Homeಕರ್ನಾಟಕಅನಂತ್ಮಾಣಿ v/s ಸೂಲಿಬೆಲೆ, ಇದು ಟಿಕೆಟ್ ಕೈತಪ್ಪಿದ ಕದನ

ಅನಂತ್ಮಾಣಿ v/s ಸೂಲಿಬೆಲೆ, ಇದು ಟಿಕೆಟ್ ಕೈತಪ್ಪಿದ ಕದನ

- Advertisement -
- Advertisement -

| ಶುದ್ಧೋದನ |

ಉತ್ತರಕನ್ನಡದ ಸೋಶಿಯಲ್ ಮೀಡಿಯಾದಲ್ಲೀಗ ಕೇಸರಿ ಕುಮಾರರಿಬ್ಬರ ಗುದಮುರಗಿ ಜೋರು ಸದ್ದು ಮಾಡುತ್ತಿದೆ. ಬಿಜೆಪಿ ಸಂಸದ ಅನಂತ್‍ಕುಮಾರ್ ಹೆಗ್ಡೆ ಮತ್ತು ಕೇಸರಿ ಭಾಷಣ`ಕೋರ’ ಚಕ್ರವರ್ತಿ ಸೂಲಿಬೆಲೆ ಒಬ್ಬರಿಗೊಬ್ಬರು ಕೆಸರು ಎರಚಿಕೊಳ್ಳುತ್ತಿರೋದು ರೋಚಕವಿದೆ. ಹಾಗೆ ನೋಡಿದರೆ ಮೊನ್ನೆ ಮುಗಿದ ಇಲೆಕ್ಷನ್ ಸಂದರ್ಭದಲ್ಲೇ ಮಾಣಿಗೆ ಟಿಕೆಟ್ ಕೊಡಬಾರದೆಂದು ದೊಡ್ಡ ಕೂಗೆದ್ದಿತ್ತು. ಆತನ ಬದಲಿಗೆ ನಮೋ ಬ್ರಿಗೇಡ್‍ನ ಪ್ರೊಪ್ರೇಟರ್ ಚಕ್ರವರ್ತಿ ಸೂಲಿಬೆಲೆ ಹೆಸರು ತೇಲಿ ಬಂದಿತ್ತು. ಸ್ಥಳೀಯ ಆರೆಸ್ಸೆಸ್-ಹಿಂಜಾವೇ ಪಡೆಯೇ ಮಾಣಿ ವಿರುದ್ಧ ಮುರಕೊಂಡು ಬಿದ್ದಿತ್ತು. ಮತದಾರರು ಮತ್ತು ಬಿಜೆಪಿ ಕಾರ್ಯಕರ್ತರ ತಿರಸ್ಕಾರ, ತಾತ್ಸಾರಕ್ಕೆ ತುತ್ತಾಗಿರುವ ಮಾಣಿಗೆ ಟಿಕೆಟ್ ಕೊಡಬಾರದೆಂದು ಉತ್ತರ ಕನ್ನಡದ ಆರೆಸ್ಸೆಸ್‍ನ ಒಂದು ತಂಡ ಪ್ರಬಲ ಹೋರಾಟ ಮಾಡಿತ್ತು. ಉತ್ತರ ಕನ್ನಡ ಸಂಘಪರಿವಾರದ ಕಲ್ಲಡ್ಕ, ಹನ್ಮಂತ ಶಾನಭಾಗ್ ಎರಡೂ ಕಡೆ “ಆಟ” ಆಡಿದ್ದರು.

