Homeಅಂಕಣಗಳುಸ್ವಚ್ಛ ಭಾರತ: ಎಲ್ಲರೂ ಉತ್ತರದಾಯಿಗಳೇ.....

ಸ್ವಚ್ಛ ಭಾರತ: ಎಲ್ಲರೂ ಉತ್ತರದಾಯಿಗಳೇ…..

- Advertisement -
- Advertisement -

ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದಾಗ ಹೊಗಳಿದವರೂ ಇದ್ದರು; ಆಡಿಕೊಂಡವರೂ ಇದ್ದರು. ಮೋದಿಯ ಪರ ಅಥವಾ ವಿರುದ್ಧ ನಿಲ್ಲದೇ ಸ್ವಚ್ಛತೆಯ ಪ್ರಶ್ನೆಯನ್ನು ಪಕ್ಷಾತೀತವಾಗಿ ನೋಡೋಣ. ನಗರೀಕರಣ ಹೆಚ್ಚಾದಂತೆಲ್ಲಾ ಕಸದ ಸಮಸ್ಯೆ ತೀವ್ರವಾಗಿ ಹೆಚ್ಚುತ್ತಲೇ ಹೋಗುತ್ತದೆ. ಗ್ರಾಮೀಣ ಭಾಗದಲ್ಲೂ ಬಯಲೇ ಶೌಚಾಲಯವಾಗಿರುವ ಕೋಟ್ಯಂತರ ಕುಟುಂಬಗಳು ಇಂದಿಗೂ ಇವೆ. ಹಾಗಾಗಿ ದೇಶಕ್ಕೆ ದೇಶವೇ ತಲೆ ಕೆಡಿಸಿಕೊಳ್ಳಬೇಕಾಗಿರುವ ವಿಷಯ ಇದು. ಕಸವೆಂಬುದು ನೈರ್ಮಲ್ಯದ, ಆರೋಗ್ಯದ, ಘನತೆಯ ಜೀವನದ, ನಾಗರಿಕ ಶಿಸ್ತಿನ ಜೊತೆ ತಳುಕು ಹಾಕಿಕೊಂಡಿರುವ ಸಂಗತಿ. ತೀರಾ ಇತ್ತೀಚೆಗೆ ಇದು ಹಣತರುವ ಬಾಬ್ತಾಗಿಯೂ ಕಂಡು, ಅದಕ್ಕಾಗಿ ಏಜೆನ್ಸಿಗಳು ಹುಟ್ಟಿಕೊಂಡಿವೆ. ಕಸ ತೆಗೆಯಲು ಜನರಿಂದ ತೆರಿಗೆಯನ್ನೂ ಸಂಗ್ರಹಿಸಲಾಗುತ್ತಿದೆ. ಇಷ್ಟಾಗಿಯೂ ನಮ್ಮ ಸರ್ಕಾರಗಳು ಇದನ್ನು ಏಕೆ ನಿಭಾಯಿಸಲಾಗುತ್ತಿಲ್ಲ?
