Homeಅಂಕಣಗಳುಈ ಬಡ ಭಾರತೀಯರು ಸರ್ಕಾರಕ್ಕೆ ಮೊದಲು ಕಾಣಬೇಕಿತ್ತು

ಈ ಬಡ ಭಾರತೀಯರು ಸರ್ಕಾರಕ್ಕೆ ಮೊದಲು ಕಾಣಬೇಕಿತ್ತು

- Advertisement -
- Advertisement -

ಬಡವರಿಗೆ ಕೊಡುವ ರೇಷನ್‍ನಲ್ಲಿ ಪೌಷ್ಟಿಕಾಂಶದ ಕೊರತೆ ಅತ್ಯಧಿಕ. ಆರೋಗ್ಯ ಇಲಾಖೆಯು ಕೋಟ್ಯಾಂತರ ರೂಪಾಯಿ ಖರ್ಚು ತೋರಿಸುತ್ತದೆ. ಆದರೆ ಬಡವರಿಗೆ ನೀಡುವ ಆಹಾರ ಪದಾರ್ಥ ಸತ್ವಹೀನವಾಗಿರುತ್ತವೆ. ಇದರ ಪರಿಣಾಮವಾಗಿ ಬಡವರಲ್ಲಿ ಅಪೌಷ್ಠಿಕತೆಯಿಂದ ನರಳುವ ಮತ್ತು ಸಾಯುವವರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಆದರೆ ಆರೋಗ್ಯ ಇಲಾಖೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಒಬ್ಬ ವಿಧವೆ ಕೂಲಿ ಕಾಸು ಸಿಕ್ಕದೆ ತನ್ನ ತಲೆಗೂದಲನ್ನೆ ಮಾರಿಕೊಂಡಿದ್ದಾಳೆ. ಒಂದು ಬಡಕುಟುಂಬದವರು ಹೊಟ್ಟೆಪಾಡಿಗಾಗಿ ತಮ್ಮ ಮಗುವನ್ನೇ ಮಾರಿಕೊಂಡರು. ಒಂದು ಒಡಸಂಸಾರದ ಒಬ್ಬ 7 ವರ್ಷದ ಹುಡುಗ ಹಸಿವನ್ನು ತಾಳಲಾರದೇ ಮನೆಬಿಟ್ಟು ಓಡಿಹೋಗಿ ಬಸ್‍ಸ್ಟಾಂಡಿನಲ್ಲಿ ಭಿಕ್ಷೆ ಬೇಡುತ್ತಾನೆ. ಕೂಲಿ ಕೆಲಸ ಮಾಡಿ ಹೊಟ್ಟೆ ಹೊರೆಯುತ್ತಾನೆ. ಅನೇಕ ಗರ್ಭಿಣಿ ಹೆಣ್ಣು ಮಕ್ಕಳು ಆಹಾರದ ಭದ್ರತೆ ಇಲ್ಲದೆ, ಅಪೌಷ್ಟಿಕತೆಯ ಕಾರಣದಿಂದ ಮಕ್ಕಳನ್ನು ಹಡೆದು ಸಾವನ್ನಪುತ್ತಾರೆ. ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ 12 ಮಕ್ಕಳು ಒಮ್ಮೆಗೇ ಸಾಯುತ್ತಾರೆ. ಅನೇಕ ಸಂಸಾರಗಳು ಊರುಬಿಟ್ಟು ಬಂದು ಬೆಂಗಳೂರಿನಲ್ಲಿ ಫುಟ್‍ಪಾತಿನ ಮೇಲೆ ವಾಸಿಸುತ್ತಾರೆ. ರಾತ್ರಿ ಮಲಗುತ್ತಾರೆ. ತಿರುಪೆ ಮಾಡಿ ಜೀವನ ನಿರ್ವಹಿಸುತ್ತಾರೆ. ಹಳ್ಳಿಗಳಲ್ಲಿ ರೈತ ಕಾರ್ಮಿಕರು, ಅನೇಕ ದಿನ ಹೊಟ್ಟೆಗಿಲ್ಲದೆ ಮಲಗುವುದು ಭೂಮಿ ವಸತಿ ವಂಚಿತರಾಗಿ ಬಾಳ್ವೆ ನಡೆಸುತ್ತಿರುವುದೂ ನಡೆದೇ ಇದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳೇ ಸಂದರೂ ಈ ಎಲ್ಲ ಬಡವರಿಗೆ ಮಾಡಲು ಉದ್ಯೋಗವಿಲ್ಲ. ಅವರ ಮಕ್ಕಳಿಗೆ ವಿದ್ಯೆ ಇಲ್ಲ. ಇನ್ನೊಂದು ಚಿತ್ರ ನೋಡಿ. ಭಾರತದಲ್ಲಿ ಲಕ್ಷ ಕೋಟ್ಯಾಧಿಪತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಅಂಬಾನಿ ಅದಾನಿ ಮುಂತಾದ ಕೋಟ್ಯಾಧಿಪತಿಗಳು ಕೋಟಿ ಕೋಟಿ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸುತ್ತದೆ. ಅವರ ಕೋಟಿ-ಕೋಟಿ ಹಳೆ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿದೆ. ಬಡವ ಬಲ್ಲಿದರ ನಡುವಿನ ಕಂದಕ ದೊಡ್ಡದಾಗುತ್ತಿದೆ.

