Homeಸಿನಿಮಾಸಿನಿ ಸುದ್ದಿಹಲೋ ಐ ಆಮ್ ಅಂಬಿ

ಹಲೋ ಐ ಆಮ್ ಅಂಬಿ

- Advertisement -
- Advertisement -

ಸಂಗ್ರಹ ನಿರೂಪಣೆ: ಗಿರೀಶ್ ತಾಳಿಕಟ್ಟೆ |

ಇತ್ತೀಚೆಗೆ ನಿಧನರಾದ ಅಂಬರೀಷ್‍ರು ತಮ್ಮ ಬದುಕಿನ ಕುರಿತು ತಾವೇ ಆಪ್ತರ ಬಳಿ ಹೇಳಿಕೊಂಡಿದ್ದ ಕೆಲ ಸ್ವಾರಸ್ಯ ಘಟನೆಗಳ ಮೆಲುಕು ಇಲ್ಲಿದೆ.

 

ಬಾಡಿಗೆ ಅಣ್ಣ, ಬಾಯ್ತುಂಬ ಬೈಗುಳ

“ನಾನು ಪಿಯುಸಿ ಓದಿದ್ದು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ. ಕಾಲೇಜಿನ ಪ್ರಿನ್ಸಿಪಾಲ್ ನಾರಾಯಣ ರಾವ್ ಅಂತ. ಬಲು ಸ್ಟ್ರಿಕ್ಟ್ ಮನುಷ್ಯ. ಒಮ್ಮೆ ತಪ್ಪು ಮಾಡಿದ ಅಂತ ತಮ್ಮ ಮಗನನ್ನೇ ಕಾಲೇಜಿಂದ ಸಸ್ಪೆಂಡು ಮಾಡಿಬಿಟ್ಟಿದ್ದ್ರು. ಅಂತಾ ಆಸಾಮಿ. ಎಸ್ಸೆಲ್ಸಿವರೆಗೂ ನಂ.1 ಸ್ಟೂಡೆಂಟಾಗಿದ್ದ ನಾನು ಪಿಯುಸಿನಲ್ಲಿ ಫಸ್ಟ್ ಟೈಮು ಕೆಮಿಸ್ಟ್ರಿ ಸಬ್ಜೆಕ್ಟ್‍ನಲ್ಲಿ ಫೇಲಾಗ್ಬಿಟ್ಟೆ. ತಕೋಳ್ಳಿ, ಆ ಪ್ರಿನ್ಸಿಪಾಲು ಅಪ್ಪನಿಗೆ ಲೆಟರು ಬರೆದುಬಿಟ್ರು. ಅಪ್ಪನಿಗೆ ವಿಷಯ ಗೊತ್ತಾದ್ರೆ, ನನ್ನ ಕಥೆ ಅಷ್ಟೇ ಅಂತ, ದಿನಾ ಬೆಳಿಗ್ಗೆ ಮನೆ ಮುಂದೆ ಪೋಸ್ಟ್‍ಮ್ಯಾನಿಗೋಸ್ಕರ ಕಾಯ್ಕೊಂಡು ನಿಂತ್ಕಂತಿದ್ದೆ. ಒಂದು ದಿನ ಆ ಲೆಟ್ರು ಬಂತು. ಅದುನ್ನ ನಾನೇ ಈಸ್ಕೊಂಡು ಹರಿದು ಹಾಕ್ಬುಟ್ಟೆ. ಅಲ್ಲಿಗೆ ಪ್ರಾಬ್ಲಂ ಸಾಲ್ವ್ ಆಯ್ತು ಅಂದ್ಕಂಡೆ. ಆದ್ರೆ ಒಂದಿನ ಇದ್ದುಕ್ಕಿದ್ದಂಗೆ ಪ್ರಿನ್ಸಿಪಾಲು ನನ್ನನ್ನು ಕರೆಯೋಕ್ಕೆ ಕಳ್ಸಿದ್ರು. ಅವರ ಚೇಂಬರಿಗೆ ಹೋಗ್ತಿದ್ದಂಗೆ, `ಯಾಕೋ ಲೆಟರ್ ಹರಿದು ಹಾಕ್ದೆ? ನಿಮ್ಮಪ್ಪನಿಗೆ ಯಾಕೆ ತೋರಿಸ್ಲಿಲ್ಲ?’ ಅಂತ ಕೇಳಿಬುಟ್ರು. ನನಿಗೆ ಶಾಕ್. ಇವರಿಗೆ ಹೆಂಗೆ ಗೊತ್ತಾಯ್ತು ಅಂತ. `ನಾಳೆ ನಿಮ್ಮಪ್ಪುನ್ನೇ ಕರ್ಕೊಂಡು ಬಾ’ ಅಂತ ಹೇಳಿದ್ರು. ನನ್ನ ಕೈಕಾಲೆಲ್ಲ ಗಡಗಡ ನಡುಗೋಕ್ಕೆ ಶುರುವಾದ್ವು. ಕೊನೆಗೆ ನನ್ನ ಫ್ರೆಂಡ್ಸ್ ಬಡ್ಡಿಮಕ್ಕಳು ಒಂದು ಐಡಿಯಾ ಕೊಟ್ರು. ನನ್ನ ಅಣ್ಣನ ಹೈಟು, ಪರ್ಸನಾಲ್ಟಿ ಇರೋ ಒಬ್ಬ ಬಾಡಿಗೆ ಅಣ್ಣನನ್ನು ರೆಡಿ ಮಾಡಿಕೊಂಡು ಮಾರನೇ ದಿನ ಪ್ರಿನ್ಸಿಯ ಬಳಿ ಕರೆದೊಯ್ದೆ. ಅವನು ನಿಜಕ್ಕೂ ನನ್ನ ಅಣ್ಣನೆಂದೇ ನಂಬಿದ ಅವರು ನನ್ನನ್ನು ಚೆನ್ನಾಗಿಯೇ ಬಯ್ದರು. ಸಿಕ್ಕಿದ್ದೇ ಚಾನ್ಸು ಅಂತ ನನ್ನ ಬಾಡಿಗೆ ಅಣ್ಣನೂ, `ನೋಡಿ ಸಾ, ಅಪ್ಪ ಇವುನನ್ನ ಡಾಕ್ಟ್ರು ಮಾಡ್ಬೇಕು ಅಂತ ಆಸೆ ಇಟ್ಟುಗೊಂಡವುರೆ. ಇವನು ಹಿಂಗೆ ಪೋಲಿ ಬಿದ್ದವುನೆ’ ಅಂತ ಬಯ್ದ. ಅವನ ರೇಗಾಟ ಕಂಡು ಪ್ರಾಂಶುಪಾಲರಿಗೇ ಅಯ್ಯೋ ಪಾಪಾ ಅನ್ನಿಸಿ, `ಪರವಾಗಿಲ್ಲ ಬಿಡಿ. ನಿಮ್ಮ ತಂದೆಯವರಿಗೆ ಇದನ್ನು ತಿಳಿಸಿ ಅವರನ್ನು ಕರೆದುಕೊಂಡು ಬರೋದೇನೂ ಬೇಡ. ಆದ್ರೆ ಇನ್ಮುಂದೆ ಇವನ ಮೇಲೆ ಗಮನ ಇರಿಸಿ’ ಅಂತ ಹೇಳಿದ್ರು. ನಾನು ತಲೆ ತಗ್ಗಿಸಿಕೊಂಡೇ ನಿಂತಿದ್ದೆ. ಯಾಕಂದ್ರೆ, ತಲೆ ಎತ್ತಿ ಪ್ರಿನ್ಸಿಯ ಮುಖವನ್ನೇನಾದರು ನೋಡಿದ್ದರೆ, ನನಗೆ ನಗು ತಡೆದುಕೊಳ್ಳಲಾಗುತ್ತಿರಲಿಲ್ಲ”