‘ದೆಹಲಿಯ ಲೆ.ಗವರ್ನರ್ ಮನೆ ಮುಂದೆ ಕಸ ಸುರಿಯಿರಿ’
ಇದನ್ನು ಹೇಳಿದ್ದು ಸುಪ್ರೀಂ ಕೋರ್ಟು. ಹೌದು ಮೂರು ದಿನದ ಕೆಳಗೆ ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳು ‘ಕಸವನ್ನು ತೆಗೆದುಕೊಂಡು ಹೋಗಿ ರಾಜ್‍ನಿವಾಸ್ ಮಾರ್ಗ್‍ದಲ್ಲಿ ಸುರಿಯಿರಿ’ ಎಂದು ತೆರೆದ ಕೋರ್ಟಿನಲ್ಲೇ ಹೇಳಿದರು. ಅವರು ಲೆಫ್ಟಿನೆಂಟ್ ಗವರ್ನರ್ ಮನೆಯ ಕುರಿತೇ ಮಾತಾಡುತ್ತಿದ್ದಾರೆಂದು ಗೊತ್ತಾಗಿ ಕೋರ್ಟಿನಲ್ಲಿದ್ದವರು ಅವಾಕ್ಕಾದರು. ಕಾರಣ ಇಷ್ಟೇ. ದಕ್ಷಿಣ ದೆಹಲಿಯ ಮುನಿಸಿಪಾಲಿಟಿ (ಎಸ್‍ಡಿಎಂಸಿ)ಯ ವ್ಯಾಪ್ತಿಯಲ್ಲಿ ಪ್ರತಿದಿನ 3,600 ಟನ್ ಕಸ ಸಂಗ್ರಹವಾಗುತ್ತಿದ್ದು, ಅದರಲ್ಲಿ 1,800 ಟನ್‍ಗಳನ್ನು ಸೋನಿಯಾ ವಿಹಾರ್ ಎಂಬ ಬಡಜನರೇ ಹೆಚ್ಚು ವಾಸಿಸುವ ಕಡೆ ಸುರಿಯಲಾಗುತ್ತಿದೆ. ಅಲ್ಲಿನ ನಿವಾಸಿಗಳು ನಾನಾ ಕೋರ್ಟ್‍ಗಳನ್ನು ಸುತ್ತಾಡಿ, ಅಂತಿಮವಾಗಿ ಸುಪ್ರೀಂಕೋರ್ಟಿನ ಕದ ತಟ್ಟಿದಾಗ, ಮುನಿಸಿಪಾಲಿಟಿಯ ಪರ ವಾದ ಮಾಡಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ‘ಇದು ಅನಿವಾರ್ಯ, ಅವರು ಪ್ರಶ್ನಿಸಬಾರದು’ ಎಂದಿದ್ದಾರೆ. ಆಗ ಸಿಟ್ಟಿಗೆದ್ದ ನ್ಯಾಯಮೂರ್ತಿಗಳ ಪ್ರತಿಕ್ರಿಯೆ ಇದಾಗಿತ್ತು.
ಈ ಮುನಿಸಿಪಾಲಿಟಿಯಲ್ಲಿ ಬಿಜೆಪಿ ಪಕ್ಷವು ಅಧಿಕಾರದಲ್ಲಿದೆ. ತಾವು ಈಗಷ್ಟೇ ಅಧಿಕಾರಕ್ಕೆ ಬಂದೆವು ಎಂದು ಹೇಳುವ ಹಾಗಿಲ್ಲ; ಇದರ ಹಿಂದಿನ ಅವಧಿಯಲ್ಲೂ ಅವರೇ ಇದ್ದರು. ಅದು ದೆಹಲಿ. ನರೇಂದ್ರ ಮೋದಿಯವರು ತಮ್ಮ ಕೈಯ್ಯಾರೆ ಸ್ವಚ್ಛ ಭಾರತ ಆಂದೋಲನವನ್ನು ಉದ್ಘಾಟಿಸಿದ ದೇಶದ ರಾಜಧಾನಿ. ಈಗ ಹೇಳಿ? ಏನು ಮಾಡುವುದು? ಮೋದಿಯವರು ಸ್ವಚ್ಛತೆಗಾಗಿ ಇದ್ದ ಅನುದಾನವನ್ನು ಕಡಿಮೆ ಮಾಡಿ, ಅದರಲ್ಲೂ ಹೆಚ್ಚಿನ ಹಣವನ್ನು ತಮ್ಮ ಜಾಹೀರಾತಿಗಾಗಿ ಬಳಸಿದರು ಎಂಬ ಆರೋಪ ನಿಜವಾಯಿತಲ್ಲವೇ?
ಪ್ರಧಾನಿ ಏನೇ ಗಿಮಿಕ್ ಮಾಡಿದ್ದರೂ, ಅವರ ಚರಿಷ್ಮಾ ಈ ಅಭಿಯಾನದಿಂದ ಹೆಚ್ಚಾದರೂ ಅದನ್ನೆಲ್ಲಾ ದೊಡ್ಡ ವಿಚಾರ ಮಾಡುವುದು ಬೇಡ; ಸ್ವಚ್ಛತೆ ಹೆಚ್ಚಾಗಿದ್ದರೆ ಅಷ್ಟೇ ಸಾಕು. ಆಗಿದೆಯೆ? ಖಂಡಿತ ಇಲ್ಲ.

ಸಿದ್ದರಾಮಯ್ಯನವರಿಂದ ಪೌರಕಾರ್ಮಿಕರಿಗೆ ಒಳಿತಾಯಿತೇ?
ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ಆರಂಭದಲ್ಲೇ, ಗುತ್ತಿಗೆ ಪದ್ಧತಿಯ ವಿರುದ್ಧ ಸಂಪುಟದಲ್ಲಿ ಚರ್ಚೆಗಳಾದವು. ಆದರೆ, ಅದನ್ನು ತೆಗೆದುಹಾಕುವುದು ಸುಲಭವಾಗಿರಲಿಲ್ಲ. ಶೋಷಿತ ಸಮುದಾಯದ ಬಗ್ಗೆ ಕಾಳಜಿಯಿದ್ದ ಅವರು ಗುತ್ತಿಗೆ ಪೌರಕಾರ್ಮಿಕರನ್ನಾದರೂ ಖಾಯಂ ಮಾಡಿಕೊಳ್ಳೋಣವೆಂದು ತೀರ್ಮಾನಿಸಿದರು. ಅದೂ ಸಾಧ್ಯವಿಲ್ಲ ಎಂದು ಗೊತ್ತಾಯಿತು. ಇರುವವರನ್ನೇ ಖಾಯಂ ಮಾಡಿಕೊಳ್ಳುವುದು ಅಸಾಧ್ಯ ಎಂದಾದರೆ, ಹೊಸದಾಗಿ ನೇಮಕಾತಿ ಆರಂಭಿಸಿ ಇರುವವರಿಗೇ ಆ ಉದ್ಯೋಗ ಸಿಗುವ ಹಾಗೆ ನೇಮಕಾತಿ ನಿಯಮ ರೂಪಿಸಲಾಯಿತು. ಇದೊಂದು ಸಕಾರಾತ್ಮಕ ನಡೆಯಾಗಿತ್ತು. ಆದರೆ, ಇವತ್ತಿನವರೆಗೂ ಆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆಗ ಗುತ್ತಿಗೆ ಪೌರಕಾರ್ಮಿಕರ ಪರವಾಗಿ ಎರಡು ಮಹತ್ವದ ತೀರ್ಮಾನಗಳನ್ನು ಸಿದ್ದರಾಮಯ್ಯನವರು ತೆಗೆದುಕೊಂಡರು. ಒಂದು, ಅವರ ವೇತನವನ್ನು ಎರಡು ಪಟ್ಟು ಹೆಚ್ಚಿಸಿದರು; ಗುತ್ತಿಗೆದಾರರ ಮಧ್ಯಸ್ಥಿಕೆಯಿಲ್ಲದೇ ನೇರವಾಗಿ ಗುತ್ತಿಗೆ ಪೌರಕಾರ್ಮಿಕರ ಅಕೌಂಟಿಗೇ ವೇತನ ಹೋಗಲಿ ಎಂದು ಆದೇಶಿಸಿದರು.
ಅದಾಗಿ, ಹಲವು ತಿಂಗಳಾದ ನಂತರ ಹೊಸ ಸರ್ಕಾರ ಬಂತು. ಸುಬ್ರಮಣಿ ಎಂಬ ಗುತ್ತಿಗೆ ಪೌರಕಾರ್ಮಿಕ ಬೆಂಗಳೂರಿನಲ್ಲೇ ಆತ್ಮಹತ್ಯೆ ಮಾಡಿಕೊಂಡರು. ಕಾರಣ ಏನು ಎಂದು ನೋಡಿದರೆ, 5 ತಿಂಗಳಿಂದ ಆತನ ಅಕೌಂಟಿಗೆ ವೇತನ ಬಂದಿರಲಿಲ್ಲ. ಅಂದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ, ಹಣಕಾಸು ಮಂತ್ರಿಯಾಗಿದ್ದ ಸಂದರ್ಭದಿಂದಲೂ ವೇತನ ಪಾವತಿಯಾಗಿರಲಿಲ್ಲ. ಈ ಸುಬ್ರಮಣಿಯ ಆತ್ಮಹತ್ಯೆಯ ನಂತರ ಕಾಂಗ್ರೆಸ್ ಪಕ್ಷದ, ದಲಿತ ಸಮುದಾಯಕ್ಕೆ ಸೇರಿದ ಮೇಯರ್ ಎಚ್ಚೆತ್ತುಕೊಂಡರು.