ಅಂತಿಮವಾಗಿ ಮಾಣಿಗೇ ಟಿಕೆಟ್ ಸಿಕ್ಕಿತು. ಆತ ಗೆದ್ದೂ ಬಿಟ್ಟ. ಆದರೆ ಬಿಜೆಪಿ ಒಳಮನೆಯ ಬೇಗುದಿ ಕಮ್ಮಿ ಆಗಲಿಲ್ಲ. ಸೂಲಿಬೆಲೆ ಟೀಮಂತೂ ಮೋದಿ ಮತ ಭಿಕ್ಷೆಯಿಂದ ಗೆದ್ದಿರುವ ಮಾಣಿ ಧೀಮಾಕಿಂದ ಬೀಗುವುದು ಬೇಕಾಗಿಲ್ಲ ಎಂಬ ರಹಸ್ಯ ಅಭಿಯಾನವನ್ನೇ ಹುಟ್ಟುಹಾಕಿತು! ಮಾಣಿ ಮಾಡಿದ ಜನದ್ರೋಹದ ಪಾಪಕ್ಕೇ ಮಂತ್ರಿಯಾಗದೆ ಮೂಲೆ ಪಾಲಾಗಿದ್ದಾನೆಂದು ಆತನ ವಿರೋಧಿ ಬಳಗ ತಿವಿಯತೊಡಗಿತ್ತು. ಇದೆಲ್ಲದರಿಂದ ಮಾಣಿ ಕೊತಕೊತ ಕುದಿಯುತ್ತಲೇ ಇದ್ದ. ತನಗೆ ಅಡ್ಡಗಾಲು ಹಾಕಿದವರನ್ನೆಲ್ಲಾ ಒಬ್ಬೊಬ್ಬರಾಗಿ ಸಂಹರಿಸಲು ಆತ ಸ್ಕೆಚ್ ರೆಡಿಮಾಡಿಕೊಂಡಿದ್ದ. ಸಂಘಪರಿವಾರದಲ್ಲಿ ತನಗಿರುವ ಸಂಪರ್ಕ ಬಳಸಿಕೊಂಡು ಮಾಣಿ ಈಗ ಜಿಲ್ಲಾ ಚೆಡ್ಡಿ ಪಡೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುತ್ತಿದ್ದಾನೆ. ತನಗೆ ವಿರೋಧ ಮಾಡಿದ ಜಿಲ್ಲಾ ಆರೆಸ್ಸೆಸ್, ಹಿಂಜಾವೇ ಮುಖಂಡರನ್ನು ಸಂಘಟನೆಯ ಹುದ್ದೆಗಳಿಂದ ಕಿತ್ತುಹಾಕಿಸುತ್ತಿದ್ದಾನೆ. ಈಗಾಗಲೇ ಜಿಲ್ಲಾಮಟ್ಟದ ಒಬ್ಬ ಕಾರ್ಯವಾಹಕ ಮತ್ತು ಭಟ್ಕಳದ ಆರೆಸ್ಸೆಸ್ ಲೀಡರ್‍ಗೆ ಸ್ಥಾನ ಚ್ಯುತಿ ಮಾಡಲಾಗಿದೆ. ಎಲ್ಲಾ ತಾಲ್ಲೂಕಿನ ಬಿಜೆಪಿ-ಆರೆಸ್ಸೆಸ್‍ನಲ್ಲಿ ಮಾಣಿ ಮಾರಿಹಬ್ಬ ನಡೆಯಲಿದೆ!