ಕೇಂದ್ರ ಸರ್ಕಾರ ಬಡ ಜನರಿಗಾಗಿ 30 ಯೋಜನೆಗಳನ್ನು ಜಾರಿಗೆ ತಂದಿದೆ. ರಾಷ್ಟೀಯ ಸಾಮಾಜಿಕ ಸೇವೆ ಒದಗಿಸುವ ಸಂಸ್ಥೆಯೂ ಅವುಗಳಲ್ಲಿ ಒಂದು. ಅದು ಸಮಾಜದಲ್ಲಿ ಊಟ, ಉದ್ಯೋಗಗಳಿಂದ ವಂಚಿತರಾಗಿ ಸಾವನ್ನಪ್ಪಲು ಹೊರಟವರನ್ನು ತಡೆಗಟ್ಟುವುದಕ್ಕಾಗಿಯೇ ಈ ಸಂಸ್ಥೆ ಇರುವುದು. ಈ ಯೋಜನೆ ಬಡತನದ ಸೀಮಾರೇಖೆಯ ಕೆಳಗಿರುವರಿಗಾಗಿಯೇ ಸಾಮಾಜಿಕ ಭದ್ರತೆಯ ಯೋಜನೆ. ಈ ಯೋಜನೆಯಡಿಯಲ್ಲಿ 5 ಪ್ರತ್ಯೇಕ ಒಳಿತನ್ನು ಕೋರುವ ಯೋಜನೆಗಳಿವೆ. ಇವುಗಳೆಂದರೆ ಇಂದಿರಾಗಾಂಧಿ ರಾಷ್ಟ್ರೀಯ ಮನೆ ತಪ್ಪಿದವರ ಪಿಂಚಣಿ ಯೋಜನೆ, ಇಂದಿರಾಗಾಂಧಿ ವೃದ್ಧರ ಪಿಂಚಣಿ ಯೋಜನೆ, ಇಂದಿರಾಗಾಂಧಿ ಅಶಕ್ತರ ಪಿಂಚಣಿ ಯೋಜನೆ, ರಾಷ್ಟೀಯ ಫ್ಯಾಮಿಲಿ ಬೆನಿಫಿಟ್ ಸ್ಕೀಂ ಮತ್ತು ಅನ್ನಪೂರ್ಣ ಯೋಜನೆಗಳಿವೆ.