ಸಿದ್ದರಾಮಯ್ಯನವರಿಗೆ ಕಾಳಜಿ ಇರಲಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ, ಹೇಗಾದರೂ ಪೌರಕಾರ್ಮಿಕರಿಗೆ ಒಳ್ಳೆಯದಾಗಲಿ ಎಂಬ ಭಾವನೆ ಇದ್ದುದರಿಂದಲೇ ಒಂದಾದ ಮೇಲೆ ಒಂದರಂತೆ ಕ್ರಮಗಳನ್ನು ತೆಗೆದುಕೊಂಡರು. ಆದರೆ ಆ ಭಾವನೆ ಮತ್ತು ಕ್ರಮಗಳು ಅಂತಿಮವಾಗಿ ಕಟ್ಟಕಡೆಯ ಸಮುದಾಯಕ್ಕೆ ಅನುಕೂಲ ಮಾಡಿಕೊಡಲು ಒಬ್ಬ ವ್ಯಕ್ತಿ ‘ಹುತಾತ್ಮ’ನಾಗಬೇಕಾಯಿತು. ಈ ಸದ್ಯ ಮೇಯರ್ ತೋರಿರುವ ಕಾಳಜಿಯೂ ಎಷ್ಟು ತಿಂಗಳ ಕಾಲ ವೇತನ ಪಾವತಿಯ ನಿರಂತರತೆಯಾಗಿ ಉಳಿದುಕೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಇದೂ ಸ್ವಚ್ಛ ಭಾರತಕ್ಕೆ ಸಂಬಂಧಿಸಿದ ವಿಷಯವೇ ಆಗಿದೆ.

ಮ್ಯಾನ್‍ಹೋಲ್ ಸಾವು ಮತ್ತು ಕುಮಾರಸ್ವಾಮಿ
ಈ ವಾರದಲ್ಲೇ ಶಿವಮೊಗ್ಗ ನಗರದ ಚರಂಡಿಯ ಮ್ಯಾನ್‍ಹೋಲ್‍ನಲ್ಲಿ ಇಳಿದ ಇಬ್ಬರು ಗುತ್ತಿಗೆ ನೌಕರರು ಸಾವನ್ನಪ್ಪಿದ್ದಾರೆ. ಎಷ್ಟೋ ಕಾಲದಿಂದ ಆಗುತ್ತಿರುವ ಈ ಸಾವುಗಳಿಗೆ ಈಗಷ್ಟೇ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ಹೇಗೆ ಹೊಣೆಗಾರರಾಗುತ್ತಾರೆ ಎಂದು ಕೇಳಬಹುದು. ಅವರೊಬ್ಬರೇ ಹೊಣೆಗಾರರಲ್ಲ. ಆದರೆ, ಪ್ರಾಣವನ್ನು ಪಣಕ್ಕೊಡ್ಡಿ ಸರ್ಕಾರೀ ಕೆಲಸಗಳನ್ನು ಸುಸೂತ್ರವಾಗಿ ಸಾಗಿಸುತ್ತಿರುವ ಸಾವಿರಾರು ನೌಕರರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂತೇಮರಳ್ಳಿಯಲ್ಲಿ ಚೆಸ್ಕಾಂ ನೌಕರನೊಬ್ಬ ಕೆಲಸದಲ್ಲಿದ್ದಾಗ ವಿದ್ಯುತ್ ತಗುಲಿ ತೀವ್ರ ಆಘಾತಕ್ಕೊಳಪಟ್ಟ ಮತ್ತು ಶರೀರ ಸುಟ್ಟಿತು. ಇವತ್ತಿನವರೆಗೂ ಒಂದು ರೂಪಾಯಿ ಪರಿಹಾರವೂ ಸಿಕ್ಕಿಲ್ಲ. ಇದೇ ವಾರದಲ್ಲಿ ಕುಮಾರಸ್ವಾಮಿಯವರ ಬೀಗರಾದ ಡಿ.ಸಿ.ತಮ್ಮಣ್ಣನವರ ಕ್ಷೇತ್ರದ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಕೆಲಸದ ಅವಧಿಯಲ್ಲೇ ಗುತ್ತಿಗೆ ನರ್ಸ್ ಒಬ್ಬರು ಅಸುನೀಗಿದರು. ಪರಿಹಾರವೆಲ್ಲಾ ದೂರದ ಮಾತು.