ಸೆಕೆಂಡ್ ಹ್ಯಾಂಡ್ ಕಾರು ಯಾಮಾರಿಸಿದ್ದು

“ನನಿಗೆ ಕಾರು ತಗೋಬೇಕು ಅನ್ನೋ ಹುಚ್ಚಿತ್ತು. ಅಪ್ಪನ್ನ ಕೇಳಿದೆ. ಅದುಕ್ಕವುರು `ಕಾರು ಕೊಡ್ಸಿದ್ರೆ, ಆಮೇಲೆ ಪೆಟ್ರೋಲಿಗೂ ನನ್ನಾತ್ರನೇ ಕಾಸು ಕೇಳ್ತೀಯಾ. ಸುಮ್ಕಿರು ಮಾರಾಯಾ’ ಅಂತ ರೇಗಿದ್ರು. ಆದ್ರೆ ನಾನು ಹಠ ಬಿಡ್ಲಿಲ್ಲ. ಕೊನೆಗೆ `ಸರಿ ಒಂದು ಸೆಕೆಂಡ್ ಹ್ಯಾಂಡ್ ಕೊಡುಸ್ತೀನಿ. ಎಲ್ಲಾದ್ರು ಇದ್ದ್ರೆ ನೋಡು’ ಅಂತಂದ್ರು. ಸಿಕ್ಕಿದ್ದೇ ಚಾನ್ಸು ಅಂತ, ಕಾರು ಹುಡಿಕ್ಕ್ಯಂಡು ಮದ್ರಾಸಿಗೆ ಹೋಗಿ ಐದು ಸಾವಿರ ಖರ್ಚು ಮಾಡಿಬಂದೆ. ಆ ಕಾಲಕ್ಕೆ ಬರೀ ಕಾರು ಹುಡುಕೋಕ್ಕೇ ಐದು ಸಾವುರ ಖರ್ಚು ಮಾಡಿವ್ನಿ ಅಂದ್ರೆ ಬಡ್ಡೇತದು ನನ್ನ ಶೋಕಿ ಅದಿನ್ನೆಂತದ್ದಿರಬೇಡ ನೋಡಿ. ಕೊನೆಗೆ ನಮ್ಮ ಪರಿಚಯಸ್ತ ಡಾಕ್ಟ್ರು ಒಬ್ಬ್ರು ತಮ್ಮ ಫಿಯೆಟ್ ಕಾರು ಮಾರ್ತಾರೆ ಅನ್ನೋ ವಿಚಾರ ಗೊತ್ತಾಯ್ತು. ಹೋಗಿ ಕೇಳಿದೆ. `ಇದು ನನ್ನ ಹೆಂಡ್ತಿ ಗಿಫ್ಟ್ ಕೊಟ್ಟಿದ್ದು, ಅಲ್ಲದೇ ನನ್ನ ಮಗನಿಗೂ ಈ ಕಾರು ಅಂದ್ರೆ ತುಂಬಾ ಇಷ್ಟ. ಹಾಗಾಗಿ ಮೈಸೂರಿನಲ್ಲಿ ಇರೋರಿಗೆ ಮಾರಲ್ಲ. ಬೇರೆ ಊರಿನವರಿಗೆ ಮಾತ್ರ ಮಾರೋದು’ ಅಂದುಬಿಟ್ಟ್ರು. ಒಂದ್ ಸ್ವಲ್ಪ ದಿನ ಸುಮ್ಕಿದ್ದೆ. ಮತ್ತೆ ಅವುರತ್ರ ಹೋಗಿ `ಬೆಂಗಳೂರಿನಲ್ಲಿರೋ ವೀರಾಸ್ವಾಮಿಯವುರಿಗೆ ಬೇಕಂತೆ ಕೊಡ್ತೀರಾ’ ಅಂತ ಕೇಳಿದೆ. ಒಪ್ಕೊಂಡು ಒಂದು ಲಕ್ಷಕ್ಕೆ ವ್ಯಾಪಾರನೂ ಮುಗೀತು. ನಾನೇ ಕಾರನ್ನ ತಕೊಂಡು ಬೆಂಗಳೂರಿನ ಕೆಸಿಎನ್ ಚಂದ್ರು ಮನೇಲ್ಲಿ ಸ್ವಲ್ಪ ದಿನ ಬಿಟ್ಟಿದ್ದೆ. ಒಂದು ತಿಂಗಳಾದ ಮೇಲೆ ವಾಪಾಸು ಮೈಸೂರಿಗೆ ತಗೊಂಡೋಗಿ `ಸಾರ್ ಅವುರಿಗ್ಯಾಕೋ ಕಾರಿನ ರೇಟು ಜಾಸ್ತಿ ಆಯ್ತಂತೆ. ಅದುಕ್ಕೆ ಬೇಡ ಅಂತಿದಾರೆ. ನೀವು ವಾಪಾಸ್ ತಗೊಂಡು ಅವುರ ದುಡ್ಡು ಕೊಡ್ಬೇಕಂತೆ’ ಅಂದೆ. ಆದ್ರೆ ಅವರು ವಾಪಾಸ್ ತಗೋಳಕ್ಕೆ ಒಪ್ಪಲಿಲ್ಲ. ಆಗ `ಸರಿ, ನಿಮಗೆ ದುಡ್ಡು ಕೊಡೋಕೆ ಆಗಲ್ಲ ಅನ್ನೋದಾದ್ರೆ, ಈ ಕಾರನ್ನ ನಾನೇ ಇಟ್ಕೊಂಡು, ಅವುರಿಗೆ ನಾನೇ ದುಡ್ಡು ಕೊಡ್ತೀನಿ ಬಿಡಿ’ ಅಂದೆ. ಒಪ್ಕೊಂಡ್ರು. ಹೀಗೆ ಅವುರಿಗೆ ಯಾಮಾರಿಸಿ ನನ್ನ ಆಸೆ ಪಟ್ಟಿದ್ದ ಕಾರು ಕೊಂಡ್ಕೊಂಡೆ ಕಣ್ರೀ”