ಭಾರತ ವಿಶ್ವದಲ್ಲೆ ದೊಡ್ಡದಾದ ಆಹಾರ ಭದ್ರತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದಕ್ಕಾಗಿ ವರ್ಷಕ್ಕೆ 1.8 ಲಕ್ಷಕೋಟಿ ವ್ಯಯ ಮಾಡುತ್ತಿದೆ. ಮಹಾತ್ಮಾಗಾಂಧಿ ಗ್ರಾಮೀಣ ರೋಜ್‍ಗಾರ್ ಯೋಜನೆಯ ಉಳಿವಿಗಾಗಿ ದಿನಗೂಲಿ ಒದಗಿಸಲು 2019-20ರಲ್ಲಿ ಭಾರತ ಸರ್ಕಾರ 60000 ಕೋಟಿ ಖರ್ಚು ಮಾಡಿದೆ. ಕೇಂದ್ರದ ಈ ವರ್ಷದ ಸಬ್ಸಿಡಿ ಬಿಲ್ 3.38 ಲಕ್ಷ ಕೋಟಿ ರೂಪಾಯಿಗಳು. ಅಂದರೆ ದಿನಕ್ಕೆ 900 ಕೋಟಿ. ಸಾಮಾಜಿಕ ಸೆಕ್ಟರ್ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಿಕೊಂಡು ಈ ವರ್ಷ 13.9 ಲಕ್ಷ ಕೋಟಿ ಖರ್ಚುಮಾಡುತ್ತಿವೆ. ಈ ಮೊತ್ತದಲ್ಲಿ ಪ್ರಾಕೃತಿಕ ವಿಕೋಪದಿಂದ ಜನಸಮುದಾಯಕ್ಕಾಗುವ ಹಾನಿಯನ್ನು ತುಂಬಿಕೊಡಲು 5.5 ಲಕ್ಷ ಕೋಟಿ ತೆಗೆದಿರಿಸಲಾಗಿದೆ. ಬಡತನದ ಇಂಡೆಕ್ಸ್ 54ರಿಂದ 50ಕ್ಕೆ ಇಳಿದಿದೆ. ಆದರೆ ರಾಷ್ಟೀಯ ಸರಾಸರಿಗಿಂತ ಕಡಿಮೆ ಇರುವ ರಾಜ್ಯಗಳು ಹಿಂದೆ 10 ಇದ್ದದ್ದು ಈಗ 14ಕ್ಕೆ ಏರಿವೆ.

ದೊಡ್ಡ ರಾಜ್ಯಗಳ ಪೈಕಿ 10 ರಾಜ್ಯಗಳು ಬಡತನದ ಸೀಮಾರೇಖೆಯ ತಳಗಿದ್ದು ಅವುಗಳಲ್ಲಿ ಆರಂತೂ ತುಂಬಾ ದುರವಸ್ಥೆಯಲ್ಲಿವೆ. ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿರುವುದು ಬಡತನ ನಿವಾರಣಾ ಕಾರ್ಯಾಚರಣೆಯ ಯೋಜನೆ ಅಭಾವದಿಂದಲ್ಲ; ಅವು ಅಪಾರ ಸಂಖ್ಯೆಯಲ್ಲಿವೆ.

ಈ ಸಾಮಾಜಿಕ ಕಾರ್ಯಕ್ರಮಗಳ ಕಾರ್ಯ ಕ್ಷಮತೆಯ ಅಭಾವದಿಂದಾಗಿ ಬಡತನ ಹೆಚ್ಚುತ್ತಿದೆ. ರಾಜ್ಯಗಳ ಆಡಳಿತಗಾರರ ದಕ್ಷತೆಯ ಕೊರತೆಯಿಂದ ಆಡಳಿತದ ಜ್ಞಾನದ ಕೊರತೆಯಿಂದ ಬಡತನ ನಿವಾರಣೆಯ ಕೆಲಸ ಹಿಂದೆ ಬಿದ್ದಿದೆ.

ದೇಶದಲ್ಲಿ ಅನೇಕ ಕಡೆ ಬಡತನ ಹಸಿವು ಕಾಡುತ್ತಿದೆ. ಆಹಾರದ ಅಪೌಷ್ಠಿಕತೆ ಇಡೀ ದೇಶವನ್ನು ಕಾಡುತ್ತಿದೆ. ಭಾರತದಲ್ಲಿ 58.3 ದಶಲಕ್ಷ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ; ಭಾರತದಲ್ಲಿ ಹುಟ್ಟುವ ಮಕ್ಕಳಲ್ಲಿ ಶೇ.40ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ತಾಯಂದಿರಾಗುವ ಒಂದು ಲಕ್ಷ ಮಹಿಳೆಯರಲ್ಲಿ 122 ಹೆಣ್ಣು ಮಕ್ಕಳು ಸಾವಿಗೆ ಗುರಿಯಾಗುತ್ತಾರೆ. ಗರ್ಭಿಣಿಯರಲ್ಲಿ ಅರ್ಧದಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಗರ್ಭಿಣಿಯಲ್ಲಿ ಶೇ.36ರಷ್ಟು ಮಹಿಳೆಯರಿಗೆ ಮಾತ್ರ ತಾಯಿತನದ ಬೆನೆಫಿಟ್ ಸಿಕ್ಕುತ್ತಿದೆ.