ಇನ್ನೊಂದೆಡೆ ಮಾಣಿ ಬಂಡವಾಳ ಬಯಲು ಮಾಡುವ ಆನ್‍ಲೈನ್ ಕಸರತ್ತು ನಡೆಯಲಾರಂಭಿಸಿದೆ. ಚಕ್ರವರ್ತಿ ಸೂಲಿಬೆಲೆ, ಮಾಣಿ ಅಯೋಗ್ಯತೆಯನ್ನು ವ್ಯವಸ್ಥಿತವಾಗಿ ಜಗಜ್ಜಾಹೀರು ಮಾಡುತ್ತಿದ್ದಾನೆ. ಉತ್ತರ ಕನ್ನಡದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಯ ಸೋಷಿಯಲ್ ಮೀಡಿಯಾ ಅಭಿಯಾನ ತನ್ನ ತೇಜೋವಧೆ ಮಾಡುವ ಹಿಕಮತ್ತೆಂಬ ಭಾವನೆ ಮಾಣಿಯದು. ಆಸ್ಪತ್ರೆ ಆಗದಿರುವುದು ಸಂಸದನ ಅಸಾಮಥ್ರ್ಯ ಬಿಂಬಿಸುತ್ತಿದೆ ಎಂಬಂತೆ ಪ್ರಚಾರ ಮಾಡಲಾಗಿತ್ತು. ಇದರ ಹಿಂದೆ ತನ್ನ ಹಿತಶತೃ ಸೂಲಿಬೆಲೆ ಇದ್ದಾನೆಂಬ ಖಚಿತ ನಂಬಿಕೆ ಮಾಣಿಯದು. ಹಾಗಾಗಿ ಆತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಇಡುವವರನ್ನೇ ತನ್ನ ಟ್ವಿಟರ್ ಖಾತೆಗೆ ಪ್ರವೇಶಿಸದಂತೆ ನಿಷೇಧ ಹೇರಿದ್ದರು. ಅಷ್ಟೇ ಅಲ್ಲ, ಆಸ್ಪತ್ರೆಗಾಗಿ ಮನವಿ ಹಿಡಿದುಕೊಂಡು ಬಂದ ಹುಡುಗರಿಗೆ ರೇಗಿ ಸೋಷಿಯಲ್ ಮೀಡಿಯಾದವರಿಂದಲೇ ಆಸ್ಪತ್ರೆ ಮಾಡಿಸಿಕೊಳ್ಳಿ ಎಂದಬ್ಬರಿಸಿದ್ದ.

ಈ ಜಗಳ ಸೂಲಿಬೆಲೆ ಮತ್ತು ಅನಂತ್ಮಾಣಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವಾಚಾಮಗೋಚರವಾಗಿ ಬೈದಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ. ಇವರ ಕಾಲೆಳೆದಾಟ ಫೇಸ್ಬುಕ್, ವಾಟ್ಸಾಪ್‍ನಲ್ಲಿ ಕದನ ಕುತೂಹಲ ಕೆರಳಿಸಿದೆ. ಗೆದ್ದವರ ಈ ಗದ್ದಲ ವಿರೋಧ ಪಕ್ಷಗಳಿಗೆ ಮಜಾ ನೀಡುತ್ತಿದ್ದರೆ, ಬಿಜೆಪಿಯಲ್ಲಿ ಮುಜುಗರ ಮೂಡಿಸಿದೆ.

ಇದೆಲ್ಲದರಿಂದ ಒಂದು ಹಂತದಲ್ಲಿ ತಬ್ಬಿಬ್ಬಾದ ಸೂಲಿಬೆಲೆ ಜಗಳ ಸಾಕು, ಕೆಲಸ ಮಾಡೋಣ ಎಂಬ ಟ್ವೀಟ್ ಮಾಡಿದರೂ ಆರೋಪ-ಪ್ರತ್ಯಾರೋಪದ ಬಯಲಾಟ ಮಾತ್ರ ನಿಂತಿಲ್ಲ. ಮೋದಿ ಮತ ಭಿಕ್ಷೆಯಿಂದ ಗೆದ್ದ ಸಂಸದರು ಧಿಮಾಕು ತೋರಿಸದೆ ಕೆಲಸ ಮಾಡಬೇಕು ಎಂದು ಸೂಲಿಬೆಲೆ ಟ್ವಿಟಿಸಿದ್ದೇ ಬಿಜೆಪಿಯಲ್ಲಿ ಕಂಪನ ಸೃಷ್ಠಿಯಾಗಲು ಮೂಲಕಾರಣ. ಸದಾನಂದ ಗೌಡ, ಶೋಭಾ ಕರಂದ್ಲಾಜೆಯಂಥ ದೊಡ್ಡವರೆ ಸೂಲಿಬೆಲೆ ಮಾತಿಂದ ಕೆರಳಿ ಕೆಂಡವಾದರು. ನಮಗೆ ಬುದ್ಧಿ ಹೇಳಲು ಚಕ್ರವರ್ತಿ ಯಾರು? ಎಂದು ಎಗರಾಡಿದರು.