ರಾಜಣ್ಣನ ನಮಸ್ಕಾರ, ಅಮ್ಮನ ಬೈಗುಳ

“1975ರಲ್ಲಿ `ದೇವರ ಕಣ್ಣು’ ಸಿನಿಮಾಗಾಗಿ ನನಿಗೆ ಅತ್ಯುತ್ತಮ ಖಳನಟನ ಪ್ರಶಸ್ತಿ ಬಂತು. ಅಮ್ಮನೂ ನೋಡಿ ಖುಷಿಪಡ್ಲಿ ಅಂತ ಟೌನ್‍ಹಾಲ್‍ನ ಕಾರ್ಯಕ್ರಮಕ್ಕೆ ಆಕೆಯನ್ನೂ ಕರೆದೊಯ್ದು ಮೊದಲ ಲೈನಿನಲ್ಲೇ ಕುಂತೆ. ಅಷ್ಟರಲ್ಲಾಗಲೇ ರಾಜ್‍ಕುಮಾರ್ ಮೊದಲಾದ ಅತಿಥಿಗಳೆಲ್ಲ ಸ್ಟೇಜ್ ಮ್ಯಾಲೆ ಕುಂತ್ಕಂಡಿದ್ದ್ರು. ನಮ್ಮಮ್ಮ ಭಾಳ ಮುಗ್ಧ ಹೆಂಗಸು. ರಾಜಣ್ಣನ್ನ ನೋಡಿದ್ದೇ ತಡ, ನನಗೆ ತಿವಿದು, `ಹೋಗು, ರಾಜ್‍ಕುಮಾರ್‍ರಿಗೆ ನಮುಸ್ಕಾರ ಮಾಡಿ ಬಾ’ ಅಂದ್ರು. ನಾನು ಸುಮ್ನಿರಮ್ಮ ಹಂಗೆಲ್ಲ ಸ್ಟೇಜ್ ಮೇಲೆ ಹೋಗಿ ಅವುರಿಗೆ ಕಿರಿಕಿರಿ ಮಾಡೋದು ಬೇಡ ಅಂತ ಹೇಳಿದ್ರೂ ಕೇಳದೆ ಹೋಗು, ಹೋಗು ಅಂತ ತಿವೀತಾನೆ ಇದ್ದರು. ಅಷ್ಟರಲ್ಲಿ ನನ್ನ ದುರಾದೃಷ್ಟಕ್ಕೆ ಯಾರಿಗೋ ಹಾರ ಹಾಕಿ ಸನ್ಮಾನ ಮಾಡೋಕೆ ಅಂತ ವೇದಿಕೆ ಮುಂದಕ್ಕೆ ಎದ್ದು ಬಂದ ರಾಜಣ್ಣ ನನ್ನನ್ನ ನೋಡಿ, `ಹಲೋ ಅಂಬರೀಷ್ ನಮಸ್ಕಾರ, ಹ್ಯೇಗಿದೀರಾ’ ಅಂತ ಕೇಳಿಬಿಟ್ಟ್ರು. ನಾನು ಚೆನ್ನಾಗಿದೀನಿ ಸರ್ ಅಂತ ಹೇಳಿ ಮುಜುಗರದ ಮುದ್ದೆಯಾದೆ. ತಗೋಳ್ಳಿ ನಮ್ಮಮ್ಮನ ಪಿತ್ತ ನೆತ್ತಿಗೇರಿತು. ಮನೆಗೆ ಹೊರಡಲು ಕಾರು ಹತ್ತಿದ್ದೇ ತಡ, `ಅಂಥಾ ದೊಡ್ಡೋರಿಗೆ ನೀನೇ ಹೋಗಿ ನಮಸ್ಕಾರ ಹೇಳಿಕ್ಕೆ ಆಗಲಿಲ್ಲವಾ, ಅವುರೇ ನಿನಿಗೆ ನಮುಸ್ಕಾರ ಹೇಳ್ಬೇಕಾ?’ ಅಂತ ಮನೆ ಮುಟ್ಟೋವರೆಗೂ ಬೈದು ಬಿಟ್ಟ್ರು”.

