Homeಮುಖಪುಟಒಂದು whistle blowers ಪಡೆ ಹುಟ್ಟು ಹಾಕೋಣ

ಒಂದು whistle blowers ಪಡೆ ಹುಟ್ಟು ಹಾಕೋಣ

- Advertisement -
- Advertisement -
  • ದೇವನೂರ ಮಹಾದೇವ |

ಈಗ ಚುನಾವಣೆ ನಮ್ಮ ಮುಂದಿದೆ. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ದೊಡ್ಡದೊಡ್ಡ ನಾಯಕರು ಆಡುವ ಮಾತುಗಳನ್ನು ಕೇಳಿದರೆ ಚುನಾವಣೆ ಅಂದರೆ ಅದು ನಾಡು ಕಟ್ಟುವ ಕೆಲಸ ಅಂದುಕೊಂಡಿಲ್ಲ, ಬದಲಾಗಿ ರಣರಂಗ ಅಂದ್ಕೊಂಡಿದ್ದಾರೆ. ಅದಕ್ಕಾಗಿ ಠೇಂಕಾರದ ಮಾತಾಡ್ತಾರೆ. ಜೊತೆಗೆ – ಜಾದೂ ಭಾಷೇಲಿ ಮಾತಾಡ್ತಾರೆ, ಹರಾಜು ಹಾಕುವ ಭಾಷೇಲಿ ಮಾತಾಡ್ತಾರೆ. ಒಟ್ಟಿನಲ್ಲಿ ಇವರೆಲ್ಲ ಮರಳಲ್ಲಿ ಮನೆ ಕಟ್ಟುತ್ತಿರುವವರಂತೆ ಕಾಣಿಸ್ತಾರೆ.

ಒಂದೇ ಉದಾಹರಣೆ ಸಾಕು, ಬಿಜೆಪಿ ಪದೇ ಪದೇ ಹೇಳ್ತಾ ಇದೆ- “ನಾವು ಕಾಂಗ್ರೆಸ್‍ಮುಕ್ತ ಕರ್ನಾಟಕ ಮಾಡ್ತೇವೆ” ಅಂತ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಕೂಡ ಹೇಳ್ತಾ ಇದೆ- ‘ನಾವು ಬಿಜೆಪಿಮುಕ್ತ ಕರ್ನಾಟಕ ಮಾಡ್ತೇವೆ’ ಅಂತ. ಇವರು ಏನನ್ನು ಮುಕ್ತ ಮಾಡ್ತಾ ಇದ್ದಾರೆ? ತಾನು ಕೂತ ಮರದ ಕೊಂಬೆಯನ್ನೇ ಕತ್ತರಿಸುವವನ ಮೂರ್ಖತನವಲ್ಲವೆ ಇದು? ಜನತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ವಿಧ್ವಂಸಕ ಕೃತ್ಯವಲ್ಲವೆ ಇದು? – ಇದು ಹೊಣೆಗೇಡಿ ರಾಜಕಾರಣ.

ನಾಡಿಗೆ ತುರ್ತಾಗಿ ಬೇಕಾಗಿರುವುದು ಬರಮುಕ್ತ ಕರ್ನಾಟಕ, ನಿರುದ್ಯೋಗ ಮುಕ್ತ ಕರ್ನಾಟಕ. ನಾವು ಈ ಹೊಣೆಗೇಡಿ ರಾಜಕಾರಣಕ್ಕೆ ಇದನ್ನು ನೆನಪಿಸಬೇಕಾಗಿದೆ.