ಇಂತಹವರೆಲ್ಲರಿಗೂ ಸೇವಾಭದ್ರತೆ ಮತ್ತು ಸಮಾನವೇತನ ಕಲ್ಪಿಸುತ್ತೇನೆಂದು ಚುನಾವಣೆಗೆ ಮುಂಚೆ ಕುಮಾರಸ್ವಾಮಿ ಭರವಸೆ ನೀಡಿದ್ದರು. ಈಗ ‘ಇದೆಲ್ಲಾ ಅಷ್ಟು ಸುಲಭವಲ್ಲ; ಹಿಂದಿನ ಸರ್ಕಾರಗಳ ಅವಧಿಯಲ್ಲಿ ಏನೇನೋ ಆಗಿರುತ್ತದೆ, ಎಲ್ಲದಕ್ಕೂ ನಾನೇ ತಲೆಕೊಡಬೇಕಾ?’ ಎನ್ನುತ್ತಿದ್ದಾರೆ. ಹೀಗಿರುವಾಗ ಗುತ್ತಿಗೆ ಪೌರಕಾರ್ಮಿಕರಿಗೆ, ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಇವರಿಂದ ನ್ಯಾಯ ಸಿಗಬಹುದಾ?

ಬನ್ನಿ, ಕಸ ಬಾಚೋಣ
ಎಲ್ಲೆಂದರಲ್ಲಿ ಕಸ ಚೆಲ್ಲಾಡುವ ಪ್ರವೃತ್ತಿ ನಾಗರಿಕರಲ್ಲೂ ಸಾಕಷ್ಟಿದೆ. ಯಾವುದೇ ಪ್ರವಾಸಿ ತಾಣದಲ್ಲೂ ಗಲೀಜು ರಾಚುತ್ತದೆ. ಜಾತ್ರೆ, ಹಬ್ಬ, ರಾಜಕಾರಣಿಗಳ ಕಾರ್ಯಕ್ರಮಗಳು, ಸಂಘಟನೆಗಳು ನಡೆಸುವ ಪ್ರತಿಭಟನೆಗಳು, ಮದುವೆ ಇತ್ಯಾದಿ ಖಾಸಗಿ ಕಾರ್ಯಕ್ರಮಗಳು ಮುಗಿದ ನಂತರ ಕಸದ ರಾಶಿ ಇಟ್ಟಾಡುತ್ತದೆ. ಹಸಿ ಕಸ, ಒಣ ಕಸ ವಿಂಗಡಿಸಲು ಸೋಮಾರಿತನ ತೋರುವ ‘ನಾಗರಿಕರು’, ಮನೆಯಲ್ಲಿ ಶೌಚಾಲಯ ಕಟ್ಟಿಸಲು ಹಿಂಜರಿಯುವ ಹಳ್ಳಿಗರು ಎಲ್ಲರೂ ಇದರಲ್ಲಿ ಪಾಲುದಾರರಾಗಿದ್ದೇವೆ.
ತೋರಿಕೆಗೆ ಕಸ ಗುಡಿಸುವ ನಾಟಕವಾಡಿ, ಅದರ ಜಾಹೀರಾತಿಗೇ ಹೆಚ್ಚು ಹಣ ಖರ್ಚು ಮಾಡಿಸುವ ಪ್ರಧಾನಿಯಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಎಲ್ಲರೂ ಕಸಕ್ಕೆ ಜವಾಬ್ದಾರರು. ಆದರೆ, ಕಸ ಬಳಿಯುವ ಜನರ ಬದುಕನ್ನು ಇನ್ನಷ್ಟು ಘನತೆಯುಳ್ಳದ್ದನ್ನಾಗಿ ಮಾಡುವ ಪರಿಣಾಮಕಾರಿ ಪ್ರಯತ್ನವಾದರೂ ಈ ಸಮಾಜದಲ್ಲಿ ಜಾರಿಯಾಗುತ್ತಿಲ್ಲ.
ಇನ್ನಾದರೂ ಕಸ ಬಳಿಯೋಣ; ಸ್ವಚ್ಛ ಭಾರತ ಕಟ್ಟೋಣ.

.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...