟಸಕ್ಕರೆ ದಾಹಕ್ಕೆ ಕಾರ್ಮಿಕರಿಗೇ ಬೆಂಕಿಯಿಟ್ಟ ನಿರಾಣಿ!

ಸಕ್ಕರೆ ದಾಹಕ್ಕೆ ಕಾರ್ಮಿಕರಿಗೇ ಬೆಂಕಿಯಿಟ್ಟ ನಿರಾಣಿ!

- Advertisement -
- Advertisement -

 ಮಹಾಲಿಂಗಪ್ಪ ಆಲಬಾಳ |

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ ಹೊಂದಿಕೊಂಡಿರುವ ಬಿಜೆಪಿಯ ಮಾಜಿ ಮಂತ್ರಿ ಹಾಲಿ ಬೀಳಗಿಯ ಶಾಸಕ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್ ಕಾರ್ಖಾನೆಯಲ್ಲಿ ನಡೆದ ದುರಂತದಲ್ಲಿ ಹಲವಾರು ಅಮಾಯಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಾರ್ಖಾನೆಯ ಮಾಲೀಕರು ಮತ್ತು ಸರಕಾರದ ಅಧಿಕಾರಿಗಳು ನಾಲ್ಕು ಜನ ಕಾರ್ಮಿಕರು ಸಾವಿಗೀಡಾಗಿ ಮೂರು ಜನ ತೀವ್ರವಾಗಿ ಗಾಯಗೊಂಡಿದ್ದಾರೆಂದು ಹೇಳುತ್ತಿದ್ದರಾದರೂ ಅಲ್ಲಿನ ದುರಂತದ ತೀವ್ರತೆ ಈ ಅಂಕಿಸಂಖ್ಯೆಗಳ ಬಗ್ಗೆಯೇ ಸಂಶಯ ಮೂಡುವಂತೆ ಮಾಡಿದೆ.
ವಾಸ್ತವದಲ್ಲಿ ಇದು ಮುರುಗೇಶ ನಿರಾಣಿಯ ಹಪಾಹಪಿ ಮತ್ತು ನಿರ್ಲಕ್ಷತನ ಪರಿಣಾಮ. ಅಂದು ಎಂದಿನಂತೆ ಕಾರ್ಖಾನೆ ನೂರಾರು ಕಾರ್ಮಿಕರು ಮತ್ತು ರೈತರಿಂದ ತುಂಬಿಹೋಗಿದೆ. ಕಾರ್ಖಾನೆಯಿಂದ ಸುಮಾರು 300 ಮೀಟರ್ ಅಂತರದಲ್ಲಿ ಸ್ಪಿರಿಟ್ ತಯಾರಿಸುವ ಘಟಕ ಇದೆ. ಸಕ್ಕರೆ ತಯಾರಿಸುವಾಗ ಹೊರಬರುವ ಮೊಲ್ಯಾಸಿಸ್ ಎಂಬ ಕಚ್ಚಾವಸ್ತುವಿನಿಂದ ಸ್ಪಿರಿಟ್ ತಯಾರಿಸುವ ಘಟಕ ಇದೆ. ಈ ಸ್ಪಿರಿಟ್ ಅನ್ನು ಸರಾಯಿ ತಯಾರಿಕೆಗೆ ಬಳಸಲಾಗುತ್ತದೆ.