ಈ ಹೊಣೆಗೇಡಿ ರಾಜಕಾರಣದ ಜೊತೆಗೆ ಅಪ್ರಬುದ್ಧ ರಾಜಕಾರಣವೂ ವಿಜೃಂಭಿಸುತ್ತಿದೆ. ಉದಾಹರಣೆಗೆ ‘ವಿಶ್ವೇಶ್ವರಯ್ಯ ಹೆಸರು ಉಚ್ಚಾರಣೆ ಮಾಡೋ ಕೆಲವರಿಗೆ ಬರೋಲ್ಲ’ ಅಂತ ಇವರು ಹೇಳ್ತಾರೆ, ‘ಇವರಿಗೆ ಬಳ್ಳಾರಿ ಹೆಸರು ಉಚ್ಚಾರಣೆ ಮಾಡೋಕೆ ಬರೋಲ್ಲ’ ಅಂತ ಅವರು ಹೇಳ್ತಾರೆ! ಇಂಥವೇ ಮಾತುಗಳು. ನನಗೂ ಉಚ್ಚಾರಣೆ ಬರಲ್ಲಪ್ಪ, ಏನೀಗ? ಇದೇನು ಘನಂದಾರಿ ಚರ್ಚೆಯೆ? ಇಂಥವರಿಗೆ ಏನೆಂದು ಹೇಳಬೇಕು? ‘ನಿಮಗೆಲ್ಲ ವಯಸ್ಸಾಗಿದೆ, ನಿಜ. ಆದರೆ ನೀವು ಪ್ರೈಮರಿ ಶಾಲೆಯಲ್ಲಿ ಇರಬೇಕಾದವರು’ ಎಂದು ಹೇಳಬೇಕಾಗಿದೆ. ಮಾಧ್ಯಮಗಳು ಇಂಥ ಕ್ಷುಲ್ಲಕವನ್ನೆಲ್ಲಾ ಚರ್ಚಿಸಬಾರದು, ದಯವಿಟ್ಟು.

ಮೊನ್ನೆ ಮೊನ್ನೆ ತಾನೇ ಮೈಸೂರಿನಲ್ಲಿ – ‘ಉದ್ಯೋಗಕ್ಕಾಗಿ ಯುವಜನರು’ ಸಂಘಟನೆಯವರು ಪ್ರವಾಸದಲ್ಲಿದ್ದ ನಮ್ಮ ಪ್ರಧಾನಿಗೆ ಒಂದು ಪ್ರಶ್ನೆ ಕೇಳಿದರು- ‘ಕಳೆದ ಲೋಕಸಭಾ ಚುನಾವಣೆಯಲ್ಲಿ ವರ್ಷಕ್ಕೆ ಒಂದು ಕೋಟಿ ಉದ್ಯೋಗ ನೀಡುತ್ತೇನೆ ಎಂದು ಭರವಸೆ ನೀಡಿದ್ದಿರಿ. ಕಿಂಚಿತ್ತೂ ಈಡೇರಲಿಲ್ಲ. ಈ ಬಗ್ಗೆ ಮಾತಾಡಿ’ ಅಂತ. ಇದಕ್ಕೆ ಉತ್ತರಿಸಬೇಕಾದ್ದು ಮಾತು ಕೊಟ್ಟ ಪ್ರಧಾನಿಯವರ ಹೊಣೆಗಾರಿಕೆ. ಆದರೆ ಅವರು ಉತ್ತರಿಸಲಿಲ್ಲ. ಬದಲಾಗಿ, ಮುಂದಿನ ಸಭೆಯಲ್ಲಿ ಅವರು ಆಡಿದ ಮಾತುಗಳು ಏನು ಗೊತ್ತೆ?- ‘ನಾವು ಕಾಮ್‍ಧಾರಿಗಳು, ಅವರು (ಅಂದರೆ ವಿರೋಧ ಪಕ್ಷದವರು) ನಾಮ್‍ಧಾರಿಗಳು’ ಅಂತ! ನುಣುಚಿಕೊಳ್ಳುವ ಇದು ದ್ರೋಹವಲ್ಲವೆ? ಇದು ಮಹಾದ್ರೋಹ. ಇವರು ನಾಡನ್ನು ಕಟ್ಟುತ್ತಿದ್ದಾರೋ ಅಥವ ಪದಗಳನ್ನು ಕಟ್ಟುತ್ತಿದ್ದಾರೋ? ಈ ರಾಜಕಾರಣ ನೋಡುತ್ತಿದ್ದರೆ ಜಿಗುಪ್ಸೆಯಾಗುತ್ತದೆ. ಭಯವೂ ಆಗುತ್ತದೆ.

ಕೆ.ಎಸ್.ಪುಟ್ಟಣ್ಣಯ್ಯ

ಇನ್ನೊಂದು ರಾಜಕಾರಣದ ಮಾತಿನ ಠೇಂಕಾರ; “ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ಭ್ರಷ್ಟರನ್ನೆಲ್ಲಾ ಜೈಲಿಗೆ ಅಟ್ಟುತ್ತೇವೆ”. ಈ ಮಾತಿಗೆ ನಮ್ಮ ಕೆಎಸ್ ಪುಟ್ಟಣ್ಣಯ್ಯ ಹೇಳ್ತಾ ಇದ್ದರು; “ವಿಧಾನಸೌಧದ ಬಾಗಿಲಿಗೆ ಒಂದು ‘ಭ್ರಷ್ಟರ ತಡೆ ಮಿಷಿನ್’ ಇಟ್ಟುಬಿಡೋಣ. ಭ್ರಷ್ಟರು ಬಂದರೆ ಆ ಬಾಗಿಲು ಆಟೋಮ್ಯಾಟಿಕ್ ಮುಚ್ಕೋಬೇಕು – ಅಂಥದ್ದು. ಆ ಮಿಷಿನ್ನೂ ಲಂಚ ಈಸ್ಕಂಡು ಒಳಿಕೆ ಬಿಡ್ದೇ ಇದ್ರೆ – ವಿಧಾನ ಸೌಧದ ಒಳೀಕೆ ಎಷ್ಟು ಜನರಪ್ಪ ಹೋಗೌರು?” ಅಂತಿದ್ದರು. ಇದು ರಾಜಕಾರಣದ ಇಂದಿನ ಪರಿಸ್ಥಿತಿ. ವ್ಯವಸ್ಥೇನೆ ಭ್ರಷ್ಟಗೊಂಡಿದೆ.

ಇಂಥ ದುರಂತ ರಾಜಕಾರಣದ ಸಂದರ್ಭದಲ್ಲಿ- ಸ್ವರಾಜ್ ಇಂಡಿಯಾ ತನ್ನ ಪ್ರಣಾಳಿಕೆ ಬಿಡುಗಡೆ ಮಾಡ್ತಾ ಇದೆ. ‘ಕೆಲವರಿಗೆ ಅಲ್ಲ; ಸಮುದಾಯಕ್ಕೆ ಎಲ್ಲಾ’ ಎಂಬ ಆಶಯದ ಸಸಿ ನೆಡುತ್ತಿದೆ. ಈ ಸ್ವರಾಜ್ ಪ್ರಣಾಳಿಕೆಗೆ ಕಾಪಿರೈಟ್ ಇಲ್ಲ. ಯಾರೇ ಪ್ರಕಟಿಸಬಹುದು. ದಯವಿಟ್ಟು ಚರ್ಚಿಸಿ, ಟೀಕೆ ಮಾಡಿ, ಸಲಹೆ, ಸೂಚನೆ, ಟಿಪ್ಪಣಿ ನೀಡಿ. ಇದು ಮುಕ್ತವಾಗಿದೆ.

ಕೊನೆಯದಾಗಿ, ನಾಡಿನ ಜಾಗೃತ ಪ್ರಜ್ಞೆಗೆ ಒಂದು ವಿನಂತಿ ಮಾಡುವೆ. ಅದೇನೆಂದರೆ, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಆಶ್ವಾಸನೆಗಳು ಹಾಗೂ ರಾಜಕಾರಣಿಗಳು ನೀಡುವ ಭರವಸೆಗಳು- ಇವುಗಳನ್ನೆಲ್ಲಾ ನೆನಪಿಸುವ ಒಂದು ತಿhisಣಟe bಟoತಿeಡಿs ಪಡೆಯನ್ನು ಹುಟ್ಟು ಹಾಕಬೇಕಾಗಿದೆ. ರಾಜ್ಯಕ್ಕೆ ಹತ್ತು ಜನ ಸಾಕು. ಜಿಲ್ಲೆಗೆ ಮೂರು ಜನ. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳ ಆಶ್ವಾಸನೆಗಳು ಹಾಗೂ ರಾಜಕಾರಣಿಗಳು ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ತಿಂಗಳಿಗೊಮ್ಮೆ ಅವರವರ ಮೂತಿಗೆ ಹಿಡಿಯುವ ಒಂದು ಜಾಗರೂಕ ಪಡೆ ಅತ್ಯಗತ್ಯವಾಗಿದೆ. ಇದರಿಂದ ಹೊಣೆಗೇಡಿ ರಾಜಕಾರಣಕ್ಕೆ ಸ್ವಲ್ಪವಾದರೂ ಹೊಣೆಗಾರಿಕೆ ಬರಬಹುದು. ರಾಜಕಾರಣಕ್ಕೆ ಮಾನಮರ್ಯಾದೆ ತಂದುಕೊಡುವ ದಿಕ್ಕಲ್ಲಿ ಇದು ಮೊದಲ ಹೆಜ್ಜೆಯಾಗಲೂಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...