ತನಗೆ ಟಿಕೆಟ್ ತಪ್ಪಲು ಕಾರಣವಾದ ನಾಯಕರನ್ನು ನಿರ್ದಿಷ್ಟವಾಗಿ ಗುರಿಮಾಡಿಕೊಂಡೇ ಸೂಲಿಬೆಲೆ ಸಂಸದರ ಬಣ್ಣ ಬಯಲಾಗಿಸುತ್ತಿದ್ದಾನೆ. ಇದು ಬಿಜೆಪಿಯ ಅಧಿಕಾರಸ್ಥರ ಚೇಲಾಗಳನ್ನು ಕೆರಳಿಸಿದೆ. ಜನಪ್ರತಿನಿಧಿಗಳು ಕೆಲಸ ಮಾಡಲಿ ಎಂದು ಹೇಳೋದು ತಪ್ಪೇನಲ್ಲ. ಆದರೆ ಹಾಗೆ ಹೇಳಿದ್ದು ಸೂಲಿಬೆಲೆಯಾದ್ದರಿಂದ ಬಿಜೆಪಿಯಲ್ಲಿ ಬೆಂಕಿಹೊತ್ತಿಕೊಂಡಿತು. ತನ್ನಿಂದಾಗಿಯೇ ಕರ್ನಾಟಕದಲ್ಲಿ ಬಿಜೆಪಿಯ 25 ಸಂಸದರು ಗೆದ್ದಿದ್ದಾರೆಂದು ಸೂಲಿಬೆಲೆ ಹೇಳಿದ್ದಾನೆಂದು ಕಿಡಿ ಹೊತ್ತಿಸಲಾಯಿತು. ಸೂಲಿಬೆಲೆ ಹಾಗೆ ಹೇಳಿಯೇ ಇಲ್ಲವೆಂದು ಆತನ ಬೆಂಬಲಿಗ ನೆಟ್ಟಿಗರ ವಾದ. ಅಸಲಿಗೆ ಆತ ಹಾಗೆ ಹೇಳಿಯೂ ಇರಲಿಲ್ಲ, ಅಂಥ ಸಂದೇಶವೂ ಲಭ್ಯವಿಲ್ಲ. ಆರು ಸಲ ಸಂಸದರಾದವರಿಗೆ, ಎಂಟು ಸಲ ಮಂತ್ರಿಯಾದವರಿಗೆ ಜನಸಾಮಾನ್ಯರ ಅಳಲಿಗೆ ಸ್ಪಂದಿಸಲಾಗದಾ? ಎಂದಾತ ಟ್ವಿಟಿಸಿದ್ದನಷ್ಟೇ. ಇದು ಮಾಣಿಗೆ ಚೆಡ್ಡಿಯೊಳಗೆ ಇರುವೆ ಕಡಿದಂತೆ ಚಡಪಡಿಕೆ ತಂದಿದೆ.

ಇದರ ಬೆನ್ನಿಗೇ ಕೊಡಗಿನಲ್ಲೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಅದಕ್ಕೆ ಅಲ್ಲಿಯ ಸಂಸದ ತಕ್ಷಣ ಸ್ಪಂದಿಸಿದ್ದಾರೆ. ಉ.ಕನ್ನಡದ ಎಂಪಿ ಒಣ ರುಬಾಬು ಮಾಡುತ್ತ ತಲೆ ತಪ್ಪಿಸಿಕೊಳ್ಳುತ್ತಿದ್ದ. ಈ ಹೊತ್ತಲ್ಲಿ ಸೂಲಿಬೆಲೆ ಮಾಡಿದ ಟ್ವೀಟ್ ಮಾಣಿ ಬೆಂಬಲಿಗರಲ್ಲಿ ಆಕ್ರೋಶ ಮೂಡಿಸಿದೆ. ಈಗ ಟ್ರೋಲ್‍ಗಳು ಬರಪೂರ ನಡೆಯುತ್ತಿದೆ. ಬಿಜೆಪಿಯೊಳಗಿನ ಬಡಿದಾಟ ದಿನಕ್ಕೊಂದು ಆಯಾಮ ಪಡೆಯುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...