ಈ ಸ್ಪಿರಿಟ್ ತಯಾರಿಕೆಯ ನಂತರ ಅದನ್ನು ನೀರಿನಿಂದ ಶುದ್ಧಿಕರಿಸಿ ಮತ್ತೇ ಅದೇ ನೀರನ್ನು ಮರುಬಳಕೆ ಮಾಡಲಾಗುತ್ತದೆ. ಈ ಸ್ಪಿರಿಟ್‍ನ್ನು ಶುದ್ಧಿಕರಿಸಿದ ನೀರಿನಲ್ಲಿ ಮಿಥೇನ್ ಅಂಶ ಉಳಿದಿರುತ್ತದೆ. ಈ ಮಿಥೇನ್‍ಅನ್ನು ಪ್ರತ್ಯೇಕಗೊಳಿಸಿ ಅದನ್ನು ವಿದ್ಯುತ್ ತಯಾರಿಕೆಗೆ ಬಳಸುವ ಘಟಕವೊಂದು ಸಮೀಪದಲ್ಲಿದೆ. ಅಂದು 16ರ ಮಧ್ಯಾಹ್ನ 12 ಗಂಟೆಗೆ ಈ ಮಿಥೇನ್‍ನ್ನು ಪ್ರತ್ಯೇಕಿಸುವ ಘಟಕದಲ್ಲಿನ ಬಾಯ್ಲರ್ ಸ್ಪೋಟಗೊಂಡಿದೆ. ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಇಡೀ ಮೂರಂತಸ್ತಿನ ಕಟ್ಟಡ ನೆಲಸಮವಾಗಿ ಅದರ ಅವಶೇಷಗಳು ನೂರಾರು ಮೀಟರ್ ದೂರದವರೆಗೂ ಚದುರಿಹೋಗಿವೆ. ಸ್ಫೋಟದ ಶಬ್ದ ಕಿಲೋ ಮೀಟರ್‍ವರೆಗೂ ಕೇಳಿ ಅಕ್ಕ-ಪಕ್ಕದ ಹಳ್ಳಿಗಳ ನೆಲ ನಡುಗಿದ ಅನುಭವವಾಗಿದೆ. ಇವರು ಹೇಳುವ ಪ್ರಕಾರ ಅಂಥ ದೊಡ್ಡ ಘಟಕ ಕೇವಲ ಏಳುಜನ ಕಾರ್ಮಿಕರಿಂದ ನಡೆಯಲು ಸಾಧ್ಯವಿಲ್ಲ. ಅಲ್ಲಿನ ಪರಿಸ್ಥಿತಿ ಗಮನಿಸಿದರೆ ಅದರಲ್ಲಿರುವವರ್ಯಾರೂ ಬದುಕಿ ಉಳಿದಿರುವ ಸಾಧ್ಯತೆಗಳೇ ಇಲ್ಲ.
ಹಾಗೆ ನೋಡಿದರೆ ಈ ಮುರುಗೇಶ ನಿರಾಣಿಯ ಎಡವಟ್ಟುಗಳು ಒಂದೆರಡಲ್ಲ ಈತನ ಶ್ರೀಮಂತಿಕೆಯ ದಾಹಕ್ಕೆ ಬಲಿಯಾಗಿ ಬದುಕು ಕಳೆದುಕೊಂಡವರ ಸಂಖ್ಯೆ ಬಹಳ ದೊಡ್ಡದಿದೆ.
ಮೂಲತಃ ಬೀಳಗಿ ತಾಲ್ಲೂಕಿನ ಇನಾಮ ಹಂಚನಾಳ ಗ್ರಾಮದ ರುದ್ರಪ್ಪ ಎಂಬುವವರಿಗೆ ಮುರುಗೇಶ ನಿರಾಣಿ ಸೇರಿದಂತೆ ಐದುಜನ ಮಕ್ಕಳು ಸುಮಾರು 100 ಎಕರೆಯಷ್ಟು ಜಮೀನು ಹೊಂದಿದ್ದ ಈ ರುದ್ರಪ್ಪ ಈ ಭಾಗದ ಕುಖ್ಯಾತ “ಬಡ್ಡಿಕುಳ” ಜನರ ಕಪ್ಪಕ್ಕೆ ಹಣ ನೀಡಿ ದೊಡ್ಡಮಟ್ಟದ ಬಡ್ಡಿ ಸುಲುಗೆ ಮಾಡುವ ಈ ಹಣದ ಹಪಾಹಪಿ ಮಕ್ಕಳಿಗೂ ಬಳುವಳಿಯಾಗಿ ಬಂದಿದೆ. ಡಿಪ್ಲೊಮಾ ಪದವಿ ಪಡೆದು ಬಂದ ಮುರುಗೇಶ ನಿರಾಣಿ ಆರಂಭದಲ್ಲಿ ತೊಡಗಿಸಿ ಕೊಂಡದ್ದು ಟ್ರ್ಯಾಕ್ಟರ್ ಟ್ರೇಲರ್ ತಯಾರಿಕೆ ದಂಧೆಯಲ್ಲಿ ಎಂಆರ್‍ಎನ್ ಹೆಸರಿನ ಟ್ರೇಲರ್ ತಯಾರಿಸಿ ರೈತರಿಗೆ ಮಾರುತ್ತ ಒಂದಷ್ಟು ಹಣ ಕೂಡಿದ ಮೇಲೆ ಕೈ ಹಾಕಿದ್ದು ಈ ಸಕ್ಕರೆ ಉದ್ಯಮಕ್ಕೆ ಶ್ರೀಕಾಂತ ಬಾಹೋತಿ ಎಂಬ ಮಹಾರಾಷ್ಟ್ರದ ವ್ಯಾಪಾರಿಯೊಬ್ಬನನ್ನು ಪಾಲುದಾರಿಕೆಗೆ ಒಪ್ಪಿಸಿ ಮುಧೋಳ ನಗರದ ಸಮೀಪ ತನ್ನ ಚಿಕ್ಕಪ್ಪನ ಮಗ ಶಿವಪ್ಪ ಅವರಿಗೆ ಸೇರಿದ್ದ ಜಮೀನಿನಲ್ಲಿ ಸಣ್ಣದೊಂದು ಕಚ್ಚಾ ಸಕ್ಕರೆ ತಯಾರಿಕೆ ಘಟಕವನ್ನು ಪಾಲುದಾರಿಕೆಯಲ್ಲಿ ಶುರುಮಾಡಿದ ಮೊದಲಿನಿಂದಲೂ ಬಿಜೆಪಿ ಸಂಘಪರಿವಾರ ಅಂತ ಓಡಾಡಿಕೊಂಡಿದ್ದ ಈತ 2004ರಲ್ಲಿ ಬೀಳಗಿ ಕ್ಷೇತ್ರದಿಂದ ಎಂಎಲ್‍ಎ ಆಗಿಬಿಟ್ಟ. ಅಧಿಕಾರ ಸಿಕ್ಕಿದ್ದೇ ತಡ ಪಾಲುದಾರ ಬಾಹೇತಿಯನ್ನು ಕೊಡಬಾರದ ಕಿರುಕುಳ ಕೊಟ್ಟು ಹೊರಹಾಕಿ ಕಾರ್ಖಾನೆಯನ್ನು ಸ್ವಂತ ಮಾಡಿಕೊಂಡು ನಂತರ ರಾಜಕೀಯದಲ್ಲಿ ನುಂಗಿದ್ದನೆಲ್ಲ ಅದಕ್ಕೆ ಸುರಿದು ವಿಸ್ತರಣೆ ಮಾಡುತ್ತ ಹೋದ,. 2008ರಲ್ಲಿ ಮತ್ತೊಮ್ಮೆ ಗೆದ್ದು ಯಡಿಯೂರಪ್ಪ ಸಂಪುಟದಲ್ಲಿ ಭಾರಿ ಕೈಗಾರಿಕಾ ಸಚಿವನಾಗಿದದ್ದೇ ಈತನ ಕುಟುಂಬದ ಖದರ್ರೇ ಬದಲಾಗಿಹೋಯಿತು. ಹಣದ ಹೊಳೆ ಹರಿದು ಬರಲಾರಂಭಿಸಿತು. ಒಂದರತ್ತೆಲ್ಲ ಕಾರ್ಖಾನೆ ದೇಶದ ಅತೀ ದೊಡ್ಡ ಕಾರ್ಖಾನೆಗಳ ಸಾಲಿಗೆ ಬಂದು ನಿಂತಿದ್ದಲ್ಲದೆ, ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಸಾಂಬಿಪ್ರಿಯಾ ಶುಗರ್ಸ್, ಬದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಬಳಿ ಸಂಗಮೇಶ ಶುಗರ್ಸ್, ಸಿಮೆಂಟ್ ಕಾರ್ಖಾನೆ ಹೀಗೆ ಹಲವಾರು ಕಾರ್ಖಾನೆಗಳು ತಲೆಎತ್ತಿ ನಿಂತವು.
