Homeಅಂಕಣಗಳುಆ ವಾರದ ಕಣ್ಣೋಟ | ಗೌರಿ ಲಂಕೇಶ್ಅಡ್ವಾಣಿ ಮತ್ತೆ ನೆನಪಿಸಿರುವ ಜಿನ್ನಾರ ಸುತ್ತ....

ಅಡ್ವಾಣಿ ಮತ್ತೆ ನೆನಪಿಸಿರುವ ಜಿನ್ನಾರ ಸುತ್ತ….

- Advertisement -
- Advertisement -

ನಮ್ಮ ಸ್ವಾತಂತ್ರ್ಯ ಸಂಗ್ರಾಮ ಅಂತ್ಯಗೊಂಡಿದ್ದರಲ್ಲಿನ ಒಂದು ವಿಚಿತ್ರ ವಿಶಿಷ್ಟತೆ ಯಾವುದೆಂದರೆ; ನನ್ನ ನರನಾಡಿಗಳಲ್ಲಿ ನಾನು ಸಂಪೂರ್ಣವಾಗಿ ಹಿಂದೂ ಎಂದು ಹೇಳಿದ್ದ ಮಹಾತ್ಮ ಗಾಂಧಿ ಜಾತ್ಯಾತೀತ ಭಾರತದ ರಾಷ್ಟ್ರಪಿತ ಆದದ್ದು. ಹಾಗೆಯೇ ದೇವರು-ಧರ್ಮದಲ್ಲಿ ನಂಬಿಕೆ ಇರದಿದ್ದ, ಉರ್ದು ಭಾಷೆ ಇರಲಿ, ಇಂಗ್ಲಿಷ್ ಬಿಟ್ಟರೆ ಭಾರತದ ಒಂದೇಒಂದು ಭಾಷೆಯಲ್ಲಿ ಮಾತನಾಡಲು ಬಾರದಿದ್ದ, ಇಸ್ಲಾಂನಲ್ಲಿ ನಿಷೇಧಿಸಲ್ಪಟ್ಟಿರುವ ‘ತೀರ್ಥ’ ಮತ್ತು ಆಹಾರವನ್ನು ಸೇವಿಸುತ್ತಿದ್ದ, ನಾಸ್ತಿಕರಾಗಿದ್ದ ಮೊಹ್ಮದ್ ಅಲಿ ಜಿನ್ನಾರವರು ಇಸ್ಲಾಂ ಧರ್ಮದ ಹೆಸರಿನಲ್ಲಿ ಸ್ಥಾಪಿತವಾದ ಪಾಕಿಸ್ತಾನದ ರಾಷ್ಟ್ರಪಿತ ಆದದ್ದು!!

ಇಂಥಾ ವೈಚಿತ್ರ್ಯದ ನಡುವೆಯೂ ಇವರಿಬ್ಬರ ಮಧ್ಯೆ ಹಲವು ಸಾಮ್ಯತೆಗಳಿವೆ. ಅವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಗಾಂಧಿ-ಜಿನ್ನಾ, ಇಬ್ಬರೂ ಹಿಂದೂ-ಮುಸ್ಲೀಮರ ನಡುವೆ ಸೌಹಾರ್ದವ ಬಯಸಿದವರು.

ಬಾಲಗಂಗಾಧರ ತಿಲಕ್‌ರವರು ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು ಎಂಬ ಹೇಳಿಕೆಯ ಮೂಲಕ ಬ್ರಿಟಿಷ್ ಸರ್ಕಾರದ ಕೆಂಗಣ್ಣಿಗೆ ಗುರಿಯಾದಾಗ ಅವರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದವರಲ್ಲಿ ಜಿನ್ನಾ ಕೂಡಾ ಒಬ್ಬರು. ಗೋಪಾಲ್ ಕೃಷ್ಣ ಗೋಖಲೆಯವರು ಒಂದುಕಡೆ ಜಿನ್ನಾರ ಬಗ್ಗೆ ಧಾರ್ಮಿಕ ಪೂರ್ವಗ್ರಹಗಳಿಂದ ಕಳಂಕಿತರಾಗದಿರುವ ಜಿನ್ನಾ ಹಿಂದೂ-ಮುಸ್ಲಿಂ ಐಕ್ಯತೆಗೆ ಹೇಳಿ ಮಾಡಿಸಿದಂತಹ ರಾಯಭಾರಿ ಎಂದು ಹೇಳಿದ್ದು ಅತಿಶಯೋಕ್ತಿಯ ಮಾತಲ್ಲ.