ಬಡವರಿಗೆ ಕೊಡುವ ರೇಷನ್‍ನಲ್ಲಿ ಪೌಷ್ಟಿಕಾಂಶದ ಕೊರತೆ ಅತ್ಯಧಿಕ. ಆರೋಗ್ಯ ಇಲಾಖೆಯು ಕೋಟ್ಯಾಂತರ ರೂಪಾಯಿ ಖರ್ಚು ತೋರಿಸುತ್ತದೆ. ಆದರೆ ಬಡವರಿಗೆ ನೀಡುವ ಆಹಾರ ಪದಾರ್ಥ ಸತ್ವಹೀನವಾಗಿರುತ್ತವೆ. ಇದರ ಪರಿಣಾಮವಾಗಿ ಬಡವರಲ್ಲಿ ಅಪೌಷ್ಠಿಕತೆಯಿಂದ ನರಳುವ ಮತ್ತು ಸಾಯುವವರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಆದರೆ ಆರೋಗ್ಯ ಇಲಾಖೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳು ಅದನ್ನು ತಿನ್ನುವ ಇಲಾಖೆ ಹೊರತು ಜನತೆಯ ಒಳಿತಿಗಾಗಿ ಕಾರ್ಯ ನಿರ್ವಹಿಸುವ ಇಲಾಖೆ ಅಲ್ಲ ಎಂದು ಬಗೆದಂತಿದೆ.

ಇವೆಲ್ಲದರ ಅರ್ಥವೇನು? ಬಡತನ ನಿವಾರಣೆಗೆಂದು ಹಲವು ಬಗೆಯ ಯೋಜನೆಗಳನ್ನು ಇದುವರೆಗೆ ಆಳಿದ ವಿವಿಧ ಪಕ್ಷಗಳ ಸರ್ಕಾರಗಳು (ಪ್ರಧಾನವಾಗಿ ಕಾಂಗ್ರೆಸ್ಸು) ತಂದಿದ್ದಾರಾದರೂ, ಆ ನಿಟ್ಟಿನಲ್ಲಿ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. ಅವೆಲ್ಲವನ್ನೂ ಬಗೆಹರಿಸಿ ಎಂದು 2014ರಲ್ಲಿ ಮತ್ತು 2019ರಲ್ಲಿ ಎರಡೆರಡು ಬಾರಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಅವರು ಮಾಡುತ್ತಿರುವುದೇನು? ಈ ಜನರನ್ನು ಬಡತನದ ಕೂಪದಿಂದ ಮೇಲೆತ್ತುವ ಬದಲು, ಜನರನ್ನು ಆತಂಕಕ್ಕೆ ದೂಡುವ ಕ್ರಮಗಳಿಗೆ ಮುಂದಾಗಿದೆ. ನೋಟು ರದ್ದತಿಯಿಂದ ಶುರುವಾಗಿ ಸಿಎಎ, ಎನ್‍ಆರ್‍ಸಿಯವರೆಗೆ ಎಲ್ಲವೂ ದೇಶವನ್ನು ಹಿಂಡುವ ಕ್ರಮಗಳಾಗಿವೆ. ದೇಶವನ್ನಾಳುವವರು ಭಾರತೀಯರ ಕುರಿತು ಕಾಳಜಿ ಇರುವವರೇ ಆಗಿದ್ದರೆ ಮೊದಲು ಬಡ ಭಾರತೀಯರ ಕುರಿತು ಗಮನಹರಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...