ಹೀಗೆ ನೋಡನೋಡುತ್ತಿದ್ದಂತೆ ಕೆಲವೇ ವರ್ಷಗಳಲ್ಲಿ ಜಿಲ್ಲೆಯ ಸಕ್ಕರೆ ಸಾಮ್ರಾಜ್ಯವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತ ಮುರುಗೇಶ ನಿರಾಣಿಯ ಹಸಿವು ಮಾತ್ರ ತಣಿಸಲೇ ಇಲ್ಲ. ಮಾಡಬಾರದ ಕೆಲಸಗಳು, ಹಿಡಿಯಬಾರದ ಅಡ್ಡದಾರಿಗಳನ್ನೆಲ್ಲ ಹಿಡಿದು ಜನರನ್ನು ಪೀಡಿಸತೊಡಗಿದ, ರೈತರನ್ನು ಮೋಸಗೊಳಿಸತೊಡಗಿದ ಎಂಬ ಪ್ರಾಮಾಣಿಕ ರೈತ ನಾಯಕನ ನೇತೃತ್ವದಲ್ಲಿ ಆರಂಭವಾದ ಈತನ ಅನಾವಾರಗಳ ವಿರುದ್ಧದ ಹೋರಾಟ ಎಷ್ಟು ತೀವ್ರವಾಗಿತ್ತೆಂದರೆ ಈ ಕಾರ್ಖಾನೆ ನಡೆಯುವುದೇ ದುಸ್ತರವಾಯಿತು.
ಕಾರ್ಖಾನೆಯಿಂದಾಗುವ ಪರಿಸರ ಮಾಲಿನ್ಯ ರೈತರ ಕಬ್ಬು ತೂಕದಲ್ಲಿನ ಮೋಸ, ಕಾರ್ಮಿಕರ ಕೆಲಸದ ಒತ್ತಡ, ಕಬ್ಬಿನ ಬೆಲೆ, ಈತನ ಗೂಂಡಾಗಿರಿ ಎಲ್ಲದರ ವಿರುದ್ಧ ರೈತಸಂಘ ನಿರ್ಣಾಯಕ ಹೋರಾಟ ನಡೆಸಿತ್ತು. ಆಗಲೂ ರೈತ ಮುಖಂಡರನ್ನು ಹೆಸರಿಸುವುದು, ಖರೀದಿಸುವುದು ಎಲ್ಲ ಪ್ರಯತ್ನಗಳನ್ನು ನಡೆಸಿದ್ದ ಈತ ಅದರಲ್ಲಿ ವಿಫಲನಾಗಿದ್ದ. ಆದರೆ ಈ ಭಾಗದ ರೈತರು ಜನರ ದುರದೃಷ್ಟವೆಂಬಂತೆ ರಮೇಶ್ ಗಡದನ್ನವರ ತೀರಿಹೋದರು. ಆಗ ಮತ್ತೆ ಈತನ ಅಂಧ ದರ್ಬಾರ್ ಶುರುವಾಯಿತು. ಸ್ವನತಿ ಜನರನ್ನು ಬೆನ್ನಿಗಿಟ್ಟು ಕೊಂಡು ತನ್ನನ್ನು ವಿರೋಧಿಸುವವರನ್ನೆಲ್ಲ ಹೆದರಿಸುವುದು ಕಾರ್ಖಾನೆಯ ಅಕ್ಕಪಕ್ಕದ ಜಮೀನುಗಳನ್ನೆಲ್ಲ ಪುಡಿಗಾಸಿಗೆ ಖರೀದಿಸುವುದು ಕೊಡಲು ಒಪ್ಪದವರನ್ನು ಕಿರುಕುಳ ನೀಡಿ ನೆಮ್ಮದಿಯಿಂದ ಬದುಕದಂತೆ ಮಾಡುವುದು ಇದೆಲ್ಲ ಮಾಮೂಲಿಯಾಗಿ ಹೋಯ್ತು. ಮುಧೋಳ ನಗರಕ್ಕೆ ಹೊಂದಿಕೊಂಡೇ ಇರುವುದರಿಂದ ಜಾರುವ ಬೂದಿ ಇಡೀ ನಗರ ತುಂಬ ಹರಡುತ್ತಿದ್ದರೂ ಜನ ಸಹಿಸಿಕೊಂಡು ಬದುಕುವ ಸ್ಥಿತಿ ನಿರ್ಮಾಣವಾಯಿತು.