ಮುಸ್ಲಿಂ ಲೀಗ್‌ನವರು ಜಿನ್ನಾರನ್ನು ಅದೆಷ್ಟೇ ಓಲೈಸಿದರೂ ಸ್ವಾತಂತ್ರ್ಯ ಸಿಗಬೇಕಿದ್ದರೆ ಹಿಂದೂಗಳು ಹಾಗೂ ಮುಸ್ಲಿಮರು ಒಗ್ಗಟ್ಟಾಗಿಯೇ ಇರಬೇಕು ಎಂದು ಹೇಳುತ್ತಿದ್ದ ಜಿನ್ನಾ ಕಾಂಗ್ರೆಸ್‌ನಲ್ಲೇ ಉಳಿದರು. ಆದರೆ ಕಾಲಕ್ರಮೇಣ ಕಾಂಗ್ರೆಸ್ ಮೇಲೆ ಗಾಂಧಿಯವರ ಹಿಡಿತ ಬಿಗಿಗೊಂಡಿತು. ಅದರಲ್ಲಿದ್ದ ಹಿಂದೂ ನಾಯಕರೆಲ್ಲರೂ ಗಾಂಧಿಗೆ ಡೊಗ್ಗು ಸಲಾಮು ಹೊಡೆಯುವುದು ಹೆಚ್ಚಾಗಿ ನೆಹರೂರವರ ಬಗ್ಗೆ ಗಾಂಧಿ ಹೆಚ್ಚು ಒಲವು ತೋರಿಸಲಾರಂಭಿಸಿದರು. ಇದೇ ಹೊತ್ತಿಗೆ ಸರಿಯಾಗಿ ಹಿಂದೂ ಮಹಾಸಭಾದವರ ‘ಹಿಂದೂ ರಾಷ್ಟ್ರ’ದ ಗದ್ದಲ ಹೆಚ್ಚಾಗಿತ್ತಲ್ಲದೆ ‘ದ್ವಿರಾಷ್ಟ್ರ ನೀತಿ’ಯೂ ಹೆಚ್ಚು ಮನ್ನಣೆ ಪಡೆಯಲಾರಂಭಿಸಿತು.

ಈ ಹಂತದಲ್ಲೂ ಅವರು ಕಾಂಗ್ರೆಸ್‌ನಿಂದ ಹೊರಹೋಗಲು ಇಚ್ಛಿಸಲಿಲ್ಲ. ಆದರೆ ಬಹುಸಂಖ್ಯಾತ ಜನಾಂಗ ದಬ್ಬಾಳಿಕೆ ಮತ್ತು ಕ್ರೌರ್ಯವನ್ನು ಹೊಂದಿರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಅಲ್ಪಸಂಖ್ಯಾತರಲ್ಲಿ ತಮ್ಮ ಹಕ್ಕು ಮತ್ತು ಹಿತಾಸಕ್ತಿಗಳ ಬಗ್ಗೆ ಆತಂಕ ಮೂಡುವುದು ಸಹಜ. ಅದನ್ನು ನಿವಾರಿಸಬೇಕಾದರೆ ಕಾನೂನಿನಲ್ಲಿ ಅವರಿಗೆ ಸಾಕಷ್ಟು ಭದ್ರತೆಯನ್ನು ಒದಗಿಸಬೇಕು. ಎಂದು ಎಚ್ಚರಿಕೆ ನೀಡಿದ್ದರು. ಅವರ ಈ ಎಚ್ಚರಿಕೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸದಿದ್ದಾಗ ನಿರಾಶೆಗೊಂಡ ಜಿನ್ನಾ ಕಾಂಗ್ರೆಸ್ ಪಕ್ಷದಿಂದಲೇ ದೂರ ಸರಿಯಲಾರಂಭಿಸಿದರು.

ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಗುವ ನಾಲ್ಕು ದಿನ ಮುನ್ನ ಜಿನ್ನಾರವರು ಮಾಡಿದ ಭಾಷಣವೇ ಇವತ್ತು ಅಡ್ವಾಣಿಗೆ ಬಹಳ ಮೆಚ್ಚುಗೆಯಾಗಿದೆ. ಆದರೆ ಜಿನ್ನಾರವರು ಹಿಂದೂ-ಮುಸ್ಲಿಂ ಐಕ್ಯತೆ ಬಗ್ಗೆ ಹಾಗೆ ಮಾತನಾಡಿದ್ದು ಅದೊಂದೇ ಬಾರಿ ಅಲ್ಲ. ಪಾಕಿಸ್ತಾನಕ್ಕಾಗಿ ಹೋರಾಡಿದ್ದ ಜಿನ್ನಾ ಮೂಲಭೂತವಾಗಿ ಇಸ್ಲಾಂ ಧರ್ಮಕ್ಕೆ ಬದ್ದರಾಗಿಯೂ ಇರಲಿಲ್ಲ. ಹಾಗೆಯೇ ಹಿಂದೂ ದ್ವೇಷಿಯೂ ಆಗಿರಲಿಲ್ಲ. ಅವರು ಪಾಕಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ಹಲವೇ ದಿನಗಳ ನಂತರ ಎಂ.ಎಸ್.ಎಂ ಶರ್ಮ ಎಂಬ ಹಿಂದೂ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ನಾನು ಈಗಲೂ ಹಿಂದೂ-ಮುಸ್ಲಿಂರ ಐಕ್ಯತೆಯನ್ನು ಬಯಸುತ್ತೇನಲ್ಲದೆ, ಸದ್ಯದಲ್ಲೇ ಪಾಕಿಸ್ತಾನದಲ್ಲಿರುವ ಹಿಂದೂಗಳ ರಕ್ಷಣೆಗೆಂದು ನಾನೇ ‘ಪ್ರೊಟೆಕ್ಟರ್ ಜನರಲ್’ಆಗಿ ನಿಲ್ಲುತ್ತೇನೆ ಎಂದು ಹೇಳಿದ್ದರು.

ಅಂದಹಾಗೆ, ಇಲ್ಲಿ ದಾಖಲಿಸಿರುವುದಕ್ಕೆಲ್ಲಾ ಮೂಲ ಪ್ರೇರಣೆ ‘ಅಂಡರ್‌ಸ್ಟಾಂಡಿಂಗ್ ದಿ ಮುಸ್ಲಿಂ ಮೈಂಡ್’ ಎಂಬ ಪುಸ್ತಕದಲ್ಲಿ ಜಿನ್ನಾರವರನ್ನು ಕುರಿತ ಅಧ್ಯಾಯ. ಈ ಪುಸ್ತಕವನ್ನು ಬರೆದವರಿರುವವರು ಮತ್ತಿನ್ಯಾರೂ ಅಲ್ಲ… ಪ್ರಖ್ಯಾತ ಸಂಶೋಧಕರೂ, ಮಹಾತ್ಮ ಗಾಂಧಿಯವರ ಮೊಮ್ಮಗನೂ ಆಗಿರುವ ರಾಜ್‌ಮೋಹನ್ ಗಾಂಧಿಯವರು!!

ಗೌರಿ ಲಂಕೇಶ್,
ಜೂನ್ 22, 2005 (‘ಕಂಡಹಾಗೆ’ ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...