ಗುಂಡು, ತುಂಡು ಇಲ್ಲದ ಊಟಕ್ಕೆ ಚಕ್ಕರ್

“ಒಂದ್ಸಾರಿ ಎಂಪಿ ಪ್ರಕಾಶ್ ಮಗಳ ಮದುವೆಗೆ ಹೋಗಿದ್ದೆ. ಅರ್ಜೆಂಟ್ ಇದ್ದಿದ್ದ್ರಿಂದ ಊಟ ಮಾಡದೆ ಬಂದುಬಿಟ್ಟೆ. ಅದು ಹೆಂಗೋ ಆ ಮನುಷ್ಯನಿಗೆ ಗೊತ್ತಾಗಿಬಿಟ್ಟಿದೆ. ಎರಡು ದಿನ ಆದ್ಮೇಲೆ ಒಂದು ಫೋನ್ ಬಂತು, `ಹಲೋ ನಾನು ಎಂಪಿ ಪ್ರಕಾಶ್ ಮಾತಾಡ್ತಾ ಇರೋದು. ಮದುವೆಗೆ ಬಂದು ಊಟ ಮಾಡದೆ ಹೋಗಿಬಿಟ್ಟ್ರಲ್ಲಾ ನೀವು ಖಂಡಿತ ನಮ್ಮ ಮನಿಗೆ ಊಟಕ್ಕೆ ಬರ್ಬೇಕು’ ಅಂದ್ರು. ಖಂಡಿತ ಬರ್ತೀನಿ, ನಾನೇ ನಿಮಗೆ ಫೋನ್ ಮಾಡ್ತೀನಿ ಅಂತ ಹೇಳಿದೆ. ನನಿಗೆ ಅಷ್ಟಾಗಿ ಅವರ ಪರಿಚಯ ಇರ್ಲಿಲ್ಲ. ಒಬ್ಬರನ್ನು ಕರೆದು ಈ ಎಂಪಿ ಪ್ರಕಾಶ್ ಹೆಂಗೆ, ಅಭ್ಯಾಸ ಏನಾದ್ರು (ಗುಂಡು, ಮಟನ್) ಉಂಟಾ ಅಂತ ಕೇಳಿದೆ. ಅದಕ್ಕವುರು `ಇಲ್ಲಾ ಸಾರ್ ಭಾರೀ ಸಿಂಪಲ್. ಗುಂಡು ಹಾಕೋಲ್ಲ, ಮಟನ್ ಚಿಕನ್ ಅಂದ್ರೇನೂ ಗೊತ್ತಿಲ್ಲ. ಸಾತ್ವಿಕ ಮನುಷ್ಯ’ ಅಂದ್ರು. ಓಹ್ ನನಿಗ್ಯಾಕೋ ಸರಿ ಬರಲ್ಲ ಅನ್ನಿಸ್ತು. ಗುಂಡು, ತುಂಡು ಇಲ್ಲದಿದ್ದ್ರೆ ಅದೂ ಒಂದು ಊಟಾನಾ? ವಾಪಾಸ್ ಫೋನ್ ಮಾಡಿದೆ. ಸಾರ್ ನಾನು ತುಂಬಾ ಬ್ಯುಸಿ, ಶೂಟಿಂಗ್ ಮುಗಿಸ್ಕೊಂಡು ರಾತ್ರಿ ಎಷ್ಟೊತ್ತಿಗೋ ಬರ್ತೀನಿ. ಅಲ್ಲದೇ ಜೊತೆಗೆ ಯಾರ್ಯಾರೋ ಇರ್ತಾರೆ. ನನಿಗೋಸ್ಕರ ನೀವು ಕಾದು ನಿರಾಸೆ ಆಗೋದು ಬೇಡ ಅಂತ ರೀಲು ಬಿಟ್ಟೆ. ಆದ್ರೂ ಬಲವಂತ ಮಾಡಿದ್ರು. ಸರಿ ಸಾರ್. ಊಟಕ್ಕೆ ಬರೋಲ್ಲ, ಆದ್ರೆ ತಿಂಡಿಗೆ ಬರ್ತೀನಿ ಅಂತ ಒಪ್ಕೊಂಡೆ. ಮಾರನೇ ದಿನ ಮುಖ್ಯಮಂತ್ರಿ ಚಂದ್ರೂನ ಕರ್ಕೊಂಡು ತಿಂಡಿಗೆ ಹೋದೆ. ಆಮೇಲೆ ಅವರಿಂದ ನಾನು ತುಂಬಾ ಪಾಠ ಕಲಿತೆ. ಅವರಿಂದಾನೇ ನಾನೊಬ್ಬ ಮನುಷ್ಯ ಅಂತಾದೆ. ಬೆಂಗಳೂರಲ್ಲಿ ಮನೆ ಕಟ್ಟಿಸಿದ್ದು ಕೂಡಾ ಅವರ ಸಹಕಾರದಿಂದಲೇ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...