Image result for niraniಕಳೆದ ಸಾರಿ ಬೀಳಗಿ ಕ್ಷೇತ್ರದಿಂದ ಜೆ.ಟಿ.ಪಾಟೀಲ ವಿರುದ್ಧ ಸೋತು ಹೋದಾಗ ಮುಧೋಳದ ಈ ಕಾರ್ಖಾನೆಯ ಸ್ಥಳಾಂತರದ ಬಗ್ಗೆ ಕೂಡ ಚರ್ಚೆ ನಡೆದಿತ್ತು. ಆದರೆ ಈ ಸಾರಿ ಮತ್ತೆ ಬೀಳಗಿಯಿಂದ ಶಾಸಕನಾಗಿ ಆರಿಸಿ ಬಂದ ನಂತರ ಮತ್ತೇ ಇಲ್ಲಿ ಕಾರ್ಖಾನೆಯ ವಿಸ್ತರಣೆಯನ್ನು ಆರಂಭಿಸಿದ್ದಾನೆ. ಈಗ ನಡೆದ ದುರಂತ ಕೂಡ ಹಪಾಹಪಿಗೆ ಬಿದ್ದು ಅದನ್ನು ವಿಸ್ತರಿಸುತ್ತಿರುವ ಕಾರಣಕ್ಕಾಗಿಯೇ ನಡೆದದ್ದು, ಕಡಿಮೆ ಕಾರ್ಮಿಕರನ್ನು ನೇಮಕ ಮಾಡಿಕೊಂಡು ಕೆಲಸ ತೆಗೆಯುವ ಕುತಂತ್ರದಿಂದಾಗಿ ಕಾರ್ಮಿಕರು ಜೀವ ಕಳೆದುಕೊಳ್ಳುವಂತಾಗಿದೆ. ಮಿಥೇನ್‍ನಂಥ ಸ್ಪೋಟಕ ವಸ್ತುವನ್ನು ಸಂಗ್ರಹಿಸುವ ಘಟಕದಲ್ಲಿ ಕೇವಲ ಏಳು ಜನ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದರು ಎಂದರೆ ನಂಬಲು ಸಾಧ್ಯವೇ? ಸ್ಥಳೀಯರ ಮಾಹಿತಿ ಪ್ರಕಾರ ಹೊರರಾಜ್ಯದ ಹಲವಾರು ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದು ಅವರ ಬಗ್ಗೆ ಈವರೆಗೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಸ್ಥಳೀಯರನ್ನು ಮಾತ್ರ ಗುರುತಿಸಿ ಹೊರರಾಜ್ಯ ಕಾರ್ಮಿಕರ ಸಾವನ್ನು ಮುಚ್ಚಿಡುತ್ತಿದ್ದಾರೆ ಎಂಬ ಗುಮಾನಿ ಕೂಡ ದಟ್ಟವಾಗಿದೆ. ಒಟ್ಟಾರೆ ಸರಿಯಾದ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳದೇ ಲಾಭ ಹೆಚ್ಚಿಸಿಕೊಳ್ಳುವ ದಾಹಕ್ಕೆ ಅಮಾಯಕ ಜೀವಗಳು ಬಲಿಯಾಗುವಂತಾಗಿದೆ.
ಆಶ್ಚರ್ಯವೆಂದರೆ ಈ ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸಿ ಅಮಾಯಕರ ಸಾವಿಗೆ ಕಾರಣನಾದ ನಿರಾಣಿಯನ್ನು ಕಾನೂನಾತ್ಮಕವಾಗಿ ಶಿಕ್ಷೆ ಅನುಭವಿಸುವಂತೆ ಮಾಡಬೇಕಿರುವ ಜಿಲ್ಲಾಡಳಿತ, ಕಾರ್ಮಿಕರ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಈತನ ಆಣತಿಗೆ ಕುಣಿಯುತ್ತಿದ್ದಾರೆ. ಯಾವುದೇ ನಗರ ಅಥವಾ ಜನವಸತಿ ಪ್ರದೇಶದಿಂದ ಚಿಷ ಸೂಸುವ ಅಪಾಯಕಾರಿ ವಸ್ತುಗಳನ್ನು ಉತ್ಪಾದಿಸುವ, ಪರಿಸರ ಮಾಲಿನ್ಯಕ್ಕೆ ಕಾರಣವಾಗಿ ಜನರ ಆರೋಗ್ಯ ಅಥವಾ ಬದುಕಿಗೆ ಅಪಾಯ ತರಬಲ್ಲ ಕಾರ್ಖಾನೆಗಳು ದೂರವಿರಬೇಕೆಂಬ ಕಾನೂನು ಇದೆ. ಈ ಕಾರ್ಖಾನೆ ಮುಧೋಳ ನಗರಕ್ಕೆ ಹೊಂದಿಕೊಂಡಿದೆ. ಇಡೀ ಮುಧೋಳ ನಗರದ ಜನತೆ ಪರಿಸರ ಮಾಲಿನ್ಯದಿಂದಾಗಿ ಕಲುಷಿತ ಗಾಳಿಗೆ ಉಸಿರಾಟದಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜೊತೆಗೆ ಈ ಕಾರ್ಖಾನೆಯಿಂದ ಕೆಲವೇ ದೂರದ ಅಂತರದಲ್ಲಿ ಘಟಪ್ರಭ ನದಿ ಹರಿಯುತ್ತಿದೆ. ಇದು ಹಲವಾರು ಹಳ್ಳಿಗಳ ಜನರಿಗೆ ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಧಾರ. ಈ ಕಾರ್ಖಾನೆಯಿಂದ ಹಾರುವ ಬೂದಿ ಮತ್ತು ಕಲುಷಿತ ನೀರು ನದಿಯನ್ನು ಸೇರುತ್ತಿದೆ. ರೈತ ಸಂಘದವರು, ನಾಗರಿಕರು ಸಾಕಷ್ಟು ಹೋರಾಟ ಮಾಡಿ ಗಮನ ಸೆಳೆದರೂ ಅಧಿಕಾರಿಗಳ ಕಾಯ್ದೆಗೆ ವಿರುದ್ಧವಾಗಿ ನಿಂತಿರುವ ಕಾರ್ಖಾನೆಯ ಮೇಲೆ ಕ್ರಮ ಕೈಗೊಳ್ಳುವ ನದಲು ಮಾಲಿಕರೊಂದಿಗೆ ಶಾಮಿಲಾಗಿ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಪರಿಸರ ಮಾಲಿನ್ಯ ತಡೆಗಟ್ಟುವ ಸಲಹೆಗಳನ್ನು ಕೊಡುತ್ತಿದ್ದಾರೆ ಹೊರತು ಕ್ರಮಕ್ಕೆ ಮುಂದಾಗುತ್ತಿಲ್ಲ. ಈ ರೀತಿ ತ್ಯಾಜ್ಯ ವಸ್ತುವಿನ ಉಪ ಉತ್ಪನ್ನ ತಯಾರಿಸಿ ಕಾರ್ಖಾನೆ ಉಳಿಸಿಕೊಳ್ಳುವ ಈತನ ಅಡ್ಡ ಮಾರ್ಗವೇ ಈಗ ಕಾರ್ಮಿಕರ ಸಾವಿಗೆ ಕಾರಣವಾಗಿದೆ. ಇಲ್ಲಿ ಇನ್ನೂ ಒಂದು ಮುಖ್ಯವಾದ ಅಂಶವೆಂದರೆ ಕೃಷಿ ವಲಯವಿರುವ ಪ್ರದೇಶದಲ್ಲಿ ಕೈಗಾರಿಕೆಗಳು ಇರಬಾರದೆಂಬ ನೀತಿ ಇದ್ದರೂ ಇಲ್ಲಿ ಅದನ್ನು ಗಾಳಿಗೆ ತೂರಲಾಗಿದೆ. ಈ ಕಾರ್ಖಾನೆ ಯ ಸುತ್ತಮುತ್ತ ಫಲವತ್ತಾದ ಕೃಷಿ ಜಮೀನು ಇದೆ. ಈ ಕಾರ್ಖಾನೆಯಿಂದಾಗಿ ಸುತ್ತಮುತ್ತಲಿರುವ ರೈತರ ಬದುಕು ನರಕ ಸದೃಶವಾಗಿದೆ. ಗಾಳಿಯ ತುಂಬ ಕಾರ್ಬನ್ ತುಂಬಿಹೋಗಿರುವುದರಿಂದ ಕುಡಿಯುವ ನೀರಿಗೂ ಆಹಾಕಾರವಿದೆ. ಬೂದಿ ಬೀಳುವುದರಿಂದ ಯಾವ ಬೆಳೆ ಬೆಳೆದರೂ ಮೊಳಕೆಯೊಡೆಯುವ ಹಂತದಲ್ಲಿಯೇ ಅದು ಸುಟ್ಟುಹೋಗುತ್ತಿದೆ. ಈ ಅಸಹಾಯಕತೆಯನ್ನು ಬಳಸಿಕೊಳ್ಳುತ್ತಿರುವ ನಿರಾಣಿ ಅಂಥವರ ಜಮೀನುಗಳನ್ನು ಪುಡಿಗಳನ್ನು ಪುಡಿಗಾಸಿಗೆ ಖರೀದಿಸಿ ಕಾರ್ಖಾನೆಯ ವಿಸ್ತರಣೆಯಲ್ಲಿ ತೊಡಗಿದ್ದಾನೆ. ತಾನು ಮಂತ್ರಿಯಾಗಿದ್ದಾಗ ನಡೆಸಿದ ಲೂಟಿಯಿಂದ ಬಂದ ಹಣವನ್ನೆಲ್ಲ ಬೇನಾಮಿ ಆಸ್ತಿ ಮತ್ತು ಕಾರ್ಖಾನೆಗಳಲ್ಲಿ ಸುರಿಯುತ್ತ ಇಂದು ಜಿಲ್ಲೆಯಲ್ಲಿ ತನ್ನದೇ ಅಧಿಪತ್ಯ ಸ್ಥಾಪಿಸಿಕೊಂಡಿದ್ದಾನೆ. ಅದನ್ನು ಬಳಸಿಕೊಂಡು ರಾಜಕೀಯದಲ್ಲಿ ಪ್ರಭಾವ ಬೆಳೆಸಿಕೊಂಡಿದ್ದಾನೆ. ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾನೆ.
ಒಟ್ಟಾರೆ ಈತನ ಅಧಿಕಾರ ಹಾಗೂ ಹಣದ ಹಪಾಹಪಿ ಮತ್ತು ಕಾರ್ಖಾನೆಗಳ ವಿಸ್ತರಣೆಯ ದಾಹಕ್ಕೆ ಅಮಾಯಕ ಕಾರ್ಮಿಕ ಜೀವಗಳು ಬಲಿಯಾಗಿವೆ. ಕೇಳಬೇಕಾದ ಅಧಿಕಾರಿಗಳು ಹಾಗೂ ಸ್ಥಳೀಯ ವಿರೋಧ ಪಕ್ಷದ ನಾಯಕರು ಈತನ ಋಣಭಾರದಲ್ಲಿ ಬದುಕುತ್ತಿದ್ದಾರೆ. ಇನ್ನು ಈ ಸಾವುಗಳ ಬಗ್ಗೆ ಕೇಳುವವರ್ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...